ಮೈಸೂರು ನಗರ ಸಿವಿಲ್ ಪೊಲೀಸರಿಗೆ ಇನ್ನೂ ಬಾರದ ಹೆಚ್ಚುವರಿ ONE MONTH EXTRA SALARY…ಸಿಬ್ಬಂದಿಗಳ ಪರದಾಟ…
- TV10 Kannada Exclusive
- January 21, 2023
- No Comment
- 218
ಮೈಸೂರು ನಗರ ಸಿವಿಲ್ ಪೊಲೀಸರಿಗೆ ಇನ್ನೂ ಬಾರದ ಹೆಚ್ಚುವರಿ ONE MONTH EXTRA SALARY…ಸಿಬ್ಬಂದಿಗಳ ಪರದಾಟ…
ಮೈಸೂರು,ಜ21,Tv10 ಕನ್ನಡ
ಹಬ್ಬ ಹರಿದಿನಗಳಲ್ಲಿ ಹಾಗೂ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ ಮೈಸೂರು ನಗರ ಸಿವಿಲ್ ಪೊಲೀಸ್ ಸಿಬ್ಬಂದಿಗಳ ಹೆಚ್ಚುವರಿ ಒಂದು ತಿಂಗಳ ಸಂಬಳ ಇನ್ನೂ ಪಾವತಿಯಾಗಿಲ್ಲ.ವರ್ಷ ಆರಂಭವಾಗುವ ಜನವರಿ ತಿಂಗಳ 10 ರೊಳಗೆ ಹೆಚ್ಚುವರಿ ಸಂಬಳ ಪಾವತಿಯಾಗುತ್ತಿತ್ತು.ಈ ವರ್ಷ 20 ದಾಟಿದರೂ ಸಂಬಳ ಪಾವತಿಯಾಗಿಲ್ಲ.ಇದು ನಗರ ಸಿವಿಲ್ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಈ ತೊಂದರೆಯಾಗಿರುವುದು ಬೆಳಕಿಗೆ ಬಂದಿದೆ.ಈಗಾಗಲೇ ಬೇರೆ ಜಿಲ್ಲೆಗಳಲ್ಲಿ EXTRA ONE MONTH SALARY ಯನ್ನ ಸಿಬ್ಬಂದಿಗಳು ಪಡೆದಿದ್ದಾರೆ.ಆದರೆ ಮೈಸೂರು ನಗರ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಪಾವತಿಯಾಗಿಲ್ಲ.ನಗರ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಸುಮಾರು 1500 ಅಧಿಕಾರಿ ಸಿಬ್ಬಂದಿಗಳಿಗೆ ಸಂಬಳ ಪಾವತಿಯಾಗಿಲ್ಲ.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಿಎಂ ಆಗಿದ್ದ ವೇಳೆ ಪೊಲೀಸರಿಗೆ ಇಂತಹ ಸೌಲಭ್ಯ ಕಲ್ಪಿಸಿದ್ದರು.ಹಬ್ಬದ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಒಂದು ತಿಂಗಳ ಸಂಬಳ ನೀಡುವ ಆದೇಶ ಹೊರಡಿಸಿದ್ದರು.ಇದುವರೆಗೆ ಯಾವುದೇ ಅಡೆ ತಡೆ ಇಲ್ಲದೆ ಪ್ರತಿವರ್ಷ ಸಂಬಳ ಪಾವತಿಯಾಗಿದೆ.ಈ ವರ್ಷ 20 ನೇ ತಾರೀಖು ದಾಟಿದ್ದರೂ ಹೆಚ್ಚುವರಿಯಾಗಿ ಬರಬೇಕಿದ್ದ ಸಂಬಳ ಪಾವತಿಯಾಗಿಲ್ಲವೆಂದು ತಿಳಿದುಬಂದಿದೆ.ಹೆಚ್ಚುವರಿಯಾಗಿ ಬರುವ ಸಂಬಳಕ್ಕಾಗಿ ಕಾದಿರುವ ಸಿಬ್ಬಂದಿಗಳಿಗೆ ನಿರಾಸೆ ತರುತ್ತಿದೆ.ಜಿಲ್ಲಾ ಪೊಲೀಸ್,ಸಿಎಆರ್,ಕೆಎಸ್ ಆರ್ ಪಿ ವಿಭಾಗದ ಸಿಬ್ಬಂದಿಗಳು ಈಗಾಗಲೇ ಸಂಬಳ ಪಡೆದಿದ್ದಾರೆ.ನಗರ ವ್ಯಾಪ್ತಿಯ ಸಿಬ್ಬಂದಿಗಳಿಗೆ ಮಾತ್ರ ಇನ್ನೂ ಪಾವತಿಸದೆ ವಿಳಂಬವಾಗಿದೆ.ಇದಕ್ಕೆ ಕಾರಣ ಗೊತ್ತಿಲ್ಲ.ಆದ್ರೆ ರಜೆ ದಿನಗಳಲ್ಲೂ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಇದೆಂತಹ ಪರದಾಟ.ಇನ್ನಾದ್ರೂ ಸಂಭಂಧಪಟ್ಟವರು ಇತ್ತ ಗಮನ ಹರಿಸಿ ಹೆಚ್ಚುವರಿ ಸಂಬಳ ತಲುಪಿಸಲು ನೆರವಾಗಲಿ…