32 C
Mysore
Friday, October 23, 2020
Home All News ಸಾಲ ಮಾಡಿ ತರಕಾರಿ ತರಬೇಡಿ ಎಂದು ಪತ್ನಿಯ ಬುದ್ದಿವಾದಕ್ಕೆ ಬೇಸತ್ತ ಪತಿ ಆತ್ಮಹತ್ಯೆ…

ಸಾಲ ಮಾಡಿ ತರಕಾರಿ ತರಬೇಡಿ ಎಂದು ಪತ್ನಿಯ ಬುದ್ದಿವಾದಕ್ಕೆ ಬೇಸತ್ತ ಪತಿ ಆತ್ಮಹತ್ಯೆ…

ಸಾಲ ಮಾಡಿ ತರಕಾರಿ ತರಬೇಡಿ ಎಂದು ಪತ್ನಿ ಹೇಳಿದ ಬುದ್ದಿವಾದಕ್ಕೆ ಬೇಸತ್ತ ಪತಿರಾಯ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಮೇಟಗಳ್ಳಿಯ ಬಿ.ಎಂ.ಶ್ರೀ ನಗರದಲ್ಲಿ ನಡೆದಿದೆ.ಶಿವಾನಂದ(೪೫)ಮೃತ ದುರ್ದೈವಿ.
ಟೆಂಪೋ ಟ್ರಾವೆಲರ್ ಇಟ್ಟಿದ್ದ ಶಿವಾನಂದ
ಕೊರೊನಾ ಹಿನ್ನಲೆ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದರು.
ಮಧ್ಯಪಾನ ಚಟಕ್ಕೆ ಸಿಲುಕಿದ್ದ ಶಿವಾನಂದ್
ಈ ವಿಚಾರದಲ್ಲಿ ಆಗಾಗ ಮನೆಯಲ್ಲಿ ಜಗಳವಾಗುತ್ತಿತ್ತು. ನಿನ್ನೆ ಮಧ್ಯಾಹ್ನ
ತರಕಾರಿ ತರುವುದಾಗಿ ಪತ್ನಿ ಮಣಿಗೆ ಹೇಳಿದ್ದರು. ಸಂಪಾದನೆ ಇಲ್ಲದಿರುವುದರಿಂದ
ಸಾಲ ಮಾಡಿ ತರಕಾರಿ ತರಬೇಡಿ ಎಂದು ಪತ್ನಿ ಮಣಿ ಬುದ್ದಿವಾದ ಹೇಳಿದ್ದಾರೆ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ.ಕೆಲಸ ಹುಡುಕುವುದಾಗಿ ಮನೆಯಲ್ಲಿ ತಿಳಿಸಿ ಹೊರಟ ಶಿವಾನಂದ್
ಮೇಟಗಳ್ಳಿಯ ಗ್ಯಾಸ್ ಗೊಡೌನ್ ಬಳಿ ನಿರ್ಮಿಸುತ್ತಿದ್ದ ಹೊಸ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಮಗಳ ಮೊಬೈಲ್ ಗೆ ಫೋನ್ ಮಾಡಿ ಸಾಯುತ್ತಿರುವುದಾಗಿ ತಿಳಿಸಿದ್ದಾರೆ.
ಕುಡಿದ ಅಮಲಿನಲ್ಲಿ ಆಗಾಗ ಹೀಗೆ ಬೆದರಿಸುತ್ತಿದ್ದುದರಿಂದ ಸಹಜವೆಂದು ತಿಳಿದ ಮಣಿ ಸುಮ್ಮನಾಗಿದ್ದಾರೆ.
ಕುಡಿದ ಅಮಲಿನಲ್ಲಿ ಹೊಸಮನೆಯಲ್ಲಿ ಶಿವಾನಂದ್ ನೇಣಿಗೆ ಶರಣಾಗಿದ್ದಾರೆ.
ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಾನಂದ್ ರನ್ನ ಪತ್ನಿ ಉಳಿಸಿಕೊಂಡಿದ್ದರು.
ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..‌

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ಪೋಷಕರ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಮಗ…ಯಾಕೆ ಗೊತ್ತಾ…

ಯುವಕನೊಬ್ಬ ಪೋಷಕರ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ರತ್ನಪುರಿಯಲ್ಲಿ ನಡೆದಿದೆ. ಸ್ನೇಹಿತರು ಪೋಷಕರ...

ಅನೈತಿಕ ಸಂಭಂಧಕ್ಕೆ ಲಾಕ್ ಡೌನ್ ಅಡ್ಡಿ…ಪತಿಯನ್ನ ಕೊಂದ ಪತ್ನಿ ಪ್ರಿಯಕರ ಅಂದರ್…

ಲಾಕ್ ಡೌನ್ ಸಂಧರ್ಭದಲ್ಲಿ ಅನೈತಿಕ ಸಂಭಂಧಕ್ಕೆ ಅಡ್ಡಿಯಾದ ಪತಿಯನ್ನ ಪ್ರಿಯಕರನ ಜೊತೆ ಸೇರಿ ಕೊಂದ ಪತ್ನಿ ಅಂದರ್ ಆಗಿದ್ದಾಳೆ.ಪ್ರಿಯತಮೆಗೆ ಸಾಥ್ ನೀಡಿದ ಪ್ರಿಯಕರನೂ ಸಹ...

ಎಮ್ಮೆ ಮೇಯಿಸುತ್ತಿದ್ದ ಒಂಟಿ ಮಹಿಳೆ ಕೊಲೆ ರಹಸ್ಯ ಬಯಲು…ಚಿನ್ನಾಭರಣಕ್ಕಾಗಿ ಹಂತಕರಾದರು…

ಒಂದೂವರೆ ತಿಂಗಳ ಹಿಂದೆ ನಡೆದ ಕೊಲೆ ರಹಸ್ಯ ಭೇಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.ಚಿನ್ನಾಭರಣಕ್ಕಾಗಿ ಕೊಲೆ ನಡೆಸಿರುವುದಾಗಿ ವಿಚಾರಣೆ...

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ…ಪ್ರೀತಿಸಿ ಮದುವೆಯಾದ ಎರಡು ವರ್ಷಕ್ಕೇ ಮಸಣಕ್ಕೆ…

ವರದಕ್ಷಿಣೆ ಪೆಡಂಭೂತಕ್ಕೆ ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಗೃಹಿಣಿ ಬಲಿಯಾಗಿದ್ದಾಳೆ. ಮಂಜುಳಾ(೨೦) ಅನುಮಾನಾಸ್ಪದವಾಗಿಸಾವನ್ನಪ್ಪಿದ್ದಾಳೆ.ಪೋಷಕರಿಂದ ಕೊಲೆ ಆರೋಪ ಪ್ರಕರಣ ದಾಖಲಾಗಿದೆ.ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದಲ್ಲಿ...

Recent Comments