TV10 Kannada Exclusive

ಅಸಲಿ ಇದ್ದರೂ ನಕಲಿ ವ್ಯಕ್ತಿಗಳಿಂದ ಆಸ್ತಿ ಕಬಳಿಸಲು ಸಂಚು…ಐವರ ವಿರುದ್ದ ಹಿರಿಯ ಉಪನೊಂದಣಾಧಿಕಾರಿಗಳಿಂದ ಪ್ರಕರಣ ದಾಖಲು…

ಮೈಸೂರು,ಜು10,Tv10 ಕನ್ನಡ ಅಸಲಿ ವ್ಯಕ್ತಿ ಇದ್ದರೂ ನಕಲಿ ವ್ಯಕ್ತಿಗಳು ಆಸ್ತಿಯನ್ನ ಕಬಳಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಮೈಸೂರು ಪೂರ್ವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.ಸಂಚು ರೂಪಿಸಿ ಸಿಕ್ಕಿಬಿದ್ದ ಐದು ಭೂಗಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಉಪನೊಂದಣಾಧಿಕಾರಿ ಹೆಚ್.ಎಲ್.ನಾಗರಾಜು ರವರು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ನೆಹರೂ ನಗರದ ನಿವಾಸಿಗಳಾದ ಉಮೇರಾಖಾನಂ,ಸೈಯದ್ ಇರ್ಫಾನ್,ಸಲ್ಮಾ ಸುಲ್ತಾನ,ಅಕ್ರಮ್ ಹಾಗೂ ಜೋಹರ್ ಆಲಮ್ ವಿರುದ್ದ ಪ್ರಕರಣ ದಾಖಲಾಗಿದೆ.ಗಾಯಿತ್ರಿಪುರಂ ನಿವಾಸ
Read More

ಹೃದಯ ಅಪಘಾತದಿಂದ ಗದ್ದಿಗೆ ಅರ್ಚಿಕರು ಸಾವು

ಹುಣಸೂರು ತಾಲೂಕಿನ ಗದ್ದಿಗೆ ಚಂಡುಗಣ್ಣ ಸ್ವಾಮಿ ಎಂಬ ಹೆಸರಿನ ಪ್ರಸಿದ್ದ ದೇವಸ್ಥಾನದಲ್ಲಿ ಕೆಂಡಗಣ್ಣ ಸ್ವಾಮಿ ಎಂಬ ಅರ್ಚಕರು ಬೆಳಗಿನ ಜಾವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತಯಾರಿ ನಡೆಸುವ ವೇಳೆ ಹೃದಯ ಅಪಘಾತದಿಂದ ಸಾವನಪ್ಪಿರುವುದು 4:30. ರಲ್ಲಿ ನಡೆದಿದೆ
Read More

ಹೃದಯಾಘಾತದಿಂದ ಯುವಕ ಸಾವು…

ಮೈಸೂರು,ಜು10,Tv10 ಕನ್ನಡ ಮೈಸೂರಿನಲ್ಲಿ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ.ದರ್ಶನ್ ಚೌದ್ರಿ (29) ಸಾವನ್ನಪ್ಪಿದ ಯುವಕ.ಮೈಸೂರಿನ ಚಾಮರಾಜ ಮೊಹಲ್ಲಾದ ನಿವಾಸಿಯಾಗಿದ್ದುದೇವರಾಜ ಮೊಹಲ್ಲಾದಲ್ಲಿ ಬಣ್ಣದ ಅಂಗಡಿ ಮಾಲೀಕನಾಗಿದ್ದ.ನೆನ್ನೆ ರಾತ್ರಿ ದಿಢೀರ್ ಎದೆ ನೋವು ಕಾಣಿಸಿಕೊಂಡಿದೆ.ತಕ್ಷಣ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಮಾರ್ಗಮಧ್ಯೆ ದರ್ಶನ್ ಸಾವನ್ನಪ್ಪಿದ್ದಾನೆ…
Read More

ಆರ್.ಟಿ.ಐ.ಮಾಹಿತಿ ಪತ್ರಿಕೆ ಅಸ್ತಿತ್ವಕ್ಕೆ…ಭಾಷ್ಯಂ ಸ್ವಾಮೀಜಿ ರವರಿಂದ ಬಿಡುಗಡೆ…

ಮೈಸೂರು,ಜು7,Tv10 ಕನ್ನಡ ಮೈಸೂರಿನ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಇಂದು ಆರ್.ಟಿ.ಐ.ಮಾಹಿತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.ದೇವಾಲಯದ ಸಂಸ್ಥಾಪಕರಾದ ಪ್ರೊ.ಭಾಷ್ಯಂ ಸ್ವಾಮೀಜಿ ರವರು ಬಿಡುಗಡೆ ಮಾಡಿದರು.ಈ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್ ಗುರೂಜಿ,ಪಿಜಿಆರ್ ಎಸ್ಎಸ್ ಪಂಚಾಯತ್ ಗ್ರಾಮೀಣ ಅಭಿವೃದ್ದಿ ರೈತರ ಸೇವಾ ಸಮಿತಿ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್,ಉಪಾಧ್ಯಕ್ಷರಾದ ಸತೀಶ್,ಖಜಾಂಚಿ ಮಂಜುಳಾ,ಪ್ರಧಾನ ಕಾರ್ಯದರ್ಶಿ ರವೀಂದ್ರ,ಸಹ ಕಾರ್ಯದರ್ಶಿ ಪಲ್ಲವಿ,ಸಂಘಟನಾ ಕಾರ್ಯದರ್ಶಿ ಝಾನ್ಸಿರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು…
Read More

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಮೃಣಾಲಿನಿ ಮನೋಹರ್ ಎಂಬುವರು ಪೋಸ್ಟ್ ಮಾಡಿದ್ದಾರೆಂದು ನೊಂದ ಉದ್ಯೋಗಿ ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.ವ್ಯಕ್ತಿಯೊಬ್ಬರ ಜೊತೆ ಸಂಭಂಧ ಇದೆ ಎಂದು ಸುಳ್ಳು ಮಾಹಿತಿ ಹಾಕಿದ್ದಾರೆ.ಫೇಸ್ ಬುಕ್ ಮೆಸೆಂಜರ್ ನಲ್ಲಿ ಕ್ಕೈಂಟ್ಸ್ ಗಳನ್ನ ಗುರಿಯಾಗಿಸಿಕೊಂಡು ನನ್ನ ವಿರುದ್ದ ಅಶ್ಲೀಲವಾಗಿ ಕೆಟ್ಟಪದಗಳನ್ನ ಬಳಸಿ
Read More

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಸವನಿಗೆ ದೇವಾಲಯದ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದ ಗ್ರಾಮಸ್ಥರು ದುಃಖತಪ್ತರಾಗಿ ಅಂತಿಮ ವಿದಾಯ ಹೇಳಿದ್ದರು.ಅಂತ್ಯಕ್ರಿಯೆ ವೇಳೆ ಬಸವನ ಜೊತೆಯೇ ನಂಟು ಬೆಳೆದಿದ್ದ ಎರಡು ಶ್ವಾನಗಳು ಆಗಮಿಸಿ ಕಂಬನಿ ಮಿಡಿದು ಸ್ನೇಹಿತನನ್ನ ಬೀಳ್ಕೊಟ್ಟಿದ್ದವು.ಇಂದು ನಡೆದ ಶ್ರದ್ಧಾಂಜಲಿ
Read More

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ ಸುತ್ತಮುತ್ತಲ ರೈತರಲ್ಲಿ ಆತಂಕ ಹೆಚ್ಚಾಗಿದೆ.ವ್ಯಾಘ್ರನ ಸೆರೆ ಹಿಡಿಯುವಂತೆ ರೈತರು ಅಗ್ರಹಿಸಿದ್ದಾರೆ.ಅರಣ್ಯ ಇಲಾಖೆ ಅಲರ್ಟ್ ಆಗಿದೆ.ಕೆಲ ದಿನಗಳಿಂದ ಹುಕಿ ಹೆಡಿಯಾಲ ಸುತ್ತಮುತ್ತಲ ಈರೇಗೌಡನ ಹುಂಡಿ ಅಂಜನಾಪುರ ಗ್ರಾಮಗಳ ಬಳಿ ಕಾಣಿಸಿಕೊಂಡಿದೆ.ಜಮೀನಿನಲ್ಲಿ ಬಾರಿ ಗಾತ್ರದ ಹೆಜ್ಜೆ ಗುರುತುಗಳು ಕಂಡುಬಂದಿತ್ತು. ಅರಣ್ಯ ಇಲಾಖೆಯ ಎಸಿಎಫ್
Read More

BTL ವಿಧ್ಯಾಸಂಸ್ಥೆಗೆ ದ್ರೋಹ…30 ಲಕ್ಷ ವಂಚನೆ…ಕಾರ್ಯದರ್ಶಿ ವಿರುದ್ದ FIR…

ಮೈಸೂರು,ಜು2,Tv10 ಕನ್ನಡ ವಿದ್ಯಾಸಂಸ್ಥೆಗೆ 30 ಲಕ್ಷ ವಂಚಿಸಿ ದ್ರೋಹಬಗೆದ ಕಾರ್ಯದರ್ಶಿ ವಿರುದ್ದ ಎನ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನ ಕೆಸರೆ ಬಡಾವಣೆಯಲ್ಲಿರುವ ಬಿಟಿಎಲ್ ವಿದ್ಯಾವಾಹಿನಿ ಸ್ಕೂಲ್ ಮತ್ತು ಕಾಂಪೋಸಿಟ್ ಪಿಯು ಕಾಲೇಜಿನ ಕಾರ್ಯದರ್ಶಿ ಅಪೂರ್ವ ಲಕ್ಷ್ಮಣ್ ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ಸಂಸ್ಥೆಯ ಹೆಚ್ಚುವರಿ ಕಾರ್ಯದರ್ಶಿಯಾದ ಡಾ.ಸುಮರಾಂಗನಾಥ್ ಪ್ರಕರಣ ದಾಖಲಿಸಿದ್ದಾರೆ. 2025 ರಿಂದ ಇಲ್ಲಿಯವರೆಗೂ ಅಪೂರ್ವ ಲಕ್ಷ್ಮಣ್ ರವರು ವಿಧ್ಯಾರ್ಥಿಗಳಿಂದ ಸಂಗ್ರಹಿಸಿದ ಹಣವನ್ನ ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.30 ಲಕ್ಷ
Read More

ನಾಡದೇವ ಚಾಮುಂಡೇಶ್ವರಿ ದರುಶನ ಪಡೆದ ಹ್ಯಾಟ್ರಿಕ್ ಹೀರೋ…

ಮೈಸೂರು,ಜು2,Tv10 ಕನ್ನಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ನಾಡದೇವತೆ ಚಾಮುಂಡೇಶ್ವರಿ ದರುಶನ ಪಡೆದರು.ಪತ್ನಿ ಗೀತಾ ಜೊತೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ ಶಶಿಶೇಖರ್ ದೀಕ್ಷಿತ್‌ರವರು ಶಿವರಾಜ್ ಕುಮಾರ್ ಕುಟುಂಬಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು…
Read More

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ ಡ್ಯಾಂ ಬಳಿ ಅಲಂಕರಿಸಲಾಗಿದೆ.ಕನ್ನಂಬಾಡಿ ಕಟ್ಟೆ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯ ನೆರವೇರಲಿದೆ.ಇಂದು 11.30ಕ್ಕೆ ಸಲ್ಲುವ ಅಭಿಜಿನ್ ಶುಭ ಮುಹೂರ್ತಲಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಾಗುತ್ತದೆ.ಬಳಿಕ ಕಾವೇರಿ ಮಾತೆಗೆ ಪೂಜೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ
Read More