ಪತ್ನಿಯ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟ ಪತಿ…ನ್ಯಾಯಕ್ಕಾಗಿ ಸೆನ್ ಪೊಲೀಸರ ಮೊರೆ…
- CrimeMysore
- July 2, 2023
- No Comment
- 92
ಮೈಸೂರು,ಜ2,Tv10 ಕನ್ನಡ
ಹೆಂಡತಿ ಮೇಲಿನ ಸಿಟ್ಟು ತೀರಿಸಿಕೊಳ್ಳಲು ಪತಿರಾಯ ಖಾಸಗಿ ಹಾಗೂ ಅರೆನಗ್ನ ಫೋಟೋಗಳನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರ ನಿವಾಸಿ ಉಮ್ಮೆಹನಿ ಎಂಬುವರು ಪತಿ ಅಬ್ದುಲ್ ಸಲೀಂ ಎಂಬುವರ ವಿರುದ್ದ ದೂರು ದಾಖಲಿಸಿದ್ದಾರೆ.10 ತಿಂಗಳ ಹಿಂದೆ ಅಬ್ದುಲ್ ಸಲ ಎಂಬುವರನ್ನ ವಿವಾಹವಾಗಿದ್ದ ಉಮ್ಮೆಹನಿ ಕಾರಣಾಂತರದಿಂದ ಬೇರೆಯಾಗಿದ್ದಾರೆ.ದಂಪತಿ ಅನ್ಯೋನ್ಯವಾಗಿದ್ದ ವೇಳೆ ಅಬ್ದುಲ್ ಸಲೀ ಖಾಸಗಿ ಫೋಟೋಗಳನ್ನ ತೆಗೆದಿದ್ದಾರೆ.ಇಬ್ಬರೂ ಬೇರೆಯಾದ ನಂತರ ಪತ್ನಿಯ ಖಾಸಗಿ ಹಾಗೂ ಅರೆನಗ್ನ ಫೋಟೋಗಳನ್ನ ಟ್ವಿಟರ್ ನಲ್ಲಿ ಒನ್ ಟೈಂ ವ್ಯೂ ನಲ್ಲಿ ಸೆಂಡ್ ಮಾಡಿ ಡಿಲೀಟ್ ಮಾಡಿದ್ದಾರೆ.ಅಲ್ಲದೆ ಸ್ನೇಹಿತರ ವಾಟ್ಸಾಪ್ ಗಳಿಗೂ ಸೆಂಡ್ ಮಾಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾಸಗಿ ಹಾಗೂ ಅರೆನಗ್ನ ಫೋಟೋಗಳನ್ನ ಹರಿದು ಬಿಟ್ಟು ತಮ್ಮ ಘನತೆಗೆ ಧಕ್ಕೆ ತಂದ ಪತಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಉಮ್ಮೆಹನಿ ದೂರು ದಾಖಲಿಸಿದ್ದಾರೆ…