- March 17, 2023
ಭಾರತೀಯ ವಾಯುಪಡೆಯಲ್ಲಿ ಅವಿವಾಹಿತ ಯುವಕ, ಯುವತಿಯರಿಗೆ ಉದ್ಯೋಗಾವಕಾಶ


ಭಾರತೀಯ ವಾಯುಪಡೆಯಲ್ಲಿ ಅವಿವಾಹಿತ ಯುವಕ, ಯುವತಿಯರಿಗೆ ಉದ್ಯೋಗಾವಕಾಶ

ಭಾರತೀಯ ವಾಯುಪಡೆಯು ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್‌ಗಳಿಗಾಗಿ ಅಗ್ನಿಪಥ್ ಯೋಜನೆಯಡಿ ವಾಯುಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೇಯಲ್ಲಿ ಸೇವೆಸಲ್ಲಿಸಲು
ಹಾಗು ಮೇ 2023 ರಲ್ಲಿ ನಡೆಯುವ ಆನ್‌ಲೈನ್ ಆಯ್ಕೆ ಪರೀಕ್ಷೆಗಾಗಿ, ಪಿಯುಸಿ (ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಡಿಪ್ಲೊಮಾ ಯಾವುದೇ ವಿಷಯಗಳಲ್ಲಿ) ಕನಿಷ್ಠ ಶೇ. 50% ,
ಮತ್ತು ಇಂಗ್ಲಿಷ್‌ನಲ್ಲಿ ಶೇ. 50% ಅಂಕಗಳೊಂದಿಗೆ, ಉತ್ತೀರ್ಣರಾದ ಅವಿವಾಹಿತ ಯುವಕ, ಯುವತಿಯರಿಂದ ಆನ್‌ಲೈನ್ ಅರ್ಜಿಗಳನ್ನುಆಹ್ವಾನಿಸಲಾಗಿದೆ. ಆನ್‌ಲೈನ್ ನೋಂದಣಿ
17 ಮಾರ್ಚ್ 23 (1000 ಗಂಟೆಗಳು) ರಿಂದ 31 ಮಾರ್ಚ್ 23 (1700 ಗಂಟೆಗಳು) ವರೆಗೆ ತೆರೆದಿರುತ್ತದೆ. ಅಭ್ಯರ್ಥಿಗಳು 26 ಡಿಸೆಂಬರ್ 2002 ರಿಂದ 26 ಜೂನ್ 2006 ರ ನಡುವೆ
(ಎರಡೂ ದಿನಾಂಕಗಳನ್ನು ಒಳಗೊಂಡಂತೆ) ಜನಿಸಿದವರಾಗಿರಬೇಕು. ಆನ್‌ಲೈನ್ ಅರ್ಜಿ ನೋಂದಣಿಗಾಗಿ https://agnipathvayu.cdac.in ವೆಬ್ಸೈಟ್ ಗೆ ಭೇಟಿ ನೀಡಿ, ಆನ್‌ಲೈನ್
ಅರ್ಜಿ ನೋಂದಣಿಗೆ ಕೊನೆಯ ದಿನಾಂಕ 31 ಮಾರ್ಚ್ 2023. ಹೆಚ್ಚಿನ ವಿವರಗಳಿಗಾಗಿ https://careerindianairforce.cdac.in ವೆಬ್ಸೈಟ್ ಗೆ ಭೇಟಿ ನೀಡಿ.