32 C
Mysore
Wednesday, September 22, 2021
Home All News Tv10 ವರದಿ ಫಲಶೃತಿ…ವಿಕಲಚೇತನನ ನೆರವಿಗೆ ಧಾವಿಸಿದ ತಹಸೀಲ್ದಾರ್ ಮೋಹನಕುಮಾರಿ…

Tv10 ವರದಿ ಫಲಶೃತಿ…ವಿಕಲಚೇತನನ ನೆರವಿಗೆ ಧಾವಿಸಿದ ತಹಸೀಲ್ದಾರ್ ಮೋಹನಕುಮಾರಿ…

 

ಕೊರೊನಾಗೆ ತಾಯಿ ಬಲಿಯಾಗಿ ಅನಾಥವಾದ ವಿಕಲಚೇತನನ ನೆರವಿಗೆ ನಂಜನಗೂಡು ತಹಸೀಲ್ದಾರ್ ಮೋಹನಕುಮಾರಿ ಧಾವಿಸಿದ್ದಾರೆ.
ನಂಜನಗೂಡು ತಾಲೂಕು ಹರದನಹಳ್ಳಿಗೆ ಭೇಟಿ ನೀಡಿ ವಿಕಲಚೇತನ ಯುವಕನಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ.ಇದು Tv10 ವರದಿಯ ಫಲಶೃತಿಯಾಗಿದೆ.
ತಾಯಿ ಕಳೆದುಕೊಂಡು ಅನಾಥನಾದ ಹರದನಹಳ್ಳಿಯ ವಿಕಲಚೇತನ ಯುವಕ ಕಲೀಂಉಲ್ಲಾ(೨೦)ಶೋಚನೀಯ ಪರಿಸ್ಥಿತಿ ಬಗ್ಗೆ Tv10 ವರದಿ ಮಾಡಿತ್ತು.ವರದಿಗೆ ಎಚ್ಚೆತ್ತು ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮೋಹನಕುಮಾರಿ
ಬೆಂಗಳೂರಿನಲ್ಲಿರುವ ಸರ್ಕಾರಿ ವಿಕಲಚೇತನ ಕೇಂದ್ರಕ್ಕೆ ರವಾನಿಸಲು ನಿರ್ಧಾರಿಸಿದ್ದರು.
ಆದರೆ ಸ್ವಾವಲಂಬಿ ಜೀವನ ನಡೆಸುವ ಇಚ್ಛೆ ವ್ಯಕ್ತಪಡಿಸಿದ ಕಲೀಉಲ್ಲಾ ಗ್ರಾಮದಲ್ಲೇ ಪೆಟ್ಟಿಗೆ ಅಂಗಡಿ ಇಡಲು ನೆರವು ನೀಡುವಂತೆ ಮನವಿ ಮಾಡಿದ್ದಾನೆ.
ಗ್ರಾಮಸ್ಥರ ನೆರವಿನಿಂದ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ.
ಕಲೀಉಲ್ಲಾ ಮನವಿಗೆ ಸ್ಪಂದಿಸಿದ ಮೋಹನಕುಮಾರಿ ತಾಲೂಕು ಆಡಳಿತದಿಂದ ನೆರವು ನೀಡುವ ಭರವಸೆ ನೀಡಿದ್ದಾರೆ.ಕಾಲು ಕೈಗಳ ಸ್ವಾಧೀನ ಕಳೆದುಕೊಂಡು ವಿಕಲಚೇತನನಾಗಿರುವ ಕಲೀಂಉಲ್ಲಾ ಇತ್ತೀಚೆಗೆ ಕೊರೊನಾಗೆ ತಾಯಿ ಬಲಿಯಾದ ನಂತರ ಸಂಧಿಗ್ಧ ಪರಿಸ್ಥಿತಿಗೆ ಸಿಲುಕಿದ್ದ.ಕಲೀಂಉಲ್ಲಾ ಪರಿಸ್ಥಿತಿಯ ಬಗ್ಗೆ Tv10 ಸವಿಸ್ತಾರವಾಗಿ ವರದಿ ಮಾಡಿತ್ತು.ವರದಿಗೆ ಎಚ್ಚೆತ್ತು ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮೋಹನ್ ಕುಮಾರಿ ಅವಶ್ಯಕತೆಗೆ ತಕ್ಕ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಇದು Tv10 ವರದಿ ಇಂಪ್ಯಾಕ್ಟ್ ಆಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments