ಬಾಲಕಾರ್ಮಿಕರ ರಕ್ಷಣೆಗೆ ಒತ್ತು…ಅಂಗಡಿ ಮುಂಗಟ್ಟುಗಳ ಮೇಲೆ ಅಧಿಕಾರಿಗಳು ಧಿಢೀರ್ ದಾಳಿ…
- TV10 Kannada Exclusive
- July 21, 2023
- No Comment
- 121
ಪಿರಿಯಾಪಟ್ಟಣ,ಜು21,Tv10 ಕನ್ನಡ
ಬಾಲಕಾರ್ಮಿಕ ಪಿಡುಗನ್ನ ನಿರ್ಮೂಲನೆ ಮಾಡಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಒತ್ತು ನೀಡಿದ್ದಾರೆ.ಇಂದು ಪಿರಿಯಾಪಟ್ಟಣದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನ ಬಳಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.ದಾಳಿ ವೇಳೆ ಬಾಲ ಕಾರ್ಮಿಕರು ಕಂಡು ಬಂದಿಲ್ಲ.ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬರಿಗೈಲಿ ಹಿಂದಿರುಗಿದರು.ಹುಣಸೂರು ತಾಲೂಕು ಶಿರಸ್ತೇದಾರ್ ಶಕೀಲಾಬಾನು ಹಾಗೂ ಕಾರ್ಮಿಕ ಇಲಾಖೆ ನಿರೀಕ್ಷಕರಾದ ಆರ್.ರವಿ ನೇತೃತ್ವದಲ್ಲಿ ದಾಳಿ ಪ್ರಕ್ರಿಯೆ ನಡೆಯಿತು.ಬಾಲಕಾರ್ಮಿಕ ಯೋಜನಾ ಸಂಘದ ನಿರ್ದೇಶಕರಾದ ಕೆ.ಪಿ.ಮಲ್ಲಿಕಾರ್ಜುನ್,ಪಿರಿಯಾಪಟ್ಟಣ ಠಾಣೆ ಪಿಎಸ್ಸೂ ಸುರೇಶ್ ಸಿಡಿಪಿಓ ಸೂಪರವೈಸರ್ ಕೆ.ಎಸ್.ಪೋದ್ದಾರ್ ದಾಳಿ ವೇಳೆ ಸಾಥ್ ನೀಡಿದರು..