TV10 Kannada Exclusive

5 ಮೈಕ್ರೋ ಫೈನಾನ್ಸ್ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲು…

ನಂಜನಗೂಡು,ಜ27,Tv10 ಕನ್ನಡ ಕಿರುಕುಳ ನೀಡುತ್ತಿದ್ದ 5 ಮೈಕ್ರೋ ಫೈನಾನ್ಸ್ ಮೇಲೆ ಹುಲ್ಲಹಳ್ಳಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಮಲ್ಕುಂಡಿ ಗ್ರಾಮದ ರೈತ ಕೃಷ್ಣಮೂರ್ತಿ ಪತ್ನಿ ಲತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಲಗಾಮು ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದ ಮೈಕ್ರೋ ಫೈನಾನ್ಸ್ ಗಳ ಮೇಲೆ ನಿಯಂತ್ರಣ ಹೇರಲು ಪೊಲೀಸರು ಮುಂದಾಗಿದ್ದಾರೆ. ಇನ್ನಷ್ಟು ಸಂಘಗಳ ಮೇಲೆ ಎಫ್ ಐ ಆರ್ ಆಗುವ ಸಾಧ್ಯತೆ
Read More

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿ…?ವ್ಯಕ್ತಿ ನೇಣಿಗೆ ಶರಣು…

ನಂಜನಗೂಡು,ಜ27,Tv10 ಕನ್ನಡ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮತ್ತೊಬ್ಬ ವ್ಯಕ್ತಿ ಬಲಿಯಾದ ಆರೋಪ ಕೇಳಿಬಂದಿದೆ.ಸಾಲ ಕಟ್ಟಲಾಗದೆ ಸಿಬ್ಬಂದಿಗಳ ಕಿರುಕುಳಕ್ಕೆ ಬೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಲಾಗಿದೆ.ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೃಷ್ಣಮೂರ್ತಿ (33) ಮೃತ ವ್ಯಕ್ತಿ.ಇಂದು ಬೆಳಗ್ಗೆ 9:00 ಸಮಯದಲ್ಲಿ ವಾಸದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ಮೈಕ್ರೋ ಫೈನಾನ್ಸ್ ನ ವಿವಿಧ ಸಂಘ ಸಂಸ್ಥೆಗಳಿಂದ 6 ಲಕ್ಷ ಸಾಲ ಪಡೆದಿದ್ದರು.ಸಾಲ ಕಟ್ಟಲಾಗದೆ ಬೆದರಿ ಆತ್ಮತೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.ಹುಲ್ಲಹಳ್ಳಿ ಪೊಲೀಸ್
Read More

ಪಾಳುಬಾವಿಯಲ್ಲಿ ನವಜಾತ ಶಿಶು ಪತ್ತೆ…ಚಿಕಿತ್ಸೆ ಫಲಕಾರಿಯಾಗದೆ ಸಾವು…

ಮೈಸೂರು,ಜ27,Tv10 ಕನ್ನಡ ಪಾಳುಬಾವಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾದ ಘಟನೆ ಮೈಸೂರು ತಾಲೂಕು ಸಾಹುಕಾರಹುಂಡಿ ಗ್ರಾಮದಲ್ಲಿ ನಡೆದಿದೆ.ಮಾಹಿತಿ ಅರಿತ ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ ರವರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನಿಂದ ಮಗುವನ್ನ ಬಾವಿಯಿಂದ ಹೊರಗೆ ತೆಗೆದು ರಕ್ಷಿಸಲು ಪ್ರಯತ್ನಿಸಿದ್ದಾರೆ.ಕೂಡಲೇ ಮಗುವನ್ನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲು ತೆರಳಿದ್ದಾರೆ.ಮಾರ್ಗಮಧ್ಯ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.ಇಲವಾಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಭಂಧ ಪ್ರಕರಣ ದಾಖಲಾಗಿದ್ದು ಮಗುವಿನ ಹೆತ್ತ ತಾಯಿಯ
Read More

ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ…?ನಂಜನಗೂಡು ಗ್ರಾಮಾಂತರ ಪೊಲೀಸರಿಂದ ತೆನಿಖೆ…

ನಂಜನಗೂಡು,ಜ27,Tv10 ಕನ್ನಡ ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆಗೆ ಶರಣಾದ ಆರೋಪ ಕೇಳಿಬಂದಿದೆ.ಜಯಶೀಲ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ನಂಜನಗೂಡು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಘಟನೆ ನಡೆದಿದೆ.ಐ ಐ ಎಫ್ ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ 5 ಲಕ್ಷ ಸಾಲ ಪಡೆದಿದ್ದರು.ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ ಸಾಲ ಪಡೆದಿದ್ದರು.ಪ್ರತಿ ತಿಂಗಳು 20 ಸಾವಿರಕ್ಕೂ ಹೆಚ್ಚು ಇ ಎಂ ಐ ಕಟ್ಟಬೇಕಾಗಿತ್ತು.ಸಾಲ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು.ಈ
Read More

ಬಸ್ ನಿಂದ ತಲೆ ಹೊರಹಾಕಿದ ಮಹಿಳೆ ಕುತ್ತಿಗೆ,ಕೈ,ಕಟ್…ಸ್ಥಳದಲ್ಲೇ ಸಾವು…

ನಂಜನಗೂಡು,ಜ25,Tv10 ಕನ್ನಡ ಚಲಿಸುತ್ತಿದ್ದ ಬಸ್ ನಿಂದ ಉಗುಳಲು ತಲೆ ಹೊರಹಾಕಿದ ಮಹಿಳೆ ಕುತ್ತಿಗೆ ಹಾಗೂ ಕೈ ಕಟ್ ಆಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕು ತಾಲೂಕು ಸಿಂಧುವಳ್ಳಿ ಸಮೀಪ ನಡೆದಿದೆ. ಗುಂಡ್ಲುಪೇಟೆ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ(45) ಮೃತ ಮಹಿಳೆ.ಮೈಸೂರಿನಿಂದ ಗುಂಡ್ಲುಪೇಟೆಯತ್ತ ತೆರಳುತ್ತಿದ್ದ ಕೆಎಸ್ ಆರ್.ಟಿ ಸಿ ಬಸ್ ನಲ್ಲಿ ಶಿವಲಿಂಗಮ್ಮ ಪ್ರಯಾಣಿಸುತ್ತಿದ್ದರು.ಸಿಂಧುವಳ್ಳಿ ಸಮೀಪ ಬಸ್ ವಾಹನವೊಂದನ್ನ ಓವರ್ ಟೇಕ್ ಮಾಡುವ ಸಂಧರ್ಭದಲ್ಲಿ ಶಿವಲಿಂಗಮ್ಮ ಉಗುಳುವ ಸಲುವಾಗಿ ತಲೆಯನ್ನ ಹೊರಹಾಕಿದಾಗ
Read More

ದೇವರಾಜ ಪೊಲೀಸ್ ಠಾಣೆ ನೂತನ ನಿರೀಕ್ಷಕರಾಗಿ ಕೆ.ಆರ್.ರಘು ಅಧಿಕಾರ ಸ್ವೀಕಾರ…

ಮೈಸೂರು,ಜ23,Tv10 ಕನ್ನಡ ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ನಿರೀಕ್ಷಕರಾಗಿ ಕೆ.ಆರ್.ರಘು ರವರು ಇಂದು ಅಧಿಕಾರ ಸ್ವೀಕರಿಸಿದರು.ರಘು ರವರು ಈ ಹಿಂದೆ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಅಲ್ಲದೆ ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲೂ ಸಹ ಕರ್ತವ್ಯ ನಿರ್ವಹಿಸಿದ್ದರು.ಹಾಲಿ ನಿರೀಕ್ಷಕರಾಗಿದ್ದ ಟಿ.ಬಿ.ಶಿವಕುಮಾರ್ ರವರಿಗೆ ಇನ್ನೂ ಯಾವುದೇ ಸ್ಥಾನ ಸೂಚಿಸಿಲ್ಲ…
Read More

ಸ್ವಚ್ಛ ಭಾರತ ಯೋಜನೆಗೆ ಸಡ್ಡು ಹೊಡೆದ ನಗರ್ಲೆ ಗ್ರಾ.ಪಂ…ಎಲ್ಲೆಲ್ಲೂ ರಾಶಿ…ರಾಶಿ..ಕಸ…ಅಧಿಕಾರಿಗಳ ನಿರ್ಲಕ್ಷ್ಯತೆಗೆ ಮೂಕ ಸಾಕ್ಷಿ…

ನಂಜನಗೂಡು,ಜ23,Tv10 ಕನ್ನಡ ಸ್ವಚ್ಛ ಭಾರತ ಯೋಜನೆಗೆ ನಗರ್ಲೆ ಗ್ರಾಮ ಪಂಚಾಯ್ತಿ ಸಡ್ಡು ಹೊಡೆದಂತೆ ಕಾಣುತ್ತಿದೆ.ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸ್ವಚ್ಛತೆಯನ್ನೇ ಮರೆತಂತಿದ್ದಾರೆ.ಗ್ರಾಮದ ರಸ್ತೆಗಳ ಅಕ್ಕಪಕ್ಕದಲ್ಲಿ ಕಸದ ರಾಶಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತೆಗೆ ಮೂಕ ಸಾಕ್ಷಿಯಂತೆ ಬಿಂಬಿಸುತ್ತಿದೆ.ಸ್ವಚ್ಛತೆಗಾಗಿ ಗ್ರಾಮ ಪಂಚಾಯ್ತಿ ದಾಖಲೆಗಳಲ್ಲಿ ಹಣ ಖರ್ಚಾಗುತ್ತಿದೆ.ಆದ್ರೆ ಇಲ್ಲಿ ಸ್ವಚ್ಛತೆ ಮಾಯವಾಗಿದೆ.ರೋಗಗಳ ಭೀತಿಯಿಂದಾಗ ಸ್ಥಳೀಯರು ಆತಂಕದಲ್ಲಿರುವಾಗ ಕಸದ ರಾಶಿಗಳು ಮತ್ತಷ್ಟು ಆತಂಕಕ್ಕೆ ದೂಡುತ್ತಿವೆ.ಇನ್ನಾದ್ರೂ ಅಧಿಕಾರಿಗಳು ಮೈಗೊಡವಿ ಎದ್ದು ನಿಂತು ಸ್ವಚ್ಛತೆಗೆ ಆಧ್ಯತೆ ನೀಡುವರೇ…?
Read More

ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಜೊತೆ ತಹಸೀಲ್ದಾರ್ ಸಭೆ…ಕಿರುಕುಳ ನೀಡದಂತೆ ಎಚ್ಚರಿಕೆ…

ನಂಜನಗೂಡು,ಜ21,Tv10 ಕನ್ನಡ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಗ್ರಾಮ ತೊರೆಯುತ್ತಿರುವ ಕುಟುಂಬಗಳ ಬೆಳವಣಿಗೆಗೆ ಬ್ರೇಕ್ ಹಾಕಲು ನಂಜನಗೂಡು ತಾಲೂಕು ಆಡಳಿತ ಹೆಜ್ಜೆ ಹಾಕಿದೆ.ಇಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಹಾಗೂ ಹುಲ್ಲಹಳ್ಳಿ ಠಾಣೆ ನಿರೀಕ್ಷಕರಾದ ಚ‌ಂದ್ರಶೇಖರ್ ಪಿಎಸ್ಸೈ ಚೇತನ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಸಿಬ್ಬಂದಿ ಹಾಗೂ ಮುಖ್ಯಸ್ಥರಿಗೆ ತಹಸೀಲ್ದಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.ಸಾಲ ನೀಡುವ ಮುನ್ನ ವಸೂಲಿ ಮಾಡುವ ರೀತಿಯನ್ನ ತಿಳಿಸುವುದು,ಒಬ್ಬಂಟಿ ಮಹಿಳೆ ಇರುವ ಮನೆಗಳಿಗೆ
Read More

ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ರಾಸುಗಳ ರಕ್ಷಣೆ…ಬೊಲೆರೋ ಪಿಕ್ ಅಪ್ ವಾಹನ ಸೀಜ್…

ಮೈಸೂರು,ಜ21,Tv10 ಕನ್ನಡ ಬೊಲೆರೋ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ,ಅಮಾನವೀಯವಾಗಿ ಸಾಗಿಸುತ್ತಿದ್ದ 13 ರಾಸುಗಳನ್ನ ಪೊಲೀಸರು ರಕ್ಷಿಸಿದ್ದಾರೆ.ಈ ಸಂಭಂಧ ವಾಹನವನ್ನ ವಶಪಡಿಸಿಕೊಂಡಿದ್ದಾರೆ.ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬೋಗಾದಿ ರಿಂಗ್ ರಸ್ತೆ ಜಂಕ್ಷನ್ ನಲ್ಲಿ ಹೆಬ್ಬಾಳ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಧನರಾಜ್ ರವರು ಗರುಡಾ ವಾಹನದ ಗಸ್ತಿನಲ್ಲಿದ್ದಾಗ ಗದ್ದಿಗೆ ಮಾರ್ಗವಾಗಿ ಮೈಸೂರಿನತ್ತ ಬೊಲೆರೋ ಪಿಕ್ ಅಪ್ ವಾಹನ ಬಂದಿದೆ.ವಾಹನವನ್ನ ನಿಲ್ಲಿಸಿ ಪರಿಶೀಲಿಸಿದಾಗ ಕಿರಿದಾದ ಜಾಗದಲ್ಲಿ 13 ರಾಸುಗಳನ್ನ ಅಮಾನವೀಯವಾಗಿ ಹಿಂಸೆಯಾಗುವಂತೆ
Read More

ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ…ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ…ಕುರ್ಚಿಗಳು ಖಾಲಿ..ಖಾಲಿ…

ನಂಜನಗೂಡು,ಜ21,Tv10 ಕನ್ನಡ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನ ಪಡೆಯುವ ಉದ್ದೇಶದಿಂದ ನಂಜನಗೂಡು ನಗರಸಭೆ ಬಜೆಟ್ ನ ಪೂರ್ವಭಾವಿ ಸಭೆ ಇಂದು ಕರೆಯಲಾಗಿತ್ತು.ಬಜೆಟ್ ಗೆ ಅಭಿಪ್ರಾಯಗಳನ್ನ ನೀಡಬೇಕಿದ್ದ ಸಾರ್ವಜನಿಕರೇ ಇಲ್ಲದ ಕಾರಣ ನೀರಸ ಪ್ರತಿಕ್ರಿಯೆ ದೊರೆಯಿತು. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಕಂಠಸ್ವಾಮಿ ಹಾಗೂ ಪೌರಾಯುಕ್ತರಾದ ವಿಜಯ್ ರವರ ನೇತೃತ್ವದಲ್ಲಿ 2025-26 ನೇ ಸಾಲಿನ ಆಯವ್ಯಯ ಸಿದ್ದಪಡಿಸಲು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನ ಪಡೆಯಲು ಆಯೋಜಿಸಲಾಗಿತ್ತು.ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಸಂಘಟನೆಯ ಮುಖಂಡರುಗಳು
Read More