ಹುಣಸೂರು:ಸೃಷ್ಠಿ ವೈಶಿಷ್ಠ್ಯ…ಎರಡು ತಲೆ ಕರು ಜನನ…ಕೆಲವೇ ಗಂಟೆಗಳಲ್ಲಿ ಸಾವು..
ಹುಣಸೂರು,ಜೂ7,Tv10 ಕನ್ನಡಹುಣಸೂರಿನ ಗೌರಿಪುರ ಗ್ರಾಮದಲ್ಲಿ ಹಸುವೊಂದು ಎರಡು ತಲೆ ಕರುವಿಗೆ ಜನ್ಮ ನೀಡಿದೆ.ಜನನವಾದ ಕೆಲವೇ ಗಂಟೆಗಳಲ್ಲಿ ಕರು ಮೃತಪಟ್ಟಿದೆ.ಡೈರಿ ಕಾರ್ಯದರ್ಶಿ ಅಶೋಕ್ ಎಂಬುವರಿಗೆ ಸೇರಿದ ಹಸು ಎರಡು ತಲೆ ಕರುವಿಗೆ ಜನ್ಮ ನೀಡಿದೆ.ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಕರು ಹುಟ್ಟಿದೆ.ಸಂಜೆ 6 ಗಂಟೆ ವೇಳೆಗೆ ಮೃತಪಟ್ಟಿದೆ.ಎರಡು ತಲೆ ಕರುವನ್ನ ನೋಡಲು ಸ್ಥಳೀಯರು ಕುತೂಹಲದಿಂದ ನೆರೆದಿದ್ದರು.ಸೃಷ್ಠಿ ವೈಶಿಷ್ಠ್ಯಕ್ಕೊಂದು ಈ ಘಟನೆ ಸಾಕ್ಷಿಯಾಗಿದೆ.ಮೃತ ಕರುವನ್ನ ಅಶೋಕ್ ಮನೆಯವರು ಅಂತ್ಯಕ್ರಿಯೆ ಮಾಡಿದ್ದಾರೆ…
Read More