TV10 Kannada Exclusive

ವಿಶ್ವ ಕ್ಯಾನ್ಸರ್ ಜಾಗೃತಿ ಸಪ್ತಾಹ…ಅಂಕೊಲಾಜಿ ಬಗ್ಗೆ ಮಹಿಳೆಯರಿಗೆ ಕಾರ್ಯಾಗಾರ…

ಮೈಸೂರು,ಫೆ1,Tv10 ಕನ್ನಡ ವಿಶ್ವ ಕ್ಯಾನ್ಸರ್ ಜಾಗೃತಿ ಸಪ್ತಾಹದ ಅಂಗವಾಗಿ ಇಂದು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಹಿಳೆಯರಿಗೆ ಅಂಕೋಲಾಜಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೈಸೂರಿನ ಮರುಳೆೇಶ್ವರ ನೇಗಿಲಯೋಗಿ ಸೇವಾಭವನದಲ್ಲಿ ನಡೆದ ಕಾರ್ಯಕ್ರಮವನ್ನ ….ಉದ್ಘಾಟಿಸಿದರು.ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ತ್ರೀರೋಗಶಾಸ್ತ್ರದ ಆಂಕೊಲಾಜಿಯ ಕಾರ್ಯಾಗಾರದಲ್ಲಿ ತಿಳುವಳಿಕೆ ಮೂಡಿಸಲಾಯಿತು.ಕಾರ್ಯಾಗಾರದಲ್ಲಿ ಸ್ತ್ರೀರೋಗಶಾಸ್ತ್ರದ ಆಂಕೊಲಾಜಿಯು ಮಹಿಳೆಯರಿಗೆ ನಿರ್ದಿಷ್ಟವಾದ ಕ್ಯಾನ್ಸರ್ ಗಳಾದ ಗರ್ಭಕಂಠದ ಕ್ಯಾನ್ಸರ್, ಸ್ಥನದ ಕ್ಯಾನ್ಸರ್, ಎಂಡೊಮೆಟ್ರಿಯಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ವಾಲ್ವಾರ್ ಕ್ಯಾನ್ಸರ್
Read More

ಮುಡಾ ಆಯುಕ್ತರಾಗಿ ಅರುಳ್ ಕುಮಾರ್ ನೇಮಕ…ಹಾಲಿ ಆಯುಕ್ತರಿಗೆ ಸ್ಥಳ ಸೂಚಿಸದ ಸರ್ಕಾರ…

ಮೈಸೂರು,ಫೆ1,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಅರುಳ್ ಕುಮಾರ್ ರವರನ್ನ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಳ್ ಕುಮಾರ್ ಮುಡಾ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.ಹಾಲಿ ಆಯುಕ್ತರಾಗಿದ್ದ ದಿನೇಶ್ ಕುಮಾರ್ ರವರಿಗೆ ಸ್ಥಳ ಇನ್ನೂ ಸೂಚಿಸಿಲ್ಲ…
Read More

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು…

ನಂಜನಗೂಡು,ಫೆ1,Tv10 ಕನ್ನಡ ವಿದ್ಯುತ್ ಸ್ಪರ್ಶಿಸಿ ಕಾರ್ಖಾನೆ ಕಾರ್ಮಿಕ ಮೃತಪಟ್ಟ ಘಟನೆ ನಂಜನಗೂಡಿನ ಇಮ್ಮಾವು ಕೈಗಾರಿಕಾ ಪ್ರದೇಶದ ವಸತಿ ನಿಲಯದಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸುಜನ್ ರಾವ್(23) ಮೃತ ದುರ್ದೈವಿ. ರಿಷಿ ಕಾರ್ಖಾನೆಯ ಕಾರ್ಮಿಕರ ವಸತಿ ನಿಲಯದಲ್ಲಿ ಘಟನೆ ವಸತಿ ನಿಲಯದ ಬಳಿ ಬಂದಾಗ ವಿದ್ಯುತ್ ಕಂಬವೊಂದರ ಬಳಿ ಬಂದ ಸುಜನ್ ರಾವ್ ಗೆ ಅವಘಢ ಸಂಭವಿಸಿದೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ…
Read More

ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ…ಇಬ್ಬರು ಪೆಡ್ಲರ್ ಗಳ ಬಂಧನ…40 ಲಕ್ಷ ಮೌಲ್ಯದ ಗಾಂಜಾ ವಶ…

ಮೈಸೂರು,ಜ31,Tv10 ಕನ್ನಡ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಪೆಡ್ಲರ್ ಗಳನ್ನ ಬಂಧಿಸಲಾಗಿದ್ದು ಆರೋಪಿಗಳಿಂದ 40 ಲಕ್ಷ ಮೌಲ್ಯದ 85 ಕೆಜಿ 730 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಒಡಿಸ್ಸಾ ಮೂಲದ ರಾಜಿಕ್ ಮಲ್ಲಿಕ್ ಹಾಗೂ ಆಂಧ್ರ ಮೂಲದ ಜಾಫರ್ ಬಂಧಿತರು.ಸಾತಗಳ್ಳಿ ಒಂದನೇ ಹಂತದಲ್ಲಿ ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.ಒರಿಸ್ಸಾದಿಂದ ರೈಲಿನಲ್ಲಿ ಗಾಂಜಾ ತಂದು ಮೈಸೂರಿನಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡಲು ಮುಂದಾಗಿದ್ದ ಆರೋಪಿಗಳು ಇದೀಗ ಪೊಲೀಸರ
Read More

ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಹುಲಿ ಸೆರೆ…

ನಂಜನಗೂಡು,ಜ31,Tv10 ಕನ್ನಡ ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಹುಲಿಯನ್ನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು 24 ಗಂಟೆ ಒಳಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬಂಡಿಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲೂಕಿನ ನಾಗಣಪುರ ಗ್ರಾಮದ ನಾಗೇಂದ್ರ ಎಂಬುವರ ಜಮೀನಿನಲ್ಲಿ ಭಾರಿ ಗಾತ್ರದ ಹೆಣ್ಣು ಹುಲಿ ಪ್ರತ್ಯಕ್ಷವಾಗಿದೆ. ಜಮೀನಿನ ಬಳಿ ತೆರಳಿದ್ದ ಗ್ರಾಮದ ಸುರೇಶ ಮತ್ತು ನಂಜುಂಡ ಎಂಬುವರು ಹುಲಿಯನ್ನು ನೋಡಿ ಚಿರಾಟ ಮಾಡಿದ್ದಾರೆ. ಕಾಡಿನತ್ತ ಹೆಜ್ಜೆ ಹಾಕಲು ಮುಂದಾದ ಹುಲಿ
Read More

ಕಾರು ಢಿಕ್ಕಿ…ಭಾರಿ ಗಾತ್ರದ ಹುಲಿ ಸಾವು…ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಘಟನೆ…

ಮೈಸೂರು,ಜ29,Tv10 ಕನ್ನಡ ಕಾರು ಢಿಕ್ಕಿ ಹೊಡೆದ ಪರಿಣಾಮ ಭಾರಿ ಗಾತ್ರದ ಹುಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ನಡೆದಿದೆ.ಗಂಡು ಹುಲಿ ಸಾವನ್ನಪ್ಪಿದ್ದು ಅರಣ್ಯಾಧಿಕಾರಿಗಳು ಹುಲಿಯ ಮೃತದೇಹವನ್ನ ವಶಕ್ಕೆ ಪಡೆದಿದ್ದಾರೆ.ನಿನ್ನೆ ತಡರಾತ್ರಿ ಸುಮಾರು 12 ಗಂಟೆ ವೇಳೆಗೆ ಘಟನೆ ನಡೆದಿದೆ.ಇಟಿಯೋಸ್ ಕಾರ್ ಹುಲಿಗೆ ಢಿಕ್ಕಿ ಹೊಡೆದಿದೆ.ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ.ಘಟನೆ ನಡೆದ ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಮಾಲತಿ ಪ್ರಿಯ,ಲಕ್ಷ್ಮಿನಾರಾಯಣ್,ಸುರೇಂದ್ರ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇತ್ತೀಚಿನ ದಿನಗಳಲ್ಲಿ
Read More

PUMA ಕಂಪನಿ ಹೆಸರಲ್ಲಿ ನಕಲಿ ಪದಾರ್ಥಗಳ ಮಾರಾಟ ಆರೋಪ…ಲಕ್ಷಾಂತರ ಮೌಲ್ಯದ ಪದಾರ್ಥಗಳು ವಶ…

ಮೈಸೂರು,ಜ28,Tv10 ಕನ್ನಡ ಹೆಸರಾಂತ PUMA ಕಂಪನಿಯ ಸಿದ್ದ ಉಡುಪುಗಳು ಹಾಗೂ ಪಾದರಕ್ಷೆಗಳನ್ನ ನಕಲು ಮಾಡಿ ಮಾರಾಟ ಮಾಡುತ್ತಿರುವ ಆರೋಪ ಹಿನ್ನಲೆ ಮೈಸೂರಿನ ಅಂಗಡಿಯೊಂದರ ಮೇಲೆ ಸರಸ್ವತಿಪುರಂ ಠಾಣೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಪದಾರ್ಥಗಳನ್ನ ವಶಪಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಬೋಗಾದಿ ಮುಖ್ಯರಸ್ತೆಯಲ್ಲಿರುವ ಫಂಕಿ ವರ್ಲ್ಡ್ ಎಂಬ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪ ಬಂದಿದ್ದು ಪ್ರಕರಣ ದಾಖಲಾಗಿದೆ. ಫಂಕಿ ವರ್ಲ್ಡ್ ನಲ್ಲಿ PUMA ಕಂಪನಿಯ ನಕಲಿ ಪಾದರಕ್ಷೆ ಹಾಗೂ
Read More

ಸಾಲಗಾರರ ಹಾವಳಿ ಹಿನ್ನಲೆ…ಇಡೀ ಕುಟುಂಬ ಮಿಸ್ಸಿಂಗ್…ಡೆತ್ ನೋಟ್ ವಾಯ್ಸ್ ಮೆಸೇಜ್ ಹಾಕಿ ನಾಪತ್ತೆ…

ಮೈಸೂರು,ಜ29,Tv10 ಕನ್ನಡ ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬ ನಾಪತ್ತೆಯಾದ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದೆ.ಇಡೀ ಕುಟುಂಬ ನಾಪತ್ತೆಯಾಗಿ 8 ದಿನ ಕಳೆದರೂ ಸುಳಿವು ಪತ್ತೆಯಾಗಿಲ್ಲ. ಕೆ.ಜಿ.ಕೊಪ್ಪಲಿನ ಮಹೇಶ್(35),ಈತನ ಪತ್ನಿ ಭವಾನಿ(28),ಪುತ್ರಿ ಪ್ರೇಕ್ಷಾ(3) ಇವರ ತಂದೆ ಮಹದೇವಪ್ಪ(65) ಹಾಗೂ ತಾಯಿ ಸುಮಿತ್ರ(55) ನಾಪತ್ತೆಯಾದವರು.ಈ ಸಂಭಂಧ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.ಮಾರ್ಕೆಟಿಂಗ್ ಬಿಸಿನೆಸ್
Read More

ಕಾಲು ಜಾರಿ ನದಿಗೆ ಬಿದ್ದು ಮಹಿಳೆ ಸಾವು…ಮಹದೇವತಾತ ಗದ್ದುಗೆ ಪೂಜೆಗೆ ಬಂದ ಮಹಿಳೆ ನೀರು ಪಾಲು…

ನಂಜನಗೂಡು,ಜ27,Tv10 ಕನ್ನಡ ಧಾರ್ಮಿಕ ಪುಣ್ಯಕ್ಷೇತ್ರ ಸಂಗಮ ಬಳಿ ಇರುವ ಶ್ರೀ ಮಹದೇವತಾತ ಗದ್ದುಗೆ ಪೂಜೆಗೆ ಬಂದ ಮಹಿಳೆ ಕಪಿಲ ನದಿಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.ಪೂಜೆಗೆ ತೆರಳುವ ಮುನ್ನ ಕಾಲು ತೊಳೆಯಲು ನದಿಗೆ ಇಳಿದಾಗ ದುರ್ಘಟನೆ ನಡೆದಿದೆ.ಹುಳಿಮಾವು ಗ್ರಾಮದ ನಂಜಪ್ಪ ಸ್ವಾಮಿ ಎಂಬವರ ಪತ್ನಿ ಶಕುಂತಲಾ (46)ಮೃತ ಮಹಿಳೆ.ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದಿಂದ ಹುಳಿಮಾವು ಗ್ರಾಮಕ್ಕೆ ವಿವಾಹವಾಗಿದ್ದರು.ನೆನ್ನೆ ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಮಹದೇವ ತಾತ ಗದ್ದಿಗೆ ಪೂಜಿ ಸಲ್ಲಿಸಲು ಕುಟುಂಬ ಸಮೇತ ಬಂದಿದ್ದರು.
Read More

34 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ…ಅನಿಲ್ ಚಿಕ್ಕಮಾದು ಜಂಗಲ್ ರೆಸಾರ್ಟ್ಸ್,ಪುಟ್ಟರಂಗಶೆಟ್ಟಿಗೆ MSIL ಸ್ಥಾನ…

ಬೆಂಗಳೂರು,ಜ26,Tv10 ಕನ್ನಡ 34 ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣರಾಜ್ಯೋತ್ಸವದ ಗಿಫ್ಟ್ ಕೊಟ್ಟಿದ್ದಾರೆ.32 ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ಇಂದು ಬಿಡುಗಡೆ ಮಾಡಿದ್ದಾರೆ.ಇದರಲ್ಲಿ ಮೈಸೂರಿಗೆ ಒಂದು ನಿಗಮ ಮಂಡಳಿ ಸ್ಥಾನ ಮಾತ್ರ ನೀಡಲಾಗಿದೆ.ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಅನಿಲ್ ಚಿಕ್ಕಮಾದು ಗೆ ಜಂಗಲ್ ರೆಸಾರ್ಟ್ಸ್ ಅಧ್ಯಕ್ಷ ಸ್ಥಾನ ನೀಡಲಾಗಿದೆ.ಚಾಮರಾಜನಗರದಿಂದ ಚುನಾಯಿತರಾದ ಪುಟ್ಟರಂಗಶೆಟ್ಟಿಗೆ MSIL ಅದ್ಯಕ್ಷ ಸ್ಥಾನ ನೀಡಲಾಗಿದೆ,ಶ್ರೀರಂಗಪಟ್ಟಣದಿಂದ ಚುನಾಯಿತರಾದ ರಮೇಶ್ ಬಂಡಿ ಸಿದ್ದೇಗೌಡ ರವರಿಗೆ ಚೆಸ್ಕಾಂ ಅಧ್ಯಕ್ಷ ಸ್ಥಾನ ನೀಡಲಾಗಿದೆ.ಇಂದಿನಿಂದ
Read More