TV10 Kannada Exclusive

ಮೈಸೂರು:ಒಂದೇ ಕುಟುಂಬದ ನಾಲ್ವರ ಸಾವು…ಅಪಾರ್ಟ್ ಮೆಂಟ್ ನಲ್ಲಿ ಘಟನೆ…

ಮೈಸೂರು,ಫೆ18,Tv10 ಕನ್ನಡ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ‌ನಲ್ಲಿ ನಡೆದಿದೆ.ಚೇತನ (45) ರೂಪಾಲಿ (43) ಪ್ರಿಯಂವಧ (62) ಕುಶಾಲ್ (15) ಸಾವನ್ನಪ್ಪಿದ್ದಾರೆ.ನೇಣು ಬಿಗಿದ ಸ್ಥಿತಿಯಲ್ಲಿ ಚೇತನ್ ಸಾವನ್ನಪ್ಪಿದ ದುರ್ದಿವಿಗಳು.ಚೇತನ್ ಅವರ ಪತ್ನಿ ತಾಯಿ ಮಗ ಸಾವು.ಚೇತನ್ ವಿಷ ನೀಡಿ ಮನೆಯವರನ್ನು ಸಾಯಿಸಿ ತಾನು ನೇಣು ಬಿಗಿದುಕೊಂಡಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಕಮಿಷನರ್ ಸೀಮಾ ಲಾಟ್ಕರ್ ಡಿಸಿಪಿ ಜಾನ್ಹವಿವಿದ್ಯಾರಣ್ಯಪುರಂ ಇನ್ಸಪೆಕ್ಟರ್ ಮೋಹಿತ್ ಸೇರಿ ಸಿಬ್ಬಂದಿ ಭೇಟಿ ನೀಡಿ
Read More

ಆನೆ ಕಂದಕ,ರೈಲ್ವೆ ಕಂಬಿ ನಿರ್ಮಾಣ ಕಾರ್ಯಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಚಾಲನೆ…11.70 ಕೋಟಿ ವೆಚ್ಚದಲ್ಲಿ ನಿರ್ಮಾಣ…ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ

ನಂಜನಗೂಡು,ಫೆ16,Tv10 ಕನ್ನಡ ನಂಜನಗೂಡು ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗಡಿಭಾಗಗಳಲ್ಲಿ ಕಾಡು ಪ್ರಾಣಿಗಳ ದಾಳಿಗೆ ನಲುಗಿ ಬೇಸತ್ತಿದ್ದ ಜನತೆಗೆ ಶಾಸಕ ದರ್ಶನ್ ಧೃವನಾರಾಯಣ್ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿದ್ದಾರೆ.ಗಡಿಭಾಗಗಳಲ್ಲಿ ನುಸುಳುತ್ತಿದ್ದ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಆನೆಕಂದಕ ಹಾಗೂ ರೈಲ್ವೆಕಂಬಿ ಬೇಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಸುಮಾರು 11.70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಮಗಾರಿಗೆ ಚಾಲನೆ ದೊರೆತಿದೆ ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇಂದು ಚುರುಕು ನೀಡಲಾಗಿದೆ.ಧೃವನಾರಾಯಣ್
Read More

ಸ್ಮಶಾನದಲ್ಲಿ ಗಾಂಜಾ ಗಮ್ಮತ್ತು…ರಾಜಾರೋಷವಾಗಿ ಧಂ ಎಳೆಯುವ ವ್ಯಸನಿಗಳು…ದೂರು ನೀಡಿದ್ರೂ ಕ್ಯಾರೆ ಎನ್ನದ ಪೊಲೀಸ್ರು…ಮೇಟಗಳ್ಳಿ ಸ್ಮಶಾನದ ದುಃಸ್ಥಿತಿ…

ಮೈಸೂರು,ಫೆ16,Tv10 ಕನ್ನಡ ಮೃತಪಟ್ಟವರ ಆತ್ಮ ಚಿರಶಾಂತಿಗೆ ಜಾರಬೇಕಾದ ಸ್ಮಶಾನ ಗಾಂಜಾ ವ್ಯಸನಿಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ.ಹಗಲು ಇರುಳೆನ್ನದೆ ಬೈಕ್ ನಲ್ಲಿ ಬರುವ ವ್ಯಸನಿಗಳು ಸ್ಮಶಾನ ಹಾಗೂ ಅಕ್ಕಪಕ್ಕದಲ್ಲಿರು ಪೊದೆಗಳ ಆಶ್ರಯ ಪಡೆದು ರಾಜಾರೋಷವಾಗಿ ಗಾಂಜಾ ಸೇವನೆ ಮಾಡುತ್ತಿದ್ದಾರೆ.ಈ ಬಗ್ಗೆ ಸ್ಥಳೀಯರಾದ ಬಿ.ಎನ್.ನಾಗೇಂದ್ರ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.ಮೃತಪಟ್ಟವರು ಚಿರನಿದ್ರೆಗೆ ಜಾರಬೇಕಾದ ಸ್ಥಳವೀಗ ಗಾಂಜಾ ವ್ಯಸನಿಗಳ ಗಮ್ಮತ್ತಿಗೆ ಬಲಿಯಾಗುತ್ತಿದೆ ಹೌದು…ಇದು ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ
Read More

ರಿಟೈರ್ಡ್ ಪರ್ಸನ್ ಖಾತೆಗೆ ಕನ್ನ…ಕೇವಲ ಒಂದು ಗಂಟೆ ಅವಧಿಯಲ್ಲಿ 19.30 ಲಕ್ಷ ಗಾಯಬ್…ಖಾತೆದಾರ ಶಾಕ್…!

ಮೈಸೂರು,ಫೆ15,Tv10 ಕನ್ನಡ ಕೇವಲ ಒಂದು ಗಂಟೆ ಅವಧಿಯಲ್ಲಿ ಎರಡು ಖಾತೆಗಳಿಂದ ಖದೀಮರು 19.30 ಲಕ್ಷ ಲಪಟಾಯಿಸಿದ ವಂಚನೆ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶ್ರೀರಾಂಪುರ ನಿವಾಸಿ ಫಾರ್ಮಾಸ್ಯೂಟಿಕಲ್ಸ್ ಒಂದರಲ್ಲಿ ಕೆಲಸ ಮಾಡಿ ನಿವೃತ್ತಿಹೊಂದಿದ್ದ ಮುರುಗೇಶ್ ಎಂಬುವರ ಖಾತೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಐಸಿಐಸಿಐ ಬ್ಯಾಂಕ್ ನಲ್ಲಿ ಹೊಂದಿದ್ದ ಒಂದು ಖಾತೆಯಿಂದ 17 ಲಕ್ಷ ಮತ್ತೊಂದು ಖಾತೆಯಿಂದ 2.30 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದ ಮುರುಗೇಶ್ ರವರ
Read More

ಪ್ರೇಮಿಗಳ ದಿನಾಚರಣೆಯಂದು ಪೋಷಕರಿಗೆ ಪಾದಪೂಜೆ ನೆರವೇರಿಸಿದ ಮಕ್ಕಳು…ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ…

ಮೈಸೂರು,ಫೆ15,Tv10 ಕನ್ನಡ ಫೆಬ್ರವರಿ 14 ಪ್ರೇಮಿಗಳಿಗಾಗಿ ಮೀಸಲಾದ ದಿನ.ಯುವಜೋಡಿಗಳು ಸಂತಸದಿಂದ ಪ್ರೇಮಿಗಳ ದಿನಾಚರಣೆಯನ್ನ ಆಚರಿಸುತ್ತಿದ್ದರೆ ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ವಿಧ್ಯಾರ್ಥಿಗಳಿಂದ ಪೋಷಕರಿಗೆ ಪಾದಪೂಜೆ ಸಲ್ಲಿಸುವ ಮೂಲಕಉತ್ತಮ ಬಾಂಧವ್ಯ ಬೆಳೆಸುವ ದಿವಾಗಿ ಪರಿಗಣಿಸಿ ಆಚರಿಸಲಾಗಿದೆ. ಹಿಂದುತ್ವದ ಸಂಸ್ಕಾರ ಸಂಸ್ಕೃತಿ ಹಿರಿಯರನ್ನು ಪ್ರೀತಿಸೋಣ ಎನ್ನುವ ಘೋಷ ವಾಕ್ಯದೊಂದಿಗೆಪೋಷಕರ ಪಾದ ತೊಳೆದು ಕುಂಕುಮ ಅರಿಶಿಣ ಹಾಗೂ ಆರತಿ ಮಾಡುವ ಮೂಲಕ ಮಕ್ಕಳು ಕಣ್ಣಿಗೆ ಕಾಣುವ ದೇವರಿಂದ ಆಶೀರ್ವಾದ ಪಡೆದು ವಿಭಿನ್ನವಾಗಿ
Read More

ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ… 2.06 ಕೋಟಿ ಮೌಲ್ಯದ ಮಾಲುಗಳು ವಶ…

ಮೈಸೂರು,ಫೆ6,Tv10 ಕನ್ನಡ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿರುವ ಸ್ವತ್ತುಗಳನ್ನು ಹಿಂತಿರುಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮೈಸೂರು ಜಿಲ್ಲೆಯಾದ್ಯಂತ ಕಳ್ಳತನವಾಗಿದ್ದ ಸ್ವತ್ತುಗಳನ್ನು ಪತ್ತೆ ಮಾಡಿ ಮಾಲೀಕರು, ವಾರಸುದಾರರಿಗೆ ನೀಡಲಾಯಿತು.ಮೈಸೂರಿನ ಜ್ಯೋತಿನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು.06 ಸುಲಿಗೆ, 06 ಸರಗಳ್ಳತನ, 25 ಮನೆ ಕಳ್ಳತನ, 6 ಸರ್ವೆಂಟ್ ಕಳ್ಳತನ, 67 ವಾಹನ ಕಳ್ಳತನ, 15 ಸಾಮಾನ್ಯ ಕಳ್ಳತನ, 5 ಜಾನುವಾರು ಕಳ್ಳತನ, 4 ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿರುವ
Read More

ಮಧ್ವನವಮಿ ಆಚರಣೆ…ಮೈಸೂರು ಜಿಲ್ಲಾ ಬ್ರಾಹ್ಮಣ ಯುವವೇದಿಕೆಯಿಂದ ಕಾರ್ಯಕ್ರಮ…

ಮೈಸೂರು,ಫೆ6,Tv10 ಕನ್ನಡ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕುವೆಂಪು ನಗರದ ನವಿಲು ರಸ್ತೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿಮಧ್ವನವಮಿಯನ್ನುಸಡಗರದಿಂದ ಆಚರಿಸಲಾಯಿತು.ಮಧ್ವಾಚಾರ್ಯರ ಭಾವಚಿತ್ರಕ್ಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಆಚಾರ್ಯ ಮಧ್ವರ ಸಂದೇಶಗಳು ಸರ್ವಕಾಲಿಕ ಮಾರ್ಗದರ್ಶಕವಾಗಿವೆ. ಅವರ ಗ್ರಂಥಗಳಲ್ಲಿ ಮಾನವೀಯ ಗುಣಗಳ ಉಲ್ಲೇಖವಿದೆ. ಮಧ್ವಮತದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರಗಣ್ಯರಲ್ಲಿ ಮಧ್ವಾಚಾರ್ಯರು ಒಬ್ಬರಾಗಿದ್ದಾರೆ’ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸಮಾಜಸೇವಕರಾದ
Read More

ವಿಜಯನಗರ ಪೊಲೀಸರ ಕಾರ್ಯಾಚರಣೆ…ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿ ಬಂಧನ…ಓರ್ವ ರೌಡಿಶೀಟರ್…

ಮೈಸೂರು,ಫೆ5,Tv10 ಕನ್ನಡ ಸ್ನೇಹಿತನ ತಂಗಿ ಬಗ್ಗೆ ಅಪಪ್ರಚಾರ ಮಾಡಿದ್ದ ಹಿನ್ನಲೆ ಬುದ್ದಿ ಹೇಳಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.8 ಮಂದಿ ಆರೋಪಿಗಳ ಪೈಕಿ ಓರ್ವ ರೌಡಿ ಶೀಟರ್ ಆಗಿದ್ದು ಗಡೀಪಾರ್ ಆಗಿದ್ದ.ಎರಡು ದಿನಗಳ ಹಿಂದಷ್ಟೆ ಗಡೀಪಾರ್ ಶಿಕ್ಷೆ ಮುಗಿಸಿ ಬಂದು ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಆದರ್ಶ್ ಹಲ್ಲೆಗೆ ಒಳಗಾದ ಯುವಕ.ಕಳ್ಳ ಶಿವು@ ಶಿವಕುಮಾರ್,ಪ್ರಜ್ವಲ್ @ ಸ್ಪಾಟ್,ಧನರಾಜ್@ ಮನು,ಹೃಷಿತ್@ಕುಳ್ಳಿ,ಖಜಾನೆ,ಶರತ್,ಹಾಲುಮಂಜ
Read More

ಐಸ್ ಕ್ರೀಂ ಮಾರಾಟ ನೆಪದಲ್ಲಿ ಮಹಿಳೆ ಚಿನ್ನದ ಸರ ಕಸಿದು ಸಿಕ್ಕಿಬಿದ್ದ ಕಳ್ಳ…ಆರೋಪಿ ಪೊಲೀಸರ ವಶಕ್ಕೆ…

ಹುಣಸೂರು,ಫೆ5,Tv10 ಕನ್ನಡ ಜಮೀನು ಕೆಲಸ ಮಾಡಲು ತೆರಳುತ್ತಿದ್ದ ಮಹಿಳೆಯನ್ನ ಐಸ್ ಮಾರಾಟ ಮಾಡುವ ನೆಪದಲ್ಲಿ ಹಿಂಬಾಲಿಸಿ ನಂತರ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತು ಪರಾರಿಯಾದ ಖದೀಮ ಪೊಲೀಸರ ಅತಿಥಿಯಾದ ಘಟನೆ ಹುಣಸೂರಿನಲ್ಲಿ ನಡೆದಿದೆ.ಕೆಂಪರಾಜು ಸಿಕ್ಕಿಬಿದ್ದ ಆರೋಪಿ.ಹುಣಸೂರು ತಾಲೂಕು ಹೊಸವಾರಂಚಿ ಗ್ರಾಮದಲ್ಲಿ ಘಟನೆ ನಡೆದಿದೆ.ಗ್ರಾಮದ ಜ್ಯೋತಿ ಎಂಬುವರು ಅವರೆಕಾಯಿ ಕೊಯ್ಯಲು ಜಮೀನಿಗೆ ತೆರಳುತ್ತಿದ್ದರು.ಈ ವೇಳೆ ಕೆಂಪರಾಜು ಐಸ್ ಕ್ರೀಂ ಮಾರಾಟ ಮಾಡುತ್ತಿರುವಂತೆ ಹಿಂಬಾಲಿಸಿದ್ದಾನೆ.ಜ್ಯೋತಿ ರವರು ಜಮೀನಿಗೆ ಪ್ರವೇಶಿಸಿ ಕೆಲಸ ಮಾಡುತ್ತಿದ್ದ
Read More

ವಿಚಿತ್ರ ರೂಪ ಹೊಂದಿದ ಮಗು ಜನನ…ವೈದ್ಯ ಲೋಕಕ್ಕೆ ಸವಾಲಾದ ಪ್ರಕರಣ…ದಂಪತಿಗೆ ಎರಡನೇ ಬಾರಿಗೂ ಇದೇ ರೀತಿ ಮಗು ಜನನ…

ನಂಜನಗೂಡು,ಫೆ5,Tv10 ಕನ್ನಡ ವೈದ್ಯ ಲೋಕವನ್ನೇ ಬೆರಗಾಗುವಂತಹ ರೂಪ ಹೊಂದಿದ ಮಗುವೊಂದು ನಂಜನಗೂಡಿನ ಹುರಾ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನನವಾಗಿದೆ.ಹುಟ್ಟಿದ ಮಗು ಆರೋಗ್ಯ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.ವಿಚಿತ್ರವಾದ ಕಣ್ಣು ಮತ್ತು ತುಟಿ ಮೈಯೆಲ್ಲಾ ಇದ್ದಲಿನಂತೆ ಕಪ್ಪು ಬಣ್ಣ.ನೋಡುಗರನ್ನ ಬೆಚ್ಚಿಬೀಳುವಂತಹ ಮಗು ಹುಟ್ಟುವ ಮೂಲಕ ಆರೋಗ್ಯ ಇಲಾಖೆಯನ್ನ ಹುಬ್ಬೇರುವಂತೆ ಮಾಡಿದೆ.ಹುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿರುವ ಗ್ರಾಮ ಒಂದರ ದಂಪತಿಗೆ ಇಂತಹ ರೂಪ ಹೊಂದಿರುವ ಮಗು ಹುಟ್ಟಿದೆ.ಮಗುವಿನ ಆಕಾರ ಮತ್ತು
Read More