TV10 Kannada Exclusive

ಕೇಂದ್ರ ಕಾರಾಗೃಹಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಿಢೀರ್ ಭೇಟಿ…ಚಾಕು,ನಗದು ಹಣ,ಮೊಬೈಲ್ ಚಾರ್ಜರ್ ಪತ್ತೆ…

ಮೈಸೂರು,ಫೆ6,Tv10 ಕನ್ನಡ ಕೇಂದ್ರ ಕಾರಾಗೃಹಕ್ಕೆ ನಗರ ಪೊಲೀಸ್ ಘಟಕದ ಹಿರಿಯ ಅಧಿಕಾರಿಗಳು ಧಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಗರ ಪೊಲೀಸ್ ಆಯುಕ್ತ ಡಾ.ಬಿ ರಮೇಶ್ ರವರ ಆದೇಶದ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಹಾಗೂ ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರು ಎಸಿಪಿ ಹಾಗೂ ಇನ್ಸ್ಪೆಕ್ಟರ್ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಂದಿಗಳ ಬ್ಯಾರಕ್ ಗಳು ಮತ್ತು ಕಾರಾಗೃಹದ ಒಳಭಾಗ ತಪಾಸಣೆ ನಡೆಸಿದರು.ತಪಾಸಣೆ
Read More

ಸಾಲ ತೀರಿಸಲು ಹಣ ನೀಡದ ಪತ್ನಿಯ ಕತ್ತು ಹಿಸುಕಿ ಕೊಲೆ…ಪತಿ ಅಂದರ್…

ಮೈಸೂರು,ಫೆ6,Tv10 ಕನ್ನಡ ಸಾಲ ತೀರಿಸಲು ಹಣ ನೀಡದ ಪತ್ನಿಯ ಕತ್ತು ಹಿಸುಕಿ ಕೊಂದ ಪತಿರಾಯ ಪೊಲೀಸರ ಅತಿಥಿಯಾಗಿದ್ದಾನೆ.ಮೈಸೂರಿನ ರಾಜೀವ್ ನಗರದಲ್ಲಿ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ನವೀದಾಬಿ ಎಂಬುವರೇ ಪತಿ ಅಕ್ಬರ್ ಆಲಿ ಕೃತ್ಯಕ್ಕೆ ಸಿಲುಕಿ ಕೊಲೆಯಾದವರು. ಮಂಡ್ಯ ಜಿಲ್ಲೆಯ ಅಕ್ಬರ್ ಆಲಿಯನ್ನ ನವೀದಾ ಬಿ 13 ವರ್ಷಗಳ ಹಿಂದೆ ವಿವಾಹವಾಗಿದ್ದರು.ಮೈಸೂರಿನ ರಾಜೀವ್ ನಗರದಲ್ಲಿ ಮೂರು ಮಕ್ಕಳೊಂದಿಗೆ ಸಂಸಾರ ನೆಲೆಸಿತ್ತು.ಮಂಡ್ಯಾದಲ್ಲಿ ಆಟೋ ಓಡಿಸುತ್ತಿದ್ದ ಅಕ್ಬರ್ ಆಲಿಗೆ ಹೃದಯಾಘಾತವಾದ ಹಿನ್ನಲೆ
Read More

ಆನ್ ಲೈನ್ ಬುಸಿನೆಸ್ ಆಫರ್…ಮಹಿಳೆಗೆ 42.80 ಲಕ್ಷ ದೋಖಾ…

ಮೈಸೂರು,ಫೆ6,Tv10 ಕನ್ನಡ ಆನ್ ಲೈನ್ ನಲ್ಲಿ ಬುಸಿನೆಸ್ ಮಾಡುವ ಆಫರ್ ನೀಡಿದ ವಂಚಕನೊಬ್ಬ ಮಹಿಳೆಗೆ 42.80 ಲಕ್ಷ ದೋಖಾ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಚಾಮರಾಜಪುರಂ ನಿವಾಸಿ ಸಂಗೀತಾ ಎಂಬುವರೇ ಹಣ ಕಳೆದುಕೊಂಡ ಮಹಿಳೆ.ಟೆಲಿಗ್ರಾಂ ಆಪ್ ನಲ್ಲಿ ಆನ್ ಲೈನ್ ವ್ಯವಹಾರ ಮಾಡುವುದಾಗಿ ನಂಬಿಸಿದ ವಂಚಕ ಸಂಗೀತಾರಿಂದಚಹಂತಹಂತವಾಗಿ ಹಣ ಪಡೆದು ವಂಚಿಸಿದ್ದಾನೆ.ಒಟ್ಟು 42.80 ಲಕ್ಷ ಕಳೆದುಕೊಂಡ ಸಂಗೀತಾ ರವರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…
Read More

ಪೌತಿಖಾತೆ ಆಗದ ವಾರಸುದಾರರಿಗೆ ಸಂತಸದ ಸುದ್ದಿ…ಮೈಸೂರು ತಾಲೂಕು ವತಿಯಿಂದ ಪೌತಿಖಾತೆ ಆಂದೋಲನ…

ಮೈಸೂರು,ಫೆ5,Tv10 ಕನ್ನಡ ಪೌತಿಖಾತೆ ಆಗದೆ ವಿಳಂಬವಾಗುತ್ತಿರುವ ವಾರಸುದಾರರಿಗೆ ಮೈಸೂರು ತಾಲೂಕು ಆಡಳಿತ ಸಿಹಿ ಸುದ್ದಿ ನೀಡಿದೆ.ಜನವರಿ 22 ರಿಂದ ಪೌತಿಖಾತೆ ಆಂದೋಲನ ಆರಂಭಿಸಿದೆ.ಪೌತಿಖಾತೆ ಆಗದ ವಾರಸುದಾರರಿಗೆ ಸರ್ಕಾರದ ಕೆಲವು ಮಹತ್ತರ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಆಂದೋಲನ ಶುರುಮಾಡಿದೆ.ಪೌತಿಖಾತೆ ವಾರಸುದಾರರು,ಹಕ್ಕುದಾರರು ಸಂಭಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳಿಗೆ ಪೌತಿಖಾತೆ ಕೋರಿ ಅರ್ಜಿ ಜೊತೆಗೆ ಚಾಲ್ತಿ ಸಾಲಿನ ಪಹಣಿ(RTC),ಕಂದಾಯ ಇಲಾಖೆಯಿಂದ ಪಡೆದ RDS ವಂಶವೃಕ್ಷ,ಮೃತಖಾತೆದಾರರ ಮರಣ ಪ್ರಮಾಣ ಪತ್ರ,ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಇನ್ನಿತರ
Read More

ಸಮಾಜ ಸೇವೆಗೆ ಮನಸ್ಸು ಮುಖ್ಯ -ಲಯನ್ ಡಾ .ಎನ್ .ಕೃಷ್ಣೇಗೌಡ*

ಸಮಾಜ ಸೇವೆ ಮಾಡಲು ಮನಸ್ಸು ಬಹಳ ಮುಖ್ಯ, ಒಳ್ಳೆಯ ಮನಸ್ಸಿನಿಂದ ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಆತ್ಮ ತೃಪ್ತಿ ಸಿಗುತ್ತದೆ ಹಾಗೂ ಅವಕಾಶ ವಂಚಿತರಾದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದಾಗ ಅವರನ್ನು ಸಹ ಸಮಾಜದ ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದು ಲಯನ್ಸ್ ಅಂತರಾಷ್ಟ್ರೀಯ 317ಜಿಯ ಜಿಲ್ಲಾ ರಾಜ್ಯಪಾಲರಾದ ಡಾ. ಎನ್ ಕೃಷ್ಣೆಗೌಡ ರವರು ಹೇಳಿದರು. ಅವರು ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಅಧಿಕೃತ ಜಿಲ್ಲಾ ರಾಜ್ಯಪಾಲರ ಭೇಟಿ ಮತ್ತು ಸಂಸ್ಥಾಪನಾ ದಿನಾಚರಣೆಯ
Read More

ಎನ್.ಆರ್.ಪೊಲೀಸರ ಕಾರ್ಯಾಚರಣೆ…ಚಾಲಾಕಿ ಮನೆಗಳ್ಳರ ಬಂಧನ…ನಗದು ಸೇರಿದಂತೆ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮೈಸೂರು,ಫೆ2,Tv10 ಕನ್ನಡ ನರಸಿಂಹರಾಜ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಚಾಲಾಕಿ ಮನೆಗಳ್ಳರು ಸಿಕ್ಕಿಬಿದ್ದಿದ್ದಾರೆ.ಬಂಧಿತರಿಂದ ನಗದು ಸೇರಿದಂತೆ 47.42 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಸೈಯದ್ ಅಯೂಬ್,ಮಹಮದ್ ಮುನ್ನ ಹಾಗೂ ಪ್ರಸಾದ್.ಆ.ಆಸಿಫ್ ಬಂಧಿತರು.ಮತ್ತೋರ್ವ ಆರೋಪಿ ಫಯಾಸ್ ತಲೆ ಮರೆಸಿಕೊಂಡಿದ್ದಾನೆ.ಮೈಸೂರಿನ ಉನ್ನತಿ ನಗರದಲ್ಲಿ ಕಳುವು ಮಾಡಿದ ಚುನ್ನಾಭರಣಗಳನ್ನ ಅರ್ಧ ಬೆಲೆಗೆ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರಿಂದ 832 ಗ್ರಾಂ ಒಡವೆಗಳು 37 ಗ್ರಾಂ ಬೆಳ್ಳಿ ಕಾಯಿನ್ ಗಳು ಹಾಗೂ 1,70,000/-
Read More

ಸುತ್ತೂರು ಜಾತ್ರಾ ಮಹೋತ್ಸವ…ಖಾಕಿ ಹೈ ಅಲರ್ಟ್…

ಸುತ್ತೂರು,ಫೆ5,Tv10 ಕನ್ನಡ ಫೆ.6 ರಿಂದ 11 ರವರೆಗೆ ನಡೆಯಲಿರುವ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ಸುತ್ತೂರು ಶ್ರೀಗಳ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವವನ್ನ ಕಣ್ತುಂಬಿಕೊಳ್ಳಲು ಭಕ್ತರು ಉತ್ಸುಕರಾಗಿದ್ದಾರೆ.6 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗಲಿದ್ದಾರೆ.ಸಾಕಷ್ಟು ಗಣ್ಯರೂ ಸಹ ಪಾಲ್ಗೊಳ್ಳಲಿದ್ದಾರೆ.ಈ ಹಿನ್ನಲೆ ಭದ್ರತೆ ಒದಗಿಸುವುದು ಪೊಲೀಸರ ಆಧ್ಯ ಕರ್ತವ್ಯವೂ ಆಗಿದೆ.ಹೀಗಾಗಿ ಜಾತ್ರಾ ಮಹೋತ್ಸವಕ್ಕೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಜಾತ್ರಾ ಮಹೋತ್ಸವ ಜರುಗುವ ಪ್ರತಿ ಕೇಂದ್ರಗಳಿಗೂ ಭದ್ರತೆ
Read More

ಹೆಚ್ಚು ಲಾಭದ ಆಮಿಷ…7 ಲಕ್ಷಕ್ಕೆ ಪಂಗನಾಮ…

ಮೈಸೂರು,ಫೆ4,Tv10 ಕನ್ನಡ ಹೂಡಿಕೆ ಹಣಕ್ಕೆ ಹೆಚ್ಚು ಲಾಭಾಂಶ ನೀಡುವ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ವಂಚಿಸಿರುವ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ವಿಜಯನಗರ ಬಡಾವಣೆ ನಿವಾಸಿ ಆದರ್ಶ್ ಅರಸ್ ಹಣ ಕಳೆದುಕೊಂಡವರು.ಸ್ನೇಹಿತರೊಬ್ಬರ ಸಲಹೆ ಮೇರೆಗೆ ಎಲ್ಲಿ ಲಿಲ್ಲಿ ಎಂಬ ಕಂಪನಿಯಲ್ಲಿ ಹಣ ಹೂಡಿದ್ದಾರೆ.ಪ್ರಾರಂಭದಲ್ಲಿ 540/- ರೂ ಪಾವತಿಸಿ ನೊಂದಣಿ ಮಾಡಿಕೊಂಡಿದ್ದಾರೆ.ವಾಟ್ಸಾಪ್ ಗ್ರೂಪ್ ನಲ್ಲಿ ಲಿಂಕ್ ಕಳುಹಿಸಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.ಹೂಡಿಕೆ ಹಣಕ್ಕೆ ದಿನ ಶೇ 3%ರಿಂದ 10
Read More

ಗಂಡನ ಅಕ್ರಮ ಸಂಭಂಧ ವಿಡಿಯೋ ತೆಗೆಯಲು ಯತ್ನಿಸಿದ ಪತ್ನಿ…ಕಾರಿನಿಂದ ಢಿಕ್ಕಿ ಹೊಡೆದು ಪ್ರಿಯಕರಳ ಜೊತೆ ಎಸ್ಕೇಪ್ ಆದ ಪತಿ…

ಮೈಸೂರು,ಫೆ4,Tv10 ಕನ್ನಡ ಪರಸ್ರ್ತೀಯೊಂದಿಗೆ ಅಕ್ರಮ ಸಂಭಂಧ ಇರಿಸಿಕೊಂಡ ಪತಿಯ ವಿಡಿಯೋ ತೆಗೆಯಲು ಹೋದ ಪತ್ನಿ ಮೇಲೆ ಕಾರಿನಿಂದ ಢಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿ ಹಾಗೂ ಪ್ರಿಯಕರಳ ಮೇಲೆ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕೆಸಿ ಲೇಔಟ್ ನಿವಾಸಿಯಾದ ಪತ್ನಿ ವಿಜಯನಗರದ ಸುದೀಪ್ ಎಂಬುವರನ್ನ ವಿವಾಹವಾಗಿದ್ದಾರೆ.ಕಳೆದ ಮೂರು ವರ್ಷಗಳಿಂದ ಸುದೀಪ್ ಪರಸ್ತ್ರೀಯೊಂದಿಗೆ ಅಕ್ರಮ ಸಂಭಂಧ ಬೆಳೆಸಿದ್ದಾರೆ.ಈ ಕುರಿತಂತೆ ಪತ್ನಿ ಸುದೀಪ್ ವಿರುದ್ದ ಜಯಲಕ್ಷ್ಮಿಪುರಂ
Read More

ಹೋಟೆಲ್ ಕೊಠಡಿ ಬಾಡಿಗೆ ಕಟ್ಟದೆ ಗಿರಾಕಿ ಎಸ್ಕೇಪ್…ಸದರನ್ ಸ್ಟಾರ್ ಹೋಟೆಲ್ ಗೆ ವಂಚನೆ…

ಮೈಸೂರು,ಫೆ4,Tv10 ಕನ್ನಡ ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಐಷಾರಾಮಿ ಸದರನ್ ಸ್ಟಾರ್ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ಹಣ ಪಾವತಿಸದೆ ಗ್ರಾಹಕನೊಬ್ಬ ವಂಚಿಸಿ ಎಸ್ಕೇಪ್ ಆದ ಪ್ರಕರಣ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹಾಸನ ತಾಲೂಕು ಚೆನ್ನರಾಯಪಟ್ಟಣ ತಾಲೂಕಿನ ರಂಜನ್ ಎಂಬಾತನ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.ಹೋಟೆಲ್ ನ ಮ್ಯಾನೇಜರ್ ಕರಿಯಪ್ಪ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ರಂಜನ್ ಸದರನ್ ಸ್ಟಾರ್ ಹೋಟೆಲ್ ಹಳೇ ಗ್ರಾಹಕ.2021 ರಿಂದ ಆಗಾಗ ಬಂದು ತಿಂಗಳುಗಳ
Read More