ತಂದೆ ಸಾವಿಗಾಗಿ ಮನೆಗೆ ಬಂದ ಡಾಟರ್…ಒಡವೆ ಕ್ಯಾಶ್ ಸಮೇತ ಎಸ್ಕೇಪ್…
- CrimeMysore
- July 2, 2023
- No Comment
- 76
ಮೈಸೂರು,ಜು2,Tv10 ಕನ್ನಡ
ತಂದೆ ಸಾವಿನ ಹಿನ್ನಲೆ ಮನೆಗೆ ಬಂದಿದ್ದ ಮಗಳು ಒಡವೆ ನಗದು ಸಮೇತ ಎಸ್ಕೇಪ್ ಆಗಿರುವ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶಿಲ್ಪ ಎಂಬಾಕೆ ಒಡವೆ ಹಾಗೂ ನಗದು ಸಮೇತ ಪರಾರಿಯಾದವಳು.ತಂದೆ ಕೆಂಡಗಣ್ಣಸ್ವಾಮಿ ಎಂಬುವರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.7 ತಿಂಗಳ ಹಿಂದೆ ಸಂಭಂಧಿಕರಲ್ಲೇ ಒಬ್ಬರಾದ ರವೀಂದ್ರ ಎಂಬುವರ ಜೊತೆ ಶಿಲ್ಪ ವಿವಾಹವಾಗಿತ್ತು.ಇಷ್ಟವಿಲ್ಲದ ಮದುವೆ ಆದ್ದರಿಂದ ಶಿಲ್ಪಆಗಾಗ ಗಂಡನ ತೊರೆದು ಬರುತ್ತಿದ್ದಳು.ಏಪ್ರಿಲ್ ತಿಂಗಳಲ್ಲಿ ತಾತ ಪುಟ್ಟಾಚಾರಿ ನಿಧನರಾಗಿದ್ದಾರೆ.ಈ ವೇಳೆ ತಂದೆ ಮನೆಗೆ ಬಂದ ಶಿಲ್ಪ ಕೆಲವೇ ದಿನಗಳಲ್ಲಿ ಪುನೀತ್ ಶೆಟ್ಟಿ ಎಂಬಾತನ ಜೊತೆ ಓಡಿಹೋಗಿದ್ದಾಳೆ.ನಂತರ ಮನೆಗೆ ಹಿಂದಿರುಗಿದ ಶಿಲ್ಪ ಕೆಲವೇ ದಿನಗಳಲ್ಲಿ ಒಡವೆ ಮತ್ತು ನಗದು ಸಮೇತ ತಂದೆ ಕೆಂಡಗಣ್ಣಸ್ವಾಮಿ ಮನೆಯಿಂದ ನಾಪತ್ತೆಯಾಗಿದ್ದಾಳೆ.ಮಗಳನ್ನ ಪತ್ತೆ ಹಚ್ಚಿಕೊಡುವಂತೆ ಕೆಂಡಗಣ್ಣಸ್ವಾಮಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ…