TV10 Kannada Exclusive

ಕುವೆಂಪುನಗರ ಠಾಣೆ ಪೊಲೀಸರ ಕಾರ್ಯಾಚರಣೆ…ಅಂತರ್ ರಾಜ್ಯ ಕಳ್ಳನ ಬಂಧನ…7.20 ಲಕ್ಷ ಮೌಲ್ಯದ ವಾಹನ ವಶ…

ಮೈಸೂರು,ಆ17,Tv10 ಕನ್ನಡ ಕುವೆಂಪುನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಅಂತರ್ ರಾಜ್ಯ ಕಳ್ಳ ಸೆರೆಯಾಗಿದ್ದಾನೆ.ಆರೋಪಿಯಿಂದ 6 ಲಕ್ಷ ಮೌಲ್ಯದ ಗೂಡ್ಸ್ ವಾಹನ 1.20 ಲಕ್ಷ ಮೌಲ್ಯದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.ಜಮ್ಮು ಕಾಶ್ಮೀರ ರಾಜ್ಯದ ನಿವಾಸಿ ಮಹಮದ್ ರಮ್ಜಾನ್(21) ಬಂಧಿತ ಚೋರ.ಕುವಪುನಗರದಲ್ಲಿರುವ ಶಂಕರ್ ಬಿಲ್ಡ್ ಪ್ರೋ ಕಂಪನಿಗೆ ಸೇರಿದ ಗೂಡ್ಸ್ ವಾಹನವನ್ನ ಈತ ಕಳುವು ಮಾಡಿದ್ದ.ಈ ಕುರಿತಂತೆ ಕಂಪನಿ ವ್ಯವಸ್ಥಾಪಕರು ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ
Read More

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ದರ್ಶನ್ ಧೃವನಾರಾಯಣ್…ನಿವಾಸಿಗಳಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ…

ನಂಜನಗೂಡು,ಆ17,Tv10 ಕನ್ನಡಕಪಿಲಾ ಪ್ರವಾಹಕ್ಕೆ ನಲುಗಿದ ಪ್ರದೇಶಗಳಿಗೆ ನಂಜನಗೂಡು ಶಾಸಕ ದರ್ಶನ್ಧೃವನಾರಾಯಣ್ ಭೇಟಿ ನೀಡಿ ಸಂತ್ರಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಗೆಬರುವ ಮುದ್ದಹಳ್ಳಿ, ಬ್ಯಾಳಾರುಹುಂಡಿ, ಸೂರಹಳ್ಳಿ, ದೇಪೇಗೌಡನ ಪುರ, ಕೃಷ್ಣಾಪುರ, ಕೂಗಲೂರು ಗ್ರಾಮಗಳಿಗೆ ಭೇಟಿ ನೀಡಿಹಾನಿಯಾಗಿರುವ ಮನೆಗಳ ಸ್ಥಳ ವೀಕ್ಷಣೆ ಮಾಡಿ ಅಭಯ ನೀಡಿದ್ದಾರೆ. ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.ಸರ್ಕಾರದ ಮಟ್ಟದಲ್ಲಿ ದೊರೆಯುವ ಸೌಲಭ್ಯಗಳನ್ನ ಸಂತ್ರಸ್ಥರಿಗೆ ಶೀಘ್ರದಲ್ಲಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ
Read More

ಸಸ್ಪೆಂಡ್ ಆದ ಪೊಲೀಸ್ ಪೇದೆಗೆ ಸಿಎಂ ಮೆಡಲ್…ಇದೆಂಥಾ ವ್ಯವಸ್ಥೆ…

ಮೈಸೂರು,ಆ15,Tv10 ಕನ್ನಡಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ,ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯ,ದಾಖಲೆಗಳ ಸೋರಿಕೆ ಮಾಡುವ ಶಂಕೆ ಇವೆಲ್ಲಾ ಆರೋಪಗಳ ಹಿನ್ನಲೆ ಅಮಾನತಾದ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.ಒಂದು ತಿಂಗಳ ಹಿಂದೆ ಅಮಾನತಾದರೂ ಇದೀಗ ಬಿಡುಗಡೆಯಾದ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಮುಖ್ಯಪೇದೆ ಸಲೀಂ ಪಾಷಾ ಹೆಸರು ಪ್ರಕಟವಾಗಿದ್ದು ಅಚ್ಚರಿಗೆ ಕಾರಣವಾಗಿದೆ.2023 ನೇ ಸಾಲಿಗೆ ಆಯ್ಕೆಯಾದವರ ಸಿಬ್ಬಂದಿ ಅಧಿಕಾರಿಗಳ ಪಟ್ಟಿಯಲ್ಲಿ ಮುಖ್ಯಪೇದೆ ಸಲಾಂ ಪಾಷಾ ಹೆಸರು ಪ್ರಕಟವಾಗಿದೆ.ಮೇಟಗಳ್ಳಿ
Read More

ಕೆ.ಆರ್.ಎಸ್.ಜಲಾಶಯ ಸುಭದ್ರವಾಗಿದೆ ಆತಂಕ ಇಲ್ಲ…ಸಚಿವ ಎನ್ ಚಲುವರಾಯಸ್ವಾಮಿ…

ಮಂಡ್ಯ,ಆ13,Tv10 ಕನ್ನಡಕೃಷ್ಣರಾಜ ಸಾಗರ ಜಲಾಶಯ ಸುಭದ್ರವಾಗಿದೆ. ಯಾವುದೇ ಆತಂಕ ಬೇಡ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.ಇಂದು ಕಾವೇರಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ 948 ಕೆರೆಗಳಿದ್ದು, ಕೆರೆ ತುಂಬಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಈ ಬಾರಿ ಉತ್ತಮ ಮಳೆ ಯಾಗಿದ್ದು, ಬೆಳೆಗಳಿಗೆ ನೀರಿನ ತೊಂದರೆ ಇಲ್ಲ. ತಾಂತ್ರಿಕಾ ತೊಂದರೆಗಳಿಂದ ಕೆಲವು ಭಾಗಗಳಿಗೆ ಕೃಷಿಗೆ ನೀರು ತಲುಪಿಲ್ಲ ತಡವಾಗಿ ನೀರು ತಲುಪುತ್ತದೆ.
Read More

ಪತ್ನಿಯನ್ನು ಕೊಂದ ಪತಿಗೆ 7 ವರ್ಷ ಜೈಲು…ಮೈಸೂರು ನ್ಯಾಯಾಲಯದ ತೀರ್ಪು…

ಮೈಸೂರು,ಆ12,Tv10 ಕನ್ನಡಪತ್ನಿಯನ್ನ ಕೊಂದ ಪತಿರಾಯನಿಗೆ ಮೈಸೂರು ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ಮೈಸೂರು 7 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ರಮೇಶ್ ತೀರ್ಪು ಪ್ರಕಟಿಸಿದ್ದಾರೆ.ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಮಂಟಪ ಬಡಾವಣೆಯ ನಿವಾಸಿ ರಾಜೇಶ್ ಜೈಲು ಶಿಕ್ಷೆಗೆ ಒಳಗಾದ ಹಂತಕ.27-08-2022 ರಲ್ಲಿ ಪತ್ನಿ ರಾಧಾಳನ್ನ ಭೀಕರವಾಗಿ ಕೊಂದಿದ್ದ.ಪತ್ನಿಯ ನಡುವಳಿಕೆ ಮೇಲೆ ಅನುಮಾನ ಪಡುತ್ತಿದ್ದ ರಾಜೇಶ್ ಆಗಾಗ ಗಲಾಟೆ
Read More

ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮುದ್ದೆ ಅವರೆಕಾಳು ಊಟ…ಸಾವಿರಾರು ಭಕ್ತರಿಂದ ಪ್ರಸಾದ ಸ್ವೀಕಾರ…

ಮೈಸೂರು,ಆ11,Tv10 ಕನ್ನಡ ಮೈಸೂರು ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣಮಾಸ ಪ್ರಯುಕ್ತ ಭಕ್ತರಿಗೆ ಅವರೆಕಾಳು ಮುದ್ದೆ ಊಟ ನೀಡಲಾಯಿತು.ಸಾವಿರಾರು ಭಕ್ತರು ಅವರೆಕಾಳು ಮುದ್ದೆ ಊಟ ಸವಿದರು.ರೋಟರಿ ಕ್ಲಬ್ ಆಫ್ ಮೈಸೂರು ಮತ್ತು ಪುಣ್ಯಕೋಟಿ ಸೇವಾ ಟ್ರಸ್ಟ್ ಹಾಗೂ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್ ರವರು ಪ್ರಸಾದ ವಿನಿಯೋಗಕ್ಕೆ ಚಾಲನೆ ನೀಡಿದರು…
Read More

ಮೂವರು ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಡಳಿತದಿಂದ ಸನ್ಮಾನ…

ಮೈಸೂರು,ಆ11,Tv10 ಕನ್ನಡಜಿಲ್ಲಾಡಳಿತದ ವತಿಯಿಂದ ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನಸನ್ಮಾನಿಸಲಾಯಿತು.ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಸೀಲ್ದಾರ್KM ಮಹೇಶ್ ಕುಮಾರ್ ರವರು ಸ್ವಾತಂತ್ರ್ಯ ಹೋರಾಟಗಾರರ ನಿವಾಸಗಳಿಗೆ ತೆರಳಿ ಸನ್ಮಾನಿಸಿದರು.ಬೋಗಾದಿಯವೈ.ಸಿ.ರೇವಣ್ಣ,ಮೈಸೂರಿನ ಸರಸ್ವತಿಪುರಂ ನ ಎಂ ಸೋಮಶೇಖರಯ್ಯ ಹಾಗೂ ಕೆ.ಆರ್.ಮೊಹಲ್ಲಾದ ಗೋಪಾಲ ಅಯ್ಯಂಗಾರ್ ರವರನ್ನ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಹೆಚ್ಚುವರಿ ತಹಸೀಲ್ದಾರ್ ವಿಶ್ವನಾಥ್ ,ಉಪತಹಸೀಲ್ದಾರ್ ಆನಂದ್,ನಗರ ರಾಜಸ್ವ ನಿರೀಕ್ಷಕರು ಗ್ರಾಮಾಂತರ ರಾಜಸ್ವ ನಿರೀಕ್ಷಕರು ಹಾಜರಿದ್ದರು…
Read More

ತಮಿಳುನಾಡಿಗೆ 150 tmc ನೀರು ಬಿಟ್ಟಿದ್ದೇವೆ…ಡಿ.ಕೆ.ಶಿವಕುಮಾರ್…

ಮಂಡ್ಯ,ಆ9,Tv10 ಕನ್ನಡತಮಿಳುನಾಡಿಗೆ ನಾವು ಈ ವರ್ಷದ 177.25 tmc ಪೈಕಿ150 tmc ನೀರು ಬಿಟ್ಟಿದ್ದೀವಿ.ನಮಗಿರೊ ಮಾಹಿತಿ ಪ್ರಕಾರನೀರು ಮೆಟ್ಟೂರು ಡ್ಯಾಂ ನಿಂದ ಸಮುದ್ರ ಸೇರಿದೆ ಎಂದು ಕೆ.ಆರ್.ಎಸ್.ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.ತಮಿಳುನಾಡು ಒಪ್ಪಿಸಿದ್ರೆ ಕೇಂದ್ರದಿಂದ ಅನುಮತಿ ಕೊಡುಸ್ತೀನಿ ಎಂಬ ಹೆಚ್ ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿಅವರು ದೊಡ್ಡವರು ದೊಡ್ಡವರ ವಿಚಾರ ಬೇಡನಾವು ಕಾನೂನು ಮೂಲಕ ಹೋರಾಟ ಮಾಡ್ತಿವಿ.ಬರೀ ಬುಡುಬುಡುಕೆ ಮಾತು ಎಂದು ವಾಗ್ಧಾಳಿ ಮಡೆಸಿದರು.ಖಾಲಿ ಮಾತಾಡ್ಕೊಂಡು
Read More

Tv10 ವರದಿ ಫಲಶೃತಿ…ವೆಂಕಟಗಿರಿ ಕಾಲೋನಿಗೆ ಕುಡಿಯುವ ನೀರಿನ ಸೌಲಭ್ಯ…ನಂಜನಗೂಡು,ಆ9,Tv10 ಕನ್ನಡ

Tv10 ವರದಿ ಫಲಶೃತಿ…ವೆಂಕಟಗಿರಿ ಕಾಲೋನಿಗೆ ಕುಡಿಯುವ ನೀರಿನ ಸೌಲಭ್ಯ…ನಂಜನಗೂಡು,ಆ9,Tv10 ಕನ್ನಡಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ವೆಂಕಟಗಿರಿ ಕಾಲೋನಿಗೆ ಕುಡಿಯುವ ನೀರಿನ ಸೌಲಭ್ಯ ದೊರೆತಿದೆ.ಕಾಲೋನಿಯಲ್ಲಿ ಬೀದಿದೀಪಗಳು ಕೆಟ್ಟುನಿಂತಿವೆ,ಕಸದ ರಾಶಿ,ಸ್ವಚ್ಛತೆ ಮಾಯವಾಗಿದೆ.ಕುಡಿಯುವ ನೀರು ಸರಬರಾಜು ಮೋಟಾರ್ ಕೆಟ್ಟು ನಿಂತು ತಿಂಗಳುಗಳೇ ಉರುಳಿದ್ರೂ ಅಧಿಕಾರಿಗಳು ತಿರುಗಿ ನೋಡಿರಲಿಲ್ಲ.ಕಾಲೋನಿ ಜನತೆ ಮಾಡಿದ ಮನವಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ಹಾದಿ ಹಿಡಿಯಲು ನಿರ್ಧರಿಸಿದ್ರು. ಇವರ ಸಂಕಷ್ಟಗಳನ್ನ ಕೆಲವು
Read More

Tv10 ಕನ್ನಡ ಇಂಪ್ಯಾಕ್ಟ್… ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಸಂಪರ್ಕ ರಸ್ತೆ ದುರಸ್ಥಿ…

ಸರಗೂರು,ಆ8,Tv10 ಕನ್ನಡಕೊನೆಗೂ ಸರಗೂರು ತಾಲೂಕು ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಸ್ಥಿತಿಗೆ ತಲುಪಿದೆ.Tv10 ಕನ್ನಡ ವಾಹಿನಿಯ ಸುದ್ದಿಗೆ ಎಚ್ಚೆತ್ತ ಜಿಲ್ಲಾಡಳಿತ ರಸ್ತೆಯನ್ನ ದುರಸ್ಥುಗೊಳಿಸಿದೆ.ಭಕ್ತರಿಗೆ ಸುಗಮವಾಗಿ ತೆರಳಲು ಅವಕಾಶ ಕಲ್ಪಿಸಿಕೊಡಲಾಗಿದೆ.ಇದು Tv10 ವರದಿಯ ಇಂಪ್ಯಾಕ್ಟ್.ಭೀಮನ ಅಮಾವಾಸ್ಯೆಯಂದು ಸರಗೂರು ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಬೇಲದಕುಪ್ಪೆ ಶ್ರೀಮಹದೇಶ್ವರದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದ್ದಾರೆ.ಅರಣ್ಯ ಪ್ರದೇಶವಾದ ಕಾರಣ ಖಾಸಗಿ ವಾಹನಗಳನ್ನ ನಿರ್ಭಂಧಿಸಿದ್ದು ಸರ್ಕಾರಿ ವಾಹನಗಳ ಸಂಚಾರಕ್ಕೆ ಮಾತ್ರ
Read More