TV10 Kannada Exclusive

ಮಾವುತರು ಹಾಗೂ ಕವಾಡಿಗರೊಂದಿಗೆ ರಕ್ಷಾಬಂಧನ್ ಆಚರಣೆ…ರಾಖಿ ಕಟ್ಟಿ ಶುಭ ಹಾರೈಸಿದ ಮಹಿಳೆಯರು…

ಮೈಸೂರು,ಆ12,Tv10 ಕನ್ನಡ ದಸರಾ ಮಹೋತ್ಸವ ಆಚರಣೆಗಾಗಿ ಕಾಡಿನಿಂದ ನಾಡಿಗೆ ಬಂದ ಗಜಪಡೆಯ ಮಾಹುತರು ಹಾಗೂ ಕಾವಾಡಿಗರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಣೆ ಮಾಡಲಾಯಿತು.ಇದೇ ವೇಳೆ ಶ್ರಾವಣ ಮಾಸದ ಲಡ್ಡು ಪ್ರಸಾದ ವಿತರಣೆ ಮಾಡಿ ದಸರಾ ಮಹೋತ್ಸವ ಯಶಸ್ಸಿಗಾಗಿ ಮಹಿಳೆಯರು ಹಾರೈಸಿದರು.ಅರಮನೆ ಆವರಣದಲ್ಲಿ ತಂಗಿರುವ ಮಾಹುತರು ಮತ್ತು ಕಾವಾಡಿಗಳಿಗೆ ಆರತಿ ಬೆಳಗಿ, ಕುಂಕುಮದ ತಿಲಕವನ್ನುಇಟ್ಟು, ಶ್ರಾವಣ ಮಾಸದ ಲಡ್ಡು ಪ್ರಸಾದವನ್ನು ವಿತರಿಸಿ, ರಕ್ಷೆಯನ್ನು
Read More

ದಸರಾ ಗಜಪಡೆಗೆ ತೂಕ ಪ್ರಕ್ರಿಯೆ…ಭೀಮ ಬಲಶಾಲಿ..

ಮೈಸೂರು,ಆ11,Tv10 ಕನ್ನಡ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2025 ರ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ.ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿದದಸರಾ ಗಜಪಡೆಗೆ ಇಂದು ತೂಕ ಪರಿಶೀಲನೆ ಮಾಡಲಾಯಿತು.ನಿನ್ನೆಯಷ್ಟೇ ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ತೂಕ ಪರೀಶೀಲನೆ ಮಾಡಲಾಯಿತು.ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೊ., ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಮಾಡಲಾಯಿತು.ತೂಕ ಪರಿಶೀಲನೆ ನಂತರ
Read More

ಯುದ್ದ ಸ್ಮಾರಕ ಸ್ಥಂಭದ ಆವರಣ ಸ್ವಚ್ಛ…ಹಳೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಶ್ರಮದಾನ…

ಮೈಸೂರು,ಆ10,Tv10 ಕನ್ನಡ ಲಯನ್ಸ ಅಂಬಾಸಿಡರ್ ಸಂಸ್ಥೆ ಮತ್ತು ಮಾಜಿ ಸಶಸ್ತ್ರ ಸೈನಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಪಕ್ಕದಲ್ಲಿರುವ ಯುದ್ಧ ಸ್ಮಾರಕ ಸ್ತಂಭದ ಆವರಣದಲ್ಲಿ ಇಂದು ಗಿಡಗಂಟೆಗಳನ್ನು ಸ್ವಚ್ಚಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು. ಪ್ರಾಂತಿಯ ಅಧ್ಯಕ್ಷ ಲಯನ್ ಎಚ್ ಸಿ ಕಾಂತರಾಜು ಸಶಸ್ತ್ರ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ ಬಿದ್ದಪ್ಪ ಹಾಗೂ ಲಯನ್ ಜಿಲ್ಲಾ ಅಧ್ಯಕ್ಶರಾದ ಮಕಾಳ ಶಿವಕುಮಾರ್, ಟಿ‌.ಎಚ್ ವೆಂಕಟೇಶ್, ಡಾ.ಅರ್.ಡಿ. ಕುಮಾರ್,ಸಿ.ಆರ್.ದಿನೇಶ್,ವಿ.ಶ್ರೀಧರ್, ಎಚ್ ಕೆ
Read More

ಇಂದಿರಾಗಾಂಧಿ ಕಾಂಗ್ರೆಸ್ ಭವನಕ್ಕೆ ಶಂಕುಸ್ಥಾಪನೆ…ಸಿಎಂ,ಡಿಸಿಎಂ ರಿಂದ ಗುದ್ದಲಿಪೂಜೆ

ಮೈಸೂರು,ಆ9,Tv10 ಕನ್ನಡ ಮೈಸೂರು ಜಿಲ್ಲಾ ಕಾಂಗ್ರೆಸ್ ನೂತನ ಕಟ್ಟಡ ಇಂದಿರಾಗಾಂಧಿ ಕಾಂಗ್ರೆಸ್ ಭವನ ಶಂಕುಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೆರವೇರಿಸಿದರು. ಸಚಿವರಾದ ಎಚ್ ಸಿ ಮಹದೇವಪ್ಪ, ವೆಂಕಟೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್ ಎಂ ರೇವಣ್ಣ, ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಶಾಸಕರಾದ ತನ್ವಿರ್ ಸೇಠ್, ಹರೀಶ್ ಗೌಡ, ದರ್ಶನ್ ದೃವನಾರಾಯಣ್, ರವಿಶಂಕರ್, ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ, ಮಾಜಿ
Read More

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಯಜುರುಪಾಕರ್ಮ…ಸಾಮೂಹಿಕ ಯಜ್ಞೋಪವೀತ ಬದಲಾವಣೆ…

ಮೈಸೂರು,ಆ9,Tv10 ಕನ್ನಡ ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಸಾಮೂಹಿಕವಾಗಿ ಋಗ್ವೇದ ಹಾಗೂ ಯಜುರುಪಾಕರ್ಮ ಕಾರ್ಯಕ್ರಮ ನೆರವೇರಿತು.ನೂರಾರು ವಿಪ್ರರು ಭಾಗವಹಿಸಿ ಜನಿವಾರ ಬದಲಾಯಿಸಿಕೊಂಡರು.ದೇವಸ್ಥಾನದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ನೇತೃತ್ವದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ಸಂಧ್ಯಾವಂದನೆ, ಗಾಯತ್ರಿ ಜಪ, ನೆರೆವೇರಿಸಿ ಯಜ್ಞೋಪವೀತ ಧಾರಣೆ ಹಾಗೂ ವಿಸರ್ಜಿಸುವ ಮಂತ್ರ ಜಪಿಸುವ ಮೂಲಕ ಜನಿವಾರ ಬದಲಾಯಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಎನ್ ಶ್ರೀನಿವಾಸನ್ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ
Read More

ವಿಷ್ಣುವರ್ಧನ್ ಪುಣ್ಯಭೂಮಿ ಧ್ವಂಸ ಹಿನ್ನಲೆ…ಮೈಸೂರಿನಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ…

ಮೈಸೂರು,ಆ8,Tv10 ಕನ್ನಡ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ರವರ ಪುಣ್ಯಭೂಮಿಯನ್ನ ಧ್ವಂಸಗೊಳಿಸಿದ ಪ್ರಕರಣ ಮೈಸೂರಿನಲ್ಲಿ ಪ್ರತಿಧ್ವನಿಸಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಡಾ. ವಿಷ್ಣುವರ್ಧನ್ ಉದ್ಯಾನವನ ಮುಂಭಾಗ ಅಭಿಮಾನಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿ ಘಟನೆಯನ್ನ ಖಂಡಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿ ಬಳಗದ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ ಇಂದು ದೇಶಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದರೆ ವಿಷ್ಣು ಅಭಿಮಾನಿಗಳಿಗೆ ಇಂದು ಕರಾಳ ದಿನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಷ್ಣು
Read More

ನಾಳೆ ಕೆ.ಆರ್.ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ…ಸಿಎಂ ಆಗಮನ ಹಿನ್ನಲೆ…ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ…

ಮೈಸೂರು,ಆ8,Tv10 ಕನ್ನಡ ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ನವೀಕೃತ ಕಟ್ಟಡ ಉದ್ಘಾಟನಾ ಸಮಾರಂಭ ನಾಳೆ ನೆರವೇರಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಟ್ಟಡ ಉದ್ಘಾಟಿಸಲಿದ್ದಾರೆ.ಈ ಹಿನ್ನಲೆ ಭದ್ರತೆ ದೃಷ್ಠಿಯಿಂದ ಕಟ್ಟಡಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ,ಸಂಚಾರ ಮತ್ತು ಅಪರಾಧ ಡಿಸಿಪಿ ರವರಾದ ಸುಂದರ್ ರಾಜ್ ಕೆ.ಆರ್.ಉಪವಿಭಾಗದ ಎಸಿಪಿ ರಮೇಶ್ ಕುಮಾರ್, ಕೆ ಆರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನರಾಜ್,ಹಾಗೂ
Read More

ಮೇಟಗಳ್ಳಿ ಸ್ಮಶಾನ ಸುತ್ತ ಬೆಳಕಿನ ಭಾಗ್ಯ…ಹೈಮಾಸ್ಕ್ ದೀಪಗಳಿಗೆ ಮರುಜೀವ…Tv10 ಕನ್ನಡ ವರದಿಗೆ ಪಾಲಿಕೆ ಸ್ಪಂದನೆ…ಗಾಂಜಾ ವ್ಯಸನಿಗಳ ಹಾವಳಿಗೆ ಬ್ರೇಕ್…

ಮೈಸೂರು,ಆ7,Tv10 ಕನ್ನಡ ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಮುಳುಗುತ್ತಿದ್ದ ಮೇಟಗಳ್ಳಿ ಸ್ಮಶಾನಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.ಸ್ಮಶಾನದ ಸುತ್ತ ಅಳವಡಿಸಲಾಗಿದ್ದ ಹೈಮಾಸ್ಕ್ ದೀಪಗಳನ್ನ ದುರಸ್ಥಿ ಮಾಡಲಾಗಿದೆ.ಕಳೆದ 5 ವರ್ಷಗಳಿಂದ ನಿರ್ಜೀವವಾಗಿದ್ದ ಹೈಮಾಸ್ಕ್ ದೀಪಗಳಿಗೆ ಮರುಜೀವ ದೊರೆತಂತಾಗಿದೆ.ಇದು Tv10 ಕನ್ನಡ ವರದಿಯ ಫಲಶೃತಿಯಾಗಿದೆ. ಮೈಸೂರು ಮಹಾನಗರ ಪಾಲಿಕೆ ಕೆಇಬಿ ಇಂಜಿನಿಯರ್ ಗೋವಿಂದ ನಾಯಕ್ ಮತ್ತು ಸಿಬ್ಬಂದಿಗಳು ದೀಪಗಳನ್ನ ಅಳವಡಿಸಿ ಸ್ಮಶಾನಕ್ಕೆ ಬೆಳಕಿನ ಭಾಗ್ಯ ನೀಡಿದ್ದಾರೆ.ಮೇಟಗಳ್ಳಿ ಇನ್ಸ್ಪೆಕ್ಟರ್ ಅರುಣ್ ರವರು ಬೀದಿ ದೀಪಗಳನ್ನ ಸರಿಪಡಿಸುವಂತೆ ಪಾಲಿಕೆಗೆ
Read More

ತಡೆಗೋಡೆಗೆ ಢಿಕ್ಕಿ ಹೊಡೆದು ಉರುಳಿಬಿದ್ದ ಬಸ್…ಚಾಮುಂಡಿ ಬೆಟ್ಟದಲ್ಲಿ ಘಟನೆ…

ಮೈಸೂರು,ಆ7,Tv10 ಕನ್ನಡ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಢಿಕ್ಕಿ ಹೊಡೆದ ಬಸ್ ಉರುಳಿಬಿದ್ದ ಘಟನೆ ಚಾಮುಂಡಿಬೆಟ್ಟದಲ್ಲಿ ನಡೆದಿದೆ.ಖೋಡೆ ಗೆಸ್ಟ್ ಹೌಸ್ ಬಳಿ ತಿರುವಿನಲ್ಲಿ ಘಟನೆ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ…
Read More

ಯುವಕನನ್ನ ಅಕ್ರಮವಾಗಿ ಬಂಧನದಲ್ಲಿಟ್ಟು ಹಣ ವಸೂಲಿ ಮಾಡಿದ ಆರೋಪ…ಹುಣಸೂರು ಗ್ರಾಮಾಂತರ ಠಾಣೆ ಹಿಂದಿನ ಇನ್ಸ್‌ಪೆಕ್ಟರ್ ಸಿ.ವಿ.ರವಿ ವಿರುದ್ಧ ಎಫ್‌ಐಆರ್ ದಾಖಲಿಸಲು

ಹುಣಸೂರು,ಅ7,Tv10ಕನ್ನಡ ಯುವಕನನ್ನು ಅಕ್ರಮ ಬಂಧನದಲ್ಲಿಟ್ಟು ಆತನಿಂದ 40 ಸಾವಿರ ರೂ. ಹಣ ಪಡೆದು ಸುಳ್ಳು ಪ್ರಕರಣ ದಾಖಲಿಸಿದ ಆರೋಪದಡಿ ಹುಣಸೂರು ಗ್ರಾಮಾಂತರ ಠಾಣೆಯ ಹಿಂದಿನ 2022-23 ರಲ್ಲಿ ಸರ್ಕಲ್ ಇನ್ಸ್‌ಪೆಕ್ಟ‌ರ್ ಆಗಿದ್ದ ಸಿ.ವಿ.ರವಿ ವಿರುದ್ಧ ಎಫ್‌ಐಆ‌ರ್ ದಾಖಲಿಸಿ ವರದಿ ಸಲ್ಲಿಸುವಂತೆ ಹುಣಸೂರು ಟೌನ್ ಪೊಲೀಸರಿಗೆ ಹುಣಸೂರು ಜೆಎಂಎಫ್‌ಸಿ ನ್ಯಾಯಾ ಲಯದ ನ್ಯಾಯಾಧೀಶರಾದ ಅನಿತಾ ಅವರು ಆದೇಶ ನೀಡಿರುತ್ತಾರೆ.ಹುಣಸೂರು ತಾಲೂಕು ಕಡೇಮನುಗನಹಳ್ಳಿ ಗ್ರಾಮದ ಅಶೋಕ್ ಎಂಬ ಯುವಕನನ್ನು 2023ರ ಆಗಸ್ಟ್ 9ರಿಂದ
Read More