TV10 Kannada Exclusive

ಆನ್ ಲೈನ್ ಬುಸಿನೆಸ್ ಆಫರ್…ಮಹಿಳೆಗೆ 42.80 ಲಕ್ಷ ದೋಖಾ…

ಮೈಸೂರು,ಫೆ6,Tv10 ಕನ್ನಡ ಆನ್ ಲೈನ್ ನಲ್ಲಿ ಬುಸಿನೆಸ್ ಮಾಡುವ ಆಫರ್ ನೀಡಿದ ವಂಚಕನೊಬ್ಬ ಮಹಿಳೆಗೆ 42.80 ಲಕ್ಷ ದೋಖಾ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಚಾಮರಾಜಪುರಂ ನಿವಾಸಿ ಸಂಗೀತಾ ಎಂಬುವರೇ ಹಣ ಕಳೆದುಕೊಂಡ ಮಹಿಳೆ.ಟೆಲಿಗ್ರಾಂ ಆಪ್ ನಲ್ಲಿ ಆನ್ ಲೈನ್ ವ್ಯವಹಾರ ಮಾಡುವುದಾಗಿ ನಂಬಿಸಿದ ವಂಚಕ ಸಂಗೀತಾರಿಂದಚಹಂತಹಂತವಾಗಿ ಹಣ ಪಡೆದು ವಂಚಿಸಿದ್ದಾನೆ.ಒಟ್ಟು 42.80 ಲಕ್ಷ ಕಳೆದುಕೊಂಡ ಸಂಗೀತಾ ರವರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…
Read More

ಪೌತಿಖಾತೆ ಆಗದ ವಾರಸುದಾರರಿಗೆ ಸಂತಸದ ಸುದ್ದಿ…ಮೈಸೂರು ತಾಲೂಕು ವತಿಯಿಂದ ಪೌತಿಖಾತೆ ಆಂದೋಲನ…

ಮೈಸೂರು,ಫೆ5,Tv10 ಕನ್ನಡ ಪೌತಿಖಾತೆ ಆಗದೆ ವಿಳಂಬವಾಗುತ್ತಿರುವ ವಾರಸುದಾರರಿಗೆ ಮೈಸೂರು ತಾಲೂಕು ಆಡಳಿತ ಸಿಹಿ ಸುದ್ದಿ ನೀಡಿದೆ.ಜನವರಿ 22 ರಿಂದ ಪೌತಿಖಾತೆ ಆಂದೋಲನ ಆರಂಭಿಸಿದೆ.ಪೌತಿಖಾತೆ ಆಗದ ವಾರಸುದಾರರಿಗೆ ಸರ್ಕಾರದ ಕೆಲವು ಮಹತ್ತರ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಆಂದೋಲನ ಶುರುಮಾಡಿದೆ.ಪೌತಿಖಾತೆ ವಾರಸುದಾರರು,ಹಕ್ಕುದಾರರು ಸಂಭಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳಿಗೆ ಪೌತಿಖಾತೆ ಕೋರಿ ಅರ್ಜಿ ಜೊತೆಗೆ ಚಾಲ್ತಿ ಸಾಲಿನ ಪಹಣಿ(RTC),ಕಂದಾಯ ಇಲಾಖೆಯಿಂದ ಪಡೆದ RDS ವಂಶವೃಕ್ಷ,ಮೃತಖಾತೆದಾರರ ಮರಣ ಪ್ರಮಾಣ ಪತ್ರ,ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಇನ್ನಿತರ
Read More

ಸಮಾಜ ಸೇವೆಗೆ ಮನಸ್ಸು ಮುಖ್ಯ -ಲಯನ್ ಡಾ .ಎನ್ .ಕೃಷ್ಣೇಗೌಡ*

ಸಮಾಜ ಸೇವೆ ಮಾಡಲು ಮನಸ್ಸು ಬಹಳ ಮುಖ್ಯ, ಒಳ್ಳೆಯ ಮನಸ್ಸಿನಿಂದ ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಆತ್ಮ ತೃಪ್ತಿ ಸಿಗುತ್ತದೆ ಹಾಗೂ ಅವಕಾಶ ವಂಚಿತರಾದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದಾಗ ಅವರನ್ನು ಸಹ ಸಮಾಜದ ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದು ಲಯನ್ಸ್ ಅಂತರಾಷ್ಟ್ರೀಯ 317ಜಿಯ ಜಿಲ್ಲಾ ರಾಜ್ಯಪಾಲರಾದ ಡಾ. ಎನ್ ಕೃಷ್ಣೆಗೌಡ ರವರು ಹೇಳಿದರು. ಅವರು ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಅಧಿಕೃತ ಜಿಲ್ಲಾ ರಾಜ್ಯಪಾಲರ ಭೇಟಿ ಮತ್ತು ಸಂಸ್ಥಾಪನಾ ದಿನಾಚರಣೆಯ
Read More

ಎನ್.ಆರ್.ಪೊಲೀಸರ ಕಾರ್ಯಾಚರಣೆ…ಚಾಲಾಕಿ ಮನೆಗಳ್ಳರ ಬಂಧನ…ನಗದು ಸೇರಿದಂತೆ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ಫೆ2,Tv10 ಕನ್ನಡ ನರಸಿಂಹರಾಜ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಚಾಲಾಕಿ ಮನೆಗಳ್ಳರು ಸಿಕ್ಕಿಬಿದ್ದಿದ್ದಾರೆ.ಬಂಧಿತರಿಂದ ನಗದು ಸೇರಿದಂತೆ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಸೈಯದ್ ಅಯೂಬ್,ಮಹಮದ್ ಮುನ್ನ ಹಾಗೂ ಪ್ರಸಾದ್.ಆ.ಆಸಿಫ್ ಬಂಧಿತರು.ಮತ್ತೋರ್ವ ಆರೋಪಿ ಫಯಾಸ್ ತಲೆ ಮರೆಸಿಕೊಂಡಿದ್ದಾನೆ.ಮೈಸೂರಿನ ಉನ್ನತಿ ನಗರದಲ್ಲಿ ಕಳುವು ಮಾಡಿದ ಚುನ್ನಾಭರಣಗಳನ್ನ ಅರ್ಧ ಬೆಲೆಗೆ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರಿಂದ 832 ಗ್ರಾಂ ಒಡವೆಗಳು 37 ಗ್ರಾಂ ಬೆಳ್ಳಿ ಕಾಯಿನ್ ಗಳು ಹಾಗೂ 1,70,000/-
Read More

ಸುತ್ತೂರು ಜಾತ್ರಾ ಮಹೋತ್ಸವ…ಖಾಕಿ ಹೈ ಅಲರ್ಟ್…

ಸುತ್ತೂರು,ಫೆ5,Tv10 ಕನ್ನಡ ಫೆ.6 ರಿಂದ 11 ರವರೆಗೆ ನಡೆಯಲಿರುವ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ಸುತ್ತೂರು ಶ್ರೀಗಳ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವವನ್ನ ಕಣ್ತುಂಬಿಕೊಳ್ಳಲು ಭಕ್ತರು ಉತ್ಸುಕರಾಗಿದ್ದಾರೆ.6 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗಲಿದ್ದಾರೆ.ಸಾಕಷ್ಟು ಗಣ್ಯರೂ ಸಹ ಪಾಲ್ಗೊಳ್ಳಲಿದ್ದಾರೆ.ಈ ಹಿನ್ನಲೆ ಭದ್ರತೆ ಒದಗಿಸುವುದು ಪೊಲೀಸರ ಆಧ್ಯ ಕರ್ತವ್ಯವೂ ಆಗಿದೆ.ಹೀಗಾಗಿ ಜಾತ್ರಾ ಮಹೋತ್ಸವಕ್ಕೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಜಾತ್ರಾ ಮಹೋತ್ಸವ ಜರುಗುವ ಪ್ರತಿ ಕೇಂದ್ರಗಳಿಗೂ ಭದ್ರತೆ
Read More

ಹೆಚ್ಚು ಲಾಭದ ಆಮಿಷ…7 ಲಕ್ಷಕ್ಕೆ ಪಂಗನಾಮ…

ಮೈಸೂರು,ಫೆ4,Tv10 ಕನ್ನಡ ಹೂಡಿಕೆ ಹಣಕ್ಕೆ ಹೆಚ್ಚು ಲಾಭಾಂಶ ನೀಡುವ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ವಂಚಿಸಿರುವ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ವಿಜಯನಗರ ಬಡಾವಣೆ ನಿವಾಸಿ ಆದರ್ಶ್ ಅರಸ್ ಹಣ ಕಳೆದುಕೊಂಡವರು.ಸ್ನೇಹಿತರೊಬ್ಬರ ಸಲಹೆ ಮೇರೆಗೆ ಎಲ್ಲಿ ಲಿಲ್ಲಿ ಎಂಬ ಕಂಪನಿಯಲ್ಲಿ ಹಣ ಹೂಡಿದ್ದಾರೆ.ಪ್ರಾರಂಭದಲ್ಲಿ 540/- ರೂ ಪಾವತಿಸಿ ನೊಂದಣಿ ಮಾಡಿಕೊಂಡಿದ್ದಾರೆ.ವಾಟ್ಸಾಪ್ ಗ್ರೂಪ್ ನಲ್ಲಿ ಲಿಂಕ್ ಕಳುಹಿಸಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.ಹೂಡಿಕೆ ಹಣಕ್ಕೆ ದಿನ ಶೇ 3%ರಿಂದ 10
Read More

ಗಂಡನ ಅಕ್ರಮ ಸಂಭಂಧ ವಿಡಿಯೋ ತೆಗೆಯಲು ಯತ್ನಿಸಿದ ಪತ್ನಿ…ಕಾರಿನಿಂದ ಢಿಕ್ಕಿ ಹೊಡೆದು ಪ್ರಿಯಕರಳ ಜೊತೆ ಎಸ್ಕೇಪ್ ಆದ ಪತಿ…

ಮೈಸೂರು,ಫೆ4,Tv10 ಕನ್ನಡ ಪರಸ್ರ್ತೀಯೊಂದಿಗೆ ಅಕ್ರಮ ಸಂಭಂಧ ಇರಿಸಿಕೊಂಡ ಪತಿಯ ವಿಡಿಯೋ ತೆಗೆಯಲು ಹೋದ ಪತ್ನಿ ಮೇಲೆ ಕಾರಿನಿಂದ ಢಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿ ಹಾಗೂ ಪ್ರಿಯಕರಳ ಮೇಲೆ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕೆಸಿ ಲೇಔಟ್ ನಿವಾಸಿಯಾದ ಪತ್ನಿ ವಿಜಯನಗರದ ಸುದೀಪ್ ಎಂಬುವರನ್ನ ವಿವಾಹವಾಗಿದ್ದಾರೆ.ಕಳೆದ ಮೂರು ವರ್ಷಗಳಿಂದ ಸುದೀಪ್ ಪರಸ್ತ್ರೀಯೊಂದಿಗೆ ಅಕ್ರಮ ಸಂಭಂಧ ಬೆಳೆಸಿದ್ದಾರೆ.ಈ ಕುರಿತಂತೆ ಪತ್ನಿ ಸುದೀಪ್ ವಿರುದ್ದ ಜಯಲಕ್ಷ್ಮಿಪುರಂ
Read More

ಹೋಟೆಲ್ ಕೊಠಡಿ ಬಾಡಿಗೆ ಕಟ್ಟದೆ ಗಿರಾಕಿ ಎಸ್ಕೇಪ್…ಸದರನ್ ಸ್ಟಾರ್ ಹೋಟೆಲ್ ಗೆ ವಂಚನೆ…

ಮೈಸೂರು,ಫೆ4,Tv10 ಕನ್ನಡ ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಐಷಾರಾಮಿ ಸದರನ್ ಸ್ಟಾರ್ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ಹಣ ಪಾವತಿಸದೆ ಗ್ರಾಹಕನೊಬ್ಬ ವಂಚಿಸಿ ಎಸ್ಕೇಪ್ ಆದ ಪ್ರಕರಣ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹಾಸನ ತಾಲೂಕು ಚೆನ್ನರಾಯಪಟ್ಟಣ ತಾಲೂಕಿನ ರಂಜನ್ ಎಂಬಾತನ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.ಹೋಟೆಲ್ ನ ಮ್ಯಾನೇಜರ್ ಕರಿಯಪ್ಪ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ರಂಜನ್ ಸದರನ್ ಸ್ಟಾರ್ ಹೋಟೆಲ್ ಹಳೇ ಗ್ರಾಹಕ.2021 ರಿಂದ ಆಗಾಗ ಬಂದು ತಿಂಗಳುಗಳ
Read More

ಇ-ತ್ಯಾಜ್ಯ ಇಂದು ಬಹುಮುಖ್ಯ ಸಮಸ್ಯೆ -ಲಯನ್ ಟಿ.ಹೆಚ್ .ವೆಂಕಟೇಶ್ .

ಇ-ತ್ಯಾಜ್ಯ ಇಂದು ಪ್ರಪಂಚದಲ್ಲಿ ಬಹು ಮುಖ್ಯವಾದ ಸಮಸ್ಯೆಯಾಗಿ ಪರಿಣಮಿಸಿದೆ. ಹಾಗಾಗಿ ಇಂದಿನಿಂದಲೇ ಇದರ ಬಗ್ಗೆ ಕಾಳಜಿ ವಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಮುಂದೆ ಬಹುದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ಲಯನ್ಸ್ ಜಿಲ್ಲೆ 317 ಜಿ ನ ಸಂಪುಟ ಕಾರ್ಯದರ್ಶಿಯಾದ ಲಯನ್ ಟಿ.ಹೆಚ್ . ವೆಂಕಟೇಶ್ ರವರು ಹೇಳಿದರು. ಅವರು ಲಯನ್ಸ್ ಕ್ಲಬ್ ಆಫ್ ಮೈಸೂರ್ ಅಂಬಾಸಿಡರಸ್ ಮತ್ತು ಜಿಲ್ಲಾ ಅಧ್ಯಕ್ಷರು ಇ-ತ್ಯಾಜ್ಯ ವತಿಯಿಂದ ಹಮ್ಮಿಕೊಂಡಿದ್ದ ಇ-ತ್ಯಾಜ್ಯ ಸಂಗ್ರಹಣೆ ಕಾರ್ಯಕ್ರಮದಲ್ಲಿ
Read More

ಸಿದ್ದಲಿಂಗಪುರ ಚಂದ್ರಮೌಳೇಶ್ವರ ದೇವಾಲಯದಲ್ಲಿ ಕಳುವು…

ಮೈಸೂರು,ಫೆ4,Tv10 ಕನ್ನಡ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.ಗರ್ಭಗುಡಿಯ ಬಾಗಿಲ ಬೀಗ ಮುರಿದು ಪ್ರವೇಶಿಸಿದ ಕಳ್ಳರು 500 ಗ್ರಾಂ ತೂಕದ ಬೆಳ್ಳಿಕಂಠಾಭರಣ ದೋಚಿ ಪರಾರಿಯಾಗಿದ್ದಾರೆ.ಈ ಸಂಭಂಧ ಅರ್ಚಕರಾದ ನಂದಕುಮಾರ್ ರವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕಳುವಾದ ಬೆಳ್ಳಿಕಂಠಾಭರಣದ ಮೌಲ್ಯ 30 ಸಾವಿರ ಎಂದು ಅಂದಾಜಿಸಲಾಗಿದೆ…
Read More