TV10 Kannada Exclusive

ಮಾರಕ ರೋಗಕ್ಕೆ ಸಿಲುಕಿ ಹಾಸಿಗೆ ಹಿಡಿದ ಗ್ರಾ.ಪಂ.ಅಧ್ಯಕ್ಷೆ…ಸಹಾಯ ಹಸ್ತಕ್ಕಾಗಿ ಮೊರೆ…6 ತಿಂಗಳಿನಿಂದ ಬದುಕಿಗಾಗಿ ಹೋರಾಟ…

ನಂಜನಗೂಡು,ನ30,Tv10 ಕನ್ನಡ ಮಾರಕ ಖಾಯಿಲೆಗೆ ಸಿಲುಕಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ 6 ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ.ಚಿಕಿತ್ಸೆಗಾಗಿ ಲಕ್ಷಾಂತರ ಹಣ ವೆಚ್ಚವಾಗಲಿದ್ದು ಸಹಾಯಹಸ್ತಕ್ಕಾಗಿ ಮೊರೆ ಇಡುತ್ತಿದ್ದಾರೆ.ಹಾಸಿಗೆ ಹಿಡಿದು ಬದುಕಿಗಾಗಿ ಹೋರಾಟ ನಡೆಸುತ್ತಿರುವ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೆರವಿಗೆ ಹೃದಯವಂತ ಉದಾರಿಗಳು ನೆರವಿಗೆ ಬರಬೇಕಿದೆ. ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹದೇವಮ್ಮ ಹಾಸಿಗೆ ಹಿಡಿದವರು.ಡೋರನಕಟ್ಟೆ ಆದಿವಾಸಿ ಕಾಲೋನಿಯ ನಿವಾಸಿ ಆಗಿರುವ ಹಾಲಿ ಅಧ್ಯಕ್ಷೆ ಮಹದೇವಮ್ಮ ಗೆ ಸುಮಾರು 6 ತಿಂಗಳ
Read More

ಸದರನ್ ಸ್ಟಾರ್ ಹೋಟೆಲ್ ಮಾಲೀಕರ ಮನೆಯಲ್ಲಿ ಕಳ್ಳರ ಕೈಚಳಕ…ಕದಿಯಲು ಐನಾತಿಗಳು ಮಾಡಿದ ಪ್ಲಾನ್ ಏನು ಗೊತ್ತಾ…?

ಮೈಸೂರು,ನ29,Tv10 ಕನ್ನಡ ಮನೆಯಲ್ಲಿರುವ ಗೃಹಪಯೋಗಿ ವಸ್ತುಗಳನ್ನ ಕಣ್ಣಮುಂದೆಯೇ ಚಾಲಾಕಿತನ ಬಳಸಿ ಕದ್ದೊಯ್ದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮನೆಯಲ್ಲಿ ವ್ಯಕ್ತಿಯೊಬ್ಬರು ಇದ್ದರೂ ಸಕ್ಕತ್ ಪ್ಲಾನ್ ಉಪಯೋಗಿಸಿ ಪದಾರ್ಥಗಳನ್ನ ಹೊತ್ತು ಸಾಗಿದ್ದಾರೆ. ಜಯಲಕ್ಷ್ಮಿಪುರಂ 3 ನೇ ಹಂತ,8 ನೇ ಮುಖ್ಯರಸ್ತೆಯಲ್ಲಿ ಸದರನ್ ಸ್ಟಾರ್ ಹೋಟೆಲ್ ಮಾಲೀಕರ ಮನೆ ಇದೆ.ಹೋಟೆಲ್ ಸಿಬ್ಬಂದಿಗಳು ತಂಗಲು ಇಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ.ಸಿಬ್ಬಂದಿಗಳ ಅನುಕೂಲಕ್ಕಾಗಿ ಒಂದು ಟಿವಿ,ಟೀಪಾಯಿ,ಸ್ಟಡಿ ಟೇಬಲ್,ಮಿನಿ ಫ್ರಿಡ್ಜ್ ಇಡಲಾಗಿದೆ.ಮನೆಯಲ್ಲಿ ರೆಸ್ಟೋರೆಂಟ್ ಮ್ಯಾನೇಜರ್ ಬೋಲೇನಾಥ್ ಎಂಬುವರು
Read More

ಮದುವೆ ಅಟೆಂಡ್ ಮಾಡಿ ಹಿಂದಿರುಗಿದ ಕುಟುಂಬಕ್ಕೆ ಅಘಾತ…1 ಲಕ್ಷ ನಗದು,5.7 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು…

ಮೈಸೂರು,ನ28,Tv10 ಕನ್ನಡ ಕೇರಳದಲ್ಲಿ ಸಂಭಂಧಿಕರ ಮದುವೆಗೆ ತೆರಳಿ ಹಿಂದಿರುಗಿದ ಕುಟುಂಬಕ್ಕೆ ಕಳ್ಳರು ಅಘಾತ ನೀಡಿದ್ದಾರೆ.ಮನೆಯ ಹಿಂಬದಿ ಬಾಗಿಲು ಮೀಟಿ ಒಂದು ಲಕ್ಷ ನಗದು ಹಾಗೂ 5.77 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಈ ಸಂಭಂದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿರುವ ಇಲಿಯಾಸ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ.ಕೇರಳದಲ್ಲಿ ಸಂಭಂಧಿಕರ ಮದುವೆಗೆ ಇಡೀ ಕುಟುಂಬ ತೆರಳಿತ್ತು.ವಾಪಸ್ ಬಂದಾಗ ಮೊದಲ ಅಂತಸ್ತಿನ ಕೊಠಡಿಯ ವಾಗಿಲು ಮೀಟಿ ಪ್ರವೇಶಿಸಿರುವ
Read More

ಸರಸ್ವತಿಪುರಂ ಠಾಣೆ ಪೊಲೀಸರ ಕಾರ್ಯಾಚರಣೆ…ಖತರ್ನಾಕ್ ಕಳ್ಳನ ಬಂಧನ…5.13 ಲಕ್ಷ ಮೌಲ್ಯದ ಚಿನ್ನಾಭರಣ,ದ್ವಿಚಕ್ರ ವಾಹನ ವಶ…

ಮೈಸೂರು,ನ27,Tv10 ಕನ್ನಡ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿಯಾದ ಖತರ್ನಾಕ್ ಕಳ್ಳನನ್ನ ಬಂಧಿಸುವಲ್ಲಿ ಸರಸ್ವತಿಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 5 ದ್ವಿಚಕ್ರ ವಾಹನ ಸೇರಿದಂತೆ 5,13,200/- ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಖತರ್ನಾಕ್ ಕಳ್ಳನ ವಿರುದ್ದ ಈಗಾಗಲೇ ವಿವಿದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.ಚಂದ್ರು.ಆ.ಕಬ್ಬಾಳ್ (35) ಬಂಧಿತ ಆರೋಪಿ. ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ನಗರದಲ್ಲಿ ವಾಕಿಂಗ್ ಮಾಡುತ್ತಿದ್ದ
Read More

ಸಂಶೋಧನಾ ಶಿಷ್ಯ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಎಸ್.ಸಿ.ಎಸ್.ಟಿ ವಿಧ್ಯಾರ್ಥಿಗಳಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ…

ಮೈಸೂರು,ನ27,Tv10 ಕನ್ನಡ ಎಸ್.ಸಿ/ಎಸ್.ಟಿ. ಸಂಶೋಧನಾ ವಿಧ್ಯಾರ್ಥಿಗಳ ಶಿಷ್ಯವೇತನ ಹೆಚ್ಚಿಸುವಂತೆ ಆಗ್ರಹಿಸಿ ಮೈಸೂರು ವಿವಿ ಕ್ರಾಫರ್ಡ್ ಮುಂಭಾಗ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಯುತ್ತಿದೆ.ಕಳೆದ 6-7 ವರ್ಷಗಳಿಂದ ಶಿಷ್ಯವೇತನ ಹೆಚ್ಚಿಸುವಂತೆ ಸಂಶೋಧನಾ ವಿಧ್ಯಾರ್ಥಿಗಳ ಸಂಘದ ವತಿಯಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ ಈ ಬಗ್ಗೆ ಸ್ಪಂದಿಸಿಲ್ಲ.ಸಂಶೋಧನೆಗೆ ಬೇಕಾದ ಪರಿಕರಗಳು,ಲೇಖನಗಳ ಪ್ರಕಟಣಾ ವೆಚ್ಚ,ಶುಲ್ಕಗಳು ಗಣನೀಯವಾಗಿ ಹೆಚ್ಚಾಗಿದೆ.ಹೀಗಿದ್ದೂ ಶಿಷ್ಯವೇತನ ಹೆಚ್ಚಿಸುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಎಸ್.ಸಿ/ಎಸ್.ಟಿ ಸಂಶೋಧನಾ ವಿಧ್ಯಾರ್ಥಿಗಳು ಅನಿರ್ಧಿಷ್ಠಾವಧಿ ಪ್ರತಿಭಟನೆ ಆರಂಭಿಸಿದ್ದಾರೆ…
Read More

ರಿಯಲ್ ಎಸ್ಟೇಟ್ ದಂಧೆಕೋರರ ವಿರುದ್ದ ಗ್ರಾಮಸ್ಥರ ಆಕ್ರೋಷ…ನಮ್ಮ ಜಮೀನಿಗೆ ತಂತಿ ಬೇಲಿ ನಿರ್ಮಿಸಿ ಗೂಂಡಾ ವರ್ತನೆ ಆರೋಪ…ದಯಾಮರಣಕ್ಕೆ ಅನುಮತಿ ನೀಡುವಂತೆ

ಚಾಮರಾಜನಗರ,ನ27,Tv10 ಕನ್ನಡ ಸರ್ಕಾರ ನೀಡಿದ ಕೃಷಿ ಭೂಮಿಯನ್ನ ಭೋಗ್ಯಕ್ಕೆ ಪಡೆದು ಅಕ್ರಮವಾಗಿ ತಂತಿ ಬೇಲಿ ನಿರ್ಮಿಸಿ ಗೂಂಡಾ ವರ್ತನೆ ಪ್ರದರ್ಶಿಸುತ್ತಿರುವ ರಿಯಲ್ ಎಸ್ಟೇಟ್ ದಂಧೆಕೋರರ ವಿರುದ್ದ ಗುಂಡ್ಲುಪೇಟೆ ಬೇಗೂರು ಹೋಬಳಿಯ ಪಿ.ಸಿ.ವರ್ಗೀಸ್ ಕಾಲೋನಿ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.ರಿಯಲ್ ಎಸ್ಟೇಟ್ ದಂಧೆಕೋರರ ಕಪಿಮುಷ್ಠಿಯಲ್ಲಿರುವ ನಮ್ಮ ಜಮೀನುಗಳನ್ನ ಬಿಡಿಸಿಕೊಡುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಇಲ್ಲವಾದಲ್ಲಿ ದಯಾಮರಣಕ್ಕೆ ಅನುಮತಿ ನೀಡುವಂತೆ ಪತ್ರ ಬರೆದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕಬಿನಿ,ನುಗು,ತಾರಕ ಜಲಾಶಯಗಳ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಕೆಲಸಗಾರರ ಶ್ರಮಕ್ಕೆ
Read More

ಪಂಡರಾಪುರದಲ್ಲಿ ವಿಠಲನ ದರುಶನ ಪಡೆದು ಹಿಂದಿರುಗಿದ ದಂಪತಿಗೆ ಶಾಕ್…ಕಾರು,ಬೆಳ್ಳಿ ಪದಾರ್ಥಗಳು ಕಳ್ಳರ ಪಾಲು…

ಮೈಸೂರು,ನ26,Tv10 ಕನ್ನಡ ಮಹಾರಾಷ್ಟ್ರ ಪಂಡರಾಪುರದ ವಿಠಲನ ದರುಶನ ಪಡೆದು ಮನೆಗೆ ಹಿಂದಿರುಗಿದ ದಂಪತಿಗೆ ಕಳ್ಳರು ಶಾಕ್ ಕೊಟ್ಟಿದ್ದಾರೆ.ಮನೆಯಲ್ಲಿದ್ದ ಬೆಳ್ಳಿ ಪದಾರ್ಥ,ಕಂಚಿನ ಪದಾರ್ಥ ಹಾಗೂ ಕಾರನ್ನ ದೋಚಿ ಪರಾರಿಯಾಗಿದ್ದಾರೆ.ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕೃತಿ ಬಡಾವಣೆಯಲ್ಲಿ ಘಟನೆ ನಡೆದಿದೆ.ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಮೂರ್ತಿ ಎಂಬುವರ ಮನೆಯಲ್ಲಿ ಕಳ್ಳರು ಕೈಚಳಕ ನಡೆಸಿದ್ದಾರೆ. ಶ್ರೀನಿವಾಸ ಮೂರ್ತಿ ಹಾಗೂ ಇವರ ಪತ್ನಿ ಸಂಗೀತಾ ರವರು ನಂಜನಗೂಡಿನಲ್ಲಿ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿದ್ದಾರೆ.ನಂಜನಗೂಡಿನಲ್ಲೂ
Read More

ಮೈಸೂರು ನಗರ ಪೊಲೀಸರ ವಾರ್ಷಿಕ ಕ್ರೀಡಾಕೂಟ…ನ.27 ರಿಂದ 3 ದಿನಗಳ ಕಾಲ ನಡೆಯಲಿರುವ ಸ್ಪೋರ್ಟ್ಸ್…

ಮೈಸೂರು,ನ26,Tv10 ಕನ್ನಡ ನವೆಂಬರ್ 27 ರಿಂದ 3 ದಿನಗಳ ಕಾಲ ಮೈಸೂರು ನಗರ ಪೊಲೀಸರ 2024 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಪೊಲೀಸ್ ಕವಾಯತು ಸಿಎಆರ್ ಮೈದಾನದಲ್ಲಿ ನಡೆಯಲಿದೆ. ನವೆಂಬರ್ 27 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ ರೆಡ್ಡಿ ರವರು ಕ್ರೀಡಾಕೂಟವನ್ನ ಉದ್ಘಾಟಿಸಲಿದ್ದಾರೆ.ನವೆಂಬರ್ 29 ರಂದು ಸಂಜೆ 4 ಗಂಟೆಗೆ ಸಿಎಆರ್ ಮೈದಾನದಲ್ಲಿ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಮಾಲತಿಪ್ರಿಯಾ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
Read More

ಶ್ರೀ ವೈಷ್ಣವ ಸಮಾವೇಶದಲ್ಲಿ ವಿಕ್ರಂ ಅಯ್ಯಂಗಾರ್ ರವರಿಗೆ ಸನ್ಮಾನ…ಸಾಮಾಜಿಕ ಸೇವೆಗೆ ಸಂದ ಗೌರವ…

ಮೈಸೂರು,ನ25,Tv10 ಕನ್ನಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಯದುಗಿರಿ ಯತಿರಾಜ ಮಠ ಹಾಗೂ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದಿಂದ ಆಯೋಜಿಸಲಾಗಿದ್ದ ಶ್ರೀ ರಾಮಾನುಜ ವಿಶ್ವವಿಜಯ ಮಹೋತ್ಸವ ಹಾಗೂ ಬೃಹತ್ ಶ್ರೀ ವೈಷ್ಣವ ಸಮಾವೇಶದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಮೈಸೂರು ನಗರದ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ರವರಿಗೆ ಅವರ ಸಾಮಾಜಿಕ
Read More

ಲಷ್ಕರ್ ಠಾಣೆ ಪೊಲೀಸರ ಕಾರ್ಯಾಚರಣೆ…ದ್ವಿಚಕ್ರ ವಾಹನ ಕಳ್ಳನ ಬಂಧನ…1.30 ಲಕ್ಷ ಮೌಲ್ಯದ 4 ವಾಹನ ವಶ…

ಮೈಸೂರು,ನ25,Tv10 ಕನ್ನಡ ಲಷ್ಕರ್ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ದ್ವಿಚಕ್ರ ವಾಹನ ಕಳ್ಳ ಸಿಕ್ಕಿಬಿದ್ದಿದ್ದಾನೆ.ಆರೋಪಿಯಿಂದ 1.30 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.ಸರಗೂರಿನ ನಿವಾಸಿ ನಿಂಗರಾಜು ಬಂಧಿತ ಆರೋಪಿ.ಲಷ್ಕರ್ ಹಾಗೂ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಾಲ್ಕು ದ್ವಿಚಕ್ರ ವಾಹನಗಳ ಪ್ರಕರಣ ಪತ್ತೆಯಾಗಿದೆ. ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ರವರ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆ
Read More