32 C
Mysore
Wednesday, August 4, 2021
Home All News ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್…ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಕೇಸ್…

ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್…ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಕೇಸ್…

ಮೂರ್ನಾಲ್ಕು ದಿನದಲ್ಲಿ 35 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ತಾಲೂಕು ಆಡಳಿತದಿಂದ ನಿರ್ಧಾರ ಕೈಗೊಳ್ಳಲಾಗಿದ್ದು ಗ್ರಾಮದ ಪ್ರಮುಖ ರಸ್ತೆಗಳನ್ನ ಬಂದ್ ಮಾಡಲಾಗಿದೆ.10 ದಿನಗಳ ಕಾಲ ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ ಹಾಗೂ ಗ್ರಾಮಕ್ಕೆ ಯಾರೂ ಬಾರದಂತೆ ನಿರ್ಭಂಧ ವಿಧಿಸಲಾಗಿದೆ.ವೈದ್ಯರನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪರಿಶೀಲನೆ ನಡೆಸಿದಾಗ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.ಎರಡೇ ದಿನದಲ್ಲಿ 24 ಪ್ರಕರಣಗಳು ಪತ್ತೆಯಾಗಿದ್ದು ಮೂರು ದಿನಗಳಲ್ಲಿ 35 ಕ್ಕೆ ತಲುಪಿದೆ.ಗ್ರಾಮದ ಜನರು ಬೆಂಗಳೂರು ಹಾಗೂ ರಾಮನಗರಕ್ಕೆ ಕೂಲಿ ಕೆಲಸಕ್ಕಾಗಿ ತೆರಳಿದ್ದು ಈ ವೇಳೆ ಸೋಂಕು ಕಾಣಿಸಿಕೊಂಡಿದೆ.ಗ್ರಾಮದಲ್ಲಿರುವ 300 ಜನಸಂಖ್ಯೆ ಪೈಕಿ 35 ಮಂದಿಗೆ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಗುರಿ ಮಾಡಿದೆ.ಹಾಡ್ಯ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿರುವ ಅರಿಯೂರು ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಮನೆಗಳ್ಳನ ಬಂಧನ…48,500/- ನಗದು ವಶ…

ಸರಗೂರು ಪೊಲೀಸರು ಕಾರ್ಯಾಚರಣೆ ನಡೆಸಿಮೈಸೂರು:ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಸಿದ್ದಾರೆ.ಸರಗೂರು ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಮಾದೇಗೌಡ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ 48,500...

ವಿ.ವಿ.ಪುರಂ ಪೊಲೀಸರ ಕಾರ್ಯಾಚರಣೆ ಬೈಕ್ ಕಳ್ಳರ ಬಂಧನ…9 ಬೈಕ್ ವಶ…

ವಿವಿ ಪುರಂ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಬೈಕ್ ಕಳ್ಳರ ಬಂಧನವಾಗಿದೆ.ಬಂಧಿತರಿಂದ 5.32 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಎರಡು ಪ್ರತ್ಯೇಕ...

ಸಿ.ಸಿ.ಬಿ.ಪೊಲೀಸರ ಕಾರ್ಯಾಚರಣೆ…4 ಕುಖ್ಯಾತ ಸರಗಳ್ಳರ ಬಂಧನ…

ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ನಾಲ್ವರು ಕುಖ್ಯಾತ ಸರಗಳ್ಳರ ಬಂಧನವಾಗಿದೆ.ಆರೋಪಿಗಳಿಂದ 5,80,000 ರೂ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರವಾಹನಗಳ ವಶಪಡಿಸಿಕೊಳ್ಳಲಾಗಿದೆ.ಶಾಂತಿನಗರದ ಅಯಾಜ್...

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಚಿನ್ನ ದರೋಡೆ…

ಮನೆಗೆ ನುಗ್ಗಿ ಮಾಲೀಕರಿಗೆ ಹಲ್ಲೆ ನಡೆಸಿ ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.ಸುಮನ್ ಫಂಕ್ಷನ್ ಹಾಲ್ ನ...

Recent Comments