ಲಷ್ಕರ್ ಠಾಣೆ ಪೊಲೀಸರ ಕಾರ್ಯಾಚರಣೆ…ಸರಗಳ್ಳಿಯ ಬಂಧನ…3.90 ಲಕ್ಷ ಮೌಲ್ಯದ ಚಿನ್ನದ ಸರ ವಶ…
ಮೈಸೂರು,ಡಿ6,Tv10 ಕನ್ನಡ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮಹಿಳೆಯರ ಚಿನ್ನದ ಸರ ಕಳುವು ಮಾಡುತ್ತಿದ್ದ ಸರಗಳ್ಳಿಯನ್ನ ಬಂಧಿಸುವಲ್ಲಿ ಲಷ್ಕರ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತಳಿಂದ 3.90 ಲಕ್ಷ ಮೌಲ್ಯದ ಒಟ್ಟು 54 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನ ವಶಪಡಿಸಿಕೊಂಡಿದ್ದಾರೆ.ಕೆ.ಆರ್.ನಗರ ಮೂಲದ ಲತಾ ಸಿಕ್ಕಿಬಿದ್ದ ಸರಗಳ್ಳಿ. ಇತ್ತೀಚೆಗೆ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸರಗಳ್ಳತನ ಪ್ರಕರಣ ನಡೆದಿತ್ತು.ಆರೋಪಿಯ ಬಂಧನಕ್ಕೆ ಲಷ್ಕರ್ ಠಾಣೆ ಪೊಲೀಸರು ತಂಡ ರಚಿಸಿದ್ದರು.ಗ್ರಾಮಾಂತರ ಬಸ್ ನಿಲ್ದಾಣದಲ್ಲೇ ಸಿಕ್ಕಿಬಿದ್ದ ಆರೋಪಿ
Read More