TV10 Kannada Exclusive

ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್…ಸಿಎಆರ್ ಕಿಂಗ್ಸ್ XI ವಿನ್ನರ್ಸ್…ಲಕ್ಷ್ಮಿಪುರಂ ಫೀನಿಕ್ಸ್ ರನ್ನರ್ ಅಪ್…

ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್…ಸಿಎಆರ್ ಕಿಂಗ್ಸ್ XI ವಿನ್ನರ್ಸ್…ಲಕ್ಷ್ಮಿಪುರಂ ಫೀನಿಕ್ಸ್ ರನ್ನರ್ ಅಪ್… ಮೈಸೂರು,ಜೂ2,Tv10 ಕನ್ನಡ ಮೈಸೂರು ಪೊಲೀಸ್ ಪ್ರೀಮಿಯರ್ ಲೀಗ್ ನ ಫೈನಲ್ ಮ್ಯಾಚ್ ಇಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಫೈರಿಂಗ್ ರೇಂಜ್ ಮೈದಾನದಲ್ಲಿ ರೋಚಕವಾಗಿ ನಡೆಯಿತು.ಫೈನಲ್ ತಲುಪಿದ ಸಿಎಆರ್ ಕಿಂಗ್ಸ್ ಇಲೆವೆನ್ ತಂಡ ಗೆಲುವು ಸಾಧಿಸುವ ಮೂಲಕ MPL ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿತು.ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಫೀನಿಕ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.ಸುಮಾರು ಮೂರು ತಿಂಗಳಿಂದ
Read More

ಮಾಜಿ ಬದಲು ನಿಕಟಪೂರ್ವ ಆದ ಯಶಸ್ವಿನಿ ಸೋಮಶೇಖರ್…

ಮೈಸೂರು,ಜೂ2,Tv10 ಕನ್ನಡ ಮಾಜಿ ಬದಲು ನಿಕಟಪೂರ್ವ ಅಧ್ಯಕ್ಷ ಆದ ಯಶಸ್ವಿನಿ ಸೋಮಶೇಖರ್…! ತಮ್ಮ ನಿವಾಸದ ಮುಂದೆ ಮುಡಾ ಅಧ್ಯಕ್ಷ ಎಂಬ ನಾಮಫಲಕ ಹಾಕಿದ್ದ ಯಶಸ್ವಿನಿ ಸೋಮಶೇಖರ್ ಇದೀಗ ಮತ್ತೊಂದು ಎಡವಟ್ಟು ಮಾಡಿದ್ದಾರೆ.ಮಾಜಿ ಎಂದು ಬದಲಾವಣೆ ಮಾಡುವ ಬದಲು ನಿಕಟಪೂರ್ವ ಎಂದು ಬದಲಾಯಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.ಮಾಜಿಗೂ ನಿಕಟಪೂರ್ವಕ್ಕೂ ಅರ್ಥ ತಿಳಿಯದೆ ಎಡವಟ್ಟು ಮಾಡಿಕೊಂಡಿದ್ದಾರೆ.ಮುಡಾ ಅಧ್ಯಕ್ಷರಾಗಿ ಅಧಿಕಾರ ತ್ಯಜಿಸಿ ಮೂರು ವರ್ಷ ಕಳೆದರೂ ತಮ್ಮ ನಿವಾಸದ ಮುಂದಿನ ಗೇಟ್ ಮೇಲೆ ಮುಡಾ ಅಧ್ಯಕ್ಷರೆಂದೇ
Read More

ಪಾಲಿಕೆ ಸಿಬ್ಬಂದಿಗಳ ಕಾರ್ಯಾಚರಣೆ…ನಿಷೇಧಿತ ಪ್ಲಾಸ್ಟಿಕ್ ವಶ…50 ಸಾವಿರ ದಂಡ…

ಮೈಸೂರು,ಜೂ1,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪರಿಸರ ಅಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಇಂದು ವಲಯ ಕಚೇರಿ 6 ರ ವಾರ್ಡ್ ನಂ 26 ರ ವ್ಯಾಪ್ತಿಯಲ್ಲಿ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.ಜಗನ್ಮೋಹನ ಅರಮನೆ ಬಳಿ ಇರುವ RGC ಟ್ರಾನ್ಸ್ಪೋರ್ಟ್ ಹಾಗೂ ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡಿರುವುದಲ್ಲದೆ ತಲಾ 10 ಸಾವಿರದಂತೆ 50 ಸಾವಿರ ದಂಡ ವಿಧಿಸಿದ್ದಾರೆ.ನಗರಪಾಲಿಕೆ ಆಯುಕ್ತರಾದ ಮಧು ರವರ
Read More

ಡೀಸಲ್ ಇಂಜಿನ್ ಮತ್ತು ಜನರೇಟರ್ ಮೆಕ್ಯಾನಿಕ್ ಸಿದ್ದರಾಜು ಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ…

ಮೈಸೂರು,ಜೂ1,Tv10 ಕನ್ನಡ ಮೈಸೂರು ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಇಂದು ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ವತಿಯಿಂದ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.ಮಕಾಳಾ ಮಾತೃ ಸಂಸ್ಥೆಯಾದ ಶಿಲ್ಪ ಎಂಟರ್‌ಪ್ರೈಸಸ್ ನಲ್ಲಿ ಡಿಸೇಲ್ ಇಂಜಿನ್ ಮತ್ತು ಜನರೇಟರ್ ಮ್ಯಾಕನಿಕ್ ಆಗಿ 25 ವರ್ಷದಿಂದ ನಿರಂತರವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಸಿದ್ಧರಾಜು ರವರಿಗೆ ‘ಅತ್ಯುತ್ತಮ ಕಾರ್ಮಿಕ
Read More

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರಲ್ಲಿ ನಿರಾಳ…

ನಂಜನಗೂಡು,ಮೇ31,Tv10 ಕನ್ನಡ ಕುರಿ ಮೇಕೆಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆ ಸೆರೆಯಾಗಿದೆ.ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ರೈತ ಗಣೇಶ ನಾಯಕ ಎಂಬುವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಬಿದ್ದಿದೆ. ರಾತ್ರೋ ರಾತ್ರಿ ಸಾಕು ಪ್ರಾಣಿಗಳನ್ನ ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳಾದ ನಿತಿನ್ ಮತ್ತು ಸಿಬ್ಬಂದಿಗಳು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ…
Read More

ಇಂದಿನಿಂದ ಶಾಲೆ ಆರಂಭ…ಮಕ್ಕಳಿಗೆ ವಿಶೇಷ ಸ್ವಾಗತ…ಶುಭಹಾರೈಸಿದ ಹಿರಿಯರು…

ಮೈಸೂರು,ಮೇ31,Tv10 ಕನ್ನಡ ಇಂದಿನಿಂದ 2024-25 ನೇ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾಗಿದೆ.ರಜೆ ಮುಗಿಸಿ ಮುಂದಿನ ತರಗತಿಗಳಿಗೆ ತೆರಳುತ್ತಿರುವ ವಿಧ್ಯಾರ್ಥಿಗಳು ಹೊಸ ಹುರುಪಿನಿಂದ ಸಮವಸ್ತ್ರಗಳನ್ನ ಧರಿಸಿ ಶಾಲೆಗಳಿಗೆ ತೆರಳಿದ್ದಾರೆ.ರಜೆಯಲ್ಲಿ ಆಟಗಳಲ್ಲಿ ತೊಡಗಿ ಮತ್ತೆ ಓದಿನತ್ತ ಗಮನಹರಿಸುವ ವಿಧ್ಯಾರ್ಥಿಗಳು ಇಂದು ತಮ್ಮ ಶಾಲೆಗಳ ಮೆಟ್ಟಿಲು ಹತ್ತುತ್ತಿದ್ದಾರೆ.ಹೊಸ ಚೈತನ್ಯ ತುಂಬಿಕೊಂಡು ಶಾಲೆಗಳಿಗೆ ಬಂದ ವಿಧ್ಯಾರ್ಥಿಗಳಿಗೆ ಗುಲಾಬಿ ಹೂವು, ಮೈಸೂರ್ ಪಾಕ್, ಪುಸ್ತಕ ಪೆನ್ನು ನೀಡಿ ಶಾಲೆಗೆ ಬರಮಾಡಿಕೊಳ್ಳಲಾಗಿದೆ.ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ
Read More

ಗುರಾಯಿಸಿ ನೋಡಿದ್ದಕ್ಕೆ ಮರ್ಡರ್…ನಾಲ್ವರಿಂದ ಕೃತ್ಯ…

ಮೈಸೂರು,ಮೇ31,Tv10 ಕನ್ನಡ ಗುರಾಯಿಸಿ ನೋಡಿದ ಯುವಕನನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ನಡೆದಿದೆ.ಅರ್ಬಾಜ್ ಖಾನ್(18) ಮೃತ ಯುವಕ.ಶಾದಿಲ್,ಶಹಬಾಜ್,ಶೋಯಬ್ ಹಾಗೂ ಸಾಹಿಲ್ ಕೃತ್ಯವೆಸಗಿದೆ ಆರೋಪಿಗಳು.ಪರಸ್ಪರ ಗಲಾಟೆಯಲ್ಲಿ ಆರೋಪಿ ಶಹಬಾಜ್ ಸಹ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿ ನೋಡಿದ್ದಾನೆ.ಈ ವಿಚಾರದಲ್ಲಿ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.ಈ ಸಂಭಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ಪೊಲೀಸರಿಗೆ ಸಾಕ್ಷಿ ಹೇಳಿದ್ದಕ್ಕೆ ಮಹಿಳೆ ಮೇಲೆ ಹಿಗ್ಗಾಮುಗ್ಗ ಹಲ್ಲೆ…ನಾಲ್ವರ ವಿರುದ್ದ FIR ದಾಖಲು…

ಪಕ್ಕದ ಮನೆಯ ಯುವತಿಯೊಬ್ಬಳ ರಕ್ಷಣೆಗಾಗಿ ಪೊಲೀಸರಿಗೆ ಸಾಕ್ಷಿ ಹೇಳಿದ ಹಿನ್ನಲೆ ಮಹಿಳೆಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆ ಮೈಸೂರಿನ ಏಕಲವ್ಯನಗರದಲ್ಲಿ ನಡೆದಿದೆ.ಲಕ್ಷ್ಮಿ ಎಂಬುವರು ಹಲ್ಲೆಗೆ ಒಳಹಾದವರು.ಸುರೇಶ,ನಂದೀಶ,ರಂಗಪ್ಪ ಹಾಗೂ ಲಕ್ಷ್ಮಿ ಹಲ್ಲೆ ನಡೆಸಿದವರು.ಯುವತಿಯೊಬ್ಬಳ ರಕ್ಷಣೆಗಾಗಿ ಲಕ್ಷ್ಮಿ ರವರು ಪೊಲೀಸರಿಗೆ ಸಾಕ್ಷಿ ಹೇಳಿದ್ದಾರೆ.ನನ್ನ ಮಗನ ವಿರುದ್ದ ಸಾಕ್ಷಿ ಹೇಳಿದ್ದೀಯ ಎಂದು ಲಕ್ಷ್ಮಿ ಮೇಲೆ ತಿರುಗಿಬಿದ್ದ ಸುರೇಶ್,ನಂದೀಶ್,ರಂಗಪ್ಪ ಹಾಗೂ ಲಕ್ಷ್ಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.ಈ ಸಂಭಂಧ ಹಲ್ಲೆಗೆ ಒಳಗಾದ ಲಕ್ಷ್ಮಿ
Read More

ಕಾಲೇಜು ವಿಧ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಕುರಿತು ಜಾಗೃತಿ…

ಟಿ.ನರಸೀಪುರ,ಮೇ30,Tv10 ಕನ್ನಡ ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದ ಸೇಂಟ್ ನಾರ್ಬರ್ಟ್ ಪಿಯು ಕಾಲೇಜಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿ ಗಳಿಗೆ ಶಿಕ್ಷಕರಿಗೆ ಪ್ರಾಧ್ಯಾಪಕರಿಗೆ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಇನ್ಸ್ಪೆಕ್ಟರ್ ಮುನಿಯಪ್ಪ ಮತ್ತು ಸಿಬ್ಬಂದಿಗಳಾದ ಮಹದೇವಸ್ವಾಮಿ ಕೆ ಎನ್, ಮಹೇಶ್ ಸಿ ಎನ್ ಟಿ ನರಸೀಪುರ ಇನ್ಸ್ಪೆಕ್ಟರ್ ಮೇದಪ್ಪ ಹಾಗೂ ಸಿಬ್ಬಂದಿಗಳು ಸೈಬರ್ ಅಪರಾಧಗಳಾದಫಿಶಿಂಗ್,ಲೋನ್ ಫ್ರಾಡ್,ಇನ್ವೆಸ್ಟ್ ಮೆಂಟ್ ಫ್ರಾಡ್,OLX ಫ್ರಾಡ್,OTP
Read More

ಪಿಎಸ್ಸೈ ಕು.ರಾಧ ಲೋಕಾಯುಕ್ತ ಬಲೆಗೆ…50 ಸಾವಿರ ಲಂಚ ಸ್ವೀಕರಿಸುವಾಗ ಲಾಕ್…

ಮೈಸೂರು,ಮೇ30,Tv10 ಕನ್ನಡಮೈಸೂರು ಕುವೆಂಪುನಗರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಕು.ರಾಧ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.50 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್‌ಗಿ ಬಲೆಗೆ ಬಿದ್ದಿದ್ದಾರೆ.ಪ್ರಕರಣದ ಒಂದರಲ್ಲಿ ಜಪ್ತಿಯಾಗಿದ್ದ ಲಾಕರ್ ಕೀ ನೀಡಲು1 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ರಾಧ ರವರುಪೊಲೀಸ್ ಠಾಣೆಯಲ್ಲಿ 50 ಸಾವಿರ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಎಸ್ ಪಿ ಸಜಿತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.ಡಿವೈಎಸ್‌ಪಿ ಮಾಲ್ತೇಶ್, ಕೃಷ್ಣಯ್ಯ ಸೇರಿ ಹಲವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ…
Read More