TV10 Kannada Exclusive

ಅಪರಾಧ ತಡೆ ಮಾಸಾಚರಣೆ…ಬೈಕ್ ರಾಲಿ ಮೂಲಕ ಪೊಲೀಸರಿಂದ ಜಾಗೃತಿ…

ಹುಣಸೂರು,ಡಿ10,Tv10 ಕನ್ನಡ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಹುಣಸೂರು ತಾಲೂಕಿನ ಬಿಳಿಕರೆ ಪೊಲೀಸರು ಬೈಕ್ ರಾಲಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಪರಿಚಿತ ವ್ಯಕ್ತಿಗಳು ಹಾಗೂ ವಂಚಕರ ಬಗ್ಗೆ ಎಚ್ಚರಿಕೆ ವಹಿಸಬೇಕು, ಬಾಲ್ಯ ವಿವಾಹ,ಒಬ್ಬಂಟಿ ಮಹಿಳೆಯರು ಸಂಚರಿಸುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವುದು, ತಮ್ಮ ಆಭರಣಗಳ ಬಗ್ಗೆ ನಿಗಾವಹಿಸುವುದು, ವೃದ್ಧರ ಬಳಿ ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಮೋಸ ಮಾಡುವುದು ಅಲ್ಲದೆ ಪೋಕ್ಸೊ ಕಾಯಿದೆ ಬಗ್ಗೆ, ಸಂಚಾರಿ
Read More

ಪಾನಮತ್ತ ಯುವಕರ ಗಲಾಟೆ…ಪ್ರಶ್ನೆ ಮಾಡಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆ…!!

ಕೆ.ಆರ್.ನಗರ,ಡಿ10,Tv10 ಕನ್ನಡ ಕುಡಿದು ಗಲಾಟೆ ಮಾಡಿದ ಯುವಕರನ್ನ ಪ್ರಶ್ನೆ ಮಾಡಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆಯಾಗಿದೆ.ಮೈಸೂರು ಜಿಲ್ಲೆ ಕೆ ಆರ್ ನಗರದಲ್ಲಿ ಘಟನೆ ಬೆಳಕಿಗೆ ಬಂದಿದೆ.ಕೆ.ಆರ್.ನಗರ ಪೊಲೀಸ್ ಠಾಣೆಪೊಲೀಸ್ ಕಾನ್ಸಟೇಬಲ್ ಪುನೀತ್ ಹಾಗೂ ಹರೀಶ್‌ಗೆ ವರ್ಗಾವಣೆ ಶಿಕ್ಷೆಯಾಗಿದೆ.ಐದು ದಿನದ ಹಿಂದೆ ಕೆ ಆರ್ ನಗರ ಪಟ್ಟಣದಲ್ಲಿ ಗಲಾಟೆ ನಡೆದಿತ್ತು.ಸಾರ್ವಜನಿಕ ಸ್ಥಳದಲ್ಲಿ ಕುಡಿಯುತ್ತಿದ್ದ ಯುವಕರನ್ನ ಕಾನ್ಸಟೇಬಲ್‌ಗಳಾದ ಪುನೀತ್ ಹಾಗೂ ಹರೀಶ್ ಪ್ರಶ್ನೆ ಮಾಡಿದ್ದಾರೆ.ಈ ವೇಳೆ ಪೊಲೀಸರ ಜೊತೆ ಯುವಕರ ಮಾತಿನ ಚಕಮಕಿ ನಡೆಸಿ
Read More

ಮಾಜಿ ಆದರೂ ವಿಶ್ರಾಂತಿ ಇಲ್ಲ…ಸಾಮಾಜಿಕ ಕಳಕಳಿ ಮರೆಯಲ್ಲ…ಉದ್ಯಾನವನದ ಸ್ವಚ್ಛತೆಗೆ ಇಳಿದ ಮಾಜಿ ಪುರಪಿತೃ ಮ.ವಿ.ರಾಮಪ್ರಸಾದ…

ಮೈಸೂರು,ಡಿ10,Tv10 ಕನ್ನಡ ನವೆಂಬರ್ 16 ಕಾರ್ಪೊರೇಟರ್ ಗಳ ಅವಧಿ ಮುಗಿದಿದೆ.65 ಪಾಲಿಕೆ ಸದಸ್ಯರು ಅಧಿಕಾರ ಕಳೆದುಕೊಂಡಿದ್ದಾರೆ.ಅವಧಿ ಮುಗಿದರೂ ವಿಶ್ರಾಂತಿ ಪಡೆಯದ ವಾರ್ಡ್ 55 ರ ಮಾಜಿ ಕಾರ್ಪೊರೇಟರ್ ಸಾಮಾಜಿಕ ಕಳಕಳಿಗೆ ಆಧ್ಯತೆ ನೀಡುತ್ತಿದ್ದಾರೆ.ತಾವು ಪ್ರತಿನಿಧಿಸಿದ್ದ ವಾರ್ಡ್ ನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಾನುರಾಗಿಯಾಗಿ ಮುಂದುವರೆಯುತ್ತಿದ್ದಾರೆ.ರೆಸ್ಟ್ ಗೆ ಮೊರೆ ಹೋಗದ ಮ.ವಿ.ರಾಮಪ್ರಸಾದ ಅಕ್ಕಮ್ಮಣ್ಣಿ ಆಸ್ಪತ್ರೆಯ ಉದ್ಯಾನವನದ ಸ್ವಚ್ಛತೆಗೆ ಮುಂದಾಗಿದ್ದಾರೆ.ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಾಣ ಮಾಡಿದ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.ಪ್ರತಿದಿನ
Read More

ಹಳೆ ವೈಷಮ್ಯ… ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ..

ಮಂಡ್ಯ,ಡಿ9,Tv10 ಕನ್ನಡ ಹಳೇ ವೈಷಮ್ಯ ಹಿನ್ನಲೆ ವ್ಯಕ್ತಿಯನ್ನ ಕೊಚ್ಚಿ ಕೊಂದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕಾರೆಕುರ ಗ್ರಾಮದ ಬಳಿ ನಡೆದಿದೆ.ಯೋಗೇಶ್ (34) ಹತ್ಯೆಯಾದ ವ್ಯಕ್ತಿ.ನಿನ್ನೆ ರಾತ್ರಿ ನಡೆದಿರುವ ಘಟನೆ.ಪೈಂಟ್ ಕೆಲಸ ಮಾಡಿಕೊಂಡಿದ್ದ ಯೋಗೇಶ್.ಹತ್ಯೆಗೆ ಹಳೆ ವೈಷಮ್ಯದ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ KRS ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
Read More

ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ…ವಿಧ್ಯಾರ್ಥಿಗಳಿಗೆ ಪೊಲೀಸರ ಸಲಹೆ…

ಹುಣಸೂರು,ಡಿ8,Tv10 ಕನ್ನಡ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಹುಣಸೂರು ತಾಲೂಕಿನ ಗುರುಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಅಪರಿಚಿತ ವ್ಯಕ್ತಿಗಳು ಹಾಗೂ ವಂಚಕರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಯಿತು. ಬಾಲ್ಯ ವಿವಾಹ,ಒಬ್ಬಂಟಿ ಮಹಿಳೆಯರು ಸಂಚರಿಸುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಿ ತಮ್ಮ ಆಭರಣಗಳ ಬಗ್ಗೆ ನಿಗವಹಿಸುವುದು, ವೃದ್ಧರ ಬಳಿ ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಮೋಸ ಮಾಡುವುದು ಅಲ್ಲದೆ ಪೋಕ್ಸೊ ಕಾಯಿದೆ ಬಗ್ಗೆ, ಸಂಚಾರಿ ನಿಯಮಗಳ
Read More

ಮುಸ್ಲಿಂ ಸಮುದಾಯದ ಪರ ಸಿಎಂ ಸಿದ್ದು ಭರ್ಜರಿ ಬ್ಯಾಟಿಂಗ್ ಆರೋಪ…ಹಿಂದು ಸಂಘಟನೆಗಳಿಂದ ಕ್ರಮ ಕೈಗೊಳ್ಳುವಂತೆ ಮನವಿ…

ಮೈಸೂರು,ಡಿ8,Tv10 ಕನ್ನಡ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂ ಕೊಡುವುದಾಗಿ ನೀಡಿರುವ ಹೇಳಿಕೆಯನ್ನ ವಿರೋಧಿಸಿ ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಹಿಂದೂ ಪರ ಸಂಘಟನೆಯ ಮುಖಂಡರು ದೂರು ನೀಡಿದ್ದಾರೆ.ಹುಬ್ಬಳ್ಳಿ ಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕಿತ ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಿ ಕ್ರಮಕೈಗೊಳ್ಳಬೇಕೆಂದು ಇದೇ ವೇಳೆ ಮನವಿ ಮಾಡಿದ್ದಾರೆ. ಈಗಾಗಲೇ
Read More

ಎಂಜಿ ರಸ್ತೆ ತರಕಾರಿ ಮಾರುಕಟ್ಟೆ ಪ್ರದೇಶ ಖಾಸಗಿ ವ್ಯಕ್ತಿ ಪಾಲಿಗೆ…ಮೈಸೂರು ಪ್ರಧಾನ ಸೆಶೆನ್ ನ್ಯಾಯಾಲಯದ ಮಹತ್ತರ ತೀರ್ಪು…ತರಕಾರಿ ಮಾರಾಟಗಾರರು ಅತಂತ್ರ…

ಮೈಸೂರು,ಡಿ8,Tv10 ಕನ್ನಡ ಮೈಸೂರಿನ ಎಂಜಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆ ಪ್ರದೇಶ ಖಾಸಗಿ ವ್ಯಕ್ತಿ ಪಾಲಾಗಿದೆ.ಮೈಸೂರು ಪ್ರಧಾನ ಸೆಶೆನ್ ನ್ಯಾಯಾಲಯದ ನ್ಯಾಯಾಧೀಶರಾದ ಸಂಗ್ರೇಶಿ ರವರು ಮಹತ್ತರ ತೀರ್ಪು ನೀಡಿದ್ದಾರೆ.ಈ ಮೂಲಕ ತರಕಾರಿ ಮಾರಾಟಗಾರರು ಅತಂತ್ರಕ್ಕೆ ಸಿಲುಕಿದ್ದಾರೆ. ತರಕಾರಿ ಮಾರುಕಟ್ಟೆ ಪ್ರದೇಶ ವಿಸ್ತೀರ್ಣ ಸುಮಾರು ಎರಡು ಎಕರೆ ಜಾಗವನ್ನ ವಸ್ತುಪ್ರದರ್ಶನ ಪ್ರಾಧಿಕಾರ ನಮಗೆ ಸೇರಿದ್ದು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.ಆದರೆ ರಾಜವಂಶಸ್ಥರ ತೆರಿಗೆ ಬಾಕಿ ವಸೂಲಾತಿಗಾಗಿ ಸದರಿ ಎರಡು ಎಕರೆ ಪ್ರದೇಶವನ್ನ ಹರಾಜು
Read More

ಮೃತ ಆನೆಯ ದಂತ ಬೇರ್ಪಡಿಸಿ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು…

ಗುಂಡ್ಲುಪೇಟೆ,ಡಿ7,Tv10 ಕನ್ನಡ ಸ್ವಾಭಾವಿಕವಾಗಿ ಮೃತಪಟ್ಟ ಆನೆಯ ದಂತಗಳನ್ನ ಬೇರ್ಪಡಿಸಿ ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.ಗುಂಡ್ಲುಪೇಟೆ ನಾಗಣಾಪುರ ಹುಣಸೆತಾಳ ಕಂಡಿ ಅರಣ್ಯಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುವ ವೇಳೆ ಮೃತ ಆನೆ‌ ದೇಹ ಕಂಡುಬಂದಿದೆ.ಕೂಡಲೇ ಹಿರಿಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ.ಇಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಮೇಶ್ ಕುಮಾರ್,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ,ಹಾಗೂ ಇತರ ಅಧಿಕಾರಿಗಳಾದ ಸತೀಶ್ ಕುಮಾರ್,ಅಮರ್ ಕೆ.ಪಿ,ಸಂತೋಷ್ ಹಾಗೂ ವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ ರವರ ಸಮ್ಮುಖದಲ್ಲಿ ಮೃತಪಟ್ಟ ಗಂಡಾನೆಯ
Read More

ಅರ್ಜುನನಿಗೆ ಯದುವೀರ್ ದಂಪತಿಯಿಂದ ಅಂತಿಮ ನಮನ…

ಅರ್ಜುನನಿಗೆ ಯದುವೀರ್ ದಂಪತಿಯಿಂದ ಅಂತಿಮ ನಮನ… ಹುಣಸೂರು,ಡಿ7,Tv10 ಕನ್ನಡ ಕಾಡಾನೆ ಜೊತೆ ಕಾದಾಡಿ ಮರಣವನ್ನಪ್ಪಿದ ದಸರಾ ಆನೆ ಅರ್ಜುನನಿಗೆ ಯದುವೀರ್ ದಂಪತಿ ಅಂತಿಮ ನಮನ ಸಲ್ಲಿಸಿದ್ದಾರೆ.ಅಂತ್ಯಕ್ರಿಯೆ ನಡೆದ ಯಸಳೂರು ಗ್ರಾಮಕ್ಕೆ ತೆರಳಿದ ಯದುವೀರ್ ಹಾಗೂ ತ್ರಿಷಿಕಾ ಯದುವೀರ್ ಸಮಾಧಿಗೆ ನಮಿಸಿ ಪುಷ್ಪಮಾಲೆ ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು…
Read More

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ…ಗ್ರಾಮಸ್ಥರಲ್ಲಿ ಆತಂಕ…

ಕಬ್ಬು ಕಟಾವು ವೇಳೆ ಮೂರು ಚಿರತೆ ಮರಿಗಳು ಕಂಡುಬಂದಿದೆ.ಮೈಸೂರು ತಾಲೂಕು ಆಯರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ತಾಯಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದ್ಯಾವಣ್ಣನಾಯಕ ಎಂಬುವರ ಜಮೀನಿನಲ್ಲಿ ಚಿರತೆ ಮರಿಗಳು ಕಂಡುಬಂದಿದೆ.ಚಿರತೆ ಮರಿಗಳನ್ನ ರಕ್ಷಣೆ ಮಾಡಿದ ರೈತರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.ಚಿರತೆ ಇರುವ ಹಿನ್ನೆಲೆ ಕಬ್ಬು ಕಟಾವು ಮಾಡಲು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ಕೃಷಿ ಚಟುವಟಿಕೆಗೆ ತೆರಳಲು ಗ್ರಾಮಸ್ಥರು ಹೆದರುತ್ತಿದ್ದಾರೆ…
Read More