TV10 Kannada Exclusive

ಎಸ್ ಎಂ ಕೃಷ್ಣ ಅವರ ಅಂತಿಮ ಕ್ರಿಯೆ ಅತ್ಯಂತ ಗೌರವಯುತವಾಗಿ ನಡೆದಿದೆ…ಸರ್ಕಾರದ ನಡುವಳಿಕೆ ಮೆಚ್ಚುವಂತದ್ದು…ಎಂಎಲ್ಸಿ ಹೆಚ್.ವಿಶ್ವನಾಥ್…

ಮೈಸೂರು,ಡಿ12,Tv10 ಕನ್ನಡ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರ ಅಂತ್ಯಕ್ರಿಯೆ ಗೌರವಯುತವಾಗಿ ನಡೆದಿದೆ.ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಮೆಚ್ಚುಗೆ ವ್ಯಕ್ತಪಡಿಸುವಂತಹದ್ದು.ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಇದೇ ವೇಳೆ ಮಾತನಾಡಿಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದರು.ಆದರೆ ಸೋನಿಯಾಗಾಂಧಿ ತುಟಿ ಬಿಚ್ಚಲಿಲ್ಲ.ಒಬ್ಬ ವ್ಯಕ್ತಿ ಕಾಲವಾದಾಗ ಮನುಷ್ಯತ್ವ ಇರಬೇಕು, ದ್ವೇಷ ಇರಬಾರದು.ಸತ್ತಾಗಲೂ ದ್ವೇಷ ಮಾಡುವುದು ಸರಿಯಲ್ಲ.ಸಾರ್ವಜನಿಕ ಜೀವನದಲ್ಲಿರುವವರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು.ಕಾಂಗ್ರೆಸ್ ನ
Read More

ಕಾಲೇಜು ವಿಧ್ಯಾರ್ಥಿಗಳಿಗೆ ಸೈಬರ್ ಕ್ರೈಂ ಕುರಿತು ಜಾಗೃತಿ…

ಮೈಸೂರು,ಡಿ12,Tv10 ಕನ್ನಡ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ಮೈಸೂರಿನ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಾಜ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿಗಳಿಗೆ ಇಂದು Prevention of Crime & Cyber Safe Girl ಎಂಬ ವಿಷಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ದೇವರಾಜ ಪೊಲೀಸ್ ಠಾಣೆಯ ಪಿಎಸ್ಐ ಜೈಕೀರ್ತಿ ರವರು ಉಪನ್ಯಾಸ ನೀಡಿದರು.ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಗಳು ಹೆಚ್ಚುತ್ತಿವೆ.ಯುವ ಜನಾಂಗ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ.ನಯವಂಚಕರು ಅಮಾಯಕರನ್ನ ನಾನಾ
Read More

ಕೊಟ್ಟಿದ್ದು 4 ಲಕ್ಷ…9 ತಿಂಗಳಲ್ಲಿ ಬಡ್ಡಿ ಸಮೇತ ಪೀಕಿದ್ದು10 ಲಕ್ಷ…ಸಾಲವೇ ತೀರಿಲ್ಲವಂತೆ…ಮೈಸೂರಿನಲ್ಲೊಬ್ಬಳು ಬಡ್ಡಿ ಬಂಗಾರಮ್ಮ…

ಮೈಸೂರು,ಡಿ12,Tv10 ಕನ್ನಡ ಸಹಾಯ ಮಾಡುವ ನೆಪದಲ್ಲಿ ಮಹಿಳಾ ಟೈಲರ್ ಒಬ್ಬರಿಗೆ ಹಂತಹಂತವಾಗಿ 4 ಲಕ್ಷ ಸಾಲ ನೀಡಿ ಕೇವಲ 9 ತಿಂಗಳಿಗೆ ಬಡ್ಡಿ,ಚಕ್ರಬಡ್ಡಿ ಸೇರಿಸಿ 10.90 ಲಕ್ಷ ಪೀಕಿದ್ದಲ್ಲದೆ ಮತ್ತೆ ಲಕ್ಷಾಂತರ ಹಣ ಕೊಡಬೇಕೆಂದು ಇಬ್ಬರು ಮಹಿಳೆಯರು ಟಾರ್ಚರ್ ನೀಡುತ್ತಿರುವ ಪ್ರಕರಣವೊಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹೂಟಗಳ್ಳಿ ನಿವಾಸಿ ಪವಿತ್ರಾ ಎಂಬಾಕೆಗೆ ಅನುಷಾ ಹಾಗೂ ರೇಖಾ ಎಂಬುವರು ಹಣಕ್ಕಾಗಿ ಟಾರ್ಚರ್ ನೀಡುತ್ತಿದ್ದಾರೆ.ಬಡ್ಡಿ,ಚಕ್ರಬಡ್ಡಿ ವಸೂಲಿ ಮಾಡಿ ಮತ್ತಷ್ಟು ಹಣಕ್ಕೆ ಒತ್ತಡ ಹೇರುತ್ತಿರುವ
Read More

ವರ್ಕ್ ಫ್ರಂ ಹೋಮ್ ನಲ್ಲಿ ಹೆಚ್ಚಿನ ಆದಾಯ ಆಮಿಷ…19.89 ಲಕ್ಷ ಕಳೆದುಕೊಂಡ ಮಹಿಳೆ

ಮೈಸೂರು,ಡಿ12,Tv10 ಕನ್ನಡ ವರ್ಕ್ ಫ್ರಂ ಹೋಮ್ ನಿಂದ ಹೆಚ್ಚಿನ ಆದಾಯ ಗಳಿಸಬಹುದೆಂಬ ಆಮಿಷವೊಡ್ಡಿದ ನಯವಂಚಕರು ಮೈಸೂರಿನ ಮಹಿಳೆಯೊಬ್ಬರಿಗೆ 19.89 ಲಕ್ಷಕ್ಕೆ ಪಂಗನಾಮ ಹಾಕಿದ್ದಾರೆ.ರಾಜೀವ್ ನಗರದ ನಿವಾಸಿ ತಹಸೀನಾ ರಾವ್ ತರ್ ಹಣ ಕಳೆದುಕೊಂಡ ಮಹಿಳೆ.ಟೆಲಿಗ್ರಾಂ‌ ಆಪ್ ಮೂಲಕ ವಂಚಕರು ತಹಸೀನಾ ರಾವ್ ತರ್ ಗೆ ವರ್ಕ್ ಫ್ರಂ ಹೋಮ್ ಮೂಲಕ ಹೆಚ್ಚಿನ ಆದಾಯ ಗಳಿಸಬಹುದೆಂಬ ಸಂದೇಶ ಕಳಿಸಿದ್ದಾರೆ.ಇದನ್ನ ನಂಬಿದ ತಹಸೀನಾ ರಾವ್ ತರ್ ಟೆಲಿಗ್ರಾಂ ಗ್ರೂಪ್ ಗೆ ಸೇರಿಕೊಂಡಿದ್ದಾರೆ.ಪ್ರತಿದಿನ 2
Read More

ಅಕ್ರಮ ಸಂಭಂಧ ವಿರೋಧಿಸಿದ್ದೇ ತಪ್ಪಾಯ್ತು…ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ…ಪತಿ ಹಾಗೂ ಪ್ರಿಯತಮೆ ವಿರುದ್ದ ಪ್ರಕರಣ ದಾಖಲು…

ಮೈಸೂರು,ಡಿ12,Tv10 ಕನ್ನಡ ಅಕ್ರಮ ಸಂಭಂಧವನ್ನ ವಿರೋಧಿಸಿ ಪ್ರಶ್ನಿಸಿದ ಪತ್ನಿ ಹಾಗೂ ಮಗಳ ಮೇಲೆ ಪ್ರಿಯತಮೆ ಜೊತೆ ಸೇರಿ ಪತಿರಾಯ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಂಗಳೂರಿನ ಶ್ವೇತಾ ಎಂಬುವರು ತಮ್ಮ ಪತಿ ಸಂತೋಷ್ ಕುಮಾರ್ ಹಾಗೂ ಆತನ ಪ್ರಿಯತಮೆ ಶ್ವೇತಾ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶ್ವೇತಾ ಹಾಗೂ ಸಂತೋಷ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಬೆಂಗಳೂರಿನ ಕೆಂಗೇರಿಯ ಲಿಂಗಧೀರನಹಳ್ಳಿ ಬಡಾವಣೆ
Read More

ಮೆಡಿಕಲ್ ಕಾಲೇಜು ವಿಧ್ಯಾರ್ಥಿನಿ ಮೇಲೆ ಬಲತ್ಕಾರಕ್ಕೆ ಯತ್ನ…ಮನೆ ಮಾಲೀಕನ ವಿರುದ್ದ FIR ದಾಖಲು…

ಮೈಸೂರು,ಡಿ12,Tv10 ಕನ್ನಡ ಜೆಎಸ್ ಎಸ್ ಮೆಡಿಕಲ್ ಕಾಲೇಜು ವಿಧ್ಯಾರ್ಥಿನಿ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಾಡಿಗೆ ನೀಡಿದ್ದ ಮನೆ ಮಾಲೀಕನ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬನ್ನಿಮಂಟಪ ಜೆಎಸ್ ಎಸ್ ನಗರದ ನಿವಾಸಿ ಅಮಾನುಲ್ಲಾ ಖಾನ್ ವಿರುದ್ದ FIR ದಾಖಲಾಗಿದೆ.ಕೇರಳ ಮೂಲದ ವಿಧ್ಯಾರ್ಥಿನಿ ಪ್ರಕರಣ ದಾಖಲಿಸಿದ್ದಾರೆ. ಜೂನ್ ನಲ್ಲಿ ಅಮಾನುಲ್ಲಾಖಾನ್ ರವರ ಮನೆಯಲ್ಲಿ ಕೊಠಡಿ ಬಾಡಿಗೆ ಪಡೆದ ವಿಧ್ಯಾರ್ಥಿನಿ ತಂಗಿದ್ದಳು.ಒಂಟಿಯಾಗಿ ಇದ್ದ ಸಮಯವನ್ನ ಬಳಸಿಕೊಂಡ ಅಮಾನುಲ್ಲಾಖಾನ್ ಕೊಠಡಿಗೆ ನುಗ್ಗಿ
Read More

ಯದಯವೀರ್ ಎರಡನೇ ಪುತ್ರನಿಗೆ ತೊಟ್ಟಿಲು ಶಾಸ್ತ್ರ…ಚಾಮುಂಡಿ ಸನ್ನಿಧಿಯಲ್ಲಿ ಕಾರ್ಯಕ್ರಮ…

ಮೈಸೂರು,ಡಿ11,Tv10 ಕನ್ನಡ ಮೈಸೂರು ರಾಜ ವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಮ್ಮ ದ್ವಿತೀಯ ಪುತ್ರನಿಗೆ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಿದರು. ಇವರೊಂದಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್ ಪತ್ನಿ ತ್ರಿಷಿಕಾ ಹಾಗೂ ಪುತ್ರ ಆಧ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು…
Read More

ಅಂತರ್ಜಾತಿ ವಿವಾಹ ಎಫೆಕ್ಟ್…ದಲಿತ ಯುವಕರ ಮೇಲೆ ಸವರ್ಣೀಯರಿಂದ ಹಲ್ಲೆ ಆರೋಪ…ಮೂವರು ಆಸ್ಪತ್ರೆಗೆ ದಾಖಲು…

ನಂಜನಗೂಡು,ಡಿ10,Tv10 ಕನ್ನಡ ಅಂತರ್ಜಾತಿ ವಿವಾಹ ನಡೆದ ಹಿನ್ನಲೆ ಮೂವರು ದಲಿತ ಯುವಕರ ಮೇಲೆ ಸವರ್ಣೀಯರಿಂದ ಹಲ್ಲೆ ನಡೆದ ಘಟನೆ ನಂಜನಗೂಡು ತಾಲೂಕು ಗೀಕಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ಗ್ರಾಮದ ಆಕಾಶ್,ನಿತಿನ್ ಮತ್ತು ಸಂತೋಷ್ ಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಗೀಕಳ್ಳಿಯಲ್ಲಿ ಅಂತರ್ಜಾತಿ ವಿವಾಹ ನೆರವೇರಿತ್ತು.ಈ ಸಂಭಂಧ ಎರಡು ಕೋಮುಗಳ ನಡುವೆ ಧ್ವೇಷ ಬೆಳೆದಿತ್ತು ಎನ್ನಲಾಗಿದೆ.ನಿನ್ನೆ ರಾತ್ರಿ ಇದನ್ನೇ
Read More

ಮಾಜಿ ಸಿಎಂ ಎಸ್.ಎಂ ಕೃಷ್ಣ ಅಗಲಿಕೆ…ಗಣಪತಿ ಶ್ರೀಗಳ ಸಂತಾಪ…

ಮೈಸೂರು,ಡಿ10,Tv10 ಕನ್ನಡ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಮುಕ್ತಿಗಾಗಿ ಪ್ರಾರ್ಥಿಸಿದ್ದಾರೆ. ಎಸ್.ಎಂ.ಕೃಷ್ಣರವವರು ನಲವತ್ತು ವರ್ಷಗಳಿಂದ ಮೈಸೂರಿನ ಅವಧೂತ ದತ್ತ ಪೀಠಕ್ಕೆ ಬರುತ್ತಿದ್ದರು ಹಾಗೂ ಸ್ವಾಮೀಜಿ ಅವರ ಬಗ್ಗೆ ಅಪಾರ ಭಕ್ತಿ ಗೌರವಗಳನ್ನು ಹೊಂದಿದ್ದರು.ಕೃಷ್ಣ ರವರು ಈ ನಾಡು ಕಂಡ ಅಪ್ರತಿಮ ಹಾಗೂ ಅಪರೂಪ ನಾಯಕ. ಅವರ ಅವಧಿಯಲ್ಲಿ ಬೆಂಗಳೂರು ಹಾಗು
Read More

ಮಹಿಳೆಯರ ಬಗ್ಗೆ ಅಸಭ್ಯ ಚಿತ್ರಗಳನ್ನ ಬಿಡಿಸಿ ಮನೆ ಮುಂದೆ ಇಡುತ್ತಿದ್ದ ಸೈಕೋ…ನ್ಯಾಯ ನೀಡುವ ಗ್ರಾಮದ ಮುಖಂಡನಿಂದಲೇ ಕೃತ್ಯ…ರೆಡ್ ಹ್ಯಾಂಡಾಗಿ ಹಿಡಿದ

ನಂಜನಗೂಡು,ಡಿ10,Tv10 ಕನ್ನಡ ಮಹಿಳೆಯರು,ಯುವತಿಯರ ಬಗ್ಗೆ ಅಸಭ್ಯವಾಗಿ ಲೈಂಗಿಕ ಚಿತ್ರಗಳನ್ನ ಬಿಡಿಸಿ ಹೆಸರುಗಳನ್ನ ನಮೂದಿಸಿ ಮನೆಗಳ ಮುಂದೆ ಇಟ್ಟು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಸೈಕೋಪಾತ್ ನ ಗ್ರಾಮಸ್ಥರು ಹೊಂಚು ಹಾಕಿ ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ವಿಲಕ್ಷಣ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ವರದರಾಜಸ್ವಾಮಿ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.ಗ್ರಾಮದಲ್ಲಿ ಸಮಸ್ಯೆಗಳು ಶುರುವಾದಾಗ ನ್ಯಾಯಕ್ಕಾಗಿ ನಿಲ್ಲುತ್ತಿದ್ದ ಮುಖಂಡನಿಂದಲೇ ಕೃತ್ಯ ನಡೆದಿದೆ.ಹಲವಾರು ದಿನಗಳಿಂದ ಸೈಕೋಪಾತ್ ನ ಹಿಡಿಯಲು ಗ್ರಾಮಸ್ಥರು ಹೊಂಚು ಹಾಕಿದ್ದು
Read More