TV10 Kannada Exclusive

ಹುಣಸೂರು:ಹನುಮ ಜಯಂತಿ ಹಿನ್ನಲೆ…ಶಾಲಾ ಕಾಲೇಜುಗಳಿಗೆ ರಜೆ…

ಹುಣಸೂರು,ಡಿ24,Tv10 ಕನ್ನಡ ಮೈಸೂರು ಜಿಲ್ಲೆಯಹುಣಸೂರು ಪಟ್ಟಣದಲ್ಲಿ ಮೂರು ದಿನ ನಡೆಯಲಿರುವ ಹನುಮ ಜಯಂತಿ ಹಿನ್ನಲೆಡಿ 26 ರಂದು ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹನುಮ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನೆರವೇರಲಿದ್ದು ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲುಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಖಾಸಗಿ ವಿದ್ಯಾಸಂಸ್ಥೆಗಳಿಗೆ
Read More

ಶುದ್ದಕುಡಿಯುವ ನೀರಿನ ಘಟಕದ ದುರಸ್ಥಿಗಾಗಿ ಪ್ರತಿಭಟನೆ…ರಿಪೇರಿಗೆ ಹಣ ಇಲ್ಲವೆಂದ ಅಧಿಕಾರಿ ವಿರುದ್ದ ಆಕ್ರೋಷ…

ಹೆಚ್.ಡಿ.ಕೋಟೆ,ಡಿ23,Tv10 ಕನ್ನಡ ಹೆಚ್.ಡಿ.ಕೋಟೆ ಅಣ್ಣೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶುದ್ದಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತು ತಿಂಗಳುಗಳೇ ಉರುಳಿದರೂ ದುರಸ್ಥಿಗೆ ಸಂಭಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲವೆಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಅಣ್ಣೂರು ಗ್ರಾಮ ಪಂಚಾಯ್ತಿ ಸಭೆ ನಡೆಯುವ ವೇಳೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಣಧಿಕಾರಿ ಗಾಯತ್ರಿ ರವರಿಗೆ ಮನವಿ ಸಲ್ಲಿಸಿದಾಗ ನಿರ್ಲಕ್ಷಿಸಿ ನಮ್ಮಲ್ಲಿ ಹಣ ಇಲ್ಲವೆಂದು ಕಾರಣ ನೀಡಿದ್ದಾರೆಂದು ಆರೋಪಿಸುವ ಗ್ರಾಮ ಪಂಚಾಯ್ತಿ ಸದಸ್ಯರು
Read More

ನಿವೃತ್ತ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಮೀಸಲುಪಡೆ ಸಿಬ್ಬಂದಿಗಳನ್ನ ಹಿಂಪಡೆಯಿರಿ…ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದ ಆದೇಶ…

ಬೆಂಗಳೂರು,ಡಿ21,Tv10 ಕನ್ನಡ ನಿವೃತ್ತ ಐಪಿಎಸ್ ಹಾಗೂ ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆ.ಎಸ್.ಆರ್.ಪಿ. ಸಿಬ್ಬಂದಿಗಳನ್ನ ಹಿಂದಕ್ಕೆ ಪಡೆಯುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಐಜಿ ಹಾಗೂ ಡಿಜಿ ಗಳಿಗೆ ಸೂಚನೆ ನೀಡಿದ್ದಾರೆ.ನಿವೃತ್ತ ಅಧಿಕಾರಿಯಾದ ಸುನಿಲ್ ಅಗರವಾಲ್,ಭಾಸ್ಕರ್ ರಾವ್ ಸೇರಿದಂತೆ ಹಲವರ ಮನೆಯಲ್ಲಿ ಇನ್ನೂ ಕರ್ನಾಟಕ ರಾಜ್ಯ ಮೀಸಲು ಪಡೆ ಸಿಬ್ಬಂದಿಗಳು ಕೆಲಸ ಮುಂದುವರೆಸಿದ್ದು ಕೂಡಲೇ ಅವರನ್ನ ಹಿಂದಕ್ಕೆ ಕರೆಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿರುವ ಹಿನ್ನಲೆ ಕ್ರಮ ಕೈಗೊಳ್ಳಲು ಮುಂದಾದ ಸರ್ಕಾರದ
Read More

ಉಪರಾಷ್ಟ್ರಪತಿ ಅಪಮಾನಿಸಿದ ಹಿನ್ನಲೆ… ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ…

ಮೈಸೂರು,ಡಿ21,Tv10 ಕನ್ನಡ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ರವರನ್ನ ಅಪಮಾನಿಸಿದ ಹಿನ್ನಲೆ ಕಾಂಗ್ರೆಸ್ ವಿರುದ್ದ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಗಾಂಧಿ ವೃತ್ತದಲ್ಲಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.ರಾಹುಲ್ ಗಾಂಧಿಯವರ ನಡೆಯನ್ನ ಖಂಡಿಸಿ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದ್ದಾರೆ…
Read More

ನಿಂತಿದ್ದ ಕಾರಿನಲ್ಲಿ ಬೆಂಕಿ…ಕುವೆಂಪುನಗರ ಜಡ್ಜಸ್ ಕ್ವಾರ್ಟರ್ಸ್ ಬಳಿ ಘಟನೆ…

ಮೈಸೂರು,ಡಿ21,Tv10 ಕನ್ನಡ ನಿಂತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರಿನ ಕುವೆಂಪುನಗರದ ಜಡ್ಜಸ್ ಕ್ವಾರ್ಟರ್ಸ್ ಬಳಿ ನಡೆದಿದೆ.ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಟ್ಟೆ ಅಂಗಡಿ ಮಾಲೀಕರಾದ ಶಫಿಉಲ್ಲಾ ಖಾನ್ ಎಂಬುವರಿಗೆ ಸೇರಿದ ಇನೋವಾ KA07 N 0831 ನೊಂದಣಿ ಸಂಖ್ಯೆಯ ಕಾರಿನಲ್ಲಿ ಧಿಢೀರ್ ಬೆಂಕಿ ಕಾಣಿಸಿಕೊಂಡಿದೆ.ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರೆ.ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿ ಮುಂದಾಗಲಿದ್ದ ಅನಾಹುತ ತಪ್ಪಿಸಿದ್ದಾರೆ.ಕುವೆಂಪುನಗರ
Read More

ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದ ಜಮೀನಿಗೆ ಕನ್ನ…ಕ್ರಮ ಕೈಗೊಳ್ಳುವಂತೆ ಮೈಸೂರು ಡಿಸಿಗೆ ಮಂಡ್ಯ ಜಿಲ್ಲಾಧಿಕಾರಿ ಪತ್ರ…

ಮೈಸೂರು,ಡಿ20,Tv10 ಕನ್ನಡ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯಕ್ಕೇ ಸೇರಿದ ಜಮೀನುಗಳನ್ನ ಲಪಟಾಯಿಸಿದ ಖದೀಮರ ವಿರುದ್ದ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಮೈಸೂರುತಾಲೂಕು ಕಸಬ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ 396 ರ 3 ಎಕ್ರೆ 07 ಗುಂಟೆ,ಸರ್ವೆ ನಂ 397 ರ 0.05 ಗುಂಟೆ,ಸರ್ವೆ ನಂ.398 ರ 1 ಎಕ್ರೆ 18 ಗುಂಟೆ ಹಾಗೂ ಸರ್ವೆ ನಂ.399 ರ 4 ಎಕ್ರೆ 18
Read More

ಕರೋನಾ ಭೀತಿ…ದತ್ತಪೀಠದ ಶುಕವನ ಭಂದ್…

ಮೈಸೂರು,ಡಿ20,Tv10 ಕನ್ನಡ ಕರೋನಾ ಹೆಚ್ಚುತ್ತಿರುವ ಹಿನ್ನಲೆ ಡಿಸೆಂಬರ್ 22 ರಿಂದ ದತ್ತಪೀಠದಲ್ಲಿರುವ ಶುಕವನ,ಬೋನ್ಸಾಯಿ ವನ ಹಾಗೂ ವಿಶ್ವಂ ವಸ್ತು ಸಂಗ್ರಹಾಲಯವನ್ನ ಅನಿರ್ಧಿಷ್ಠಾವಧಿ ಕಾಲ ಬಂದ್ ಮಾಡಲಾಗುವುದಾಗಿ ದತ್ತಪೀಠದ ಆಡಳಿತಾಧಿಕಾರಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ…
Read More

ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿಗೆ ತಲುಪುತ್ತಾನೆ-ಪೊಲೀಸ್ ಇನಸ್ಪೆಕ್ಟರ್ ಪ್ರಕಾಶ್

ಮಾದಕ ವಸ್ತುಗಳು ಯುವ ಪೀಳಿಗೆಯನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಅನೇಕರು ಅಪಾಯಕ್ಕೆ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ನಂಜನಗೂಡಿನ ಪೊಲೀಸ್ ಇನಸ್ಪೇಕ್ಟರ್ ಶ್ರೀ ಪ್ರಕಾಶ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಮಾದಕ ವಸ್ತುಗಳ ಸೇವನೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಪಿಡುಗುವಿನಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿಗೆ ತಲುಪುತ್ತಾನೆ.ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್. ದಿನೇಶ್ ರವರು ಮಾತನಾಡಿ ಮಾದಕ ವಸ್ತುಗಳ
Read More

ರಾಮಕೃಷ್ಣ ಆಶ್ರಮದಲ್ಲಿ ಚಿರತೆ ಸೆರೆ…

ಮೈಸೂರು,ಡಿ19,Tv10 ಕನ್ನಡ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಚಿರತೆ ಸೆರೆಯಾಗಿದೆ. ನಗರ ಪ್ರದೇಶಕ್ಕೆ ಚಿರತೆ ಬಂದಿರುವುದು ಆತಂಕ ಸೃಷ್ಟಿಸಿದೆ. ಮೈಸೂರು ಹೊರವಲಯದ ಕಾಡಂಚಿನ ಪ್ರದೇಶದ ಗ್ರಾಮಗಳಲ್ಲಿ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದುದು ಸಹಜ. ಇದೀಗ ಮೈಸೂರು ನಗರದೊಳಗೇ ಚಿರತೆ ಸೆರೆಸಿಕ್ಕಿರುವುದರಿಂದ ಜನ ಗಾಬರಿಯಾಗಿದ್ದಾರೆ. ಅರಣ್ಯ ಇಲಾಖೆಯವರು ರಾಮಕೃಷ್ಣ‌ ಆಶ್ರಮದಲ್ಲಿ ಇರಿಸಿದ್ದ ಬೋನಿಗೆ ಬಿದ್ದಿದೆ.ನಾಲ್ಕು ದಿನದ ಹಿಂದೆ ಬೋನು ಇರಿಸಲಾಗಿತ್ತು.ಚಿರತೆಯನ್ನು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್‌ಎಫ್ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿ ಅರಣ್ಯಕ್ಕೆ ರವಾನಿಸಿದ್ದಾರೆ…
Read More

ಪ್ರತಾಪ್ ಸಿಂಹ ಪರ ಬಿಜೆಪಿ ಕಾರ್ಯಕರ್ತರ ಬ್ಯಾಟಿಂಗ್…

ಮೈಸೂರು,ಡಿ16,Tv10 ಕನ್ನಡ ಸಂಸದ ಪ್ರತಾಪ್ ಸಿಂಹ ಪರ ಬಿಜೆಪಿ ಕಾರ್ಯಕರ್ತರು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.ಮೈಸೂರಿನ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರುಪ್ರತಾಪ್ ಸಿಂಹ ಅವರೊಂದಿಗೆ ನಾವು ಎಂದು ಘೋಷಣೆ ಕೂಗಿದ್ದಾರೆ.ರಾಷ್ಟ್ರೀಯ ವಾದಿ ಪ್ರತಾಪ್ ಸಿಂಹ ಜೊತೆಗೆ ನಾವಿದ್ದೇವೆ.ಹಿಂದೂ ಹುಲಿ ಪ್ರತಾಪ್ ಸಿಂಹ ಎಂದು ಅವರ ಭಾವಚಿತ್ರದ ಮುಖವಾಡ ಹಾಕಿಕೊಂಡು ಘೋಷಣೆ ಕೂಗಿ ಬೆಂಬಲ ಸೂಚಿಸಿದ್ದಾರೆ…
Read More