32 C
Mysore
Wednesday, August 12, 2020
Home All News ಪ್ರಿಯತಮನ ಟಾರ್ಚರ್…ವಾಲೆಂಟೈನ್ಸ್ ಡೇ ಮುನ್ನ ಪ್ರೇಯಸಿ ಸೂಸೈಡ್…

ಪ್ರಿಯತಮನ ಟಾರ್ಚರ್…ವಾಲೆಂಟೈನ್ಸ್ ಡೇ ಮುನ್ನ ಪ್ರೇಯಸಿ ಸೂಸೈಡ್…

ವಾಲೆಂಟೈನ್ಸ್ ಡೇ ಅಂದ್ರೆ ಪ್ರೇಮಿಗಳ ಸಂಭ್ರಮದ ದಿನ.ತಮ್ಮ ಪ್ರೀತಿಯನ್ನ ಮತ್ತಷ್ಟು ವೃದ್ದಿಪಡಿಸಿಕೊಳ್ಳುವ ದಿನ.ಆದ್ರೆ ಪ್ರೇಮಿಗಳ ದಿನಾಚರಣೆ ಕೆಲವೇ ಗಂಟೆಗಳು ಇರುವ ಮುನ್ನವೇ ಪ್ರಿಯತಮನ ಕಿರಿಕ್ ಗೆ ಪ್ರೇಯಸಿ ಡೆತ್ ಆಗಿದ್ದಾಳೆ.ಪ್ರೀತಿಸಿದ ಹುಡುಗನ ಬ್ಲಾಕ್ ಮೇಲ್ ಗೆ ಹೆದರಿದ ಪ್ರಿಯತಮೆ ವಿಷ ಸೇವಿಸಿ ಜಗತ್ತಿನಿಂದಲೇ ದೂರವಾಗಿದ್ದಾಳೆ.ಪ್ರೇಮಿಗಳ ದಿನಾಚರಣೆ ಮುನ್ನವೇ ಮನಸ್ಸನ್ನ ಕೊಟ್ಟ ಹುಡುಗಿಗೆ ಸಾವಿನ ದಿನವಾಗಿದೆ. ಪ್ರಿತಮನ ಕಿರುಕುಳಕ್ಕೆ ಪ್ರಾಣ ಬಿಟ್ಟವಳು ಮೇಘನಾ(೨೦).ಪ್ರಿಯತಮ ಮಣಿಕಂಠ. ನಂಜನಗೂಡು ತಾಲೂಕಿನ ಮೆಲ್ಲಹಳ್ಳಿಯ ಮೇಘನಾ ಹಾಗೂ ಹೆಮ್ಮರಗಾಲದ ಮಣಿಕಂಠ ನಡುವೆ ಪ್ರೀತಿ ಬೆಳೆದಿತ್ತು.ಇಬ್ಬರೂ ಮದುವೆ ಆಗಲು ತೀರ್ಮಾನಿಸಿದ್ರು.ಆದ್ರೆ ಮದುವೆಗೆ ಜಾತಿ ಅಡ್ಡ ಬಂತು.ಅನ್ಯಜಾತಿ ಕಾರಣ ಮೇಘನಾ ಮನೆಯಲ್ಲಿ ವಿರೋಧ ವ್ಯಕ್ತವಾಯ್ತು.ಇಬ್ಬ ರಿಗೂ ಮೇಘನಾ ತಂದೆ ಮಹದೇವಯ್ಯ ಮನವರಿಕೆ ಮಾಡಿಕೊಟ್ರು.ಮಹದೇವಯ್ಯ ಮಾತಿಗೆ ಗೌರವ ಕೊಟ್ಟ ಮೇಘನಾ ಮಣಿಕಂಠನ್ನ ಮರೆತು ಗುಂಡ್ಲುಪೇಟೆ ಹುಡುಗ ಸೋಮಶೇಖರ್ ಜೊತೆ ಮದುವೆ ಆಗಲು ಒಪ್ಪಿಗೆ ಸೂಚಿಸಿದ್ದಳು.ಈ ವಿಚಾರ ಮಣಿಕಂಠನಿಗೆ ತಿಳಿಯಿತು.ಮೇಘನಾಗೆ ಫೋನ್ ಮಾಡಿ ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿದ.ಅಲ್ಲದೆ ಮದುವೆ ಆಗಲು ಒಪ್ಪಿದ್ದ ಸೋಮಶೇಖರ್ ಗೆ ಫೋನ್ ಮಾಡಿ ತಮ್ಮಿಬ್ಬರ ಲವ್ ಅಫೇರ್ ತಿಳಿಸಿದ್ದ.ಜೊತೆಗೆ ಇಬ್ಬರೂ ಒಟ್ಟಿಗೆ ಇದ್ದ ಫೋಟೋ ಫೇಸ್ ಬುಕ್ ಗೆ ಹಾಕುವುದಾಗಿ ಹೆದರಿಸಿದ.ಇದರಿಂದ ಮನನೊಂದ ಮೇಘನಾ ಮೆಲ್ಲಹಳ್ಳಿಯ ಅಜ್ಜಿ ಮನೆಯಲ್ಲಿ ವಿಷ ಸೇವಿಸಿದಳು.ಕೂಡಲೇ ತಾನು ಮದುವೆ ಆಗಬೇಕಿದ್ದ ಸೋಮಶೇಖರ್ ಗೆ ಫೋನ್ ಮಾಡಿ ಮಣಿಕಂಠ ಕೊಟ್ಟ ಟಾರ್ಚರ್ ವಿಚಾರ ತಿಳಿಸಿ ವಿಷ ಸೇವಿಸಿರುವುದಾಗಿ ಹೇಳಿದಳು.ಮೆಲ್ಲಹಳ್ಳಿಗೆ ಬಂದ ಸೋಮಶೇಖರ್ ತಾನು ಕೈ ಹಿಡಿಯಬೇಕಿದ್ದ ಮೇಘನಾಳನ್ನ ಆಸ್ಪತ್ರೆಗೆ ದಾಖಲಿಸಿದ.ಆದ್ರೆ ಜವರಾಯನ ಕರೆ ಮೇಘನಾಳನ್ನ ಉಳಿಯಲು ಬಿಡಲಿಲ್ಲ. ಪ್ರಿಯತಮನ ಬ್ಲಾಕ್ ಮೇಲ್ ಗೆ ಹೆದರಿದ ಮೇಘನಾ ವಾಲೆಂಟೈನ್ಸ್ ದಿನಕ್ಕೆ ಮುನ್ನಾ ದಿನವೇ ಇಹಲೋಕವನ್ನ ತ್ಯಜಿಸಿದ್ದಾಳೆ.ಪೋಷಕರ ಪ್ರೀತಿಯನ್ನ ಅರ್ಥ ಮಾಡಿಕೊಳ್ಳದ ಯುವ ಪೀಳಿಗೆ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಳ್ಳುವುದು ತಪ್ಪು.ಪ್ರೇಮಿಗಳ ದಿನಾಚರಣೆ ಆಚರಿಸಬೇಕಾದ ಹುಡುಗಿ ಪ್ರೀತಿಸಿದ ಹುಡುಗನ ಕಿರುಕುಳದಿಂದಲೇ ಪ್ರಾಣ ಬಿಟ್ಟಿದ್ದಾಳೆ.ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾದ ಮಣಿಕಂಠನಿಗೆ ಶಿಕ್ಷೆ ಆಗಬೇಕು ಅನ್ನೋದು ಸ್ಥಳೀಯರ ಮನವಿಯಾಗಿದೆ ಪ್ರೀತಿಯ ಬಲೆಗೆ ಬಿದ್ದು ಅಮರ ಪ್ರೇಮಿಗಳಾಗಬೇಕಿದ್ದ ಮೇಘನಾ ಹಾಗೂ ಮಣಿಕಂಠ ಜಾತಿ ಅಡ್ಡ ಬಂದ ಕಾರಣ ಬೇರ್ಪಟ್ಟಿದ್ದಾರೆ.ಮತ್ತೊಬ್ಬನ ಜೊತೆ ಸಂಸಾರ ಸಾಗಿಸಬೇಕಿದ್ದ ಮೇಘನಾ ಪ್ರಿಯಕರನ ಕಿರುಕುಳಕ್ಕೆ ಪ್ರಾಣ ಬಿಟ್ಟಿದ್ದು ವಿಪರ್ಯಾಸ.ಅದರಲ್ಲೂ ಪ್ರೇಮಿಗಳ ಮುನ್ನಾ ದಿನ ಆತ್ಮಹತ್ಯೆಗೆ ಶರಣಾಗಿದ್ದು ವ್ಯಾಲೆಂಟೈನ್ಸ್ ದಿನಾಚರಣೆಗೆ ಒಂದು ಕಪ್ಪು ಚುಕ್ಕಿಯಾಗಿದೆ…

LEAVE A REPLY

Please enter your comment!
Please enter your name here

- Advertisment -
< target="_blank">

Most Popular

ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ…ಕೊಲೆ ಶಂಕೆ…

ಅಕ್ರಮ ಸಂಭಂಧ ಹಿನ್ನಲೆ ಬೇರೆಯಾಗಿದ್ದ ಪತ್ನಿಯ ಮನೆಯಲ್ಲಿ ಪತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.ಗೋವಿಂದ ನಾಯ್ಕ(೩೦) ಮೃತ...

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ…ಮಾದರಿ ಜಿಲ್ಲಾಧಿಕಾರಿ…

ಅಧಿಕಾರ ಇದ್ರೆ ಕೆಲವರು ಎಲ್ಲಾ ರೀತಿಯ ಸೌಲಭ್ಯಗಳನ್ನ ಅನುಭವಿಸಯವರೇ ಹೆಚ್ಚು.ಆದರೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಅಪವಾದದಿಂದ ದೂರ ಇದ್ದಾರೆ.ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು...

ಮಾವುತನನ್ನೇ ಬಲಿ ಪಡೆದ ಆನೆ…ಮೈಸೂರು ಮೃಗಾಲಯದಲ್ಲಿ ಘಟನೆ…

ವಿಶ್ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ತುಳಿದು ಕೊಂದ ಘಟನೆ ಇಂದು ಸಂಜೆ ನಡೆದಿದೆ.ಹರೀಶ್(೩೮) ಮೃತ ದುರ್ದೈವಿಯಾಗಿದ್ದಾರೆ.ಕೆಲವು ವರ್ಷಗಳಿಂದ ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹರೀಶ್...

ನಿಧಿ ಶೋಧಕ್ಕೆ ಬಂದ ಕಿಡಿಗೇಡಿ ಯುವಕ ಮಂಟಪ ಕುಸಿದು ಸಾವು…

ನಿಧಿ ಆಸೆಗಾಗಿ ಬಂದ ಚೋರರ ತಂಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.ನಿಧಿ ಲಪಟಾಯಿಸುವ...

Recent Comments