ಬೀದಿ ನಾಯಿಗಳ ದಾಳಿ…ಜಿಂಕೆ ಬಲಿ…
ನಂಜನಗೂಡು,ಮಾ1,Tv10 ಕನ್ನಡ ಬೀದಿನಾಯಿಗಳ ದಾಳಿಗೆ ಜಿಂಕೆಯೊಂದು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ಬೀದಿ ನಾಯಿಗಳು ಸುತ್ತು ವರೆದು ಪ್ರಾಣ ತೆಗೆದಿವೆ.ಸ್ಥಳೀಯ ರೈತರೊಬ್ಬರು ನಾಯಿಗಳಿಂದ ಜಿಂಕೆ ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನಂಜನಗೂಡು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಿಗಳ ದಾಳಿಗೆ ಬಲಿಯಾಗಿರುವ ಜಿಂಕೆಯನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ…
Read More