*ವಿದ್ಯಾರ್ಥಿ ಜೀವನ ಮಹತ್ವ ಪೂರ್ಣವಾದ ಹಂತ- ಡಿ ಆರ್ ರಮೇಶ್
- TV10 Kannada Exclusive
- July 21, 2023
- No Comment
- 59
KR ಪೇಟೆ TV10 ಕನ್ನಡ.ವಿದ್ಯಾರ್ಥಿ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಮಹತ್ವವಾದ ಹಂತ .ಈ ಹಂತದಲ್ಲಿ ಶಿಸ್ತು, ಸಂಯಮ, ವಿಧೇಯತೆ , ಕಲಿಕೆ, ಮುಂತಾದ ಉದಾತ್ತ ಮೌಲ್ಯ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಂತಹ ವಿದ್ಯಾರ್ಥಿಗಳು ಉನ್ನತ ಹಂತಕ್ಕೆ ಹೋಗಲು ಸಾಧ್ಯ ಎಂದು ಶ್ರೀ ಡಿ ಆರ್ ರಮೇಶ್ ಹಿರಿಯ ಉಪನ್ಯಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಬಡ್ತಿ ಉಪನ್ಯಾಸಕರ ಸಂಘ ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಲ್ಲೇನಹಳ್ಳಿ ಕೆ.ಆರ್ ಪೇಟೆ ಈ ಕಾಲೇಜಿನ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ ಎಸ್ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಸಾಧಕರೆಲ್ಲರೂ ಪರಿಶ್ರಮದ ಮೂಲಕ ಸಾಧಕರಾಗಿದ್ದಾರೆ ಹಾಗಾಗಿ ವಿದ್ಯಾರ್ಥಿಗಳು ಶ್ರಮವಹಿಸಿದರೆ ಅದಕ್ಕೆ ಪ್ರತಿಫಲ ಖಂಡಿತವಾಗಿಯೂ ಸಿಗುತ್ತದೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಕಾಲೇಜಿನ ಪ್ರಾಂಶುಪಾಲರಾದ ಲಯನ್ ದಿನೇಶ್ ರವರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರಹಾಕಲು ಇಂತಹ ಸಾಂಸ್ಕೃತಿಕ ಸಂಘಗಳಿಂದ ಮಾತ್ರ ಸಾಧ್ಯ ಹಾಗಾಗಿ ವಿದ್ಯಾರ್ಥಿಗಳು ಈ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ,ಎಸ್ ರಾಮು ಉಪನ್ಯಾಸಕರಾದ ಹೆಚ್ .ಎನ್ .ರಂಗರಾಜು ,ಜೆ.ಜಿ. ರಾಜೇಗೌಡ ,ಬೃಂದಾ ವೀಣಾ ಆರ್ ,ಚೈತ್ರ ,ಶೃತಿ ,ಶ್ರೀಕಾಂತ್ ಉಪಸ್ಥಿತರಿದ್ದರು,
ಪ್ರಾರ್ಥನೆ ಸಿಂಧು, ಸ್ವಾಗತ ಶೋಭಿತ, ವಂದನಾರ್ಪಣೆ ಮಹಾಲಕ್ಷ್ಮಿ ಕಾರ್ಯಕ್ರಮದ ನಿರೂಪಣೆಯನ್ನು ರಕ್ಷಿತಾ ಮಾಡಿದರು.