ಕೆರೆ ಸಮೀಪ ಫೈನಾನ್ಸ್ ಬಿಲ್ ಕಲೆಕ್ಟರ್ ಶವ ಪತ್ತೆ…ಹುಡುಗೀಗೆ ದುಡ್ಡು ಕೊಡ್ಬೇಕು ಅಂತಿದ್ದ…ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ತಾಯಿ…
- CrimeMysore
- July 5, 2023
- No Comment
- 107
ಕೆರೆ ಸಮೀಪ ಫೈನಾನ್ಸ್ ಬಿಲ್ ಕಲೆಕ್ಟರ್ ಶವ ಪತ್ತೆ…ಹುಡುಗೀಗೆ ದುಡ್ಡು ಕೊಡ್ಬೇಕು ಅಂತಿದ್ದ…ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ತಾಯಿ…
ಹುಣಸೂರು,ಜು5,Tv10 ಕನ್ನಡ
ಯುವತಿಯೊಬ್ಬಳಿಗೆ ಹಣ ಕೊಡಬೇಕೆಂದು ತಾಯಿ ಬಳಿ ಹೇಳಿದ್ದ ಯುವಕ ಕೆರೆ ಬಳಿ ಶವವಾಗಿ ಪತ್ತೆಯಾದ ಘಟನೆ ಹುಣಸೂರಯ ತಾಲೂಕು ಬಿಳಿಕೆರೆ ಬಳಿ ನಡೆದಿದೆ.ಕೊಳಗಟ್ಟ ಗ್ರಾಮದ ನಿವಾಸಿ ಅರುಣ್ ಕುಮಾರ್(21) ಮೃತ ದುರ್ದೈವಿ.ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಅರುಣ್ ಕುಮಾರ್ ಮಧ್ಯಾಹ್ನ ಮನೆ ಬಿಟ್ಟಿದ್ದಾನೆ.ಮ್ಯಾನೇಜರ್ ಕರೆಯುತ್ತಿದ್ದಾರೆ ಎಂದು ಹೇಳಿ ಮನೆಯಿಂದ ಹೊರಗೆ ಬಂದಿದ್ದಾನೆ.ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ.ಕುಟುಂಬದವರು ಹಾಗೂ ಸ್ನೇಹಿತರು ಹುಡುಕಾಡಿದಾಗ ಕೆರೆಯೊಂದರ ಬಳಿ ಮೃತದೇಹ ಪತ್ತೆಯಾಗಿದೆ.ಆಗಾಗ ಯುವತಿಯೊಬ್ಬಳಿಗೆ ಹಣ ಕೊಡಬೇಕು ಅಂತ ತಾಯಿ ಬಳಿ ಹೇಳಿಕೊಂಡಿದ್ದಾನೆ.ಹಣ ಕೊಡುವುದಾಗಿ ತಾಯಿ ಭರವಸೆ ಕೊಟ್ಟಿದ್ದಾರೆ.ಮಗನ ಸಾವಿನ ಬಗ್ಗೆ ತಾಯಿ ಲತಾ ಶಂಕೆ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ…