TV10 Kannada Exclusive

ಮೊದಲ ಟಾಸ್ಕ್ ಗೆ 800 ಕಮೀಷನ್ ಬಂತು..ಎರಡನೇ ಟಾಸ್ಕ್ ಗೆ 2300 ಬಂತು…ಕೊನೆಗೆ 11.10 ಲಕ್ಷಕ್ಕೆ ಉಂಡೆನಾಮ ಬಿತ್ತು…

ಮೈಸೂರು,ಮಾ1,Tv10 ಕನ್ನಡ ರಿವ್ಯೂಸ್ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಲಾಭ ನೀಡುವುದಾಗಿ ನಂಬಿಸಿ ಟೆಕ್ಕಿಯೊಬ್ಬರು 11.10 ಲಕ್ಷ ಕಳೆದುಕೊಂಡಿದ್ದಾರೆ.ವಂಚಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಜಯನಗರ ಬಡಾವಣೆ 2 ನೇ ಹಂತದ ನಿವಾಸಿ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಗ್ರಾಂಧಿ ವಂಚನೆಗೆ ಒಳಗಾದವರು.ಪ್ರಾರಂಭದಲ್ಲಿ ಸ್ಥಳಗಳ ಬಗ್ಗೆ ರಿವ್ಯೂಸ್ ಹಾಕುವ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಕಮೀಷನ್ ನೀಡುವುದಾಗಿ ನಂಬಿಸಿದ್ದಾನೆ.ಗೂಗಲ್ ನಲ್ಲಿ ಮೂರು ಸ್ಥಳಗಳಿಗೆ ರಿವ್ಯೂಸ್ ಹಾಕಿದಾಗ 150 ರೂ ಕಮೀಷನ್
Read More

ಲವ್ ಮ್ಯಾಟರ್…ಹಳೆ ಲವರ್ ನಿಂದ ಹೊಸ ಲವರ್ ಕಿಡ್ನಾಪ್…ನನ್ ಹುಡುಗಿ ಸಹವಾಸಕ್ಕೆ ಬರಬೇಡ ಹುಷಾರ್…ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿ ಟಾರ್ಚರ್…5

ಮೈಸೂರು,ಮಾ1,Tv10 ಕನ್ನಡ ಹುಡುಗಿ ಲವ್ ವಿಚಾರದಲ್ಲಿ ಹಳೇ ಲವರ್ ಹೊಸ ಲವರ್ ನ ಬಲವಂತವಾಗಿ ಕರೆದೊಯ್ದು ಅಕ್ರಮವಾಗಿ ಬಂಧಿಸಿಟ್ಟು ಸ್ನೇಹಿತರೊಂದಿಗೆ ಸೇರಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿ ಬಿಡುಗಡೆ ಮಾಡಿದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಸಂಭಂಧ ಹಲ್ಲೆಗೊಳಗಾದ ಯುವತಿಯ ಹೊಸ ಲವರ್ ಹಳೇ ಲವರ್ ಸೇರಿದಂತೆ 5 ಮಂದಿ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ಗೋಕುಲಂ ನ ಖಾಸಗಿ ಬಿಪಿಓ
Read More

RBI ನಲ್ಲಿ ಚಿರತೆ ಸೆರೆ…20 ದಿನಗಳ ಕಾಲ ನಡೆದ ಕಾರ್ಯಾಚರಣೆ ಯಶಸ್ವಿ…

ಮೈಸೂರು,ಫೆ28,Tv10 ಕನ್ನಡ ಇನ್ಫೋಸಿಸ್ ನಲ್ಲಿ ಚಿರತೆ ಭೀತಿ ಮಾಸುವ ಮುನ್ನ ನೋಟು ಮುದ್ರಣಾಲಯದಲ್ಲಿ ಸೆರೆ ಸಿಕ್ಕಿದೆ.20 ದಿನಗಳ ಕಾಲ ನಡೆದಿದ ಕಾರ್ಯಾಚರಣೆ ಯಶಸ್ವಿಯಾಗಿದೆ.RBI ಆವರಣದಲ್ಲಿ ಚಿರತೆ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ ಮ್ಯಾನೇಜ್ ಮೆಂಟ್ ನವರು ಅರಣ್ಯ ಇಲಾಖೆಗೆ ದೂರು ನೀಡಿ ಸೆರೆ ಹಿಡಿಯುವಂತೆ ಮನವಿ ಸಲ್ಲಿಸಿದ್ದರು.20 ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು.ನಾಲ್ಕು ಸ್ಥಳಗಳಲ್ಲಿ ಬೋನು ಇರಿಸಲಾಗಿತ್ತು.ವಲಯ ಅರಣ್ಯಾಧಿಕಾರಿಗಳು,ಉಪ ವಲಯ ಅರಣ್ಯಾಧಿಕಾರಿಗಳು,ವನಪಾಲಕರು ಹಾಗೂ ಚಿರತೆ ಸಹಾಯಕ ಕಾರ್ಯಪಡೆ ಒಳಗೊಂಡಂತೆ
Read More

ರಾಜ್ಯದಲ್ಲೂ ಶಿಂಧೆ ಮೇನಿಯಾ ಶುರುವಾಗಲಿದೆ…ಡಿಕೆಶಿ ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ ಮಾಜಿ ಸಚಿವ ಶ್ರೀರಾಮುಲು…

ಮೈಸೂರು,ಫೆ28,Tv10 ಕನ್ನಡ ಡೆಪ್ಯೂಟಿ ಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ತೊರೆಯುವ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಮೈಸೂರಿನಲ್ಲಿ ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.ರಾಜಕಾರಣ ನಿಂತ ನೀರಲ್ಲ ಹರಿಯುತ್ತಿರುವ ನೀರಿನಂತೆ.ಕೆಲ ಕ್ಷಿಪ್ರ ಬೆಳವಣಿಗೆಗಳನ್ನ ರಾಜಕಾರಣದಲ್ಲಿ ನೋಡುತ್ತೇವೆ.ವೀರೇಂದ್ರ ಪಾಟೀಲ್ ರನ್ನ ಯಾವ ರೀತಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ನೋಡಿದ್ದೀವಿ.ಅರಸು ರನ್ನ ಇಳಿಸಿದ್ದನ್ನು ಕಂಡಿದ್ದೇವೆ.ಆ ರೀತಿಯ ಬೆಳವಣಿಗೆ ರಾಜ್ಯದಲ್ಲೂ ಆಗುವ ಲಕ್ಷಣಗಳಿವೆ.ಕರ್ನಾಟದಲ್ಲೂ ಇನ್ನೊಂದು ಶಿಂಧೆ ಮೇನಿಯ
Read More

ಪೆರೋಲ್ ನಲ್ಲಿ ಬಿಡುಗಡೆಯಾದ 3 ಖೈದಿಗಳು…ಓರ್ವ ಆತ್ಮಹತ್ಯೆ…ಮತ್ತೊಬ್ಬ ಒರಿಸ್ಸಾದಲ್ಲಿ ಅಂದರ್…ಮತ್ತೊಬ್ಬ ನಾಪತ್ತೆ…

ಮೈಸೂರು,ಫೆ27,Tv10 ಕನ್ನಡ ಪೆರೋಲ್ ನಲ್ಲಿ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಮೂವರು ಖೈದಿಗಳ ಪೈಕಿ ಓರ್ವ ಆತ್ಮಹತ್ಯೆ ಮಾಡಿಕೊಂಡರೆ ಮತ್ತೊಬ್ಬ ಒರಿಸ್ಸಾದಲ್ಲಿ ಗಾಂಜಾ ಪ್ರಕರಣದಲ್ಲಿ ಬಂಧನವಾದರೆ ಮತ್ತೊಬ್ಬ ನಾಪತ್ತೆಯಾಗಿದ್ದಾನೆ.ಈ ಸಂಭಂಧ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಮೋಹನ್ ಕುಮಾರ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಸಜಾ ಖೈದಿಯಾಗಿದ್ದ ಹಾಸನ ಮೂಲದ ನವೀನ್ 60 ದಿನಗಳ ಅವಧಿಗೆ ಪೆರೋಲ್ ನಲ್ಲಿ ತೆರಳಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮತ್ತೊಬ್ಬ ಒರಿಸ್ಸಾ ರಾಜ್ಯದ
Read More

ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವ ಪೊಲೀಸ್ ಸಿಬ್ಬಂದಿಗಳಿಗೆ ಮೂಗುದಾರ…ಅನುಮತಿ ಪಡೆಯುವಂತೆ ಸೂಚನೆ…

ಬೆಂಗಳೂರು,ಫೆ27,Tv10 ಕನ್ನಡ ಸಂಭಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುತ್ತಿರುವ ಪೊಲೀಸ್ ಸಿಬ್ಬಂದಿಗಳ ವರ್ತನೆಗೆ ಬ್ರೇಕ್ ಹಾಕಲಾಗಿದೆ.ಮುಂದಿನ ದಿನಗಳಲ್ಲಿ ಈ ಸಂಭಂಧ ಅನುಮತಿ ಪಡೆಯುವಂತೆ ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ ಉಪ‌ಪೊಲೀಸ್ ಆಯುಕ್ತರಾದ ಅನಿತಾ.ಬಿ.ಹದ್ದಣ್ಣವರ್ ನೋಟೀಸ್ ನೀಡಿದ್ದಾರೆ.ಪೂರ್ವಾನುಮತಿ ಪಡೆಯದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವುದು ಇಲಾಖಾ ನಿಯಮ ಮತ್ತು ನಿಭಂಧನೆಗಳಿಗೆ ವಿರುದ್ದವಾಗಿರುತ್ತದೆ.ಇನ್ನುಮುಂದೆ ಗೃಹಸಚಿವರ ನಿವಾಸಕ್ಕೆ ಭೇಟಿ ನೀಡುವ ಮುನ್ನ ಮಾನ್ಯ ಪೊಲೀಸ್ ಪ್ರಧಾನ ಕಚೇರಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ
Read More

ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ,ಮೂಳೆಗಳು ಪತ್ತೆ…ಪೊಲೀಸರು ದೌಡು…

ಹೆಚ್.ಡಿ.ಕೋಟೆ,ಫೆ27,Tv10 ಕನ್ನಡ ಕುಸಿದು ಬಿದ್ದಿದ್ದ ಶೌಚಾಲಯ ದುರಸ್ಥಿ ವೇಳೆ ಗುಂಡಿಯಲ್ಲಿ ಮನುಷ್ಯನ ಬುರುಡೆ,ಮೂಳೆಗಳು ಪತ್ತೆಯಾದ ಘಟನೆಹೆಚ್ ಡಿ ಕೋಟೆ ತಾಲೂಕಿನ ಜೊಂಪನಹಳ್ಳಿಯ ಚಿನ್ನಪ್ಪ ಪಾಳ್ಯ ಗ್ರಾಮದಲ್ಲಿ ನಡೆದಿದೆ.ದಾಸಪ್ರಕಾಶ್ ಎಂಬವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.ಶೌಚಾಲಯದ ಗುಂಡಿ ಕುಸಿದು ಬಿದ್ದ ಹಿನ್ನೆಲೆದುರಸ್ತಿ ಕಾರ್ಯ ನಡೆಸಲು ಮನೆ ಮಾಲಿಕರು ಆರಂಭಿಸಿದ್ದರು.ಈ ವೇಳೆ ತೆಗೆದಿದ್ದ ಗುಂಡಿಯಲ್ಲಿ ಮೂಳೆಗಳು ಪತ್ತೆಯಾಗಿದೆ.ತಕ್ಷಣ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆಸ್ಥಳಕ್ಕೆ ಹೆಚ್ ಡಿ ಕೋಟೆ ಪೋಲಿಸರು ಭೇಟಿ ನೀಡಿ
Read More

ರಂಗೋಲಿಯಲ್ಲಿ ಮೂಡಿಬಂದ ಶಿವನ ಚಿತ್ರಗಳು…ಶಿವರಾತ್ರಿ ಅಂಗವಾಗಿ ಸ್ಪರ್ಧೆ…

ಮೈಸೂರು,ಫೆ26,Tv10 ಕನ್ನಡ ಶಿವರಾತ್ರಿ ಹಬ್ಬದ ಅಂಗವಾಗಿ ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಸಮೃದ್ಧಿ ಟ್ರಸ್ಟ್ ಹಾಗೂ ಕೆಎಂಪಿ ಕೆ ಟ್ರಸ್ಟ್ ಮತ್ತು ಜೆ ಸಿ ಐ ಮೈಸೂರು ಕಿಂಗ್ ಲೇಡೀಸ್ ವತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.ವಿವಿದ ವಯೋಮಾನದ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಮಹಿಳೆಯರ ಕೈಚಳಕದಲ್ಲಿ ಅಂದವಾದ ಶಿವನ ಚಿತ್ರಗಳು ಮೂಡಿಬಂದವು. 5 ಬಹುಮಾನಗಳನ್ನ ನಿಗದಿ ಪಡಿಸಲಾಗಿತ್ತು. ರಾಮಾನುಜಾ ರಸ್ತೆಯ ನಿವಾಸಿ ಸುಶೀಲಾ, ಕಲ್ಯಾಣಗಿರಿಯ
Read More

ಬಾರ್ ಅಂಡ್ ರೆಸ್ಟೋರೆಂಟ್ ಗೆ ವಂಚಿಸಿದ ಕ್ಯಾಷಿಯರ್…6.70 ಲಕ್ಷಕ್ಕೆ ಉಂಡೆನಾಮ…ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ನಂಜನಗೂಡು,ಫೆ26,Tv10 ಕನ್ನಡ ಬ್ಯಾಂಕ್ ಗೆ ಕಟ್ಟಬೇಕಿದ್ದ ಹಣವನ್ನ ಕ್ಯಾಶಿಯರ್ ಲಪಟಾಯಿಸಿದ ಪ್ರಕರಣ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.6.7 ಲಕ್ಷ ಹೊತ್ತೊಯ್ದ ಕ್ಯಾಷಿಯರ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಗಾಜನೂರು ಗ್ರಾಮದ ಮಹದೇವ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಹಲವು ತಿಂಗಳಿಂದ ಮಹದೇವ್ ನಂಜನಗೂಡು ಗುಂಡ್ಲುಪೇಟ್ ಮುಖ್ಯ ರಸ್ತೆಯಲ್ಲಿರುವ ಎಸ್.ಎಲ್.ವಿ.ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ.ಅಲ್ಲಿ ವ್ಯವಸ್ಥಾಪಕರಾಗಿದ್ದ ಆನಂದ್ ಎಂಬುವರು ಕಳೆದ ವರ್ಷ ಜುಲೈ ನಲ್ಲಿ ಕಾರ್ಯನಿಮಿತ್ತ ರಜೆ
Read More

ದೇವಸ್ಥಾನದ ಪುನಶ್ಚೇತನಕ್ಕೆ ಕೈ ಜೋಡಿಸಿದ ಮುಸ್ಲಿಂ ಸಮುದಾಯ…ಶನೇಶ್ವರ ಆದಿಶಕ್ತಿ ದೇವಾಲಯ ಅಭಿವೃದ್ದಿಗಾಗಿ ಹಿಂದು ಮುಸ್ಲಿಂ ಭಾಯಿ..ಭಾಯಿ…

ಮೈಸೂರು,ಫೆ26,Tv10 ಕನ್ನಡ ಒಂದೆಡೆ ಧಾರ್ಮಿಕ ಭಾವನೆಗಳಿಗೆ ಕೆಡುಕು ಮಾಡುವಂತೆ ಕಿಡಿಗೇಡಿಗಳು ಪ್ರಚೋದಿಸುತ್ತಿದ್ದರೆ ಮೈಸೂರಿನ ರಾಘವೇಂದ್ರ ಬಡಾವಣೆಯಲ್ಲಿ ದೇವಸ್ಥಾನದ ಅಭಿವೃದ್ದಿಗಾಗಿ ಮುಸ್ಲಿಂ ಸಮುದಾಯದ ಮುಖಂಡರು ಕೈಜೋಡಿಸಿ ಭಾವೈಕ್ಯತೆ ಮೆರೆದಿದ್ದಾರೆ.ಶಿಥಿಲಗೊಂಡಿದ್ದ ದೇವಸ್ಥಾನಕ್ಕೆ ಪುನಶ್ವೇತನ ನೀಡಲು ಹಿಂದು ಮುಸ್ಲಿಂ ಸಮುದಾಯದ ಮುಖಂಡರು ಒಂದಾಗಿ ವಿಶೇಷ ರೂಪ ನೀಡಿದ್ದಾರೆ.ಎರಡು ಸಮುದಾಯದ ಒಗ್ಗಟ್ಟಿನಿಂದ ಅಭಿವೃದ್ದಿಯಾದ ಶನೇಶ್ವರ ಆದಿಶಕ್ತಿ ದೇವಾಲಯ ಇಂದು ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಾ ಭಕ್ತರನ್ನ ಆಕರ್ಷಿಸುತ್ತಿದೆ. ರಾಘವೇಂದ್ರ ಬಡಾವಣೆ 10 ನೇ ಕ್ರಾಸ್ ನಲ್ಲಿ ಸುಮಾರು
Read More