ಪಂಡು ಸಹೋದರ ಅಕ್ಮಲ್ ಕೊಲೆ ಪ್ರಕರಣ…ನಾಲ್ವರು ಆರೋಪಿಗಳು ಅಂದರ್…ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ…
- Crime
- March 12, 2024
- No Comment
- 2295
ಮೈಸೂರು,ಮಾ12,Tv10 ಕನ್ನಡ
ಮಾಜಿ ಕಾರ್ಪೊರೇಟರ್ ಅಯಾಜ್ ಪಂಡು ಸಹೋದರ ಮಹಮದ್ ಅಕ್ಮಲ್ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಾರ್ಡ್ ನಂ 33 ರ ಕಾರ್ಪೊರೇಟರ್ ಬಷೀರ್ ,ಇಬ್ರಾಹಿಂ,ಪರ್ವೀಜ್ ಬೇಗ್ ಹಾಗೂ ಮಹಮದ್ ಇಲಿಯಾಸ್ ಬಂಧಿತರು.ಆರೋಪಿಗಳನ್ನ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ 7 ದಿನಗಳ ಅವಧಿಗೆ ಪೊಲೀಸರ ವಶಕ್ಕೆ ನೀಡಿದೆ.
ಮಾರ್ಚ್ 8 ರಂದು ಮಹಮದ್ ಅಕ್ಮಲ್ ರನ್ನ ರಾಜೀವ್ ನಗರದ ಆರ್ಯಬೇಕರಿ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.ಈ ಸಂಭಂಧ ಪತ್ನಿ ನಾಜಿಯಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ವಾರ್ಡ್ ನಂ.33 ರ ಕಾರ್ಪೊರೇಟರ್ ಆಗಿದ್ದ ಬಷೀರ್ ಅಹಮದ್,ಈತನ ಪುತ್ರ ಫೈಜಾನ್ ಅಹಮದ್,ಅಲ್ತಾಫ್ ಖಾನ್,ಪರ್ವೀಜ್,ಇಬ್ರಾಹಿಂ ಹಾಗೂ ಇತರರ ಮೇಲೆ ಕೊಲೆ ಮಾಡಿಸಿರುತ್ತಾರೆಂದು ಆರೋಪಿಸಿ ದೂರು ನೀಡಿದ್ದರು.ಪ್ರಕರಣದ ತನಿಖೆಯನ್ನ ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ರವರಾದ ಮುತ್ತುರಾಜ್ ಮತ್ತು ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಪೂವಯ್ಯ,ಪಿಎಸ್ಸೈ ಲೇಪಾಕ್ಷ,ರಮೇಶ್ ಕೊನರೇರಿ ಸೇರಿದಂತೆ ಹಲವು ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು.ಆರೋಪಿಗಳ ಪತ್ತೆಗೆ ಜಾಲ ಬೀಸಿದ ವಿಶೇಷ ತಂಡ ನಾಲ್ವರು ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳನ್ನ ಮೈಸೂರಿನ ಎರಡನೇ ಎಎಫ್ ಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರಾದ ರೇಖಾ ರವರು 7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿದ್ದಾರೆ…