ಬಕಿಂಗ್ ಹ್ಯಾಂ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಸೀಟ್ ಆಮಿಷ…18.80 ಲಕ್ಷ ಕಳೆದುಕೊಂಡ ವೈದ್ಯ…
- CrimeMysore
- July 2, 2023
- No Comment
- 77
ಮೈಸೂರು,ಜು2,Tv10 ಕನ್ನಡ
ಯೂನಿವರ್ಸಿಟಿ ಆಫ್ ಬಕಿಂಗ್ ಹ್ಯಾಂ ನಲ್ಲಿ ಎಂಬಿಬಿಎಸ್ ಪ್ರವೇಶಾತಿ ಕಲ್ಪಿಸುವ ಆಮಿಷವೊಡ್ಡಿದ ಕನ್ಸಲ್ಟೆನ್ಸಿಯೊಂದು ವೈದ್ಯರೊಬ್ಬರಿಗೆ 18.80 ಲಕ್ಷ ಪಡೆದು ಪಂಗನಾಮ ಹಾಕಿದೆ.ಪುತ್ರನಿಗೆ ಸೀಟ್ ಸಿಗುತ್ತದೆಂಬ ಕನ್ಸಲ್ಟೆನ್ಸಿಯ ಭರವಸೆ ನಂಬಿ ಶ್ರೀರಾಂಪುರ ಬಡಾವಣೆಯ ವೈದ್ಯರಾದ ಡಾ.ಲೋಕೇಶ್ ಎಂಬುವರು 18.80 ಲಕ್ಷ ಕಳೆದುಕೊಂಡಿದ್ದಾರೆ.ಪರಿಚಯಸ್ಥರೊಬ್ಬರು ಹಾಗೂ ವೆಬ್ ಸೈಟ್ ನಲ್ಲಿ ದೊರೆತ ಮಾಹಿತಿ ಅನುಸರಿಸಿ ಡಾ.ಲೋಕೇಶ್ ರವರು ಬ್ರಿಟಿಷ್ ಯುಕೆ ಕನ್ಸಲ್ಟೆನ್ಸ್ ಯ ಸಿಬ್ಬಂದಿಗಳ ಜೊತೆ ವ್ಯವಹರಿಸಿದ್ದಾರೆ.ವೈದ್ಯಕೀಯ ಕೋರ್ಸ್ ಗೆ 20 ಲಕ್ಷ ಖರ್ಚು ಆಗುತ್ತದೆ ಎಂದು ಕನ್ಸಲ್ಟೆನ್ಸಿ ನೀಡಿದ ಮಾಹಿತಿಯನ್ನ ನಂಬಿ 18.80 ಲಕ್ಷ ಪಾವತಿಸಿದ್ದಾರೆ.ನಂತರ 40 ಲಕ್ಷ ವ್ಯವಸ್ಥೆ ಮಾಡಿಕೊಳ್ಳುವಂತೆ ಕನ್ಸಲ್ಟೆನ್ಸಿ ತಿಳಿಸಿದೆ.ಇಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲವೆಂದು ತಮ್ಮ ಹಣ ವಾಪಸ್ ನೀಡುವಂತೆ ಡಾ.ಲೋಕೇಶ್ ಕನ್ಸಲ್ಟೆನ್ಸಿ ದುಂಬಾಲು ಬಿದ್ದಿದ್ದಾರೆ.ಹಣ ಪಾವತಿಯಾದ ನಂತರ ಕನ್ಸಲ್ಟೆನ್ಸಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಹಾಗೂ ಉತ್ತರಿಸದೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲವೆಂದು ಆರೋಪಿಸಿರುವ ಡಾ.ಲೋಕೇಶ್ ತಮ್ಮ ಹಣ ವಾಪಸ್ ಕೊಡಿಸುವಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…