
ಸಾಲ ವಸೂಲಿಗೆ ಕಿರುಕುಳ…ಪತ್ನಿಯನ್ನ ಅಡಮಾನ ಇಡುವಂತೆ ಧಂಕಿ…ಬೈಕ್ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ…
- TV10 Kannada Exclusive
- March 21, 2024
- No Comment
- 100

ಕೆ.ಆರ್.ನಗರ,ಮಾ21,Tv10 ಕನ್ನಡ
ಸಾಲ ವಸೂಲಿಗಾಗಿ ಪತ್ನಿಯ ಬಗ್ಗೆ ಹಗುರವಾಗಿ ನಿಂದಿಸಿದ ಹಿನ್ನಲೆ ಮನನೊಂದ ವ್ಯಕ್ತಿ ಬೈಕ್ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಹರವೆ ಗ್ರಾಮದಲ್ಲಿ ನಡೆದಿದೆ.ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಗ್ರಾಮದ ಹರೀಶ್ (40) ಮೃತ ದುರ್ದೈವಿ.ಹುಣಸೂರಿನ ರವಿ@ವಾಲೆ ರವಿ ಹಾಗೂ ಆತನ ತಮ್ಮ ಚಿನ್ನಸ್ವಾಮಿ ವಿರುದ್ದ ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಹುಣಸೂರು ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಹರೀಶ್ ಒಂದು ವರ್ಷದ ಹಿಂದೆ ರವಿಯಿಂದ ಒಂದು ಲಕ್ಷ ಸಾಲ ಪಡೆದಿದ್ದ.50 ಸಾವಿರ ಹಿಂದಿರುಗಿಸಿದ್ದು ಉಳಿದ 50 ಸಾವಿರ ಬಾಕಿ ಉಳಿದಿತ್ತು.ಹಣಕ್ಕಾಗಿ ರವಿ ದಿನನಿತ್ಯ ಪೀಡಿಸುತ್ತಿದ್ದ.ಅಂಗಡಿ ಮುಂದೆ,ಮನೆ ಮುಂದೆ ಬಂದು ಧಂಕಿ ಹಾಕುತ್ತಿದ್ದ.ನಿನ್ನ ಪತ್ನಿಯನ್ನ ತನ್ನ ಬಳಿ ಅಡಮಾನ ಇಡು ಎಂದು ಹಿಯ್ಯಾಳಿಸಿದ್ದ.ಇದರಿಂದ ಮನನೊಂದ ಹರೀಶ್ ವಾಯ್ಸ್ ಮೆಸೇಜ್ ಹಾಕಿ ನಾಪತ್ತೆಯಾದರು.ನನ್ನ ಸಾವಿಗೆ ರವಿ @ವಾಲೆ ರವಿ ಕಾರಣ ಎಂದು ಸ್ನೇಹಿತರಿಗೆ ಹಾಗೂ ಮನೆಯವರಿಗೆ ಕಳುಹಿಸಿ ನಾಪತ್ತೆಯಾದರು.ನಂತರ ಹುಡುಕಾಡಿದಾಗ ಹರೀಶ್ ರವರ ಮೃತದೇಹ ಬೈಕ್ ಸಮೇತ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸಾಲ ವಸೂಲಿ ಮಾಡಲು ಸಾಕಷ್ಟು ಕಿರುಕುಳ ನೀಡಿದ್ದಲ್ಲದೆ ಪತ್ನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಆತ್ಮಹತ್ಯೆಗೆ ಪ್ರಚೋದಿಸಿದ ರವಿ ಹಾಗೂ ಆತನ ತಮ್ಮ ಚಿನ್ನು ಮೇಲೆ ಶಂಕೆ ವ್ಯಕ್ತಪಡಿಸಿರುವ ಪತ್ನಿ ಸುನಿತಾ ಕಾನೂನು ಕ್ರಮ ಕೈಗೊಳ್ಳುವಂತೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…