TV10 Kannada Exclusive

ದತ್ತ ವೆಂಕಟೇಶ್ವರನ ದೇವಾಲಯದಲ್ಲಿ ಕುಂಭಾಭಿಷೇಕ…ಸಹಸ್ರಾರು ಭಕ್ತರು ಭಾಗಿ…ಗಣಪತಿ ಶ್ರೀಗಳಿಂದ ಅಭಿಷೇಕ…

ಮೈಸೂರು,ಮೇ24,Tv10ಕನ್ನಡ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ದತ್ತವೆಂಕಟೇಶ್ವರ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ ಅಂಗವಾಗಿ ನೆರವೇರುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಂದು ವಿಜೃಂಭಣೆಯಿಂದ ಕುಂಭಾಭಿಷೇಕ ನೆರವೇರಿತು.ದೇವಾಲಯದ ಗೋಪುರದಲ್ಲಿರುವ ಶಿಖರದ ಮೇಲೆ ಆಗಮಿಕರ ಸಮ್ಮುಖದಲ್ಲಿ ವಿವಿದ ನದಿಗಳಿಂದ ಸಂಗ್ರಹಿಸಲಾದ ಶುದ್ದ ಜಲದಿಂದ ಗಣಪತಿ ಶ್ರೀಗಳು ಕುಂಭಾಭಿಷೇಕ ನೆರವೇರಿಸಿದರು.ಈ ವೇಳೆ ಹಿತವಚನ ನೀಡಿದ ಶ್ರೀಗಳು ಕ್ರೋಧ, ಮತ್ಸರ, ಕಷ್ಟ ಕೋಟಲೆಗಳು‌ ದೂರವಾಗಿ ಕಾಲ,ಕಾಲಕ್ಕೆ ಮಳೆ,ಬೆಳೆಯಾಗಿ ದೇಶ ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿದರು.ಇದಕ್ಕೂ
Read More

ಯರಗನಹಳ್ಳಿ ಅನಿಲಸೋರಿಕೆ ದುರಂತ…ಕುಟುಂಬಕ್ಕೆ ಸಾಂತ್ವನ ತಿಳಿಸಿದ ಸಿಎಂ ಸಿದ್ದರಾಮಯ್ಯ…

ಮೈಸೂರು,ಮೇ23,Tv10 ಕನ್ನಡ ಮೈಸೂರಿನ ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದಘಟನಾ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಕುಮಾರಸ್ವಾಮಿ ಅವರ ಇಡೀ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ.ಅವರ ಪತ್ನಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.ಗ್ಯಾಸ್ ಲೀಕ್ ಆಗಿಅವರ ಇಡೀ ಕುಟುಂಬ ನಾಶವಾಗಿದೆ.ಗಂಡ ಹೆಂಡತಿ ಇಬ್ಬರು ಒಳಗೆ ಮಲಗಿದ್ದರು.ಇಬ್ಬರು ಮಕ್ಕಳು ಹೊರಗಡೆ ಹಾಲ್ ನಲ್ಲಿ ಮಲಗಿದ್ದರು.ಎಲ್ಲರೂ ಕೂಡ ನಿದ್ರೆಯಲ್ಲೇ ಪ್ರಾಣ ಬಿಟ್ಟಿದ್ದಾರೆ.ಅವರ
Read More

ಯಥಾಸ್ಥಿತಿಗೆ ಮರಳಿದ ಮೈಸೂರು ಶವಾಗಾರ ಶೀತಲ ಯಂತ್ರಗಳು…Tv10 ವರದಿ ಫಲಶೃತಿ…ನಿಟ್ಟುಸಿರು ಬಿಟ್ಟ ಸಿಬ್ಬಂದಿ…

ಮೈಸೂರು,ಮೇ23,Tv10 ಕನ್ನಡ ಮೈಸೂರು ಶವಾಗಾರ ಶೀತಲ ಯಂತ್ರಗಳಿಗೆ ಕೊನೆಗೂ ರಿಪೇರಿ ಭಾಗ್ಯ ದೊರೆತಿದೆ.ದುರಸ್ಥಿಗೆ ಬಂದಿದ್ದ ಮೂರು ಯಂತ್ರಗಳನ್ನ ಸರಿಪಡಿಸಿದ ಅಧಿಕಾರಿಗಳು ಯಥಾಸ್ಥಿತಿಗೆ ತರುವ ಮೂಲಕ ಅಲ್ಲಿನ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.ಇದು Tv10 ವರದಿ ಫಲಶೃತಿ. ಕೆಲವು ದಿನಗಳ ಹಿಂದಷ್ಟೆ ಮೈಸೂರು ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಶವಾಗಾರದ ಶೀತಲ ಯಂತ್ರಗಳು ಕೆಟ್ಟುನಿಂತ ಬಗ್ಗೆ Tv10 ವರದಿ ಮಾಡಿತ್ತು.ಮೂರು ಯಂತ್ರಗಳ ಪೈಕಿ ಎರಡು ಯಂತ್ರಗಳು ಕೈಕೊಟ್ಟ ಪರಿಣಾಮ ಮೃತದೇಹಗಳು ಕೊಳೆತು ದುರ್ನಾತ
Read More

ಅರಮನೆ ಮಂಡಳಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ…ಲೆಕ್ಕಕ್ಕೆ ಸಿಗದ 4.10 ಲಕ್ಷ ನಗದು ಸೀಜ್…

ಮೈಸೂರು,ಮೇ23,Tv10 ಕನ್ನಡ ಅರಮನೆ ಮಂಡಳಿ ಕಚೇರಿ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ದಾಳಿ ನಡೆಸಿದ ವೇಳೆ ಪ್ರವೇಶ ಧ್ವಾರ ಹಾಗೂ ಪಾರ್ಕಿಂಗ್ ಲಾಟ್ ನಲ್ಲಿ ಯಾವುದೇ ಲೆಕ್ಕ ಇಡದ 4.10 ಲಕ್ಷ ನಗದು ದೊರೆತಿದೆ.ಪ್ರವೇಶ ಟಿಕೆಟ್ ಹಾಗೂ ಪಾರ್ಕಿಂಗ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ದೂರಿನ ಆಧಾರದ ಮೇಲೆ ದಾಳಿ ನಡೆಸಲಾಗಿದೆ.ಲೋಕಾಯುಕ್ತ ಎಸ್ಪಿ ಸಚಿತ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.ಮೈಸೂರು ,ಚಾಮರಾಜನಗರ, ಮಂಡ್ಯ ಹಾಗೂ ಮಡಿಕೇರಿ ಲೋಕಾಯುಕ್ತ
Read More

ಅವಧೂತ‌ ದತ್ತಪೀಠದಲ್ಲಿ ವೆಂಕಟೇಶ್ವರನ 25 ನೇ ವಾರ್ಷಿಕೋತ್ಸವ ಸಂಭ್ರಮ…ವಿಜೃಂಬಣೆಯಿಂದ ನಡೆದ ತೆಪ್ಪೋತ್ಸವ…

ಮೈಸೂರು,ಮೇ23,Tv10 ಕನ್ನಡ ಮೈಸೂರು ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ‌ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ ‌25‌ ನೇ ವಾರ್ಷಿಕೋತ್ಸವ ಸಮಾರಂಭದ ಸಂಭ್ರಮ ಮನೆಮಾಡಿದೆ.ವಾರ್ಷಿಕೋತ್ಸವದ ಅಂಗವಾಗಿ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಿಂದ ನೆರವೇರುತ್ತಿದೆ. ಇಂದು ವೆಂಕಟೇಶ್ವರ ಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿದೆ.ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಬಣ್ಣದ ದೀಪಗಳು ಹಾಗೂ ವಿವಿದ ಪುಷ್ಪಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ಶ್ರೀ ವೆಂಕಟೇಶ್ವರನ ಉತ್ಸವಮೂರ್ತಿಯನ್ನ ಸ್ಫಾಪಿಸಿ ಉತ್ಸವವನ್ನ ಜರುಗಿಸಲಾಗಿದೆ.ಗಣಪತಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ
Read More

ಯಶಸ್ವಿನಿ ಸೋಮಶೇಖರ್ ಮುಡಾ ಅಧ್ಯಕ್ಷರಂತೆ…?ಸ್ಥಾನ ತೆರುವಾದ್ರೂ ನಾಮಫಲಕ ಮಾತ್ರ ತೆರುವಾಗಿಲ್ಲ…

ಮೈಸೂರು,ಮೇ23,Tv10 ಕನ್ನಡ ಮುಡಾ ಅಧ್ಯಕ್ಷ ಸ್ಥಾನದಿಂದ ಯಶಸ್ವಿನಿ ಸೋಮಶೇಖರ್ ತೆರುವಾಗಿ ವರ್ಷಗಳು ಉರುಳಿದೆ.ಈಗಾಗಲೇ ಇಬ್ಬರು ಅಧ್ಯಕ್ಷರು ಸ್ಥಾನ ಅಲಂಕರಿಸಿದ್ದಾರೆ.ಹೀಗಿದ್ದರೂ ಯಶಸ್ವಿನಿ ಸೋಮಶೇಖರ್ ತಮ್ಮ ಮನೆ ಮುಂದೆ ತಾವಿನ್ನೂ ಮುಡಾ ಅಧ್ಯಕ್ಷರು ಎಂಬಂತೆ ನಾಮಫಲಕ ಹಾಕಿಕೊಂಡಿದ್ದಾರೆ.ಮೈಸೂರಿನ ಎಂ.ಜಿ.ರಸ್ತೆಯಲ್ಲಿರುವ ತಮ್ಮ ನಿವಾಸದ ಮುಂದೆ ಇನ್ನೂ ನಾಮಫಲಕ ರಾರಾಜಿಸುತ್ತಿದೆ.ಒಬ್ಬ ಜವಾಬ್ದಾರಿಯುತ ಪ್ರತಿನಿಧಿಯಾಗಿ ಮಾಜಿ ಆಗಿದ್ದರೂ ಇನ್ನೂ ನಾಮಫಲಕ ಬದಲಿಸದಿರುವುದು ಶೋಚನೀಯ.ಜನನಿಬಿಡ ಪ್ರದೇಶದಲ್ಲಿ ತಮ್ಮ ನಿವಾಸವಿದ್ದರೂ ಸಾರ್ವಜನಿಕರಿಗೆ ನಾಮಫಲಕದಲ್ಲಿ ತಪ್ಪು ಮಾಹಿತಿ ನೀಡುತ್ತಿರುವ ಯಶಸ್ವಿನಿ ಸೋಮಶೇಖರ್
Read More

ಮಹಿಳೆಯ ವೈಯುಕ್ತಿಕ ಫೋಟೋ,ವಿಡಿಯೋ,ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಕಿರುಕುಳ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಮೈಸೂರು,ಮೇ22,Tv10 ಕನ್ನಡ ಮಹಿಳೆಯೊಬ್ಬರ ವೈಯುಕ್ತಿಕ ಫೋಟೋ,ವಿಡಿಯೋ ಹಾಗೂ ಆಡಿಯೋಗಳನ್ನ ಇನ್ಸ್ಟಾಗ್ರಾಂ ನಲ್ಲಿ ಐಡಿ ಕ್ರಿಯೇಟ್ ಮಾಡಿ ಅಪ್ ಲೋಡ್ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿರುವ ಘಟನೆ ಮೈಸೂರಿನ ಬನ್ನಿಮಂಟಪದ ಅಲೀಂನಗರದಲ್ಲಿ ನಡೆದಿದೆ.ನೊಂದ ಮಹಿಳೆ ಆರೋಪಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೊಂದ ಮಹಿಳೆ ನಾಯ್ಡುನಗರದ ಮಹಮದ್ ಫೈಜಾನ್ ಎಂಬಾತನ ಜೊತೆ ಎರಡು ವರ್ಷಗಳ ಕಾಲ ರಿಲೇಷನ್ ಷಿಪ್ ಇಟ್ಟುಕೊಂಡಿದ್ದರು.ಆತನ ವರ್ತನೆ ಸರಿ
Read More

ಮೈಸೂರು:ಅನಿಲ ಸೋರಿಕೆ …ಒಂದೇ ಕುಟುಂಬದ ನಾಲ್ವರು ಸಾವು…

ಮೈಸೂರು,ಮೇ22,Tv10 ಕನ್ನಡ ಅನಿಲ ಸೋರಿಕೆ ಹಿನ್ನಲೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ.ಕುಮಾರಸ್ವಾಮಿ (45) ಮಂಜುಳಾ (39) ಅರ್ಚನಾ (19) ಸ್ವಾತಿ (17) ಸಾವನ್ನಪ್ಪಿದ ದುರ್ದೈವಿಗಳು.ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿದ್ದರು.ಸಿಲಿಂಡರ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
Read More

ವಕೀಲರ ಮುಂದೆ ಮಹಿಳೆಗೆ ಹಲ್ಲೆ ನಡೆಸಿ ಬಟ್ಟೆ ಹರಿದು ವಿಡಿಯೋ ಚಿತ್ರೀಕರಿಸಿದ ತಮ್ಮ…ತಡೆಯಲು ಬಂದ ಅಡ್ವೋಕೇಟ್ ಮೇಲೂ ಅಟ್ಯಾಕ್…

ಮೈಸೂರು,ಮೇ23,Tv10 ಕನ್ನಡ ವಕೀಲರ ಮುಂದೆ ಅಕ್ಕನ ಮೇಲೆ ದಾಳಿ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಟ್ಟೆ ಹರಿದ ತಮ್ಮ ವಿಡಿಯೋ ಚಿತ್ರೀಕರಿಸಿ ಅವಾಂತರ ನಡೆಸಿದ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ.ಪರಿಸ್ಥಿತಿಯನ್ನ ನಿಯಂತ್ರಿಸಲು ಬಂದ ವಕೀಲರ ಮೇಲೂ ಹಲ್ಲೆ ನಡೆಸಿದ ಆರೋಪ ಮಾಡಲಾಗಿದೆ.ಘಟನೆಗೆ ಸಂಭಂಧಪಟ್ಟಂತೆ ಹಲ್ಲೆಗೊಳಗಾದ ಮಹಿಳೆ ಸಹೋದರನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಚನಾ ಹಾಗೂ ವಕೀಲರಾದ ಶರತ್ ರಾಜ್ ಹಲ್ಲೆಗೊಳಗಾದವರು.ರಚನಾ ರವರ
Read More

ರಾತ್ರಿ ಪತ್ನಿ ಜೊತೆ ಮಲಗಿದ…ಬೆಳಿಗ್ಗೆ ನೇಣು ಕುಣಿಕೆಯಲ್ಲಿ ಕಾಣಿಸಿಕೊಂಡ…ಬಟ್ಟೆ ಅಂಗಡಿ ನೌಕರ ಸೂಸೈಡ್…

ಮೈಸೂರು,ಮೇ22,Tv10 ಕನ್ನಡ ರಾತ್ರಿ ಊಟ ಮಾಡಿ ಪತ್ನಿ ಜೊತೆ ಮಲಗಿದ್ದ ವ್ಯಕ್ತಿ ಮರುದಿನ ಬೆಳಿಗ್ಗೆ ನೇಣುಕುಣಿಕೆಯಲ್ಲಿ ಕಾಣಿಸಿಕೊಂಡ ಘಟನೆ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿಕೊಪ್ಪಲ್ ನಲ್ಲಿ ನಡೆದಿದೆ.ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ಡೆಜಲ್ಸ್ ಬಟ್ಟೆ ಅಂಗಡಿಯ ನೌಕರ ಸುರೇಶ್ ಆತ್ಮಹತ್ಯೆಗೆ ಶರಣು.ಪತ್ನಿ ಗಾಯಿತ್ರಿ ಕಾಳಿದಾಸ ರಸ್ತೆಯಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದಾರೆ.ಒಂಟಿಕೊಪ್ಪಲ್ ನ ಮೂರು ಅಂತಸ್ತಿನ ಕಟ್ಟಡದಲ್ಲಿ ದಂಪತಿ ವಾಸವಿದ್ದಾರೆ.ರಾತ್ರಿ ಕೆಲಸದಿಂದ ಹಿಂದಿರುಗಿದ ಸುರೇಶ್ ಊಟ ಮಾಡಿ ಪತ್ನಿ ಜೊತೆ ಮಲಗಿದ್ದಾರೆ.ಮರು
Read More