TV10 Kannada Exclusive

ವಲಯ ಕಚೇರಿ 5 ರ ಆಯುಕ್ತ ನಾಗೇಶ್ ಮನೆ ಮೇಲೆ ಲೋಕಾಯುಕ್ತ ದಾಳಿ…ದಾಖಲೆಗಳು ವಶ…

ಮೈಸೂರು,ನ12,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ರ ಆಯುಕ್ತ ನಾಗೇಶ್ ಡಿ ರವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಈ ಹಿಂದೆ ನಾಗೇಶ್ ರವರು ಶ್ರೀರಂಗಪಟ್ಟಣ ಹಾಗೂ ಶಿವಮೊಗ್ಗ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.ಹಿಂದೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ತಹಶೀಲ್ದಾರ್ ಆಗಿದ್ದ ವೇಳೆ ಡಾಲರ್ಸ್ ಕಾಲೋನಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿದ್ದರು.ಪಟ್ಟಣದ ಡಾಲರ್ಸ್ ಕಾಲೋನಿ
Read More

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ…ಗಾಂಜಾ ವ್ಯಸನಿಗಳ ಕೈವಾಡ ಶಂಕೆ…

ಮೈಸೂರು,ನ11,Tv10 ಕನ್ನಡ ಮೈಸೂರಿನ ಮೇಟಗಳ್ಳಿ ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದೆ.ದೇವಾಲಯದ ಬೀಗ ಮುರಿದ ಕಿಡಿಗೇಡಿಗಳ ಪಂಚಲೋಹದ ಕೊಳಗ,ತೂಗುದೀಪ,ಹಿತ್ತಾಳೆ  ಚೊಂಬು,ಮಂಗಳಾರತಿ ತಟ್ಟೆ,ತಾಮ್ರದ ಗಂಟೆ ದೋಚಿ ಪರಾರಿಯಾಗಿದ್ದಾರೆ.ಚೋಳರ ಕಾಲದ ಪುರಾತನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ.ಇಂದು ಬೆಳಿಗ್ಗೆ ಅರ್ಚಕರಾದ ಮೋಹನ್ ಪ್ರಸಾದ್ ದೇವಾಲಯಕ್ಕೆ ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.ದೇವಾಲಯದ ಸಮೀಪ ಅಭಿವೃದ್ದಿ ಕಾಣದ ಹಿನ್ನಲೆ ಗಾಂಜಾ ವ್ಯಸನಿಗಳು ಈ ಸ್ಥಳವನ್ನ ಅಡ್ಡಾ ಮಾಡಿಕೊಂಡಿದ್ದಾರೆಂದು ಆರೋಪ ಕೇಳಿಬಂದಿದೆ.ಗಾಂಜಾ ವ್ಯಸನಿಗಳೇ ಕೃತ್ಯವೆಸಗಿರುವ ಶಂಕೆ
Read More

ಸಾಧಕರಿಗೆ ಡಾ.ಪುನೀತ್ ರಾಜರತ್ನ ಪ್ರಶಸ್ತಿ ಪ್ರಧಾನ…ಮಲೆಮಹದೇಶ್ವರ ಸೇವಾ ಸಂಸ್ಥೆಯಿಂದ ಕಾರ್ಯಕ್ರಮ…

ಮೈಸೂರು,ಅ28,Tv10 ಕನ್ನಡ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ ಪುನೀತ್ ರಾಜರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮಲೆ ಮಹದೇಶ್ವರ ಸೇವಾ ಸಂಸ್ಥೆ ವತಿಯಿಂದವಿಜಯನಗರದ ಖಾಸಗಿ ಹೋಟೆಲ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮೂರನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದಿಂದ ಡಾಕ್ಟರ್ ರೇಖಾ ಮನಃಶಾಂತಿ, ನಿರೂಪಣೆ ಕ್ಷೇತ್ರದಿಂದ ಮಂಜು
Read More

ಮಂಗಳಮುಖಿಗೆ ಡಾಕ್ಟರೇಟ್…ಮೆರವಣಿಗೆ ಮೂಲಕ ಸಂಭ್ರಮ…

ಮೈಸೂರು,ಅ26,Tv10 ಕನ್ನಡ ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಡಾಕ್ಟರೇಟ್ ಪಡೆದ ಮಂಗಳಮುಖಿಗೆ ಸಮುದಾಯದಿಂದ ಅಭಿನಂದನೆಗಳು ಹರಿದು ಬಂದಿದೆ.ಡಾಕ್ಟರೇಟ್ ಗೆ ಭಾಜನರಾದ ಮಂಗಳಮುಖಿಯನ್ನ ತಮ್ಮ ಸಮುದಾಯದವರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.ಮೆರವಣಿಗೆ ಮೂಲಕ ಕರೆದೊಯ್ದು ಸಂಭ್ರಮಿಸಿದ್ದಾರೆ. ಗಾಯಿತ್ರಿಪುರಂ ನಿವಾಸಿ ಕರೀನಮ್ಮ‌@ ರುಬೀನ್ ತಾಜ್ ಡಾಕ್ಟರೇಟ್ ಪಡೆದ ಮಂಗಳಮುಖಿ.ಏಶಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯಲ್ಲಿ ಇಂದು ಕರೀನಮ್ಮ ಗೆ ಡಾಕ್ಟರೇಟ್ ಪದವಿಯನ್ನ ನೀಡಿ ಗೌರವಿಸಿದ್ದಾರೆ.ಸಮಾಜಸೇವೆಯಲ್ಲಿ ಸಾಧನೆ ಮಾಡಿದ ಹಿನ್ನಲೆ ಡಾಕ್ಟರೇಟ್ ಪದವಿ ನೀಡಲಾಗಿದೆ.ಬೆಂಗಳೂರಿನಿಂದ
Read More

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ನಿಂದ ತಡೆಯಾಜ್ಞೆ…

ನಂಜನಗೂಡು,ಅ25,Tv10 ಕನ್ನಡ ಇದೇ ತಿಂಗಳು 28 ರಂದು ನಡೆಯಬೇಕಿದ್ದ ನಂಜನಗೂಡು ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ನಂಜನಗೂಡಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ,ಎಂ,ಎಫ್,ಸಿ ಇಂದು ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದೆ. ಅರ್ಜಿದಾರರಾದ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ನಂಜನಗೂಡು ತಾಲ್ಲೂಕಿನ ಅಧ್ಯಕ್ಷರಾದ ಎನ್. ಹರೀಶ್ ಕುಮಾರ್ ರವರು ತಮ್ಮ ಅರ್ಜಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಂಜನಗೂಡು ಶಾಖೆಯವರು
Read More

ಆರ್ಥಿಕ ನೆರವಿಗಾಗಿ ಮನವಿ ಮಾಡಿದ ಪುಸ್ತಕ ಪ್ರೇಮಿ…ನೆರವಿಗೆ ಧಾವಿಸಿದ ಕನ್ನಡ ಪ್ರೇಮಿಗಳು…

ಮೈಸೂರು,ಅ25,Tv10 ಕನ್ನಡ ಭಾಷೆಗೆ ಎಲ್ಲೆ ಇಲ್ಲ ಪುಸ್ತಕ ಪ್ರೇಮಕ್ಕೆ ಕೊನೆ ಇಲ್ಲ ಎಂಬ ನಾಣ್ಣುಡಿಗೆ ಉದಾಹರಣೆಯಾದ ಉದಯಗಿರಿಯ ಸೈಯದ್ ಇಸಾಕ್ ಲೈಬ್ರರಿಗೆ ಆರ್ಥಿಕ ನೆರವು ಬೇಕಿದೆ.ಇಳಿ ವಯಸ್ಸಿನಲ್ಲಿ ತಮ್ಮ ಸ್ವಂತ ದುಡಿಮೆಯಲ್ಲಿ ಸಾರ್ವಜನಿಕ ಗ್ರಂಥಾಲಯವನ್ನ ತೆರೆದು ಕನ್ನಡ ಹೂರಣವನ್ನ ಪಸರಿಸುತ್ತಿರುವ ಸೈಯದ್ ಇಸಾಕ್ ತಮ್ಮ ಲೈಬ್ರರಿಯನ್ನ ಉಳಿಸಿಕೊಡುವಂತೆ ಕನ್ನಡ ಪ್ರೇಮಿಗಳಿಗೆ ಮನವಿ ಮಾಡಿದ್ದಾರೆ.ಸ್ವಂತ ಖರ್ಚಿನಿಂದ ಸ್ಥಾಪನೆಯಾದ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳ ಸಂಗ್ರಹವಿದೆ.ಕನ್ನಡವನ್ನ ಉಳಿಸಿ ಬೆಳೆಸಿದ ಸಾಹಿತಿಗಳ ಭಾವಚಿತ್ರಗಳು ಕನ್ನಡ ಪ್ರೇಮಿಗಳನ್ನ
Read More

ಗ್ರಾ.ಪಂ.ಉಪಾಧ್ಯಕ್ಷೆ ಪತಿ ಕೊಲೆ ಪ್ರಕರಣ…ಮತ್ತೋರ್ವ ಆರೋಪಿ ಬಂಧನ…ರೌಡಿ ಶೀಟರ್ ಧನರಾಜ್ ಭೋಲಾ ಅಂದರ್…

ನಂಜನಗೂಡು,ಅ25,Tv10 ಕನ್ನಡ ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪತಿ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಬಂಧಿಸಲಾಗಿದೆ.ಈಗಾಗಲೇ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನ ಬಙಧಿಸಿದ್ದ ಪೊಲೀಸರು ನಿನ್ನೆ ರಾತ್ರಿ ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಬಂಧಿತರ ಸಂಖ್ಯೆ 5 ಕ್ಕೆ ಏರಿದೆ. ನಂಜನಗೂಡಿನ ರೌಡಿಶೀಟರ್ ಧನರಾಜ್ ಭೋಲಾ ಬಂಧಿತ ಅರೋಪಿ.ಈ ಹಿಂದೆ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಧನರಾಜ್ ಭೋಲಾ ಜೈಲು ವಾಸ ಅನುಭವಿಸಿದ್ದ.ಇದೀಗ
Read More

ಸ್ನಾನ ಮಾಡಲು ಬಂದ ವ್ಯಕ್ತಿ ದೇವಿಕೆರೆಯಲ್ಲಿ ಬಿದ್ದು ಸಾವು…ಹುಟ್ಟುಹಬ್ಬ ಮುನ್ನಾ ದಿನ ಮಸಣಕ್ಕೆ…

ಮೈಸೂರು,ಅ25,Tv10 ಕನ್ನಡ ಹುಟ್ಟುಹಬ್ಬ ಮುನ್ನಾ ದಿನ ನಾಡದೇವಿಯ ದರುಶನ ಪಡೆಯಲು ಬಂದ ವ್ಯಕ್ತಿ ದೇವಿಕೆರೆ ಪಾಲಾಗಿದ್ದಾರೆ.ದೇವಿಯ ಆರಾಧಕರಾದ ಬೆಂಗಳೂರು ಮೂಲದ ಚೇತನ್ (27) ಮೃತ ದುರ್ದೈವಿ.ಮೃತ ಚೇತನ್ ಬೆಂಗಳೂರಿನ ಬಳಗೇರಿ ನಿವಾಸಿ ಎಂದು ಹೇಳಲಾಗಿದೆ. ನಾಳೆ ಚೇತನ್ ರವರ ಜನ್ಮದಿನ.ಅಲ್ಲದೆ ಇವರು ದೇವಿಯ ಆರಾಧಕರೂ ಸಹ ಆಗಿದ್ದಾರೆ.ಹುಟ್ಟುಹಬ್ಬದ ಮುನ್ನಾ ದಿನ ನಾಡದೇವಿಯ ದರುಶನ ಪಡೆಯಲು ತಮ್ಮ ನಾಲ್ಕು ಜನ ಸ್ನೇಹಿತರೊಂದಿಗೆ ಬಂದು ಚಾಮುಂಡಿ ಬೆಟ್ಟದ ವಸತಿಗೃಹದಲ್ಲಿ ತಂಗಿದ್ದಾರೆ.ಇಂದು ಮುಂಜಾನೆ ದೇವೆಕೆರೆಯಲ್ಲಿ
Read More

ಜೋತುಬಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರ ಸಾವು…ಚಾಮರಾಜನಗರದಲ್ಲಿ ದುರಂತ ಘಟನೆ…

ಚಾಮರಾಜನಗರ,ಅ24,Tv10 ಕನ್ನಡ ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರ ಸಾವನ್ನಪ್ಪಿದ ದುರಂತ ಘಟನೆ ಚಾಮರಾಜನಗರದ ಅಯ್ಯನಪುರ ಗ್ರಾಮದಲ್ಲಿ ನಡೆದಿದೆ.ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.ರಸ್ತೆಗೆ ಅಡ್ಡಲಾಗಿ ಜೋತುಕೊಂಡಿದ್ದ ವಿದ್ಯುತ್ ತಂತಿ ಸ್ಪರ್ಶಸಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ನಾಗೇಂದ್ರ (48) ಮತ್ತು ಮಲ್ಲೇಶ್ (40) ಮೃತ ದುರ್ದೈವಿಗಳು.ಅಯ್ಯನಪುರ-ಹಿತ್ತಲಗುಡ್ಡೆ ರಸ್ತೆಯಲ್ಲಿ ತೆರಳುತ್ತಿದ್ದಾಗ ದುರಂತ ನಡೆದಿದೆ.ಸ್ಥಳಕ್ಕೆ ರಾಮಸಮುದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರದ.ಚೆಸ್ಕಾಂ ಸಿಬ್ಬಂದಿ
Read More

ಗ್ರಾಮದಲ್ಲೇ ರಾಜಿ ಮಾಡಿಕೊಳ್ಳದೆ ಪೊಲೀಸರ ಮೊರೆ ಹೋದ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ…ಜಿಲ್ಲಾಧಿಕಾರಿಗಳ ಮುಂದೆ ಆತ್ಮಹತ್ಯೆಗೆ ನಿರ್ಧಾರ…

ಚಾಮರಾಜನಗರ,ಅ24,Tv10 ಕನ್ನಡ ಗಲಾಟೆ ವಿಚಾರಕ್ಕೆ ಸಂಭಂಧಿಸಿದಂತೆ ಕುಟುಂಬವೊಂದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಹಿನ್ನಲೆ ಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆ ಹರದನಹಳ್ಳಿ ಹೋಬಳಿ ಕಿಲಗೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಎರಡು ವರ್ಷಗಳ ಹಿಂದೆ ಹೇರಿದ ಬಹಿಷ್ಕಾರದಿಂದ ನೊಂದಿರುವ ಕುಟುಂಬ ನ್ಯಾಯಕ್ಕಾಗಿ ಅಲೆದು ಹೈರಾಣರಾಗಿದ್ದಾರೆ.ನ್ಯಾಯ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಕಿಲಗೆರೆ ಗ್ರಾಮದ ಸಿದ್ದರಾಜು ಕುಟುಂಬದ ಮೇಲೆ ಗ್ರಾಮದ ಮುಖಂಡರಾದ ಮಲ್ಲಯ್ಯ,ಮಸಣಯ್ಯ,ಬಸವರಾಜು,ಚೆನ್ನಯ್ಯ,ಬಸವಯ್ಯ ಹಾಗೂ ಇತರರು
Read More