TV10 Kannada Exclusive

ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಜೊತೆ ತಹಸೀಲ್ದಾರ್ ಸಭೆ…ಕಿರುಕುಳ ನೀಡದಂತೆ ಎಚ್ಚರಿಕೆ…

ನಂಜನಗೂಡು,ಜ21,Tv10 ಕನ್ನಡ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಗ್ರಾಮ ತೊರೆಯುತ್ತಿರುವ ಕುಟುಂಬಗಳ ಬೆಳವಣಿಗೆಗೆ ಬ್ರೇಕ್ ಹಾಕಲು ನಂಜನಗೂಡು ತಾಲೂಕು ಆಡಳಿತ ಹೆಜ್ಜೆ ಹಾಕಿದೆ.ಇಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಹಾಗೂ ಹುಲ್ಲಹಳ್ಳಿ ಠಾಣೆ ನಿರೀಕ್ಷಕರಾದ ಚ‌ಂದ್ರಶೇಖರ್ ಪಿಎಸ್ಸೈ ಚೇತನ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಸಿಬ್ಬಂದಿ ಹಾಗೂ ಮುಖ್ಯಸ್ಥರಿಗೆ ತಹಸೀಲ್ದಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.ಸಾಲ ನೀಡುವ ಮುನ್ನ ವಸೂಲಿ ಮಾಡುವ ರೀತಿಯನ್ನ ತಿಳಿಸುವುದು,ಒಬ್ಬಂಟಿ ಮಹಿಳೆ ಇರುವ ಮನೆಗಳಿಗೆ
Read More

ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ರಾಸುಗಳ ರಕ್ಷಣೆ…ಬೊಲೆರೋ ಪಿಕ್ ಅಪ್ ವಾಹನ ಸೀಜ್…

ಮೈಸೂರು,ಜ21,Tv10 ಕನ್ನಡ ಬೊಲೆರೋ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ,ಅಮಾನವೀಯವಾಗಿ ಸಾಗಿಸುತ್ತಿದ್ದ 13 ರಾಸುಗಳನ್ನ ಪೊಲೀಸರು ರಕ್ಷಿಸಿದ್ದಾರೆ.ಈ ಸಂಭಂಧ ವಾಹನವನ್ನ ವಶಪಡಿಸಿಕೊಂಡಿದ್ದಾರೆ.ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬೋಗಾದಿ ರಿಂಗ್ ರಸ್ತೆ ಜಂಕ್ಷನ್ ನಲ್ಲಿ ಹೆಬ್ಬಾಳ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಧನರಾಜ್ ರವರು ಗರುಡಾ ವಾಹನದ ಗಸ್ತಿನಲ್ಲಿದ್ದಾಗ ಗದ್ದಿಗೆ ಮಾರ್ಗವಾಗಿ ಮೈಸೂರಿನತ್ತ ಬೊಲೆರೋ ಪಿಕ್ ಅಪ್ ವಾಹನ ಬಂದಿದೆ.ವಾಹನವನ್ನ ನಿಲ್ಲಿಸಿ ಪರಿಶೀಲಿಸಿದಾಗ ಕಿರಿದಾದ ಜಾಗದಲ್ಲಿ 13 ರಾಸುಗಳನ್ನ ಅಮಾನವೀಯವಾಗಿ ಹಿಂಸೆಯಾಗುವಂತೆ
Read More

ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ…ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ…ಕುರ್ಚಿಗಳು ಖಾಲಿ..ಖಾಲಿ…

ನಂಜನಗೂಡು,ಜ21,Tv10 ಕನ್ನಡ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನ ಪಡೆಯುವ ಉದ್ದೇಶದಿಂದ ನಂಜನಗೂಡು ನಗರಸಭೆ ಬಜೆಟ್ ನ ಪೂರ್ವಭಾವಿ ಸಭೆ ಇಂದು ಕರೆಯಲಾಗಿತ್ತು.ಬಜೆಟ್ ಗೆ ಅಭಿಪ್ರಾಯಗಳನ್ನ ನೀಡಬೇಕಿದ್ದ ಸಾರ್ವಜನಿಕರೇ ಇಲ್ಲದ ಕಾರಣ ನೀರಸ ಪ್ರತಿಕ್ರಿಯೆ ದೊರೆಯಿತು. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಕಂಠಸ್ವಾಮಿ ಹಾಗೂ ಪೌರಾಯುಕ್ತರಾದ ವಿಜಯ್ ರವರ ನೇತೃತ್ವದಲ್ಲಿ 2025-26 ನೇ ಸಾಲಿನ ಆಯವ್ಯಯ ಸಿದ್ದಪಡಿಸಲು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನ ಪಡೆಯಲು ಆಯೋಜಿಸಲಾಗಿತ್ತು.ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಸಂಘಟನೆಯ ಮುಖಂಡರುಗಳು
Read More

ಶಾಸಕ ಶ್ರೀವತ್ಸ ರಿಂದ ಪಂಚಗರುಡೋತ್ಸವ ಪೋಸ್ಟರ್ ಬಿಡುಗಡೆ…

ಮೈಸೂರು,ಜ21,Tv10 ಕನ್ನಡ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ರವರ ಮಾರ್ಗದರ್ಶನದಲ್ಲಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಇರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ನಡೆಯುವ ಪಂಚಗರುಡೋತ್ಸವ ಕಾರ್ಯಕ್ಕೆ ಕೆ.ಅರ್.ಕ್ಷೇತ್ರದ ಶಾಸಕರು ಸಮಿತಿಯ ಕಾರ್ಯಧ್ಯಕ್ಷರಾದ ಟಿ.ಎಸ್. ಶ್ರೀ ವತ್ಸ ರವರು ಚಾಲನೆ ನೀಡಿದರು.ಇದೇ ವೇಳೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.ನಂತರ ಟಿ.ಎಸ.ಶ್ರೀ ವತ್ಸ ರವರು ಮಾತನಾಡಿ ಲೋಕ ಕಲ್ಯಾಣಕ್ಕಾಗಿ ಎರಡನೆ ಬಾರಿಗೆ ಪಂಚಗರೋಡತ್ಸವ ಸೇವೆಯನ್ನು ಪ್ರಾರಂಭಮಾಡಲಾಗಿದೆ.ಶಾಸ್ತ್ರಗಳಲ್ಲಿ ಉಲ್ಲೇಖದಂತೆ ಭಕ್ತಿ ಭಾವದಿಂದ ಸ್ವಾಮಿ
Read More

ಸೈಬರ್ ಅಪರಾಧ ಜಾಗೃತಿ ಮಾಹಿತಿ ಒಳಗೊಂಡ ಕ್ಯಾಲೆಂಡರ್ ಬಿಡುಗಡೆ…ಕೆಎಂಪಿಕೆ ಟ್ರಸ್ಟ್ ನಿಂದ ಉಪಯುಕ್ತ ಮಾಹಿತಿ…

ಮೈಸೂರು,ಜ21,Tv10 ಕನ್ನಡ ಸೈಬರ್‌ ಅಪರಾಧಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಮಾಹಿತಿ ಒಳಗೊಂಡ ಕ್ಯಾಲೆಂಡರ್ ಇಂದು ಬಿಡುಗಡೆಗೊಳಿಸಲಾಯಿತು. ಕೆಎಂಪಿಕೆ ಟ್ರಸ್ಟ್ ಹೊರತಂದ ಉಪಯುಕ್ತ ಕ್ಯಾಲೆಂಡರ್ ನ್ನ ಕರ್ನಾಟಕ ಆಂತರಿಕ ಭದ್ರತಾ ವಿಭಾಗ (ISD), ಪೊಲೀಸ್ ಅಧೀಕ್ಷಕರು(SP) ಡಾ.ಎ ಎನ್ ಪ್ರಕಾಶ್ ಗೌಡ ಬಿಡುಗಡೆಗೊಳಿಸಿದರು. 6 ಪುಟಗಳುಳ್ಳ 2025 ನೇ ಇಸವಿಯ ಕ್ಯಾಲೆಂಡರ್ ನಲ್ಲಿ ಆಕರ್ಷಕವಾಗಿ ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಹಿತಿಯನ್ನ ಒದಗಿಸಲಾಗಿದೆ.ಅನಾಮಧೇಯ ವ್ಯಕ್ತಿಗಳಿಗೆ ಯಾವುದೇ ಖಾಸಗಿ ವಿಚಾರಗಳನ್ನ ಹಂಚಿಕೊಳ್ಳುವ ಬಗ್ಗೆ,ಅನುಮಾನಾಸ್ಪದ
Read More

ನಗರ ಪೊಲೀಸ್ ಮತ್ತಷ್ಟು ಅಲರ್ಟ್…ಬ್ಯಾಂಕ್,ಉದ್ಯಮಗಳ ಮೇಲೆ ಹದ್ದಿನ ಕಣ್ಣು…ಪೊಲೀಸ್,ಬ್ಯಾಂಕ್ ಅಧಿಕಾರಿಗಳ ಸಭೆ…

ಮೈಸೂರು,ಜ21,Tv10 ಕನ್ನಡ ವಿವಿದೆಡೆ ನಡೆದ ದರೋಡೆ ಪ್ರಕರಣಗಳು ಪೊಲೀಸರ ನಿದ್ದೆ ಕೆಡಿಸಿದೆ.ಮುನ್ನೆಚ್ಚರಿಕೆಗೆ ವಿಶೇಷ ಆಧ್ಯತೆ ನೀಡಲಾಗುತ್ತಿದೆ.ಮೈಸೂರು ನಗರ ಪೊಲೀಸರಂತೂ ಜಾಗೃತರಾಗಿದ್ದಾರೆ.ಸಾಂಸ್ಕೃತಿಕ ನಗರಿಯಲ್ಲಿ ಅಹಿತಕರ ಘಟನೆಗಳು ಸಂಭವಿಸಬಾರದೆಂಬ ಉದ್ದೇಶದಿಂದ ಅಲರ್ಟ್ ಆಗುತ್ತಿದ್ದಾರೆ.ವಿಶೇಷವಾಗಿ ಉದ್ಯಮಗಳು ಹಾಗೂ ಬ್ಯಾಂಕ್ ಗಳ ಮೇಲೆ ಹದ್ದಿಕಣ್ಣಿಡಲು ಯೋಜನೆ ರೂಪಿಸುತ್ತಿದ್ದಾರೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ರವರ ನೇತೃತ್ವದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ ಸೂಚನೆಗಳನ್ನ ನೀಡಿದ್ದಾರೆ.ಬ್ಯಾಂಕ್
Read More

ನಗರದಲ್ಲಿ ಖಾಕಿ ಪಡೆ ಹೈ ಅಲರ್ಟ್…ಅಶೋಕಾ ರಸ್ತೆಯಲ್ಲಿ ಗಸ್ತು…ಜ್ಯೂಯಲರಿ ಮಳಿಗೆ,ಬ್ಯಾಂಕ್ ಭದ್ರತೆ ಬಗ್ಗೆ ಪರಿಶೀಲನೆ…ಸಲಹೆ ಸೂಚನೆ…

ಮೈಸೂರು,ಜ20,Tv10 ಕನ್ನಡ ದರೋಡೆ ಪ್ರಕರಣಗಳು ಘಟಿಸಿದ ಬೆನ್ನ ಹಿಂದೆಯೇ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ಸಾಂಸ್ಕೃತಿಕ ನಗರಿಯಲ್ಲಿ ಯಾವುದೇ ಪ್ರಕರಣಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಮುಂದಾಗಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಅಶೋಕಾ ರಸ್ತೆಯಲ್ಲಿ ಪೆರೇಡ್ ಮಾಡಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಅಭಯ ನೀಡಿದರು.ಚಿನ್ನಾಭರಣ ಅಂಗಡಿಗಳ ಭದ್ರತೆ ಹಾಗೂ ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಿದರು.ಜ್ಯೂಯಲರಿ
Read More

ಮೇಕಪ್ ಆರ್ಟಿಸ್ಟ್ ಖಾಸಗಿ ಫೋಟೋಸ್ ವಿಡಿಯೋ ತೆಗೆದ ಛಾಯಾಗ್ರಾಹಕ…ಮಹಿಳೆ ಕೊಟ್ಟ ಸಾಲ ತೀರಿಸಲು ಸಾಧ್ಯವಾಗದೆ ಬ್ಲಾಕ್ ಮೇಲ್…

ಮೈಸೂರು,ಜ20,Tv10 ಕನ್ನಡ ಆರ್ಥಿಕ ಸಂಕಷ್ಟದಲ್ಲಿದ್ದ ಸ್ನೇಹಿತನಿಗೆ ಕೊಟ್ಟಿದ್ದ ಸಾಲ ವಾಪಸ್ ಹಿಂದಿರುಗಿಸುವಂತೆ ಕೇಳಿದ ಮೇಕಪ್ ಆರ್ಟಿಸ್ಟ್ ರವರ ಖಾಸಗಿ ಫೋಟೋಸ್ ಮತ್ತು ವಿಡಿಯೋಗಳನ್ನ ಪ್ರದರ್ಶಿಸಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.ಈ ಸಂಭಂಧ ಹೆಸರಾಂತ ಫೋಟೋಗ್ರಾಫರ್ ಹಾಗೂ ಇವರ ತಾಯಿ ವಿರುದ್ದ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.ಗೋಕುಲಂ ಬಡಾವಣೆಯ ಅಮರನಾಥ್ ಹಾಗೂ ಇವರ ತಾಯಿ ಸರಸ್ವತಿ ಎಂಬುವರ ವಿರುದ್ದ ಸಂತ್ರಸ್ಥೆ ಪೂನಮ್ ಸತ್ಯಜಿತ್
Read More

ಸೀಟ್ ಬಾಡಿಗೆ ವಿಚಾರದಲ್ಲಿ ಕಿರಿಕ್…ಆಟೋ ಚಾಲಕನಿಗೆ ಚಾಕುವಿನಿಂದ ಇರಿತ…ಇಬ್ಬರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಜ20,Tv10 ಕನ್ನಡ ಆಟೋ ಸೀಟ್ ಬಾಡಿಗೆ ಹೊಡೆಯುವ ವಿಚಾರದಲ್ಲಿ ಇಬ್ಬರು ಯುವಕರು ಕಿರಿಕ್ ತೆಗೆದು ಚಾಲಕನಿಗೆ ಚಾಕುವಿನಿಂದ ಇರಿದ ಘಟನೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಾತಗಳ್ಳಿ ನಿವಾಸಿ ನವೀದ್ ಪಾಷಾ (25) ಗಾಯಗೊಂಡವರು.ಓಂಕಾರ್ ಹಾಗೂ ಶೇಖರ ಎಂಬುವರ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.ನವೀದ್ ಪಾಷಾ ರವರು ಗ್ರಾಮಾಂತರ ಬಸ್ ನಿಲ್ದಾಣದಿಂದ ಶಾಂತಿನಗರ,ಕೆಸರೆ ಬಡಾವಣೆಗೆ ಸೀಟ್ ಬಾಡಿಗೆ ಹೊಡೆಯುತ್ತಾರೆ.ಈ ವಿಚಾರದಲ್ಲಿ ಓಂಕಾರ್ ವಿರೋಧಿಸಿ ಈ ಜಾಗದಲ್ಲಿ ಸೀಟ್ ಬಾಡಿಗೆ
Read More

ಕಾಂಗ್ರೆಸ್ ಮುಖಂಡರನ್ನ ಗ್ರಾಮಕ್ಕೆ ನಿಷೇಧಿಸಲಾಗಿದೆ…ನಗರ್ಲೆ ಗ್ರಾಮದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್ ಗಳು…

ನಂಜನಗೂಡು,ಜ20,Tv10 ಕನ್ನಡ ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು(ನಾಮರ್ಧರು) ಆದ ಕಾರಣ ಯಾವುದೇ ಕಾಂಗ್ರೆಸ್ ಮುಖಂಡರನ್ನ ಗ್ರಾಮಕ್ಕೆ ನಿಷೇಧಿಸಲಾಗಿದೆ…ವರುಣಾ ವಿಧಾನಸಭಾ ಕ್ಷೇತ್ರ… ಇಂತಹ ಸಂದೇಶವಿರುವ ಫ್ಲೆಕ್ಸ್ ಗಳು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿದ ವರುಣಾ ವಿಧಾನಸಭಾ ಕ್ಷೇತ್ರದ ನಗರ್ಲೆ ಗ್ರಾಮದಲ್ಲಿ ರಾರಾಜಿಸುತ್ತಿವೆ.ಸಾಕಷ್ಟು ಸ್ಥಳಗಳಲ್ಲಿ ಇಂತಹ ಭಿತ್ತಿ ಫಲಕಗಳನ್ನ ಅಳವಡಿಸಲಾಗಿದೆ.ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ ಇಂತಹ ಸಂದೇಶ ಕಾಂಗ್ರೆಸ್ ಗೆ ಮುಜುಗರ ತಂದಿದೆ.ನಗರ್ಲೆ ಗ್ರಾಮದ ಅಭಿವೃದ್ದಿ ಬಗ್ಗೆ ಬೇಸತ್ತಿರುವ ಗ್ರಾಮಸ್ಥರು ಇಂತಹ ನಿರ್ಧಾರಕ್ಕೆ
Read More