TV10 Kannada Exclusive

ಕೌಟುಂಬಿಕ ಕಲಹ…ಪತ್ನಿ ಕೊಲೆಗೈದ ಪತಿರಾಯ…

ಮಂಡ್ಯ,ಆ22,Tv10 ಕನ್ನಡ ಕೌಟುಂಬಿಕ ಕಲಹದ ಹಿನ್ನಲೆ ಪತ್ನಿಯನ್ನ ಕೊಡಲಿಯಿಂದ ಪತಿರಾಯನೇ ಕೊಚ್ಚಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಂಥನಹಳ್ಳಿ ಗ್ರಾಮದಲ್ಲಿ ನಡೆದಿದೆ.ತೇಜಸ್ವಿನಿ(38) ಕೊಲೆಯಾದ‌ ಮಹಿಳೆ. ಜಯರಾಮು ಪತ್ನಿಯನ್ನ ಭೀಕರವಾಗಿ ಕೊಂದ ಪತಿರಾಯ.ಕೌಟುಂಬಿಕ ‌ವಿಚಾರವಾಗಿ ದಂಪತಿ ನಡುವೆ ‌ಆಗಾಗ ಜಗಳ ಆಗುತ್ತಿತ್ತು.ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ತೇಜಸ್ವಿನಿ ಕುತ್ತಿಗೆಗೆ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಬಳಿಕ ಕೊಡಲಿಯಿಂದ ತಲೆಗೆ ಹಲ್ಲೆ ನಡೆಸಿದ್ದಾನೆ. ಬೆಳ್ಳೂರು ಪೊಲೀಸ್ ‌ಠಾಣೆ‌‌‌‌ ವ್ಯಾಪ್ತಿಯಲ್ಲಿ ಘಟನೆ
Read More

ಸ್ವಾಮಿ ವಿವೇಕಾನಂದರ ಬಗ್ಗೆ ಸತತ 14 ಗಂಟೆ 2 ನಿಮಿಷಗಳ ಕಾಲ ಭಾಷಣ…12ನೇ ವಯಸ್ಸಿನಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಮಹೇಶ್

ಸ್ವಾಮಿ ವಿವೇಕಾನಂದರ ಬಗ್ಗೆ ಸತತ 14 ಗಂಟೆ 2 ಮೈಸೂರು,ಆ21,Tv10 ಕನ್ನಡ ಸ್ವಾಮಿ ವಿವೇಕಾನಂದರ ಕುರಿತಂತೆ ಸತತ 14 ಗಂಟೆ 2 ನಿಮಿಷಗಳ ಕಾಲ ಭಾಷಣ ಮಾಡಿದ ಬನ್ನೂರಿಮ ಹನುಮನಾಳು ಗ್ರಾಮದ 12 ವರ್ಷದ ಬಾಲಕ ಮಹೇಶ್ ಕುಮಾರ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿವೇಕಾನಂದರ ಹುಟ್ಟು, ಬೆಳವಣಿಗೆ, ಜೀವನಗಾಥೆ, ಸಾಧನೆ ಮತ್ತು ವಿಶ್ವಕ್ಕೆ ಅವರ ಕೊಡುಗೆಗಳ ಬಗ್ಗೆ ಮಾತನಾಡಿ, ವೈಯಕ್ತಿಕ ವಿಭಾಗದಲ್ಲಿ ಎಲೈಟ್ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ಏಷ್ಯನ್ ಅಕಾಡೆಮಿ, ಇಂಡಿಯ
Read More

ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಡಾ.ಹೆಚ್.ಸಿ.ಮಹದೇವಪ್ಪ ರಿಂದ ಚಾಲನೆ…

ಮೈಸೂರು,ಅ21,Tv10 ಕನ್ನಡನಾಡಹಬ್ಬ ದಸರಾ ಮಹೋತ್ಸವದ ಮೊದಲ ಆಕರ್ಷಣೆಯಾದ ಗಜಪಡೆ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.ಜಿಲ್ಲೆಯ ಹುಣಸೂರು ತಾಲ್ಲೂಕು ನಾಗರಹೊಳೆಯ ವೀರನಹೊಸಹಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ 9 ಗಜ ಪಡೆ ಬುಧವಾರ ಮೈಸೂರಿನತ್ತ ತೆರಳಿತು.ತುಲಾ ಲಗ್ನದಲ್ಲಿ ಗಜಪಡೆಗೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಸಾಂಪ್ರದಾಯಿಕವಾಗಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ಮೊದಲ ಹಂತದಲ್ಲಿ ಒಟ್ಟು 9 ಆನೆಗಳು ಗಜಪಯಣದ ಮೂಲಕ ಮೈಸೂರಿನತ್ತ ಸಾಗಿತು.ಅಭಿಮನ್ಯು (58), ಭೀಮ
Read More

ಆನೆ ಕ್ಯಾಂಪ್ ಅಸ್ತಿತ್ವಕ್ಕೆ…ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೊದಲ ಕ್ಯಾಂಪ್…ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ತೆರೆ …ದರ್ಶನ್ ಧೃವನಾರಾಯಣ್ ರಿಂದ ಉದ್ಘಾಟನೆ…

ನಂಜನಗೂಡು,ಆ21,Tv10 ಕನ್ನಡ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ನಿವಾಸಿಗಳಿಗೆ ಇನ್ನು ಮುಂದೆ ನಿರಾಳ.ಆನೆಗಳ ದಾಳಿಯಿಂದಾಗಿ ಹಗಲಿರುಳು ಶ್ರಮಿಸಿ ಬೆಳೆದ ಬೆಳೆಗಳು ನಾಶವಾಗುತ್ತಿತ್ತು.ಆಸ್ತಿಪಾಸ್ತಿಗಳು ಕಳೆದು ಕೊಳ್ಳುವಂತಾಗುತ್ತಿತ್ತು.ಇನ್ಮುಂದೆ ಈ ಅವಾಂತರಗಳಿಗೆ ಬ್ರೇಕ್ ಹಾಕಲಾಗಿದೆ.ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಮೊಟ್ಟಮೊದಲ ಬಾರಿಗೆ ಆನೆ ಕ್ಯಾಂಪ್ ಸ್ಥಾಪನೆಯಾಗಿದೆ.ಶಾಸಕ ದರ್ಶನ್ ಧೃವನಾರಾಯಣ್ ಹಿಡಿದ ಪಟ್ಟು ಕಾರ್ಯರೂಪಕ್ಕೆ ಬಂದಿದೆ.ಕಾಡು ಪ್ರಾಣಿ ಮಾನವ ಸಂಘರ್ಷದಿಂದ ನೊಂದಿದ್ದ ಈ ಭಾಗದ ಜನ ನಿಟ್ಟುಸಿರು ಬಿಡುವಂತೆ ಶಾಸಕ ದರ್ಶನ್ ಧೃವನಾರಾಯಣ್ ಮಾಡಿದ್ದಾರೆ.ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ
Read More

ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಯಜುರ್ವೇದದ ಯಜುರ್ ಉಪಾಕರ್ಮ…ಭಾಷ್ಯಂ‌ಸ್ವಾಮಿಗಳಿಂದ ಶುಭಹಾರೈಕೆ…

ಮೈಸೂರು,ಆ19,Tv10 ಕನ್ನಡಮೈಸೂರಿನ ವಿಜಶ್ರೀಯನಗರದಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿಯಜುರ್ವೇದದ ಸಾಮೂಹಿಕ ಯಜುರ್ ಉಪಾಕರ್ಮ ನೆರವೇರಿತು. ಬ್ರಾಹ್ಮಣರು ಯಜ್ಞೋಪವೀತಂ ಜನಿವಾರಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ, ಹೋಮ ನೆರವೇರಿಸುವ ಮೂಲಕ ಆಚರಿಸಿದರು. ಉಪಾಕರ್ಮದ ಅಂಗವಾಗಿ ಜನಿವಾರ ಧಾರಣೆ ಮಾಡಿದ ಸಮಾಜದ ಬ್ರಾಹ್ಮಣರಿಗೆದೇವಸ್ಥಾನದ ಸಂಸ್ಥಾಪಕರಾದ ಡಾಕ್ಟರ್ಬಾಷ್ಯಂ ಸ್ವಾಮೀಜಿ ಶುಭಕೋರಿ ಆಶೀರ್ವದಿಸಿದರು.ನಂತರ ಮಾತನಾಡಿಹಿಂದೂ ಧರ್ಮ ಶ್ರೇಷ್ಠವಾದದ್ದು. ಮಕ್ಕಳಲ್ಲಿ ಧಾರ್ಮಿಕತೆಯ ವಾಸ್ತವದ ವಿಚಾರಗಳ ಅರಿವಿನ ಕೊರತೆಯಿಂದ, ಧರ್ಮಕ್ಕೆ ಹಿನ್ನಡೆಯಾಗುತ್ತಿದೆ.ಹಿಂದೆ ವೃದ್ಧಾಶ್ರಮಗಳಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ಸಂಸ್ಕಾರ
Read More

ಗಣಪತಿ ಶ್ರೀ ಗಳ ಆಶ್ರಮದಲ್ಲಿ ಶ್ರೀ ಮದ್ ವಾಲ್ಮೀಕಿ ರಾಮಾಯಣ ಮಹಾಯಾಗದ ಪೂರ್ಣಾಹುತಿ ಕಾರ್ಯಕ್ರಮ…ದತ್ತ ವಿಜಯಾನಂದ ಶ್ರೀಗಳಿಂದ ಆಶೀರ್ವಚನ…

ಮೈಸೂರು,ಆ18,Tv10 ಕನ್ನಡದತ್ತ ಪೀಠದ ಆವರಣದಲ್ಲಿರುವ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಆಗಸ್ಟ್ 8 ರಿಂದಆರಂಭವಾಗಿದ್ದ ಸಂಪೂರ್ಣ ಶ್ರೀಮದ್ ವಾಲ್ಮೀಕಿ ರಾಮಾಯಣ ಮಹಾಯಾಗದ ಮಹಾ ಪೂರ್ಣಾಹುತಿ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.ಪ್ರತಿಯೊಬ್ಬರೂ ಒಮ್ಮೆಯಾದರೂ ಸಂಪೂರ್ಣ ರಾಮಾಯಣ ಪಾರಾಯಣ ಮಾಡಬೇಕು.ಭಾರತ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲಿ ಶ್ರೀರಾಮ ಎಂಬ ಹೆಸರು ಕೇಳಿದರೆ ಸಾಕು ಮೈ ನವಿರೇಳುತ್ತದೆ.ಲೋಕಕಲ್ಯಾಣಾರ್ಥವಾಗಿ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥಿಸಿ 11
Read More

ಶ್ರಾವಣ ಶನಿವಾರ…ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಲಡ್ಡು ವಿತರಣೆ…

ಮೈಸೂರು,ಆ17,Tv10 ಕನ್ನಡಶ್ರಾವಣ ಶನಿವಾರ ಅಂಗವಾಗಿ ಶ್ರೀನಿವಾಸ ಭಕ್ತ ಮಂಡಳಿವತಿಯಿಂದ ಒಂಟಿಕೊಪ್ಪಲು ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ 10ಸಾವಿರ ಲಾಡು ವಿತರಣೆ ಮಾಡಲಾಯಿತು. ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ರವರು ವಿತರಣೆಗೆ ಚಾಲನೆ ನೀಡಿದರು,ನಂತರ ಶಾಸಕರಾದ ಕೆ. ಹರೀಶ್ ಗೌಡ ರವರು ಮಾತನಾಡಿ ಮುಂದಿನ ದಿನದಲ್ಲಿ ಸಾಂಸ್ಕೃತಿಕ ಭರಟನಾಟ್ಯ, ಭಜನೆ, ಸಂಗೀತ ಕಾರ್ಯಕ್ರಮಗಳು, ಶ್ರೀನಿವಾಸ ಕಲ್ಯಾಣ, ತಿರುಪತಿ ಪ್ರವಾಸ ಹಮ್ಮಿಕೊಳ್ಳಲು ಶ್ರೀನಿವಾಸ ಭಕ್ತ ಮಂಡಳಿ ವತಿಯಿಂದ ಸಮಿತಿ ರಚಿಸಿ ಕಾರ್ಯರೂಪಕ್ಕೆ
Read More

ಕುವೆಂಪುನಗರ ಠಾಣೆ ಪೊಲೀಸರ ಕಾರ್ಯಾಚರಣೆ…ಅಂತರ್ ರಾಜ್ಯ ಕಳ್ಳನ ಬಂಧನ…7.20 ಲಕ್ಷ ಮೌಲ್ಯದ ವಾಹನ ವಶ…

ಮೈಸೂರು,ಆ17,Tv10 ಕನ್ನಡ ಕುವೆಂಪುನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಅಂತರ್ ರಾಜ್ಯ ಕಳ್ಳ ಸೆರೆಯಾಗಿದ್ದಾನೆ.ಆರೋಪಿಯಿಂದ 6 ಲಕ್ಷ ಮೌಲ್ಯದ ಗೂಡ್ಸ್ ವಾಹನ 1.20 ಲಕ್ಷ ಮೌಲ್ಯದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.ಜಮ್ಮು ಕಾಶ್ಮೀರ ರಾಜ್ಯದ ನಿವಾಸಿ ಮಹಮದ್ ರಮ್ಜಾನ್(21) ಬಂಧಿತ ಚೋರ.ಕುವಪುನಗರದಲ್ಲಿರುವ ಶಂಕರ್ ಬಿಲ್ಡ್ ಪ್ರೋ ಕಂಪನಿಗೆ ಸೇರಿದ ಗೂಡ್ಸ್ ವಾಹನವನ್ನ ಈತ ಕಳುವು ಮಾಡಿದ್ದ.ಈ ಕುರಿತಂತೆ ಕಂಪನಿ ವ್ಯವಸ್ಥಾಪಕರು ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ
Read More

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ದರ್ಶನ್ ಧೃವನಾರಾಯಣ್…ನಿವಾಸಿಗಳಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ…

ನಂಜನಗೂಡು,ಆ17,Tv10 ಕನ್ನಡಕಪಿಲಾ ಪ್ರವಾಹಕ್ಕೆ ನಲುಗಿದ ಪ್ರದೇಶಗಳಿಗೆ ನಂಜನಗೂಡು ಶಾಸಕ ದರ್ಶನ್ಧೃವನಾರಾಯಣ್ ಭೇಟಿ ನೀಡಿ ಸಂತ್ರಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಗೆಬರುವ ಮುದ್ದಹಳ್ಳಿ, ಬ್ಯಾಳಾರುಹುಂಡಿ, ಸೂರಹಳ್ಳಿ, ದೇಪೇಗೌಡನ ಪುರ, ಕೃಷ್ಣಾಪುರ, ಕೂಗಲೂರು ಗ್ರಾಮಗಳಿಗೆ ಭೇಟಿ ನೀಡಿಹಾನಿಯಾಗಿರುವ ಮನೆಗಳ ಸ್ಥಳ ವೀಕ್ಷಣೆ ಮಾಡಿ ಅಭಯ ನೀಡಿದ್ದಾರೆ. ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.ಸರ್ಕಾರದ ಮಟ್ಟದಲ್ಲಿ ದೊರೆಯುವ ಸೌಲಭ್ಯಗಳನ್ನ ಸಂತ್ರಸ್ಥರಿಗೆ ಶೀಘ್ರದಲ್ಲಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ
Read More

ಸಸ್ಪೆಂಡ್ ಆದ ಪೊಲೀಸ್ ಪೇದೆಗೆ ಸಿಎಂ ಮೆಡಲ್…ಇದೆಂಥಾ ವ್ಯವಸ್ಥೆ…

ಮೈಸೂರು,ಆ15,Tv10 ಕನ್ನಡಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ,ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯ,ದಾಖಲೆಗಳ ಸೋರಿಕೆ ಮಾಡುವ ಶಂಕೆ ಇವೆಲ್ಲಾ ಆರೋಪಗಳ ಹಿನ್ನಲೆ ಅಮಾನತಾದ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.ಒಂದು ತಿಂಗಳ ಹಿಂದೆ ಅಮಾನತಾದರೂ ಇದೀಗ ಬಿಡುಗಡೆಯಾದ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಮುಖ್ಯಪೇದೆ ಸಲೀಂ ಪಾಷಾ ಹೆಸರು ಪ್ರಕಟವಾಗಿದ್ದು ಅಚ್ಚರಿಗೆ ಕಾರಣವಾಗಿದೆ.2023 ನೇ ಸಾಲಿಗೆ ಆಯ್ಕೆಯಾದವರ ಸಿಬ್ಬಂದಿ ಅಧಿಕಾರಿಗಳ ಪಟ್ಟಿಯಲ್ಲಿ ಮುಖ್ಯಪೇದೆ ಸಲಾಂ ಪಾಷಾ ಹೆಸರು ಪ್ರಕಟವಾಗಿದೆ.ಮೇಟಗಳ್ಳಿ
Read More