TV10 Kannada Exclusive

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ವಿಷ್ಣುವರ್ಧನ್ ರಿಂದ ಮತದಾನ….

ಲೋಸಭಾ ಚುನಾವಣೆ ಹಿನ್ನಲೆ ಚಿತ್ರರಂಗದ ಹಿರಿಯ ಕಲಾವಿದರು ತಮಗಮ ಹಕ್ಕನ್ನ ಚಲಾಯಿಸಿದ್ದಾರೆ.ಸಾಹಸ ಸಿಂಹ ದಿ.ಡಾ.ವಿಷ್ಣುವರ್ಧನ್ ರವರ ಧರ್ಮಪತ್ನಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ವಿಷ್ಣುವರ್ಧನ್ ಮತಚಲಾಯಿಸುವ ಮೂಲಕ ಚುನಾವಣಾ ಹಬ್ಬದಲ್ಲಿ ಭಾಗಿಯಾಗಿದ್ದಾರೆ.ಬೆಂಗಳೂರಿನ ಜಯನಗರ 4 th T ಬ್ಲಾಕ್ ನ ಮತಗಟ್ಟೆ ಸಂಖ್ಯೆ 50 ರಲ್ಲಿ ಭಾರತಿ ವಿಷ್ಣುವರ್ಧನ್ ರವರು ಮತ ಚಲಾಯಿಸಿದರೆ.ಅನಿರುದ್ಧ್ ವಿಷ್ಣುವರ್ಧನ್ ರವರು ಜೆಪಿ ನಗರ ಎರಡನೇ ಹಂತದ ಬೂತ್
Read More

ಸುತ್ತೂರು ಶ್ರೀಗಳಿಂದ ಮತದಾನ…ಕಡ್ಡಾಯವಾಗಿ ಮತ ಚಲಾಯಿಸುವಂತೆ ಕರೆ…

ನಂಜನಗೂಡು,ಏ26,Tv10 ಕನ್ನಡ ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು ಮತಚಲಾಯಿಸಿದರು.ನಂತರ ಮಾತನಾಡಿ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನ ಮಾಡಬೇಕು ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.ಶ್ರೀಮಠದಿಂದ ನೇರವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು.ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ನಾವು ಉತ್ತಮ ವ್ಯಕ್ತಿಯನ್ನು
Read More

ಅಭ್ಯರ್ಥಿಗಳ ಪಟ್ಟಿಯಲ್ಲಿ ಎಡವಟ್ಟು…ಕನ್ನಡಕ್ಕೆ ಅಪಮಾನ…

ಮೈಸೂರು,ಏ26,Tv10 ಕನ್ನಡ ಮೈಸೂರು ಕೊಡಗು ಲೋಸಭಾ ಕ್ಷೇತ್ರದ ಉಮೇದುದಾರರ ಪಟ್ಟಿಯಲ್ಲಿ ಅಧಿಕಾರಿಗಳ ಎಡವಟ್ಟು ಬೆಳಕಿಗೆ ಬಂದಿದೆ.ಅಕ್ಷರಗಳ ಬಳಕೆ ಸರಿಯಾಗದೆ ಕನ್ನಡಕ್ಕೆ ಅಪಮಾನ ಮಾಡಲಾಗಿದೆ. ಕಾಂಗ್ರೆಸ್ ಎಂಬ ಪದಕ್ಕೆ ಬದಲಾಗಿ ಕಾಂಗ್ರೆ ಷ್ ಎಂದು ನಮೂದಿಸಲಾಗಿದೆ.ಮತ್ತೊಂದೆಡೆ ಕಾಂಗ್ರೆಸ್ ಬದಲಾಗಿ ಕಾಂಗ್ರೆ ಶ್.ಮತ್ತೊಂದೆಡೆ ಹಲಸಿನ ಹಣ್ಣು ಪದಕ್ಕೆ ಹ ಳ ಸಿನ ಹಣ್ಣು ಎಂದು ದಾಖಲಾಗಿದೆ.ಇವೆಲ್ಲಾ ಕೈಬರಹದಲ್ಲಿ ದಾಖಲಾಗಿರುವ ಎಡವಟ್ಟು.ಕನ್ನಡ ಬಾರದ ಅಧಿಕಾರಿ ಅಥವಾ ಸಿಬ್ಬಂದಿಯಿಂದ ದಾಖಲಾದ ಕೈಬರವಣಿಗೆಯಲ್ಲಿ ಎಡವಟ್ಟುಗಳಿದ್ದರೂ ಕನ್ನಡ ಬಲ್ಲ
Read More

ಹುಣಸೂರು:ಹಕ್ಕು ಚಲಾಯಿಸಿ ಮತಗಟ್ಟೆ ಹೊರಗೆ ಮೃತಪಟ್ಟ ವೃದ್ದೆ…

ಮೈಸೂರು,ಏ26,Tv10 ಕನ್ನಡ ಲೋಕಸಭೆ ಚುನಾವಣೆ ಹಿನ್ನಲೆ ಮತದಾನ ಮಾಡಿದ ವೃದ್ದೆ ಮತಗಟ್ಟೆಯಿಂದ ಹೊರಬರುತ್ತಿದ್ದಂತೆಯೇ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ(90) ಮೃತ ದುರ್ದೈವಿ.ತಿಪ್ಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 172 ರಲ್ಲಿ ಮತಚಲಾಯಿಸಿ ನಂತರ ಹೊರಬಂದ ಪುಟ್ಟಮ್ಮ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ… ಹುಣಸೂರು:ಹಕ್ಕು ಚಲಾಯಿಸಿ ಮತಗಟ್ಟೆ ಹೊರಗೆ ಮೃತಪಟ್ಟ ವೃದ್ದೆ… ಮೈಸೂರು,ಏ26,Tv10 ಕನ್ನಡ ಲೋಕಸಭೆ ಚುನಾವಣೆ ಹಿನ್ನಲೆ ಮತದಾನ ಮಾಡಿದ ವೃದ್ದೆ ಮತಗಟ್ಟೆಯಿಂದ
Read More

ಮೊದಲ ಮತದಾನದ ನೆನಪಿಗಾಗಿ ಪ್ರತಿಯೊಬ್ಬರು ಗಿಡ ನೆಡಿ

ಮೈಸೂರು,ಏ25,Tv10 ಕನ್ನಡಮೊದಲ ಮತದಾನದ ನೆನಪಿಗಾಗಿ ಪ್ರತಿಯೊಬ್ಬರು ಗಿಡವನ್ನು ನೆಡುವ ಮೂಲಕ ಹಬ್ಬದ ರೀತಿಯಲ್ಲಿ ಚುನಾವಣೆಯನ್ನು ಆಚರಿಸಬೇಕು.ಈ ನಿಟ್ಟಿನಲ್ಲಿ ಸೃಜನ್ ದಿನೇಶ್ ರವರು ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಮೊದಲ ಮತದಾನದ ನೆನಪಿಗಾಗಿ ತಮ್ಮ ಮನೆ ಆವರಣದಲ್ಲಿ ಸಂಪಿಗೆ ಗಿಡ ನೆಡುವ ಮೂಲಕ ತಮ್ಮ ಮೊದಲ ಮತದಾನವನ್ನು ಈ ರೀತಿಯಲ್ಲಿ ಸಂಭ್ರಮಿಸಿದರು.ಈಗ ಮತ್ತೊಂದು ಲೋಕಸಭಾ ಚುನಾವಣೆ ಬಂದಿದೆ. ಆ ದಿನ ಅವರು ಹಾಕಿದ ಗಿಡ ಈಗ ಈ ಮಟ್ಟಿಗೆ ಬೆಳೆದಿದೆ. ಹಾಗಾಗಿ ಪ್ರತಿಯೊಬ್ಬರು
Read More

ಲೋಕಸಮರ…ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ…ಸೂಕ್ತ ಭದ್ರತೆ…

ಮೈಸೂರು,ಏ25,Tv10 ಕನ್ನಡ ನಾಳೆ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ.ಮೈಸೂರಿನ ನಗರ ವ್ಯಾಪ್ತಿಯಲ್ಲಿ ಅರಸೇನಾ ಪಡೆ ಸೇರಿದಂತೆ ಒಟ್ಟು 2,402 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮತದಾನ ಪ್ರಕ್ರಿಯೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.ಭದ್ರತೆ ಕುರಿತು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಮಾಹಿತಿ ನೀಡಿದರು. ನಗರದಾದ್ಯಂತ ಸ್ಥಾಪಿಸಿರುವ 2202 ಮತಗಟ್ಟೆಗಳಲ್ಲಿ 41 ಅತಿ ಸೂಕ್ಷ್ಮ ಮತ್ತು 435 ಸೂಕ್ಷ್ಮ ಎಂದು ಗುರುತಿಸಲಾಗಿದೆ ಹಾಗೂ
Read More

ಗುಲಾಬಿ ನೀಡಿ ಮತದಾನ ಜಾಗೃತಿ…ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಕಾರ್ಯಕ್ರಮ…

ಮೈಸೂರು,ಏ25,Tv10 ಕನ್ನಡ ನಗರದ ಸಿಟಿ ಬಸ್ ಸ್ಟ್ಯಾಂಡ್ ಆವರಣದಲ್ಲಿಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಹಾಗೂ ಮತದಾನದ ಕರೆಯೋಲೆ ನೀಡಿ ನಾಳೆ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಲಾಯಿತು.ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಮಾತನಾಡಿ, ಆಮಿಷಕ್ಕೆ ಮತ ಮಾರಿಕೊಳ್ಳುವುದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ ಮತದಾರರು ಜಾಗೃತರಾಗುವ ಮೂಲಕ ಅರ್ಹ ಅಭ್ಯರ್ಥಿಗೆ
Read More

ಆನ್ ಲೈನ್ ಧೋಖಾ: 19 ಕೋಟಿ ಆಮಿಷ ತೋರಿಸಿ 99.50 ಲಕ್ಷಕ್ಕೆ ಉಂಡೆನಾಮ…

ಮೈಸೂರು,ಏ25,Tv10 ಕನ್ನಡ ಸ್ಟಾಕ್ಸ್ ಟ್ರೇಡಿಂಗ್ ವ್ಯವಹಾರದಲ್ಲಿ 19 ಕೋಟಿ ಲಾಭಾಂಶ ತೋರಿಸಿ 99.50 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.ಮೈಸೂರಿನ ಕನಕದಾಸ ನಗರದ ನಿಚಾಸಿ ಚಿದಾನಂದ್ ಎಂಬುವರು 99.50 ಲಕ್ಷ ಹಣ ಕಳೆದುಕೊಂಡಿದ್ದಾರೆ.ಇನ್ಸ್ಟಾಗ್ರಾಂ ನಲ್ಲಿ ಬಂದ ಜಾಹಿರಾತಿಗೆ ಆಕರ್ಷಿತರಾದ ಚಿದಾನಂದ್ ಲಿಂಕ್ ಓಪನ್ ಮಾಡಿ ಜಾಯಿನ್ ಆಗಿದ್ದಾರೆ.ಚಿದಾನಂದ್ ಅವರನ್ನ ವಾಟ್ಸಾಪ್ ಗ್ರೂಪ್ ಗೆ ಸೇರಿಸಿ ಲಿಂಕ್ ಕಳುಹಿಸಿ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.ನಂತರ ವಂಚಕರ ಸಲಹೆಯಂತೆ ಪ್ರಾರಂಭದಲ್ಲಿ 60 ಸಾವಿರ
Read More

ಕುವೆಂಪುನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಸರಗಳ್ಳನ ಬಂಧನ…3.30 ಲಕ್ಷ ಮೌಲ್ಯದ ಸರ ವಶ…

ಮೈಸೂರು,ಏ24,Tv10 ಕನ್ನಡ ವಾಕಿಂಗ್ ಮಾಡುತ್ತಿದ್ದ ವೃದ್ದೆಯ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಚಾಮರಾಜನಗರ ನಿವಾಸಿ ರಂಗಸ್ವಾಮಿ ಸಿಕ್ಕಿಬಿದ್ದ ಸರಗಳ್ಳ.ಬಂಧಿತನಿಂದ 3.30 ಲಕ್ಷ ಮೌಲ್ಯದ 55 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ 23 ರ ಬೆಳಿಗ್ಗೆ ಮಧುವನ ಪಾರ್ಕ್ ಬಳಿ ಮಹದೇವಮ್ಮ ಎಂಬ ವೃದ್ದೆ ವಾಕಿಂಗ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ರಂಗಸ್ವಾಮಿ ಚಿನ್ನದ ಸರ
Read More

ಮನೆಗೆ ನುಗ್ಗಿ ಮಹಿಳೆ ಅಪಹರಣ…6 ಮಂದಿ ತಂಡದಿಂದ ದುಷ್ಕೃತ್ಯ…ತಂಡದಲ್ಲಿ ಓರ್ವ ಮಹಿಳೆ ಭಾಗಿ…ಮಕ್ಕಳ ಮುಂದೆಯೇ ಕೃತ್ಯ…

ಮೈಸೂರು,ಏ23,Tv10 ಕನ್ನಡ ಮಹಿಳೆ ಸೇರಿದಂತೆ 6 ಮಂದಿ ತಂಡವೊಂದು ಮನೆಗೆ ನುಗ್ಗಿ ಗೃಹಿಣಿಯನ್ನ ಬಲವಂತವಾಗಿ ಎಳೆದೊಯ್ದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಎಜೆ ಬ್ಲಾಕ್ ನಲ್ಲಿ ನಡೆದಿದೆ.ಮಗ ಹಾಗೂ ಮಗಳ ಮುಂದೆಯೇ ತಾಯಿಯನ್ನ ದುಷ್ಕರ್ಮಿಗಳ ತಂಡ ಅಪಹರಿಸಿದೆ.ಸವಿತಾ(42) ಅಪಹರಣಕ್ಕೆ ಒಳಗಾದವರು. .ಮಗ ಶಶಾಂಕ್ ಹಾಗೂ ಮಗಳು ಅರುಣ ಕಣ್ಣೆದುರೇ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ.ಏ.21 ರಂದು ಘಟನೆ ನಡೆದಿದ್ದು ಎನ್.ಆರ್.ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನ ರಕ್ಷಿಸಿದ್ದಾರೆ.ಏ21 ರ ರಾತ್ರಿ
Read More