TV10 Kannada Exclusive

ಚರಂಡಿ ವಿಚಾರಕ್ಕೆ ಕಿರಿಕ್…ಮಹಿಳೆ ಮನೆಗೆ ನುಗ್ಗಿ ಹಲ್ಲೆ…ವಿಡಿಯೋ ವೈರಲ್…

ನಂಜನಗೂಡು,ಮಾ21,Tv10 ಕನ್ನಡ ಚರಂಡಿ ಸ್ವಚ್ಛಗೊಳಿಸುವ ವಿಚಾರದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕು ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.ಹುರಾ ಗ್ರಾಮಪಂಚಾಯ್ತಿ ಅಧ್ಯಕ್ಷೆ ತಾಯಮ್ಮ,ಈಕೆಯ ಗಂಡ ಸೋಮಣ್ಣ ಹಾಗೂ ಮಗ ಶಿವರಾಜು ಎಂಬುವರು ಪಕ್ಕದ ಮನೆಯಲ್ಲಿ ವಾಸವಿದ್ದ ಮಮತಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.ಸಧ್ಯ ಹಲ್ಲೆ ನಡೆಸಲು ಮನೆ ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…
Read More

ಸುಳ್ಳುಜಾತಿ ಪ್ರಮಾಣ ಪತ್ರ ಆರೋಪ ಸಾಬೀತು…ಪೊಲೀಸ್ ಪೇದೆಗೆ 2 ವರ್ಷ ಜೈಲು..10 ಸಾವಿರ ದಂಡ ವಿಧಿಸಿ ತೀರ್ಪು…

ಮೈಸೂರು,ಮಾ21,Tv10 ಕನ್ನಡ ಸುಳ್ಳುಜಾತಿ ಪ್ರಮಾಣ ಪತ್ರ ನೀಡಿ ಪೇದೆ ಕೆಲಸ ಗಿಟ್ಟಿಸಿಕೊಂಡಿದ್ದ ಪೊಲೀಸಪ್ಪನಿಗೆ ಬೆಂಗಳೂರು ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ರಮೇಶ್ ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.ಪರಿಷಿಷ್ಠ ಜಾತಿಗೆ ಸೇರದಿದ್ದರೂ ತಾನು ಪರಿಶಿಷ್ಠ ಜಾತಿಯವನೆಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಗಿಟ್ಟಿಸಿಕೊಂಡಿದ್ದ ರಮೇಶ್ ಮೇಲೆ ಬೆಂಗಳೂರು 70 ನೇ ಅಪರ ಸಿಟಿ ಸಿವಿಲ್ ಹಾಗೂ
Read More

ಸಾಲ ವಸೂಲಿಗೆ ಕಿರುಕುಳ…ಪತ್ನಿಯನ್ನ ಅಡಮಾನ ಇಡುವಂತೆ ಧಂಕಿ…ಬೈಕ್ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ…

ಕೆ.ಆರ್.ನಗರ,ಮಾ21,Tv10 ಕನ್ನಡ ಸಾಲ ವಸೂಲಿಗಾಗಿ ಪತ್ನಿಯ ಬಗ್ಗೆ ಹಗುರವಾಗಿ ನಿಂದಿಸಿದ ಹಿನ್ನಲೆ ಮನನೊಂದ ವ್ಯಕ್ತಿ ಬೈಕ್ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಹರವೆ ಗ್ರಾಮದಲ್ಲಿ ನಡೆದಿದೆ.ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹರವೆ ಗ್ರಾಮದ ಹರೀಶ್ (40) ಮೃತ ದುರ್ದೈವಿ.ಹುಣಸೂರಿನ ರವಿ@ವಾಲೆ ರವಿ ಹಾಗೂ ಆತನ ತಮ್ಮ ಚಿನ್ನಸ್ವಾಮಿ ವಿರುದ್ದ ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಹುಣಸೂರು
Read More

ಕಾಗಿನೆಲೆ ಶಿವಾನಂದಪುರಿ ಶ್ರೀಗಳ ಆಶೀರ್ವಾದ ಪಡೆದ ಯದುವೀರ್,ಬಾಲರಾಜ್…ಮೈಸೂರು,ಮಾ20,Tv10 ಕನ್ನಡ

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಅವರು ಕಾಗಿನೆಲೆ ಕನಕ ಗುರುಪೀಠದ ಮೈಸೂರು ಶಾಖಾ ಅಧ್ಯಕ್ಷರಾದ ಶ್ರೀ ಶಿವಾನಂದ ಪುರಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.ಸಿದ್ದರ್ಥನಗರದ ಶಾಖಾ ಮಠಕ್ಕೆ ಭೇಟಿ ನೀಡಿದ ಇಬ್ಬರು ಅಭ್ಯರ್ಥಿಗಳು ಶ್ರೀಗಳಿಗೆ ಫಲ ತಾಂಬೂಲ ನೀಡಿ ಆಶೀರ್ವಾದ ಪಡೆದರು.ಇದೆ ವೇಳೆ ಮಾತನಾಡಿದ ಶ್ರೀಗಳು ಅಭ್ಯರ್ಥಿಗಳು ಮಠಕ್ಕೆ ಬಂದು
Read More

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ ಮೇಲೆ ವಿಜಯನಗರ ಠಾಣೆ ಪೊಲೀಸರ ದಾಳಿ…ರಾಜಾಸ್ಥಾನ್ ಮೂಲದ ನಾಲ್ವರ ಬಂಧನ…95 ಗ್ಯಾಸ್ ಸಿಲಿಂಡರ್ ವಶ…

ಮೈಸೂರು,ಮಾ20,Tv10 ಕನ್ನಡ ಗೃಹಬಳಕೆ ಸಿಲಿಂಡರ್ ಗಳಿಂದ ವಾಣಿಜ್ಯ ಸಿಲಿಂಡರ್ ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ದಂಧೆ ಮೇಲೆ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಿ ರಾಜಾಸ್ಥಾನ್ ಮೂಲದ ನಾಲ್ವರನ್ನ ಬಂಧಿಸಿದ್ದಾರೆ.ಬಂಧಿತರಿಂದ ವಿವಿದ ಗ್ಯಾಸ್ ಕಂಪನಿಯ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ 95 ಸಿಲಿಂಡರ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಅಲ್ಲದೆ ಗ್ಯಾಸ್ ರೀಫಿಲ್ಲಿಂಗ್ ಗಾಗಿ ಬಳಸುತ್ತಿದ್ದ 12 ರಾಡ್ ಗಳು ಮತ್ತು ಎರಡು ವಾಹನಗಳನ್ನೂ ಸಹ ವಶಕ್ಕೆ ಪಡೆದಿದ್ದಾರೆ.ರಾಜಾಸ್ಥಾನ್ ನ ಸುನಿಲ್ ಕುಮಾರ್,ದಿನೇಶ್,ಕೈಲಾಸ್,ಸುಭಾಷ್ ಭಿಷ್ಣೋಯಿ
Read More

ಮನೆ ಹಿಂಬಾಗಿಲು ಮೀಟಿ ನಗದು ಚಿನ್ನಾಭರಣ ಕಳುವು…ಹಾಡುಹಗಲೇ ಒಂಟಿ ಮನೆಯಲ್ಲಿ ಕೃತ್ಯ…

ಹುಣಸೂರು,ಮಾ20,Tv10 ಕನ್ನಡ ಮನೆ ಹಿಂಬಾಗಿಲು ಮೀಟಿದ ಖದೀಮರು 1.09 ಲಕ್ಷ ನಗದು ಹಾಗೂ 13 ಗ್ರಾಂ ಚಿನ್ನ ಮತ್ತು ಬೆಳ್ಳಿ ಕಾಲು ಚೈನು ದೋಚಿ ಪರಾರಿಯಾಗಿದ್ದಾರೆ. ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ದಲ್ಲಾಳ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಹಾಡುಹಗಲೇ ಒಂಟಿ ಮನೆಯಲ್ಲಿ ಖದೀಮರು ಕೈಚಳಕ ತೋರಿಸಿದ್ದಾರೆ.ತಿಮ್ಮೇಗೌಡ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.ಇಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆಯಲ್ಲಿ ಮನೆಯ ಮುಂಬಾಗಿಲು ಬೀಗ ಹಾಕಿದ ತಿಮ್ಮೇಗೌಡರು ದೇವಸ್ಥಾನಕ್ಕೆ ತೆರಳಿದ್ದಾರೆ.ಮನೆಗೆ ಹಿಂದಿರುಗುವಷ್ಟರಲ್ಲಿ
Read More

ಮೈಸೂರು: ಗುಬ್ಬಚ್ಚಿ ಹಬ್ಬ ಆಚರಣೆ…ಪ್ರಾಣಿ ಪಕ್ಷಿ ಸಂಕುಲ ಉಳಿವಿಗೆ ಒತ್ತು ನೀಡುವಂತೆ ಕರೆ…

ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಇಂದು ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಕಿರಿಯ ಪ್ರಾಥಮಿಕ ಶಾಲೆ(ಗುಬ್ಬಚ್ಚಿಶಾಲೆ)ಯಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಪ್ರಾಣಿ ಪ್ರಿಯರು ಗುಬ್ಬಚ್ಚಿ ಹಬ್ಬ ಆಚರಿಸುವ ಮೂಲಕ ಅಳಿವಿನಂಚಿನಲ್ಲಿರುವ ಗುಬ್ಬಿ ಸಂತತಿಯನ್ನು ಮುಂದಿನ ಪೀಳಿಗೆಗೂ ಉಳಿಸುವಂತೆ ಸಂದೇಶ ಸಾರಿದರು. ಪಕ್ಷಿಗಳಿಗೆ ನೀರು ನೀಡುವ ಮೂಲಕ ಪಕ್ಷಿ ತಜ್ಞ ಸಪ್ತ ಗಿರೀಶ್ ಎಂ ಕೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ. ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ. ನಾವು
Read More

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರಲ್ಲಿ ನಿರಾಳ…

ಟಿ.ನರಸೀಪುರ,ಮಾ19,Tv10 ಕನ್ನಡ ಜಮೀನಿನಲ್ಲಿ ಇಡಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.ಟಿ.ನರಸೀಪುರ ತಾಲೂಕು ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ.ಹಲವು ದಿನಗಳಿಂದ ಆಗಾಗ ಕಾಣಿಸಿಕೊಳ್ಳುತ್ತಾ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿತ್ತು.ಸಾಕು ಪ್ರಾಣಿಗಳು ಬಲಿಯಾಗುತ್ತಿತ್ತು.ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು.ಗ್ರಾಮದ ಹೊರವಲಯದ ಜಮೀನಿನಲ್ಲಿ ಇಡಲಾದ ಬೋನಿಗೆ ಚಿರತೆ ಸೆರೆಯಾಗಿದೆ.ಗ್ರಾಮಸ್ಥರಲ್ಲಿ ಆತಂಕ ದೂರವಾಗಿದೆ…
Read More

ಯುಟ್ಯೂಬ್ ಚಾನೆಲ್ ಪಾರ್ಟ್ನರ್ ಪತ್ನಿಗೆ ಲೈಂಗಿಕ ಕಿರುಕುಳ ಆರೋಪ…ನಾಲ್ವರ ವಿರುದ್ದ FIR ದಾಖಲು…

ಮೈಸೂರು,ಮಾ18,Tv10 ಕನ್ನಡ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ವ್ಯಕ್ತಿ ತನ್ನ ಪಾರ್ಟ್ನರ್ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ವಿನಯ್,ಈತನ ಪತ್ನಿ ಮಮತ ,ಕಾರಿನ ಚಾಲಕ ರಾಘು ಹಾಗೂ ಚೆಂಗಪ್ಪ ಎಂಬುವರ ಮೇಲೆ ನೊಂದ ಮಹಿಳೆ ಎಫ್.ಐ.ಆರ್.ದಾಖಲು ಮಾಡಿದ್ದಾರೆ. ನೊಂದ ಮಹಿಳೆಯ ಪತಿ ಚಂದು ಹಾಗೂ ವಿನಯ್ ಇಬ್ಬರೂ ಸೇರಿ ಉಖ ಖಿಗಿ ಕನ್ನಡ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.ಚಾನೆಲ್
Read More

ಕೊಟ್ಟಿಗೆಯಲ್ಲಿ ನೇಣು ಬಿಗಿದು ಲಾರಿ ಡ್ರೈವರ್ ಆತ್ಮಹತ್ಯೆ…

ಪಿರಿಯಾಪಟ್ಟಣ,ಮಾ16,Tv10 ಕನ್ನಡ ಕೊಟ್ಟಿಗೆಯಲ್ಲಿ ಲಾರಿ ಡ್ರೈವರ್ ಒಬ್ಬ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಪಿರಿಯಾಪಟ್ಟಣದ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.ತಮಿಳುನಾಡು ಮೂಲದ ಲಾರಿ ಡ್ರೈವರ್ ಎಂದು ಹೇಳಲಾಗಿದೆ. ರಸ್ತೆ ಬದಿ ಲಾರಿಯನ್ನ ನಿಲ್ಲಿಸಿ ನೇಣಿಗೆ ಶರಣಾಗಿದ್ದಾನೆ.ಲಾರಿ ನೊಂದಣಿ ಸಂಖ್ಯೆ TN60 AY 0164 ಆಗಿದೆ.ಮೃತ ಲಾರಿ ಡ್ರೈವರ್ ಕುರಿತಂತೆ ಮಾಹಿತಿ ಲಭ್ಯವಾಗಿಲ್ಲ…
Read More