TV10 Kannada Exclusive

ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ವಿಚಾರಣೆ ಎಂದು ನಂಬಿಸಿ 7 ಲಕ್ಷಕ್ಕೆ ಉಂಡೆನಾಮ…

ಮೈಸೂರು,ಜೂ8,Tv10 ಕನ್ನಡ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ವಿಚಾರಣೆ ಎಂದು ನಂಬಿಸಿ ಮೈಸೂರಿನ ವ್ಯಕ್ತಿಯೊಬ್ಬರಿಗೆ 7 ಲಕ್ಷಕ್ಕೆ ಉಂಡೆ ನಾಮ ಹಾಕಿರುವ ಘಟನೆ ನಡೆದಿದೆ.ಮೈಸೂರಿನ ವಿಶ್ವೇಶ್ವರ ನಗರದ ಸ್ಯಾಮ್ಸನ್ ರಾಕೇಶ್ ಜೋಸೆಫ್ ಎಂಬುವರೇ ವಂಚನೆಗೆ ಒಳಗಾದವರು.ಫೆಡ್ ಎಕ್ಸ್ ಟ್ರಾನ್ಸ್ ಪೋರ್ಟ್ ಎಂದು ಹೇಳಿಕೊಂಡ ವಂಚಕ ನಿಮ್ಮ ಹೆಸರಿನಲ್ಲಿ ಮುಂಬೈನಿಂದ ಇರಾನ್ ಗೆ 650 ಗ್ರಾಂ ಎಂ.ಡಿ.ಎಂ.ಎ.ಸಾಗಣೆ ಆಗಿದೆ.ಈ ಕುರಿತಂತೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ನಡೆಸುತ್ತಾರೆಂದು ಬೆದರಿಸಿ ನಂಬಿಸಿದ್ದಾನೆ.ಈತನ್ನ
Read More

ವರದಕ್ಷಿಣೆ ವಿಚಾರದಲ್ಲಿ ಗಲಾಟೆ …ಭಾವನಿಂದ ಭಾವಮೈದುನನ ಕೊಲೆ…

ಮೈಸೂರು,ಜೂ8,Tv10 ಕನ್ನಡ ವರದಕ್ಷಿಣೆ ಕಿರುಕುಳ ಹಿನ್ನಲೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ರಾಮಕೃಷ್ಣನಗರದಲ್ಲಿ ನಡೆದಿದೆ.ಅಭಿಷೇಕ್(27) ಮೃತ ದುರ್ದೈವಿ.ಭಾವಮೈದುನನನ್ನ ಭಾವನೇ ಕೊಲೆ ಮಾಡಿದ್ದಾನೆ.ಕೊಲೆ ಮಾಡಿದ ಭಾವ ರವಿಚಂದ್ರನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ವರದಕ್ಷಿಣೆ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರವಿಚಂದ್ರನ್ ಚಾಕುವಿನಿಂದ ಅಭಿಷೇಕ್ ಗೆ ಇರಿದಿದ್ದಾನೆ.ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ರವಿಚಂದ್ರನ್ ಈತನ ತಾಯಿ ಶಾರದ,ತಂದೆ ಕುಮಾರ್ ಸೇರಿದಂತೆ ಮೂವರ ವಿರುದ್ದ ಕುವೆಂಪುನಗರ ಪೊಲೀಸ್
Read More

ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳನ್ನ ಭೇಟಿ ಮಾಡಿದ ಯದಯವೀರ್ …ಮೇಲ್ದರ್ಜೆಗೆ ಏರಿಸುವ ಭರವಸೆ…

ಮೈಸೂರ,ಜೂ8,Tv10 ಕನ್ನಡ ಮೈಸೂರು ಮತ್ತು ಕೊಡಗು ಸಂಸದರ ಯದುವೀರ್ ಕೃಷ್ಣದತ್ತ ಚಾಮರಾಜ ಓಡೆಯರ್ ರವರು ಬೆಂಗಳೂರಿನಿಂದ ನವದೆಹಲಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿದರು. ವಿಮಾನಯಾನ ಹಾಗೂ ವಿಮಾನ ಹಾರಾಟದ ಮಾಹಿತಿಯನ್ನು ಪಡೆದುಕೊಂಡರು. ಮೈಸೂರಿನ ವಿಮಾನ ನಿಲ್ದಾಣ ಹಾಗೂ ವಿಮಾನಯಾನವನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಅಗತ್ಯವಿರುವ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಮಾಹಿತಿ ಪಡೆದುಕೊಂಡರು.ಸಂಭಂಧಪಟ್ಟವರೊಂದಿಗೆ ಚರ್ಚಿಸಿ ಶೀಘ್ರ ಕಾರ್ಯರೂಪಕ್ಕೆ ತರುವ ಬಗ್ಗೆ
Read More

ಗುಜರಿ ಗಡಿಯಲ್ಲಿ ಕ್ಲೋರಿನ್ ಸೋರಿಕೆ…5 ಮಂದಿ ಅಸ್ವಸ್ಥ…ಸ್ಥಳಕ್ಕೆ ಜಿಲ್ಲಾಧಿಕಾರಿ,ತಹಸೀಲ್ದಾರ್ ಭೇಟಿ…

ಮೈಸೂರು,ಜೂ8,Tv10 ಕನ್ನಡ  ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ನಲ್ಲಿ ಕ್ಲೋರಿನ್ ಸೋರಿಕೆಯಾಗಿ 5 ಮಂದಿ ಅಸ್ವಸ್ಥರಾಗಿದ್ದಾರೆ. ವರುಣಾ ಚಾನಲ್ ಹಳೆ ಕೆಸರೆಯಲ್ಲಿರುವ ಮಹಮದ್ ಎಂಬುವವರ ಗುಜರಿ ಅಂಗಡಿಯಲ್ಲಿ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ದಾವಣಗೆರೆ ಯಿಂದ ಗುಜರಿ ಪದಾರ್ಥಗಳನ್ನ ಖರೀದಿಸಿರುತ್ತಾರೆ. ಇದರಲ್ಲಿ ಕ್ಲೋರಿನ್ ಸಿಲಿಂಡರ್ ಗಳು ಸಹ ಇದ್ದವು.ಒಂದರಲ್ಲಿ ಗ್ಯಾಸ್ ಇದ್ದು ಇದನ್ನು ತುಂಡು ಮಾಡುವಾಗ ಒಳಗಿದ್ದ ಕ್ಲೋರನ್ ಹೊರ ಬಂದಿರುತ್ತದೆ.
Read More

ಟಿಪ್ಪುಸುಲ್ತಾನ್ 232 ನೇ ಸಂದಲ್ ಉರುಸ್ ಆಚರಣೆ…

ಮೈಸೂರು,ಜೂ6,Tv10 ಕನ್ನಡ ಹಜರತ್ ಟಿಪ್ಪು ಸುಲ್ತಾನ್ ಶಹೀದ್ (ಆರ್.ಎ.) ಕಲ್ಯಾಣ ಮತ್ತು ಉರೂಸ್ ಸಮಿತಿ ಕರ್ನಾಟಕ ವತಿಯಿಂದ ಅಧ್ಯಕ್ಷರಾದ M. S. ಮುಕರ್ರಂ ರವರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ 232 ನೇ ವಾರ್ಷಿಕ ಸಂದಲ್ ಉರುಸ್ ಶರೀಫ್ ನ್ನ ನಗರದ ಮಿಲಾದ್ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಉರುಸ್ ಆಚರಣೆ ಹಿನ್ನಲೆ ಸಭೆ ಹಮ್ಮಿಕೊಳ್ಳಲಾಗಿತ್ತು.ಈ ಸಭೆಯಲ್ಲಿ ಶಖಲೀಲ್ ಉರ್ ರೆಹಮಾನ್ @ ಅಫ್ಫು, ಸಮಾಜ ಸೇವಕ ಶ್ರೀ ಮೊಹಮ್ಮದ್. ಹಜೀಮ್‌ಅಲಿ ಚಿಸ್ತಿ,
Read More

ಕೈ ಕಳೆದುಕೊಂಡು 6 ತಿಂಗಳಾದ್ರೂ ಬಾರದ ಪರಿಹಾರ…ಅತಂತ್ರಕ್ಕೆ ಸಿಲುಕಿದ ಕುಟುಂಬ…FIR ದಾಖಲಿಸಿದರೂ ಡೋಂಟ್ ಕೇರ್…

ನಂಜನಗೂಡು,ಜೂ6,Tv10 ಕನ್ನಡ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮಿಷಿನ್ ಗೆ ಕೈಕೊಟ್ಟು ಗಾಯಗೊಂಡ ಕಾರ್ಮಿಕನಿಗೆ 6 ತಿಂಗಳಾದರೂ ಪರಿಹಾರ ಬಂದಿಲ್ಲ.ಕೆಲಸವೂ ಇಲ್ಲದೆ ಪರಿಹಾರವೂ ಇಲ್ಲದೆ ಜೀವನ ನಿರ್ವಹಣೆಗೆ ಪರದಾಡುತ್ತಿರುವ ಕಾರ್ಮಿಕನ ಕುಟುಂಬ ಪರಿಪಾಟಲು ಪಡುತ್ತಿದೆ.ಪರಿಹಾರ ನೀಡುವುದಾಗಿ ಪೊಳ್ಳು ಭರವಸೆ ನೀಡಿ ಕೈಕೊಟ್ಟ ಕಾರ್ಖಾನೆ ಮುಖ್ಯಸ್ಥರ ಮೇಲೆ ಎಫ್.ಐ.ಆರ್.ದಾಖಲಿಸಿದರೂ ನಿರ್ಲಕ್ಷಿಸಿದ್ದಾರೆ.ಕುಟುಂಬ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಎದರಿಸುತ್ತಿರುವ ಕಾರ್ಮಿಕನ ನೆರವಿಗೆ ಸರ್ಕಾರ ಬರಬೇಕಿದೆ. ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದ ಅಂದಾನಿ ರವರು ಇಂತಹ
Read More

ಸಚಿವ ನಾಗೇಂದ್ರ ರಾಜೀನಾಮೆ…ಅಕ್ರಮ ಆರೋಪಕ್ಕೆ ಸಿದ್ದು ಸರ್ಕಾರದ ಮೊದಲ ವಿಕೆಟ್ ಪತನ…

ಸಚಿವ ನಾಗೇಂದ್ರ ರಾಜೀನಾಮೆ…ಅಕ್ರಮ ಆರೋಪಕ್ಕೆ ಸಿದ್ದು ಸರ್ಕಾರದ ಮೊದಲ ವಿಕೆಟ್ ಪತನ… ಬೆಂಗಳೂರು,ಜೂ6,Tv10 ಕನ್ನಡ ಅಕ್ರಮ ಹಣ ವರ್ಗಾವಣೆ ಆರೋಪ ಹಿನ್ನಲೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ.ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.ಈ ಸಂಬಂಧ ನಾಗೇಂದ್ರ ಮುಖ್ಯಮಂತ್ರಿಗಳಿಗೆ ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ.ಈಗಾಗಲೇ ಪ್ರಕರಣ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿದೆ. ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ
Read More

ಸಹರಾ…ಮಹಿಳಾ ಕ್ರಿಕೆಟ್ ಆಧಾರಿತ ಸಿನಿಮಾ ರೆಡಿ…ಜೂನ್ 7 ಬಿಡುಗಡೆ…

ಮೈಸೂರು,ಜೂ6,Tv10 ಕನ್ನಡ ಮಹಿಳಾ ಕ್ರಿಕೆಟ್ ಆಧಾರಿತ ಸಹಾರಾ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.ಇದೇ ಜೂ. 7 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಬಗ್ಗೆ ಎಳೆಎಳೆಯಾಗಿ ವೀಕ್ಷಕರ ಮನಮುಟ್ಟುವಂತೆ ಚಿತ್ರಿಸಿರುವ ಸಹರಾ ನಿಜಕ್ಕೂ ವಿಶೇಷತೆ ಹೊಂದಿದೆ ಎಂದು ನಾಯಕನಟಿಯಾಗಿರುವ ಸಾರಿಕಾ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜನತೆ ಚಿತ್ರಮಂದಿರಗಳಿಗೆ ಧಾವಿಸಿ ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದ್ದಾರೆ.ಪುರುಷರ ಕ್ರಿಕೆಟ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಮಹಿಳಾ ಕ್ರಿಕೆಟ್ ಕಡೆಗಣಿಸಲಾಗಿದೆ. ಹೀಗಾಗಿ
Read More

ಸೋರುತಿಹುದು ನಾಡಕಚೇರಿ ಮಾಳಿಗೆ…ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಟ್ಟಡ…ಜೀವಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ…

ಹುಣಸೂರು,ಜೂ6,Tv10 ಕನ್ನಡ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಜವಾಬ್ದಾರಿ ಹೊತ್ತ ಸರ್ಕಾರಿ ಕಚೇರಿಯ ಕಟ್ಟಡವೇ ದುಃಸ್ಥಿತಿಯಲ್ಲಿದೆ.ಶಿಥಿಲಗೊಂಡ ಕಟ್ಟಡದಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇಲ್ಲಿನ ಸಿಬ್ಬಂದಿಗಳು ಜೀವಭಯದಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಟ್ಟಡವನ್ನ ಸುಸ್ಥಿತಿಗೆ ತರುವ ಗೋಜಿಗೆ ಹಿರಿಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಯಾವಾಗ ಬೇಕಿದ್ರೂ ಕುಸಿಯುವ ಹಂತದಲ್ಲಿರುವ ಈ ನಾಡಕಚೇರಿಗೆ ಕಾಯಕಲ್ಪ ಬೇಕಿದೆ. ಇದು ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ನಾಡಕಚೇರಿಯ ದುಃಸ್ಥಿತಿ.ಮಳೆ ಬಂದರೆ ಕಚೇರಿಯ ಒಳಗೆ ಸೋರುತ್ತದೆ.ಗೋಡೆಗಳು ಅಲ್ಲಲ್ಲಿ ಉದುರಿಹೋಗಿದೆ.ಶಿಥಿಲಗೊಂಡ
Read More

ಮೈಸೂರು-ಕೊಡಗು ಸಂಸತ್ ಸದಸ್ಯ ಯದುವೀರ್ ಗೆ ಪ್ರಮಾಣಪತ್ರ ವಿತರಣೆ…ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರಿಂದ ಸ್ವೀಕಾರ…

ಮೈಸೂರು,ಜೂ4,Tv10 ಕನ್ನಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಚುನಾಯಿತರಾದ ಬಿಜೆಪಿ ಜೆಡಿಎಸ್ ಮೈತ್ರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಚುನಾವಣಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ರವರು ಪ್ರಮಾಣಪತ್ರ ವಿತರಿಸಿದರು.ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿರುದ್ದ 1,39,262 ಮತಗಳ ಅಂತರದಿಂದ ಜಯಭೇರಿ ಭಾರಿಸಿದ ಯದುವೀರ್ ಪ್ರಮಾಣಪತ್ರ ಸ್ವೀಕಾರ ವೇಳೆ ತಾಯಿ ಪ್ರಮೋದಾದೇವಿ ಹಾಜರಿದ್ದರು…
Read More