• March 17, 2023

ಶೇ 50-50 ರಂತೆ ಭೂ ಪರಿಹಾರ ವಿತರಣೆಯಲ್ಲಿ ಅಕ್ರಮ ವಾಸನೆ…ಮುಡಾಗೆ ಚಾಟಿ ಬೀಸಿದ ಸರ್ಕಾರ…

ಶೇ 50-50 ರಂತೆ ಭೂ ಪರಿಹಾರ ವಿತರಣೆಯಲ್ಲಿ ಅಕ್ರಮ ವಾಸನೆ…ಮುಡಾಗೆ ಚಾಟಿ ಬೀಸಿದ ಸರ್ಕಾರ…

ಶೇ 50-50 ರಂತೆ ಭೂ ಪರಿಹಾರ ವಿತರಣೆಯಲ್ಲಿ ಅಕ್ರಮ ವಾಸನೆ…ಮುಡಾಗೆ ಚಾಟಿ ಬೀಸಿದ ಸರ್ಕಾರ…

ಮೈಸೂರು,ಮಾ17,Tv10 ಕನ್ನಡ
ಭೂ ಮಾಲೀಕರಿಗೆ ಶೇ.50-50 ರಂತೆ ಭೂ ಪರಿಹಾರ ನೀಡುವ ವಿಚಾರದಲ್ಲಿ ನಿಯಮಗಳನ್ನ ಹಾಗೂ ಕಾಯ್ದೆಗಳನ್ನ ಗಾಳಿಗೆ ತೂಗುತ್ತಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸರ್ಕಾರ ಚಾಟಿ ಬೀಸಿದೆ.ಬದಲಿ ನಿವೇಶನ ಮಂಜೂರು ಮಾಡುವ ನೆಪದಲ್ಲಿ ನಿಯಮಗಳನ್ನ ಉಲ್ಲಂಘಿಸಿ ಅಭಿವೃದ್ದಿ ಹೊಂದಿದ ಜಾಗಗಳಲ್ಲಿ ಶೇ 50-50 ರಂತೆ ಆಸ್ತಿಗಳನ್ನ ನೀಡುತ್ತಿರುವ ಮುಡಾ ಕ್ರಮಕ್ಕೆ ಬ್ರೇಕ್ ಹಾಕಿದೆ.ಅಗತ್ಯ ಮಾರ್ಗಸೂಚಿ ಸಿದ್ದವಾಗುವವರೆಗೆ ಸಭೆಗಳಲ್ಲಿ ಇಂತಹ ನಿರ್ಣಯ ಕೈಗೊಳ್ಳಬಾರದೆಂದು ಮುಡಾ ಆಯುಕ್ತರಿಗೆ ನಗರಾಭಿವೃದ್ದಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸತೀಶ್ ಕಬಾಡಿ ಸೂಚನೆ ನೀಡಿದ್ದಾರೆ.

2019 ರಿಂದ 2022 ರವರೆಗೆ ಮುಡಾ ದಲ್ಲಿ ನಡೆದ ಕೆಲವು ಸಭೆಗಳಲ್ಲಿ ಭೂ ಪರಿಹಾರವಾಗಿ ಬದಲಿ ನಿವೇಶನ ಮಂಜೂರು ಮಾಡಲು ತೀರ್ಮಾನಿಸಿ ನಿರ್ಣಯಗಳನ್ನ ಕೈಗೊಂಡಿದೆ.ನಿಯಮ 16(1) ಅನ್ವಯದಂತೆ ಬದಲಿ ನಿವೇಶನ ನೀಡಲು ಅವಕಾಶವಿರುತ್ತದೆ.ಆದ್ರೆ ಕಾಯ್ದೆಗಳನ್ನ ಉಲ್ಲಂಘಿಸಿ ನೀಡುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದಿದೆ.ಬದಲಿ ನಿವೇಶನ ಮಂಜೂರು ಮಾಡುವಾಗ ಯಾವ ನಿಯಮಗಳನ್ನ ಅನುಸರಿಸಲಾಗಿದೆ ಎಂಬ ಬಗ್ಗೆ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದಿಲ್ಲ.ಹೀಗಾಗಿ ನಿಯಮಗಳು ಉಲ್ಲಂಘನೆಯಾಗಿದೆ ಎಂಬ ಸರ್ಕಾರಕ್ಕೆ ಧೃಢವಾಗಿರುವ ಹಿನ್ನಲೆ ಅಗತ್ಯ ಮಾರ್ಗಸೂಚಿ ತಯಾರಿಸುವ ವರೆಗೂ ಮುಂದಿನ ಸಭೆಗಳಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬಾರದೆಂದು ಸೂಚನೆ ನೀಡಿ ಮುಡಾ ಆಯುಕ್ತರಿಗೆ ಪತ್ರ ರವಾನಿಸಿದೆ….

Spread the love

Leave a Reply

Your email address will not be published.