TV10 Kannada Exclusive

ಅಪ್ರಾಪ್ತ ಬೈಕ್ ಚಾಲನೆ…25 ಸಾವಿರ ದಂಡ ವಸೂಲಿ…ಗದಗ್ ನ್ಯಾಯಾಲಯದ ಆದೇಶದ ಮೇರೆಗೆ ಫೈನ್…

ಗದಗ್,ಜ9,Tv10 ಕನ್ನಡ ಅಪ್ರಾಪ್ತರಿಗೆ ಬೈಕ್ ಚಾಲನೆಗೆ ಅವಕಾಶ ನೀಡುವ ಪೋಷಕರೇ ಎಚ್ಚರ ಸಿಕ್ಕಿಬಿದ್ದಲ್ಲಿ ಭಾರಿ ದಂಡ ಕಟ್ಟಬೇಕಾದ್ದು ಗ್ಯಾರೆಂಟಿ.ಗದಗ್ ನ್ಯಾಯಾಲಯ ಇಂತಹ ಒಂದು ಪ್ರಕರಣದಲ್ಲಿ 25 ಸಾವಿರ ದಂಡ ವಸೂಲಿ ಮಾಡಿದೆ.ಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ಪರಿಣಾಮ ತಂದೆ ವಿ.ಬಿ.ಬಿನ್ನಲ್ ಎಂಬುವರಿಂದ ನ್ಯಾಯಾಲಯ ಮುಲಾಜು ನೋಡದೆ 25 ಸಾವಿರ ದಂಡ ವಸೂಲಿ ಮಾಡಿದೆ…
Read More

ಮೈಸೂರು:ಮುದುಕನ ಮದುವೆ ನಾಟಕ ಪ್ರದರ್ಶನ…ರಕ್ತದಾನಿ,ರಂಗಭೂಮಿ ಕಲಾವಿದರಿಗೆ ಸನ್ಮಾನ…

ಮೈಸೂರು:ಮುದುಕನ ಮದುವೆ ನಾಟಕ ಪ್ರದರ್ಶನ…ರಕ್ತದಾನಿ,ರಂಗಭೂಮಿ ಕಲಾವಿದರಿಗೆ ಸನ್ಮಾನ… ಮೈಸೂರು,ಜ9,Tv10ಕನ್ನಡ ದಿ.ಪಿ.ಬಿ.ರೈ ಬೆಳ್ಳಾರೆ ಅವರ ಸವಿ ನೆನಪಿನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಯೋಗದೊಂದಿಗೆ, ಮಂಗಳೂರಿನ ಶ್ರೀ ನಂದಿ ಕೇಶ್ವರ ನಾಟಕ ಸಂಘದ ೪೧ನೇ ವರ್ಷದ ಸಂಭ್ರ ಮದ ಅಂಗವಾಗಿ ಮೈಸೂರಿನ ಪುರಭವನದ ಆವರಣದಲ್ಲಿ ಇಂದು ‘ಮುದುಕನ ಮದುವೆ’ ಹಾಸ್ಯಮಯ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.ದಿ.ಪಿ.ಬಿ.ದುತ್ತರಗಿ ವಿರಚಿತ ಈ ನಾಟಕವನ್ನು ತಂಡದ ಬಿ.ಮಲ್ಲಿಕಾರ್ಜುನ(ಹೊಸದುರ್ಗ), ಯಶಸ್ವಿನಿ ಲೋಕೇಶ್ವರ(ಮಂಡ್ಯ), ಶರತ್ ತಾಲೂರು(ಬಳ್ಳಾರಿ), ಜಯರಾಮ್ (ಮಂಡ್ಯ),
Read More

ದತ್ತ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಗೆ ಸಿದ್ದತೆ…ಬೆಳಿಗ್ಗೆ 6 ಗಂಟೆಗೆ ಉತ್ತರ ಧ್ವಾರ ದರುಶನ…

ಮೈಸೂರು,ಜ9,Tv10 ಕನ್ನಡ ವೈಕುಂಠ ಏಕಾದಶಿ ಅಂಗವಾಗಿ ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಶ್ರೀದತ್ತ ವೆಂಕಟೇಶ್ವರ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಉತ್ತರ ಧ್ವಾರ ದರುಶನ ಏರ್ಪಡಿಸಲಾಗಿದೆ.ಬೆಳಿಗ್ಗೆ 6 ರಿಂದ ಮಧ್ಯಾಹ್ನ 2.30 ಹಾಗೂ 3 ಗಂಟೆಯಿಂದ ರಾತ್ರಿ 9 ರವರೆಗೆ ದರುಶನ ವ್ಯವಸ್ಥೆ ಏರ್ಪಡಿಸಲಾಗಿದೆ.ಆಶ್ರಮದ ಮುಖ್ಯ ಧ್ವಾರದಿಂದ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
Read More

ಆಸ್ತಿವಿವಾದ…ಕಚೇರಿಗೆ ನುಗ್ಗಿ ಗೂಂಡಾ ವರ್ತನೆ…ಪೀಠೋಪಕರಣಗಳು ಲೂಟಿ…50 ಮಂದಿ ವಿರುದ್ದ FIR ದಾಖಲು…

ಮೈಸೂರು,ಜ8,Tv10 ಕನ್ನಡ ಆಸ್ತಿ ವಿವಾದ ಹಿನ್ನಲೆ 40 ರಿಂದ 50 ಮಂದಿ ಕಚೇರಿಗೆ ನುಗ್ಗಿ ಗೂಂಡಾಗಳಂತೆ ವರ್ತಿಸಿ ಸಿಸಿ ಕ್ಯಾಮರಾ,ಗೇಟ್ ಗಳನ್ನ ಮುರಿದು ಮ್ಯಾನೇಜರ್ ಮೇಲೆ ಹಲ್ಲೆಗೆ ಯತ್ನಿಸಿ ಪೀಠೋಪಕರಣಗಳೊಂದಿಗೆ ಪರಾರಿಯಾದ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಸಂಭಂಧ ಕಂಪನಿ ಮ್ಯಾನೇಜರ್ ಸಂದೀಪ್ ಎಂಬುವರು ಅಕ್ಷಯ್ ಎಂಬಾತ ಸೇರಿದಂತೆ 50 ಮಂದಿ ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡೆಸಿಫರ್ ಹೆಲ್ತ್ ರೆಕಾರ್ಡ್ ಕಂಪನಿಯು ಸರ್ವೆ
Read More

ಠಾಣೆ ಕ್ಯಾಂಟೀನ್ ನಲ್ಲಿ ಬರ್ತ್ ಡೇ ಪಾರ್ಟಿ…ದುರುಪಯೋಗವಾಗುತ್ತಿದ್ರೂ ಕೇಳುವವರಿಲ್ಲ…!!

ನಂಜನಗೂಡು,ಜ8,Tv10 ಕನ್ನಡ ಠಾಣೆ ಆವರಣದಲ್ಲಿರುವ ಕ್ಯಾಂಟೀನ್ ನಲ್ಲಿ ಖಾಸಗಿ ವ್ಯಕ್ತಿಗಳು ಬರ್ತ್ ಡೇ ಪಾರ್ಟಿ ಆಚರಿಸುವ ಮೂಲಕ ಸರ್ಕಾರದ ಜಾಗವನ್ನ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ.ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಸೇರಿದ ಕ್ಯಾಂಟೀನ್ ದುರುಪಯೋಗವಾಗುತ್ತಿರುವ ಆರೋಪ ಕೇಳಿ ಬಂದಿದೆ.ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಠಾಣೆಗೆ ಬರುವ ಸಾರ್ವಜನಿಕರಿಗೆ ಉಪಯೋಗವಾಗಲೆಂದು ಈ ಕ್ಯಾಂಟೀನ್ ತೆರೆಯಲಾಗಿದೆ.ಖಾಸಗಿ ವ್ಯಕ್ತಿಯೊಬ್ಬ ಗುತ್ತಿಗೆ ಪಡೆದು ಕ್ಯಾಂಟೀನ್ ನಡೆಸುತ್ತಿದ್ದಾನೆ.ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಕಾರ್ಯಕ್ರಮಗಳನ್ನ ನಡೆಸಬಾರದೆಂದ ನಿಯಮಗಳಿವೆ.ಆದ್ರೆ
Read More

ನಜರಬಾದ್ ಠಾಣೆ ಪೊಲೀಸರ ಕಾರ್ಯಾಚರಣೆ…ದ್ವಿಚಕ್ರ ವಾಹನ ಕಳ್ಳನ ಬಂಧನ…7 ಲಕ್ಷ ಮೌಲ್ಯದ 12 ವಾಹನ ವಶ…

ಮೈಸೂರು,ಜ8,Tv10 ಕನ್ನಡ ದ್ವಿಚಕ್ರವಾಹನಗಳನ್ನ ಕಳುವು ಮಾಡುತ್ತಿದ್ದ ಓರ್ವ ಖದೀಮನನ್ನ ಬಂಧಿಸುವಲ್ಲಿ ನಜರಬಾದ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 7 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ.ನಂಜನಗೂಡಿನ ಕಾರ್ತಿಕ್ (21) ಬಂಧಿತ ಆರೋಪಿ.ಈ ಮೂಲಕ ನಜರಬಾದ್ ಠಾಣಾ ವ್ಯಾಪ್ತಿಯ 5,ಆಲನಹಳ್ಳಿ ಪೊಲೀಸ್ ಠಾಣೆಯ 4,ಕೆ.ಆರ್.ಪೊಲೀಸ್ ಠಾಣೆಯ 1,ನಂಜನಗೂಡು ಠಾಣೆಯ 1 ಪ್ರಕರಣಗಳು ಪತ್ತೆಯಾದಂತಾಗಿದೆ.ಆರೋಪಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು ಕಳ್ಳತನಕ್ಕೆ ಇಳಿದಿದ್ದ.ನಕಲಿ ಕೀ ಬಳಸಿ ವಾಹನಗಳನ್ನ ಕಳುವು ಮಾಡುತ್ತಿದ್ದ.ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳನ್ನ ಗಿರವಿ
Read More

ಜೈಲಿನಲ್ಲಿ ಬೇಕರಿ ಎಸೆನ್ಸ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣ…ಮತ್ತೊಬ್ಬ ಖೈದಿ ಸಾವು…ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ…

ಮೈಸೂರು,ಜ8,Tv10 ಕನ್ನಡ ಬೇಕರಿ ಎಸ್ಸೆನ್ಸ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮೂವವರು ಖೈದಿಗಳು ಸಾವನ್ನಪ್ಪಿದ್ದಾರೆ.ನಿನ್ನೆ ಓರ್ವ ಸಾವನ್ನಪ್ಪಿದ್ದು ಇಂದು ಬೆಳಿಗ್ಗೆ ಮತ್ತೊಬ್ಬ ಖೈದಿ ಸಾವನ್ನಪ್ಪಿದ್ದರು ಇದೀಗ ಮೂರನೇ ಖೈದಿ ರಮೇಶ್ ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಮೂವರು ಖೈದಿಗಳು ಸಾವನ್ನಪ್ಪಿದ್ದಾರೆ.ಖೈದಿಗಳ ಸಾವಿನ ಹಿನ್ನಲೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ.ಮೂವರು ಖೈದಿಗಳೂ ಸಹ ಸಜಾ ಶಿಕ್ಷೆವಾನುಭವಿಸುತ್ತಿದ್ದವರು ಎಂದು ಹೇಳಲಾಗಿದೆ.ವಿಷಕಾರಿಕ ಅಂಶದ ವಸ್ತುಗಳನ್ನ ಖೈದಿಗಳಿಗೆ ಸುಲಭವಾಗಿ ಸಿಗುವಂತ ವ್ಯವಸ್ಥೆ ಬಗ್ಗೆ ಅನುಮಾನಗಳು
Read More

ಮತ್ತೊಬ್ಬ ಖೈದಿ ಸಾವು…ಮೃತರ ಸಂಖ್ಯೆ ಎರಡಕ್ಕೆ ಏರಿಕೆ…ಮತ್ತೋರ್ವನ ಸ್ಥಿತಿ ಗಂಭೀರ…

ಮೈಸೂರು,ಜ8,Tv10 ಕನ್ನಡ ಬೇಕರಿ ಎಸೆನ್ಸ್ ಸೇವಿಸಿ ಆಸ್ಪತ್ರೆ ಸೇರಿದ್ದ ಮೂವರು ಖೈದಿಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.ನಿನ್ನೆ ಓರ್ವ ಸಾವನ್ನಪ್ಪಿದ್ದು ಇಂದು ಮುಂಜಾನೆ ಮತ್ತೋರ್ವ ಖೈದಿ ಸಾವನ್ನಪ್ಪಿದ್ದಾನೆ.ಇನ್ನೊಬ್ಬ ಖೈದಿಯ ಸ್ಥಿತಿ ಸಹ ಗಂಭೀರ ಎಂದು ಹೇಳಲಾಗಿದೆ.ಚಾಮರಾಜನಗರದ ನಾಗರಾಜು ಮೃತ ಖೈದಿ.ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಕುಡಿದು ಅಸ್ವಸ್ಥರಾಗಿದ್ದ ಮೂವರು ಕೈದಿಗಳನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ನಿನ್ನೆಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತಪಟ್ಟಿದ್ದ.ರಮೇಶ್ ಹಾಗೂ ನಾಗರಾಜ್ ಸ್ಥಿತಿ ಗಂಭೀರವಾಗಿತ್ತು.ಕಿಕ್‌ಗಾಗಿ ಎಸೆನ್ಸ್ ಕುಡಿದಿದ್ದ ಮೂವರು.ಹೊಸವರ್ಷದ ಕೇಕ್
Read More

ಸಂಚಾರಿ ನಿಯಮ ಉಲ್ಲಂಘನೆ…ದಂಡ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ…ನೊಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿದ ಭೂಪ…

ಮೈಸೂರು,ಜ7,Tv10 ಕನ್ನಡ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದಾಗ ದಂಡ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ ಹಾಕಿದ ಯುವಕನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.ಬೈಕ್ ನೊಂದಣಿ ಸಂಖ್ಯೆ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿ ಪೊಲೀಸರನ್ನೇ ಯಾಮಾರಿಸಲು ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾನೆ.ವಾಹನವನ್ನ ವಶಪಡಿಸಿಕೊಂಡ ವಿವಿ ಪುರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಸರೆ ಬಡಾವಣೆ ನಿವಾಸಿ ಮೊಹಮದ್ ಮುಜಾಹಿಲ್ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಐನಾತಿ.ನೊಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿದ ರಾಯಲ್ ಎನ್ಫೀಲ್ಡ್ ಇದೀಗ ವಿವಿಪುರಂ ಠಾಣೆ
Read More

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ…

ಕೆ.ಆರ್.ನಗರ,ಜ7,Tv10 ಕನ್ನಡ ಕೊಟ್ಟ ಸಾಲ ವಾಪಸ್ ಕೇಳಿದ ವ್ಯಕ್ತಿಯನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಂದ ಘಟನೆಕೆ.ಆರ್ ನಗರ ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.ಚಂದ್ರಹಾಸ ಕೊಲೆಯಾದ ವ್ಯಕ್ತಿ.ಪಾಪಣ್ಣ ಮತ್ತು ಇತರರು ಕೊಲೆ ಮಾಡಿದ್ದಾರೆ.ಪಾಪಣ್ಣ ಪಕ್ಕದ ಸಿದ್ದನಕೊಪ್ಪಲು ಗ್ರಾಮದ ವ್ಯಕ್ತಿ.ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read More