ಕೊಟ್ಟಿದ್ದು 4 ಲಕ್ಷ…9 ತಿಂಗಳಲ್ಲಿ ಬಡ್ಡಿ ಸಮೇತ ಪೀಕಿದ್ದು10 ಲಕ್ಷ…ಸಾಲವೇ ತೀರಿಲ್ಲವಂತೆ…ಮೈಸೂರಿನಲ್ಲೊಬ್ಬಳು ಬಡ್ಡಿ ಬಂಗಾರಮ್ಮ…
ಮೈಸೂರು,ಡಿ12,Tv10 ಕನ್ನಡ ಸಹಾಯ ಮಾಡುವ ನೆಪದಲ್ಲಿ ಮಹಿಳಾ ಟೈಲರ್ ಒಬ್ಬರಿಗೆ ಹಂತಹಂತವಾಗಿ 4 ಲಕ್ಷ ಸಾಲ ನೀಡಿ ಕೇವಲ 9 ತಿಂಗಳಿಗೆ ಬಡ್ಡಿ,ಚಕ್ರಬಡ್ಡಿ ಸೇರಿಸಿ 10.90 ಲಕ್ಷ ಪೀಕಿದ್ದಲ್ಲದೆ ಮತ್ತೆ ಲಕ್ಷಾಂತರ ಹಣ ಕೊಡಬೇಕೆಂದು ಇಬ್ಬರು ಮಹಿಳೆಯರು ಟಾರ್ಚರ್ ನೀಡುತ್ತಿರುವ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹೂಟಗಳ್ಳಿ ನಿವಾಸಿ ಪವಿತ್ರಾ ಎಂಬಾಕೆಗೆ ಅನುಷಾ ಹಾಗೂ ರೇಖಾ ಎಂಬುವರು ಹಣಕ್ಕಾಗಿ ಟಾರ್ಚರ್ ನೀಡುತ್ತಿದ್ದಾರೆ.ಬಡ್ಡಿ,ಚಕ್ರಬಡ್ಡಿ ವಸೂಲಿ ಮಾಡಿ ಮತ್ತಷ್ಟು ಹಣಕ್ಕೆ ಒತ್ತಡ ಹೇರುತ್ತಿರುವ
Read More