32 C
Mysore
Thursday, June 4, 2020
Home Politics SDPIಹಾಗೂ PFI ಸಂಘಟನೆಗಳನ್ನ ನಿಷೇಧಿಸಿ…ವಿ.ಹೆಚ್.ಪಿ ಹಾಗೂ ಬಜರಂಗದಳ ಒತ್ತಾಯ…

SDPIಹಾಗೂ PFI ಸಂಘಟನೆಗಳನ್ನ ನಿಷೇಧಿಸಿ…ವಿ.ಹೆಚ್.ಪಿ ಹಾಗೂ ಬಜರಂಗದಳ ಒತ್ತಾಯ…

SDPI ಮತ್ತು PFI ಸಂಘಟನೆಯನ್ನು ಕೂಡಲೇ ನಿಷೇಧಿಸುವಂತೆ ವಿ.ಹೆಚ್.ಪಿ.ಹಾಗೂ ಬಜರಂಗ ದಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಗೃಹಸಚಿವರಿಗೆ ಮತ್ತು ಮಾನ್ಯ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಾದ ಸಿ.ಎ.ಎ ಮತ್ತು ಎನ್.ಆರ್.ಸಿ ಗಳ ಪರ ನಿಂತ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀಸೂರ್ಯ ಮತ್ತು ಯುವ ಬ್ರಿಗೇಡ್ ನ ಸಂಚಾಲಕರಾದ ಚಕ್ರವರ್ತಿ ಸೂಲಿಬೆಲೆ ಮುಂತಾದ ದೇಶಭಕ್ತರನ್ನು ಹತ್ಯೆಮಾಡಲು ವ್ಯೂಹ ರಚಿಸಿರುವ SDPI ಸಂವಿದಾನ ವಿರೋಧೀ ಕೃತ್ಯದಲ್ಲಿ ಭಾಗವಹಿಸಿದೆ. ಈ ಕೂಡಲೇ ಇಂಥಹಾ ಸಮಾಜದ್ರೋಹಿ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸಿ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಮೈಸೂರು ಗ್ರಾಮಾಂತರ ಬಜರಂಗದಳ ಸಂಯೋಜಕರಾದ ಲಕ್ಷ್ಮಿನಾರಾಯಣ್, ನಗರ ಬಜರಂಗದಳ ವಿಶ್ವಾಸ್ ಭಟ್,ಜಯಂತ್,ಮೈಸೂರು ರಕ್ಷಣಾ ವೇದಿಕೆಯ ಮೈ.ಕಾ.ಪ್ರೇಮ್ ಕುಮಾರ್, ಪ್ರದೀಪ್ ಕಳಸಾಪುರ,ವಿಕ್ರಂ ಅಯ್ಯಂಗಾರ್ ಮತ್ತು ಜಯಸಿಂಹ ರವರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ರವರಿಗೆ ಮನವಿ‌ ಪತ್ರ ನೀಡಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಅತೀಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದರೆ ಕಾನೂನು ರೀತ್ಯಾ ಕ್ರಮ

ಮೈಸೂರು ಜೂನ್.3. ಮೈಸೂರು ನಗರದ ಜೆ.ಎನ್.ನರ್ಮ್-ಬಿ.ಎಸ್.ಯು.ಪಿ ಹಂತ-1 ಮತ್ತು ಹಂತ 2 ರ ಯೋಜನೆಯಡಿ ಕೆಸರೆ ಸರ್ವೆ ನಂ.484/1 ಮತ್ತು 484/2 ರಲ್ಲಿ ಒಟ್ಟು 252 ಮನೆಗಳನ್ನು ನಿರ್ಮಿಸಿದ್ದು, ಸದರಿ...

ಗಡಸು ಮರದ ಜಾತಿಯ ಗಿಡಗಳನ್ನು ನೆಡಲು ಸಹಕರಿಸಿ

ಮೈಸೂರು, ಜೂನ್.3 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳು, ಉದ್ಯಾನವನಗಳು ಹಾಗೂ ಸ್ಮಶಾನಗಳಲ್ಲಿ ಮರದ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದ್ದು, ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಅವಧಿಯಲ್ಲಿ ಮಳೆ ಹಾಗೂ...

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ ಹುಟ್ಟು ಹಬ್ಬ

ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀಮನ್ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136...

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ.

ಮಂಡ್ಯ:ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ...

Recent Comments