ಫೆ.11 ಸುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ…
ಮೈಸೂರು,ಫೆ10,Tv10 ಕನ್ನಡ ಫೆಬ್ರವರಿ 11 ರಂದು ಸುತ್ತೂರಿಗೆ ಕೇಂದ್ರ ಗೃಹಮಂತ್ರಿ ಹಾಗೂ ಸಹಕಾರ ಸಚಿವ ಸುತ್ತೂರಿಗೆ ಭೇಟಿ ನೀಡಲಿದ್ದಾರೆ.ಅಂದು ಬೆಳಿಗ್ಗೆ 11 ಗಂಟೆಗೆ ಸುತ್ತೂರು ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಶ್ರೀಮತಿ ಪಾರ್ವತಮ್ಮ ಹಾಗೂ ಶ್ರೀ ಶಾಮನೂರು ಶಿವಶಂಕರಪ್ಪ ರವರ ಅತಿಥಿ ಗೃಹವನ್ನ ಉದ್ಘಾಟಿಸಲಿದ್ದಾರೆ.ಫೆ10 ರಂದು ನಿಗದಿಯಾಗಿದ್ದ ಕಾರ್ಯಕ್ರಮ ಒಂದು ದಿನ ಮುಂದೂಡಲಾಗಿದ್ದು ಫೆ.11 ಕ್ಕೆ ನಡೆಯಲಿದೆ.ಸಂಸತ್ ಅಧಿವೇಶನ ಮುಂದೂಡಿರುವ ಕಾರಣ ಸುತ್ತೂರು ಕ್ಷೇತ್ರದ ಕಾರ್ಯಕ್ರಮವನ್ನೂ ಸಹ ಒಂದು ದಿನ ಮುಂದೂಡಲಾಗಿದೆ…
Read More