TV10 Kannada Exclusive

ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ನೇಮಕ…

ಮೈಸೂರು,ಮೇ29,Tv10 ಕನ್ನಡ ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ರನ್ನ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.ಈ ಹಿಂದೆ ಕಬಿನಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಉಪವಿಭಾಗಾಧಿಕಾರಿಯಾಗಿ ಇಂದಿನ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿರುವ ಕೆ.ಆರ್.ರಕ್ಷಿತ್ ಹುದ್ದೆ ಅಲಂಕರಿಸಿದ್ದರು.ಕೆ.ಆರ್.ರಕ್ಷಿತ್ ರವರ ಜಾಗಕ್ಕೆ ಆರ್.ಮಂಜುನಾಥ್ ರನ್ನ ಪ್ರಭಾರ ಆಗಿ ನೇಮಕ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ…
Read More

ಸಾಲಬಾಧೆ:ರೈತ ಆತ್ಮಹತ್ಯೆ…

ಮಂಡ್ಯ,ಮೇ28,Tv10 ಕನ್ನಡ ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮತ್ಯೆಗೆ ಶರಣಾದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮರಟಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರೈತ ಮಂಜೇಗೌಡ (45) ಆತ್ಮತ್ಯೆಗೆ ಶರಣಾದವರು.ಮಂಡ್ಯದ ಕೆ.ಆರ್.ಪೇಟೆ ತಾ. ಸಾಧುಗೋನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.ವಿವಿಧ ಬ್ಯಾಂಕಿನಲ್ಲಿ ಸಾಲ, ಖಾಸಗಿ ವ್ಯಕ್ತಿಗಳಿಂದಲೂ 5 ಲಕ್ಷದವರೆಗೂ ಕೈ ಸಾಲ ಮಾಡಿಕೊಂಡಿದ್ದರು.ಸಾಲದ ಸುಳಿಯಲ್ಲಿ ಸಿಲುಕಿ ಮನನೊಂದು ನೇಣಿಗೆ ಶರಣಾಗಿದ್ದಾರೆ.ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ
Read More

ಮೈಸೂರು ಅಭಿವೃದ್ದಿ ಪ್ರಾಧಿಕಾರ ಆಯುಕ್ತರಾಗಿ ಕೆ.ಆರ್.ರಕ್ಷಿತ್ ನೇಮಕ…

ಮೈಸೂರು,ಮೇ26,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಕೆ.ಆರ್.ರಕ್ಷಿತ್ ನೇಮಕವಾಗಿದ್ದಾರೆ.ಮೈಸೂರು ಅಭಿವೃದ್ದಿ ಪ್ರಾಧಿಕಾರದ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರತವಹಿಸುತ್ತಿರುವ ಕೆ.ಆರ್.ರಕ್ಷಿತ್ ರವರಿಗೆ ಆಯುಕ್ತರಾಗಿ ಹೆಚ್ಚಿನ ಅಧಿಕಾರ ವಹಿಸಲಾಗಿದ್ದು ಎರಡೂ ಹುದ್ದೆಯನ್ನ ಮುಂದಿನ ಆದೇಶದ ವರೆಗೆ ನಿರ್ವಹಿಸುವಂತೆ ಸೂಚಿಸಲಾಗಿದೆ…
Read More

ಕೆರೆ ಅಂಚಿನಲ್ಲಿ ಪೀಸ್ ಪೀಸ್ ಆದ ಪುರುಷ ಶವ ಪತ್ತೆ…ಕೊಲೆ ಶಂಕೆ…

ಮೈಸೂರು,ಮೇ25,Tv10 ಕನ್ನಡ ಕೆರೆ ಅಂಚಿನಲ್ಲಿ ಪೀಸ್ ಪೀಸ್ ಆದ ಪುರುಷ ಶವ ಪತ್ತೆಯಾದ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಲೆ,ಎಡ ಮುಂಗೈ,ತೊಡೆ,ಮೊಣಕಾಲು ಬೇರ್ಪಡಿಸಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.ಕೊಲೆ ಮಾಡಿ ಶವ ತಂದು ಹಾಕಿರಬಹುದೆಂದು ಶಂಕಿಸಲಾಗಿದೆ.ಮೃತನ ಮಾಹಿತಿ ತಿಳಿದು ಬಂದಿಲ್ಲ.ಸ್ಥಳಕ್ಕೆ ಜಯಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ…
Read More

ಕೊಡೋತ್ಸವ ವೇಳೆ ಬೆಂಕಿಗೆ ಬಿದ್ದು ಗಾಯಗೊಂಡಿದ್ದ ಗುಡ್ಡಪ್ಪ ಸಾವು…

ಮಂಡ್ಯ,ಮೇ25,Tv10 ಕನ್ನಡ ಕೊಂಡಕ್ಕೆ ಬಿದ್ದು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ಗುಡ್ಡಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಕಾರಸವಾಡಿ ಗ್ರಾಮದ ಮಹದೇವು ಮೃತ ಗುಡ್ಡಪ್ಪ.ಏಪ್ರಿಲ್ 21ರಂದು ಗ್ರಾಮದಲ್ಲಿ ಬೋರೇದೇವರ ಕೊಂಡೋತ್ಸವ ನಡೆದಿತ್ತು.ಈ ವೇಳೆ ಗುಡ್ಡಪ್ಪ ನಿಯಂತ್ರಣ ತಪ್ಪಿ ಕೆಂಡಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.ಗಾಯಾಳು ಗುಡ್ಡಪ್ಪಗೆ ಮೈಸೂರು, ಮಂಡ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು.ಚಿಕಿತ್ಸೆ ಫಲಿಸದೆ ಗುಡ್ಡಪ್ಪ ಮಹದೇವು ಮೃತಪಟ್ಟಿದ್ದಾರೆ.ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು…
Read More

ಹುಲಿ ಮೃತದೇಹ ಪತ್ತೆ…ಗಾಯವಾಗಿರುವ ಸ್ಥಿತಿಯಲ್ಲಿ ಶವ ಪತ್ತೆ…

ಹುಣಸೂರು,ಮೇ25,Tv10 ಕನ್ನಡ ಮೈಸೂರು ಜಿಲ್ಲೆ ಹುಣಸೂರು ತಾಲೂಕು ನಾಗರಹೊಳೆ ಮುದ್ದನಹಳ್ಳಿ ಅರಣ್ಯಪ್ರದೇಶದ ನಾಲೆ ಬಳಿ ಹುಲಿ ಮೃತದೇಹ ಪತ್ತೆಯಾಗಿದೆ.ವಾರದ ಹಿಂದೆ ಈ ಭಾಗದ ಅರಣ್ಯದಲ್ಲಿ ವೆಂಕಟೇಶರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿತ್ತು.ಹುಲಿ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.ಹುಲಿ ಶವದ ಬಳಿ ರಕ್ತ ಮಿಶ್ರಿತ ಹುಲಿ ಮಲ ಪತ್ತೆಯಾಗಿದೆ.ಹಿಂಗಾಲಿಗೆ ಗಾಯವಾಗಿರುವ ಸ್ಥಿತಿಯಲ್ಲಿ ಹುಲಿ ಶವ ಪತ್ತೆಯಾಗಿದೆ.ಸ್ಥಳಕ್ಕೆ ನಾಗರಹೊಳೆ ಹೊಳೆ ಉದ್ಯಾನದ ನಿರ್ದೆಶಕಿ ಪಿ.ಎ.ಸೀಮಾ. ಆರ್.ಎಫ್. ಒ. ಸುಬ್ರಮಣಿ,ಪಶುವೈದ್ಯ ಡಾ.ರಮೇಶ್
Read More

ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಯದುವೀರ್…ಅಭಿಯಾನ ಆರಂಭ…

ಮೈಸೂರು,ಮೇ25,Tv10 ಕನ್ನಡ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ವಿವಾದ ಇದೀಗ ಮತ್ತೊಂದು ತಿರುವು ಪಡೆಯುತ್ತಿದೆ.ಸಂಸದಯದುವೀರ್ ಕೃಷ್ಣರದತ್ತ ಚಾಮರಾಜ ಒಡೆಯರ್‌ರನ್ನು ರಾಯಭಾರಿ ಮಾಡಲು ಅಭಿಯಾನ ಆರಂಭವಾಗಿದೆ.ಯದುವೀರ್ ಪೋಸ್ಟರ್ ಮಾಡಿ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ.ತಮನ್ನಾ ಬದಲಾಯಿಸಿ ಯದುವೀರ್ ಘೋಷಿಸಿಸೂಕ್ತ ರಾಯಭಾರಿ ಎಂದರೆ ನಮ್ಮ ಯದುವೀರ್ ಎಂದು ಉಲ್ಲೇಖಿಸಿ ಅಭಿಯಾನ ಶುರುವಾಗಿದೆ.ಬ್ರಾಂಡು ನಮ್ದೆ ಬ್ರಾಂಡ್ ಅಂಬಾಸಿಡರ್ ನಮ್ಮವರೇ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ…
Read More

ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಗೆ ಪರಭಾಷಾ ನಟಿ ತಮನ್ನ ಭಾಟಿಯಾ ರಾಯಭಾರಿಯಾಗಿ ಆಯ್ಕೆ…ಸಂಸದ ಯದುವೀರ್ ಅಸಮಾಧಾನ…

ಮೈಸೂರು,ಮೇ23,Tv10 ಕನ್ನಡ ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಸಂಸ್ಥೆಗಳಲ್ಲಿ ಒಂದಾಗಿದ್ದ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಗೆ ಪರಭಾಷೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಸಂಸದ ಯದುವೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದು ಅತ್ಯಂತ ಅಸಂಬದ್ಧ ಹಾಗೂ ಬೇಜವಾಬ್ದಾರಿಯುತ ನಿರ್ಧಾರ ಎಂದು ಪ್ರತಿಕ್ರಿಯಿಸಿದ್ದಾರೆ. 1916ರಲ್ಲಿ ನಮ್ಮ ಮೈಸೂರು ಸಂಸ್ಥಾನದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಸಂಸ್ಥೆ ಕಟ್ಟಲು
Read More

ಮುಡಾ ಹೆಸರು ರದ್ದು…ಎಂಡಿಎ ಜಾರಿ…ಇಂದಿನಿಂದಲೇ ಪಾಲನೆ…ಸರ್ಕಾರದಿಂದ ಆದೇಶ…

ಮೈಸೂರು,ಮೇ23,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಹೆಸರು ರದ್ದಾಗಿದೆ.ಇನ್ಮುಂದೆ ಎಂ.ಡಿ.ಎ.ಆಗಿ ಕರೆಯಲ್ಪಡುತ್ತದೆ.ಸರ್ಕಾರದಿಂದ ಮಹತ್ತರದ ಆದೇಶವಾಗಿದ್ದು ಇಂದಿನಿಂದಲೇ ಆದೇಶ ಜಾರಿಯಾಗಿದೆ.ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಇನ್ಮುಂದೆ ಮೈಸೂರು ಅಭಿವೃದ್ದಿ ಪ್ರಾಧಿಕಾರವಾಗಿ ಹೆಸರು ಬಳಕೆಯಾಗಲಿದೆ.ಸರ್ಕಾರದ ಅಧೀನ ಕಾರ್ಯದರ್ಶಿ ಅಭಿವೃದ್ದಿ ಪ್ರಾಧಿಕಾರ ಮತ್ತು ನಗರ ಯೋಜನಾ ಸೇವೆ,ನಗರಾಭಿವೃದ್ದಿ ಇಲಾಖೆ ಕೆ.ಲತಾ ರವರು ಆದೇಶ ಹೊರಡಿಸಿದ್ದಾರೆ…
Read More

ರಸ್ತೆ ಅಗಲೀಕರಣಕ್ಕೆ ಮೀಸಲಾದ ಜಾಗದಲ್ಲಿ ಅಕ್ರಮ ಕಟ್ಟಡ…ಸೂಕ್ತ ಕ್ರಮ ಕೈಗೊಳ್ಳುವಂತೆ ಮುಡಾದಿಂದ ಪಾಲಿಕೆಗೆ ಪತ್ರ…

ಮೈಸೂರು,ಮೇ21,Tv10 ಕನ್ನಡ ಸಿಎ ನಿವೇಶನದ ರಸ್ತೆ ಅಗಲೀಕರಣಕ್ಕಾಗಿ ಮೀಸಲಿರಿಸಿದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿರುವುದನ್ನ ಮುಡಾ ವಲಯ ಅಧಿಕಾರಿಗಳು ಪತ್ತೆ ಹಚ್ಚಿದ್ದು ತುರ್ತಾಗಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಪತ್ರ ಬರೆದಿದ್ದಾರೆ. ಮೈಸೂರು ನಗರ ಕಾಳಿದಾಸ ರಸ್ತೆ ಪಂಚವಟಿ ಸರ್ಕಲ್ ಬಳಿ ಇರುವ ಸಿಎ ನಿವೇಶನದ ರಸ್ತೆ ಅಗಲೀಕರಣಕ್ಕಾಗಿ ಮೀಸಲಾದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದಾಗಿ ಮುಡಾ ವಲಯ 4 ರ ಅಧಿಕಾರಿಗಳು ಪತ್ತೆ ಹಚ್ಚಿದ್ದು.ಈ ಬಗ್ಗೆ
Read More