TV10 Kannada Exclusive

ಟಿ.ನರಸೀಪುರ ತಾಲೂಕಿನಲ್ಲಿ ನಿರ್ಮಾಣವಾಗಲಿದೆ ಕ್ರೀಡಾಂಗಣ…ಕ್ರೀಡಾ ಸಚಿವರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ…

ಮೈಸೂರು,ಜ1,Tv10 ಕನ್ನಡ ವರುಣಾ ವಿಧಾನಸಭಾ ಕ್ಷೇತ್ರದ ಟಿ.ನರಸೀಪುರ ತಾಲೂಕಿನಲ್ಲಿ ನೂತನವಾಗಿ ಕ್ರೀಡಾಂಗಣ ಅಸ್ತಿತ್ವಕ್ಕೆ ಬರಲಿದೆ.ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ವರುಣಾ ಕ್ಷೇತ್ರದ ಶಾಸಕರೂ ಆದ ಸಿದ್ದರಾಮಯ್ಯನವರು ಯವಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಬಿ.ನಾಗೇಂದ್ರ ರವರಿಗೆ ಪತ್ರ ಬರೆದಿದ್ದಾರೆ.ಟಿ.ನರಸೀಪುರ ತಾಲೂಕು ವ್ಯಾಪ್ತಿಯ ಶಾಲಾ ಕಾಲೇಜು ವಿಧ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕ್ರೀಡಾಂಗಣ ಇಲ್ಲದೆ ತೊಂದರೆಯಾಗಿದೆ.ಈ ಹಿನ್ನಲೆ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಮನವಿ
Read More

ನಿರ್ವಹಣೆ ಇಲ್ಲದೆ ಸೊರಗಿದ ಇ-ಟಾಯ್ಲೆಟ್…ಸಾರ್ವಜನಿಕರ ತೆರಿಗೆ ಹಣ ಪೋಲು…ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸಂಪ್…

ಮೈಸೂರು,ಡಿ31,Tv10 ಕನ್ನಡ ಸಾರ್ವಜನಿಕರ ಬಳಕೆಗಾಗಿ ನಿರ್ಮಿಸಲಾದ ಇ-ಟಾಯ್ಲೆಟ್ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.ರಾಮಕೃಷ್ಣನಗರದ ಉಪನೊಂದಣಿ ಕಚೇರಿ ಮುಂಭಾಗ ಇರುವ ಇ-ಶೌಚಾಲಯದ ದುಃಸ್ಥತಿಯನ್ನ ಕೇಳುವವರೇ ಇಲ್ಲದಂತಾಗಿದೆ.ಸಬ್ ರಿಜಿಸ್ಟ್ರಾರ್ ಕಚೇರಿ ಮಾತ್ರವಲ್ಲದೆ ಈ ಸ್ಥಳದಲ್ಲಿ ಹಲವು ಸರ್ಕಾರಿ ಕಚೇರಿಗಳಿವೆ.ಇಲ್ಲಿಗೆ ಬರುವ ಸಾರ್ವಜನಿಕರ ಬಳಕೆಗಾಗಿ ಇ-ಶೌಚಾಲಯ ನಿರ್ಮಿಸಲಾಗಿದೆ.ಆದರೆ ಇ-ಟಾಯ್ಲೆಟ್ ಕೆಟ್ಟು ನಿಂತು ತಿಂಗಳುಗಳೇ ಉರುಳಿದೆ.ಬಾಗಿಲುಗಳು ಭದ್ರವಾಗಿಲ್ಲದೆ ತೆರೆದ ಮನೆಯಂತಾಗಿದೆ.ಸಮರ್ಪಕವಾಗಿ ಬಳಕೆಯಲ್ಲಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ಚಾಲ್ತಿಯಲ್ಲಿದೆ.ವಿದ್ಯುತ್ ಉಪಕರಣಗಳನ್ನ ಅಳವಡಿಸಿರುವ ಪೆಟ್ಟಿಗೆ ಓಪನ್ ಆಗಿ ಅಪಾಯಕ್ಕೆ
Read More

LPG ಗ್ಯಾಸ್ ಸಬ್ಸಿಡಿ…ಇ-ಕೆವೈಸಿ ಮಾಡಿಸಲು ಕೊನೆ ದಿನಾಂಕ ನಿಗದಿಯಾಗಿಲ್ಲ…ಆಹಾರ ಇಲಾಖೆ ಸ್ಪಷ್ಟನೆ…

ಮೈಸೂರು,ಡಿ30,Tv10 ಕನ್ನಡ ಎಲ್.ಪಿ.ಜಿ.ಗ್ಯಾಸ್ ಸಬ್ಸಿಡಿ ಪಡೆಯಲು ಏಜೆನ್ಸಿಗಳಲ್ಲಿ ಇ-ಕೆವೈಸಿ ದಾಖಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿಲ್ಲವೆಂದು ಆಹಾರ,ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಸ್ಪಷ್ಟಪಡಿಸಿದೆ.ಡಿಸೆಂಬರ್ 31 ರೊಳಗೆ ಇ-ಕೆವೈಸಿ ದಾಖಲಿಸಬೇಕೆಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.ಇದು ಸತ್ಯಕ್ಕೆ ದೂರವಾಗಿದ್ದು ಯಾವುದೇ ಕೊನೆ ದಿನಾಂಕ ನಿಗದಿಯಾಗಿರುವುದಿಲ್ಲ ಹಾಗೂ ಈ ಪ್ರಕ್ರಿಯೆ ಉಚಿತವಾಗಿರುತ್ತದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ…
Read More

ಸಾಹಸಸಿಂಹನ ಪುಣ್ಯಸ್ಮರಣೆ…ವಿಷ್ಣು ಸ್ಮಾರಕದಲ್ಲಿ ರಕ್ತದಾನ ಕಾರ್ಯಕ್ರಮ…

ಮೈಸೂರು,ಡಿ30,Tv10 ಕನ್ನಡ ಸಾಹಸಸಿಂಹ ವಿಷ್ಣುವರ್ಧನ್ ರವರ 14ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಉದ್ಬೂರು ಗೇಟ್ ಬಳಿ ಇರುವ ಸ್ಮಾರಕದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. 50ಕ್ಕೂ ಹೆಚ್ಚು ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ರಕ್ತದಾನ ಶಿಬಿರವನ್ನು ವಿಷ್ಣುವರ್ಧನ್ ಅಳಿಯ ಅನಿರುದ್ ರವರು ಉದ್ಘಾಟಿಸಿ ನಂತರ ಮಾತನಾಡಿದರು. ವಿಷ್ಣುಸ್ಮಾರಕದಲ್ಲಿ ಪ್ರತಿವಾರಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದವರು ಶಿಬಿರ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸುತ್ತಾ
Read More

ಹೊಸವರ್ಷಾಚರಣೆ…ಟೂರಿಸ್ಟ್ ಗಳ ಜೊತೆ ಸೌಜನ್ಯದಿಂದ ವರ್ತಿಸಿ…ಆಟೋಚಾಲಕರಿಗೆ ಖಾಕಿ ಎಚ್ಚರಿಕೆ…

ಮೈಸೂರು,ಡಿ29,Tv10 ಕನ್ನಡ ಹೊಸವರ್ಷಾಚರಣೆ ಹಿನ್ನಲೆ ಆಟೋ ಚಾಲಕರಿಗೆ ಇಂದು ಮೈಸೂರು ನಗರ ಪೊಲೀಸರು ಪ್ರವಾಸಿಗರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಆಟೋ ಚಾಲಕರಿಗೆ ಕಿವಿಮಾತು ಹೇಳಿದರು.ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರಿನ ಪುರಭವನದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಪ್ರವಾಸಿ ಕೇಂದ್ರವಾದ ಸಾಂಸ್ಕೃತಿಕ ನಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.ಈ ವೇಳೆ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರಿಕೆಯಿಂದ ವರ್ತಿಸಬೇಕೆಂದು ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಸಲಹೆ ನೀಡಿದರು.ಅವಸರದಲ್ಲಿ ಪ್ರಯಾಣಿಕರು ಪದಾರ್ಥಗಳನ್ನ ಆಟೋದಲ್ಲಿ
Read More

ಮತ ಮನುಜ ಮತವಾಗಲಿ ಪಥ ವಿಶ್ವಪಥವಾಗಲಿ – ರಾಮಪ್ರಸಾದ್.

ಪ್ರಸ್ತುತ ಸಮಾಜದಲ್ಲಿ ಇಂದು ಮತ ಮತ್ತು ಪಥದ ಅರಿವು ಹೆಚ್ಚು ಅವಶ್ಯಕ . ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಆದರ್ಶಗಳು ಸರ್ವಕಾಲಿಕ. ಕುವೆಂಪುರವರ ವಿಶ್ವಮಾನವ ಸಂದೇಶವು ಇಂದು ಎಲ್ಲ ಮಾನವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ರಾಮ್ ಪ್ರಸಾದ್ ರವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ವಿಶ್ವಮಾನವ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಲಯನ್
Read More

ದ್ವಿಚಕ್ರ ವಾಹನಗಳಿಗೆ ಆಶ್ರಯವಾದ ಬಸ್ ತಂಗುದಾಣ…

ಮೈಸೂರು,ಡಿ29,Tv10 ಕನ್ನಡ ಪ್ರಯಾಣಿಕರಿಗೆ ಆಶ್ರಯವಾಗಬೇಕಿದ್ದ ಬಸ್ ತಂಗುದಾಣ ದ್ವಿಚಕ್ರ ವಾಹನಗಳಿಗೆ ಆಶ್ರಯ ನೀಡಿದೆ.ಜೆ.ಸಿ.ಕಾಲೇಜು ರಸ್ತೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾದ ಬಸ್ ತಂಗುದಾಣದ ಸ್ಥಿತಿ ಇದು.ಬಸ್ ಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಉಪಯೋಗವಾಗಲೆಂದು ಮೈಸೂರು ಮಹಾನಗರ ಪಾಲಿಕೆ ಜೆ.ಸಿ.ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಿದೆ.ಆದರೆ ಈ ತಂಗುದಾಣವನ್ನ ಉಪಯೋಗಿಸಲು ಪ್ರಯಾಣಿಕರಿಗೆ ಸಾಧ್ಯವೇ ಆಗುತ್ತಿಲ್ಲ.ಕಾರಣ ಸಮೀಪದ ಕಾಲೇಜಿನ ವಿಧ್ಯಾರ್ಥಿಗಳು ಟೂ ವ್ಹೀಲರ್ ಪಾರ್ಕಿಂಗ್ ಗೆ ಬಳಸಿಕೊಂಡಿದ್ದಾರೆ.ಸಾವಿರಾರು ರೂಪಾಯಿ ಖರ್ಚು ಮಾಡಿ ನಿರ್ಮಿಸಿದ
Read More

ದಟ್ಟಗಳ್ಳಿ ವಿವಾದಿತ ಜಮೀನಿನ ರಕ್ಷಣೆಗೆ ಮುಂದಾದ ಶಾಸಕದ್ವಯರು…ದೃಢೀಕರಿಸಿದ ದಾಖಲೆಗಳನ್ನ ನೀಡುವಂತೆ ಮುಡಾ ಆಯುಕ್ತರಿಗೆ ಪತ್ರ…

ಮೈಸೂರು,ಡಿ29,Tv10 ಕನ್ನಡ ಮೈಸೂರಿನ ದಟ್ಟಗಳ್ಳಿ ಗ್ರಾಮದ ಸರ್ವೆ ನಂ.27/1,27/2,27/4,29/1a,32,38/1,38/2 ಸೇರಿದಂತೆ ವಿವಿದ ಸರ್ವೆ ನಂಬರ್ ಗಳ ಸುಮಾರು 27.34 ಎಕ್ರೆ ಜಮೀನುಗಳ ವಿವಾದಕ್ಕೆ ಬ್ರೇಕ್ ಹಾಕಲು ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡೀಸಿದ್ದೇಗೌಡ ರವರು ಮುಂದಾಗಿದ್ದಾರೆ. ಕೋಟ್ಯಾಂತರ ಬೆಲೆ ಬಾಳುವ ಮುಡಾ ಆಸ್ತಿಯನ್ನ ಕಬಳಿಸಲು ಸಂಚು ರೂಪಿಸಿರುವ ಆರೋಪಕ್ಕೆ ಸಂಭಂಧಿಸಿದಂತೆ ಪ್ರಾಧಿಕಾರದ ಬಳಿ ಇರುವ ಎಲ್ಲಾ ದಾಖಲೆಗಳನ್ನ ಧೃಢೀಕರಿಸಿ
Read More

ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದ ಜಮೀನಿಗೆ ಕನ್ನ ಪ್ರಕರಣ…ಸಮಿತಿ ರಚನೆ…ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ…

ಮೈಸೂರು,ಡಿ29,Tv10 ಕನ್ನಡ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯಕ್ಕೇ ಸೇರಿದ ಜಮೀನುಗಳನ್ನ ಲಪಟಾಯಿಸಿದ ಖದೀಮರ ವಿರುದ್ದ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದ ಪ್ರಕರಣಕ್ಕೆ ಚುರುಕು ನೀಡಲಾಗಿದೆ.ಅಕ್ರಮದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಮಿತಿ ರಚಿಸಿ ಸೂಚನೆ ನೀಡಲಾಗಿದೆ.ಅಕ್ರಮ ನಡೆದ ಸ್ಥಳಕ್ಕೆ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಮೈಸೂರುತಾಲೂಕು ಕಸಬ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ 396
Read More

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ನಯಿಮಾಸುಲ್ತಾನ್ ವಿಧಿವಶ…

ಹೆಚ್.ಡಿ.ಕೋಟೆ,ಡಿ28,Tv10 ಕನ್ನಡ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ನಯೀಮಾ ಸುಲ್ತಾನಾ ವಿಧಿವಶರಾಗಿದ್ದಾರೆ.ಇತ್ತೀಚೆಗಷ್ಟೆ ಅನಾರೋಗದಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಸ್ವಗ್ರಾಮಕ್ಕೆ ವಾಪಸ್ಸಾಗಿದ್ದರು.ಇಂದು ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗೆ ಆಗಮಿಸಿದಾಗ ಮೃತಪಟ್ಟಿದ್ದಾರೆ.ನಾಲ್ಕು ಗಂಡು ಮಕ್ಕಳು ಪತಿ ಮತ್ತು ಅಪಾರ ಬಂಧುಬಳಗ ಅಗಲಿದ್ದಾರೆ.ಎಚ್.ಡಿ.ಕೋಟೆ ಪಟ್ಟಣದ ಶಿವಾಜಿ ರಸ್ತೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು…
Read More