ಪ್ರೀತ್ಸೇ ಪ್ರೀತ್ಸೇ ಎಂದು ಪೀಡಿಸಿದ ಯುವಕ…ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ…
- CrimeMysore
- July 2, 2023
- No Comment
- 74
ಮೈಸೂರು,ಜು2,Tv10 ಕನ್ನಡ
ಪ್ರೀತ್ಸೇ ಪ್ರೀತ್ಸೇ ಎಂದು ಹಿಂದೆ ಬಿದ್ದ ಯುವಕನ ಕಿರುಕುಳಕ್ಕೇ ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ.ಹರ್ಷಿತಾ(21) ಮೃತ ದುರ್ದೈವಿ.ಅದೇ ಗ್ರಾಮದ ಯುವಕ ಶಿವು( 26) ಕಿರುಕುಳಕ್ಕೆ ಬೇಸತ್ತ ಹರ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪಿಯುಸಿ ಓದಿದ್ದ ಹರ್ಷಿತಾ ಕಂಪ್ಯೂಟರ್ ಕ್ಲಾಸ್ ಗೆ ಜಾಯಿನ್ ಆಗಿದ್ದಳು.ಹರ್ಷಿತಾಳನ್ನ ಲವ್ ಮಾಡುತ್ತಿದ್ದ ಶಿವು ಹಿಂದೆ ಬಿದ್ದು ಪ್ರೀತಸುವಂತೆ ಪೀಡಿಸುತ್ತಿದ್ದ.ಶಿವು ಮನವಿಯನ್ನ ಹರ್ಷಿತಾ ತಿರಸ್ಕರಿಸುತ್ತಿದ್ದಳು.ಈ ಮಧ್ಯೆ ಹರ್ಷಿತಾ ಮನೆಯವರು ಮದುವೆ ಸಂಭಂಧ ಕುದುರಿಸಿದ್ದರು.ಆಷಾಢ ನಂತರ ಮದುವೆ ದಿನಾಂಕ ಗೊತ್ತುಪಡಿಸಲು ನಿರ್ಧರಿಸಿದ್ದರು.ಈ ಮಾಹಿತಿ ಅರಿತ ಶಿವು ತನ್ನನ್ನ ಪ್ರೀತಿಸಿ ಮದುವೆ ಆಗುವಂತೆ ದುಂಬಾಲು ಬಿದ್ದ.ಶಿವು ಕಿರುಕುಳಕ್ಕೆ ಬೇಸತ್ತ ಹರ್ಷಿತ ಹುಳುಗಳಿಗಾಗಿ ಇಟ್ಟಿದ್ದ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಕೂಡಲೇ ಹರ್ಷಿತಾಳನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತಾ ಮೃತಪಟ್ಟಿದ್ದಾಳೆ.ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಶಿವು ಬಂಧನಕ್ಕೆ ಇಲವಾಲ ಪೊಲೀಸರು ಜಾಲ ಬೀಸಿದ್ದಾರೆ…