TV10 Kannada Exclusive

ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ…

ನಂಜನಗೂಡು,ಮಾ24,Tv10 ಕನ್ನಡ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರವಾದ ಘಟನೆ ನಂಜನಗೂಡಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಹಸುಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.ಹಂದಿಗಳ ಬೇಟೆಗಾಗಿ ಕಿಡಿಗೇಡಿಗಳಿ ಸಿಡಿಮದ್ದು ಇರಿಸಿದ್ದಾರೆ. ಮೇವು ಮೇಯುತ್ತಿದ್ದ ಹಸು ಸಿಡಿಮದ್ದಿನ ಬಳಿ ಬಂದಾಗ ಸಿಡಿದಿದೆ.ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬವರಿಗೆ ಸೇರಿದ ಹಸು.ಗ್ರಾಮದ ವಾಟರ್ ಟ್ಯಾಂಕ್ ಬಳಿ ಜಾನುವಾರುಗಳನ್ನ ಮೇಯಲು ಬಿಟ್ಟಿದ್ದಾರೆ.ಕಾಡು ಹಂದಿ ಬೇಟೆಗೆ ಕಿಡಿಗೇಡಿಗಳು ಅದೇ ಜಾಗದಲ್ಲಿ ಸಿಡಿಮದ್ದು ಅಡಗಿಸಿಟ್ಟಿದ್ದಾರೆ.ಮೇಯುತ್ತಿದ್ದ
Read More

ಕುಡಿಬೇಡ ಕೆಲಸಕ್ಕೆ ಹೋಗು ಎಂದ ಪತ್ನಿ ಮೇಲೆ ಬಿಸಿ ಸಾಂಬಾರ್ ಸುರಿದ ಪತಿ

ಮೈಸೂರು,ಮಾ24,Tv10 ಕನ್ನಡ ಕುಡಿತದ ಚಟಕ್ಕೆ ದಾಸನಾಗಿ ಕೆಲಸಕ್ಕೆ ಹೋಗದ ಪತಿಗೆ ಬುದ್ದಿವಾದ ಹೇಳಿದ ಪತ್ನಿ ಮೇಲೆ ಬಿಸಿ ಸಾಂಬಾರ್ ಸುರಿದ ಘಟನೆ ಮೈಸೂರಿನ ಹಿನಕಲ್ ನಲ್ಲಿ ನಡೆದಿದೆ.ಗಾಯಗೊಂಡ ಪತ್ನಿಗೆ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಪತಿ ರಾಜು ವಿಕೃತಿಗೆ ಪತ್ನಿ ಗಾಯಗೊಂಡಿದ್ದಾರೆ.ಸಮೀಪದಲ್ಲೇ ಇದ್ದ ಮಗಳಿಗೂ ಸುಟ್ಟಗಾಯಗಳಾಗಿದೆ. ಮಂಗಳಮ್ಮ ಹಾಗೂ ಮಗಳು ಸುಮತಿ ಗಾಯಗೊಂಡವರು.ಪತಿ ರಾಜು ವಿಕೃತಿ ಮೆರೆದವನು.ಮೂಲತಃ ನಂಜನಗೂಡು ನಿವಾಸಿಗಳಾದ ರಾಜು ಹಾಗೂ ಮಂಗಳಮ್ಮ ಜೀವನೋಪಾಯಕ್ಕಾಗಿ 4 ತಿಂಗಳ ಹಿಂದೆ
Read More

ಸುದರ್ಶನ್ ವಿದ್ಯಾಸಂಸ್ಥೆ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣೆ…

ಮೈಸೂರು,ಮಾ22,Tv10 ಕನ್ನಡ ಮೈಸೂರು ಕೆ ಹೆಚ್ ಬಿ ಕಾಲೋನಿ ಹೂಟಗಳ್ಳಿಯಲ್ಲಿರುವ ಸುದರ್ಶನ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಿಸಲಾಯಿತು.ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ.ಶ್ರೀನಿವಾಸ್ ರವರು ವಿಧ್ಯಾರ್ಥಿಗಳಿಗೆ ತಲಾ 2000 ರೂ ವಿಧ್ಯಾರ್ಥಿ ವೇತನ ವಿತರಿಸಿದರು. 8 ನೇ ತರಗತಿಯ ವಿದ್ಯಾರ್ಥಿಗಳಾದವಿಕಾಸ್ ಸಿ,ಸಹನಾ ವೈ.9 ನೇ ತರಗತಿ ಯರತೇಶ್ ಎಂ,ತೇಜಸ್ವಿನಿ,10 ನೇ ತರಗತಿಯರೋಹಿತ್ ಎಸ್,ಸಾನಿತ್ಯ ಎಲ್ ಆರ್ ರವರುಗಳು ವಿಧ್ಯಾರ್ಥಿ ವೇತನ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಣ
Read More

ಗುಬ್ಬಚ್ಚಿ ದಿನಾಚರಣೆ…ಮೈಸೂರಿನಲ್ಲಿ ಪ್ರಾಣಿ ಪ್ರಿಯರಿಂದ ಗುಬ್ಬಚ್ಚಿ ಹಬ್ಬ…

ಮೈಸೂರು,ಮಾ20,Tv10 ಕನ್ನಡ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಇಂದು ಪ್ರಾಣಿ ಪಕ್ಷಿಗಳ ಪ್ರೇಮಿಗಳು ಗುಬ್ಬಚ್ಚಿವಹಬ್ಬ ಆಚರಿಸಿದರು.ಮಹರಾಜ ಕಾಲೇಜು ಮೈದಾನದ ಬಳಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉರಗ ತಜ್ಞ ಸ್ನೇಕ್ ಶ್ಯಾಂ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ. ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ. ನಾವು ಗುಬ್ಬಚ್ಚಿಗಳೊಂದಿಗೆ ಬೆಳೆದವರು, ಪರಿಸರ ಸಮತೋಲನ ಬಹಳ ಮುಖ್ಯ, ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪಕ್ಷಿಗಳು ಕೂಡ ಅಳಿವಿನಂಚಿನಲ್ಲಿದೆ. ಆದ್ದರಿಂದ
Read More

ಮಳೆ ಎಫೆಕ್ಟ್…ಪೇದೆ ಸಾವು…ಬಿರುಗಾಳಿಯಿಂದ ಬಿದ್ದ ಮರ ತಪ್ಪಿಸಲು ಹೋಗಿ ದುರ್ಘಟನೆ…

ಹುಣಸೂರು,ಮಾ20,Tv10 ಕನ್ನಡ ಮಳೆ ಅನಾಹುತಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಮೊದಲ ಬಲಿಯಾಗಿದೆ.ಮಳೆ ಗಾಳಿಯಿಂದ ರಸ್ತೆಗೆ ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆಯುವುದನ್ನ ತಪ್ಪಿಸಲು ಯತ್ನಿಸುವಾಗ ದುರ್ಘಟನೆ ನಡೆದಿದೆ.ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಕೆಎಸ್ ಆರ್ ಪಿ ಪೇದೆ ಸಾಗರ್ ಸಾವನ್ನಪ್ಪಿದ್ದಾರೆ.ಹುಣಸೂರು ತಾಲೂಕಿನ ಶಿರೇನಹಳ್ಳಿ ರಸ್ತೆಯಲ್ಲಿ ಘಟನೆ ನಡೆದಿದೆ.ಸ್ನೇಹಿತನ ಮದುವೆಯ ಚಪ್ಪರದ ಊಟಕ್ಕೆ ಹೋಗಿ ಬರುವಾಗ ಘಟನೆ ಸಂಭವಿಸಿದೆ.ಸಾಗರ್ ಜೊತೆಗಿದ್ದ ವಾಸು ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದೆ.ವಾಸುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸಾಗರ್
Read More

ಪೊಲೀಸಪ್ಪನ ಮನೆಯಲ್ಲೇ ಕಳ್ಳತನ…ಅತ್ತಿಗೆಯಿಂದಲೇ ಕೈಚಳಕ…

ಮೈಸೂರು,ಮಾ18,Tv10 ಕನ್ನಡ ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳುವಾದ ಪ್ರಕರಣ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಕೆ.ಆರ್.ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಭಾನ್ ಎಂಬುವರ ಮನೆಯಲ್ಲಿ 3 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.ಸ್ವಂತ ಅತ್ತಿಗೆ ಕಳ್ಳತನ ಮಾಡಿದ್ದಾರೆಂದು ಸುಬಾನ್ ಪತ್ನಿ ಸಾದಿಯಾ ಆರೋಪಿಸಿದ್ದಾರೆ.ಅತ್ತಿಗೆ ಆಯೆಷಾ ಎಂಬುವರ ಮೇಲೆ ಆರೋಪ ಮಾಡಲಾಗಿದೆ.ರಾಜೀವ್ ನಗರದಲ್ಲಿ ಸುಬಾನ್ ರವರ ಮನೆ ಇದೆ.ಅಡಿಗೆ ಮನೆಯ ಡಬ್ಬದಲ್ಲಿ ಚಿನ್ನಾಭರಣ ಇಡುತ್ತಿದ್ದರು.ಈ ವಿಚಾರ ದಂಪತಿಗೆ ಹೊರತುಪಡಿಸಿದರೆ ಅತ್ತಿಗೆ ಆಯೆಷಾ ಗೆ
Read More

ಯುವಕನ ಮೇಲೆ ಹಲ್ಲೆ…ನಾಲ್ವರಿಂದ ಕೃತ್ಯ…ಪ್ರಕರಣ ದಾಖಲು…

ಪಿರಿಯಾಪಟ್ಟಣ,ಮಾ18,Tv10 ಕನ್ನಡ ಯುವಕನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಘಟನೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಜ್ವಲ್ (21) ಹಲ್ಲೆಗೊಳಗಾದ ಯುವಕ. ಪಿರಿಯಾಪಟ್ಟಣ ತಾಲ್ಲೂಕು ಆಯಿತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆ ನಾಲ್ವರಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ನಾಗೇಶ್,ಪಾಲಾಕ್ಷ, ಮಹೇಶ,ಅಕ್ಷಯ್ ಕುಮಾರ್‌ ದೊಣ್ಣೆಯಿಂದ ಮನಸೋ ಇಚ್ಛೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಪ್ರಜ್ವಲ್ ಬೆನ್ನಿಗೆ ಗಂಭೀರ ಗಾಯವಾಗಿದ್ದು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ
Read More

ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…

ಮೈಸೂರು,ಮಾ17,Tv10 ಕನ್ನಡ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ರವರ ಜನ್ಮದಿನೋತ್ಸವದ ನೆನಪಿಗಾಗಿ ‘ಶ್ರೀರಾಮ ಗೆಳಯರ ಬಳಗದ’ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಸಿಹಿ ಕೊಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪುನೀತ್ ರಾಜಕುಮಾರ್ ರವರು ಮಾಡಿರುವ ಸೇವಾ ಕಾರ್ಯವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿರಲಿ ಎಂದು ಸ್ಮರಿಸಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀರಾಮ ಗೆಳಯರ ಬಳಗದ ಅಧ್ಯಕ್ಷರಾದ ಸಿ ಸಂದೀಪ್, ಅಂಬಳೆ ಶಿವಣ್ಣ, ಉಮಾಶಂಕರ್, ಧರ್ಮೇಂದ್ರ, ಬಸವರಾಜು,
Read More

ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…

ಮೈಸೂರು,ಮಾ17,Tv10 ಕನ್ನಡ ಕಳೆದುಹೋಗಿದ್ದ 37 ಮೊಬೈಲ್ ಫೋನ್ ಗಳನ್ನು ದೇವರಾಜ ಠಾಣೆ ಪೊಲೀಸರು ಇಂದು ವಾರಸುದಾರರಿಗೆ ಮರಳಿಸಿದರು. ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಘು.ಕೆ.ಆರ್. ಉಪ ನಿರೀಕ್ಷಕರಾದ ಜಯಕೀರ್ತಿ,ಪ್ರಭು, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ್, ಸುನೀಲ್, ಮಧುಕೇಶ್ ಮಹೇಶ್, ಶಶಿಕಿರಣ್ ರವರಿ CEIR Portal ಮೂಲಕ ಮೊಬೈಲ್ ಪೋನ್ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ತಲುಪಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು…
Read More

ಸಿಟಿ ಲೈಟ್ಸ್ ತಂಡದಿಂದ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ ಆಚರಣೆ…

ಬೆಂಗಳೂರು,ಮಾ17,Tv10 ಕನ್ನಡ ಬೆಂಗಳೂರಿನ ಗುಬ್ಬಿ ವೀರಣ್ಣ ಕಲಾ ಮಂಟಪದಲ್ಲಿ ಸಿಟಿ ಲೈಟ್ಸ್ ಚಿತ್ರೀಕರಣ ನಡೆಯುವ ಸಂಧರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರ ಹುಟ್ಟು ಹಬ್ಬವನ್ನ ಆಚರಿಸಲಾಯಿತು. ಕೇಕ್ ಕಟ್ ಮಾಡುವ ಮೂಲಕ ತಂಡ ಸಂಭ್ರಮಿಸಿತು.ನಿರ್ದೇಶಕರು ಹಾಗೂ ನಟರಾದ ದುನಿಯಾ ವಿಜಿ ಹಾಗೂ ಅವರ ಪುತ್ರಿ ಮೋನಿಷಾ ರವರು ಹಾಗೂ ಚಿತ್ರತಂಡ ಸಾಥ್ ನೀಡಿತು…
Read More