TV10 Kannada Exclusive

ನಜರಬಾದ್ ಠಾಣೆ ಪೊಲೀಸರ ಕಾರ್ಯಾಚರಣೆ…ದ್ವಿಚಕ್ರ ವಾಹನ ಕಳ್ಳನ ಬಂಧನ…7 ಲಕ್ಷ ಮೌಲ್ಯದ 12 ವಾಹನ ವಶ…

ಮೈಸೂರು,ಜ8,Tv10 ಕನ್ನಡ ದ್ವಿಚಕ್ರವಾಹನಗಳನ್ನ ಕಳುವು ಮಾಡುತ್ತಿದ್ದ ಓರ್ವ ಖದೀಮನನ್ನ ಬಂಧಿಸುವಲ್ಲಿ ನಜರಬಾದ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 7 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ.ನಂಜನಗೂಡಿನ ಕಾರ್ತಿಕ್ (21) ಬಂಧಿತ ಆರೋಪಿ.ಈ ಮೂಲಕ ನಜರಬಾದ್ ಠಾಣಾ ವ್ಯಾಪ್ತಿಯ 5,ಆಲನಹಳ್ಳಿ ಪೊಲೀಸ್ ಠಾಣೆಯ 4,ಕೆ.ಆರ್.ಪೊಲೀಸ್ ಠಾಣೆಯ 1,ನಂಜನಗೂಡು ಠಾಣೆಯ 1 ಪ್ರಕರಣಗಳು ಪತ್ತೆಯಾದಂತಾಗಿದೆ.ಆರೋಪಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು ಕಳ್ಳತನಕ್ಕೆ ಇಳಿದಿದ್ದ.ನಕಲಿ ಕೀ ಬಳಸಿ ವಾಹನಗಳನ್ನ ಕಳುವು ಮಾಡುತ್ತಿದ್ದ.ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳನ್ನ ಗಿರವಿ
Read More

ಜೈಲಿನಲ್ಲಿ ಬೇಕರಿ ಎಸೆನ್ಸ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣ…ಮತ್ತೊಬ್ಬ ಖೈದಿ ಸಾವು…ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ…

ಮೈಸೂರು,ಜ8,Tv10 ಕನ್ನಡ ಬೇಕರಿ ಎಸ್ಸೆನ್ಸ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮೂವವರು ಖೈದಿಗಳು ಸಾವನ್ನಪ್ಪಿದ್ದಾರೆ.ನಿನ್ನೆ ಓರ್ವ ಸಾವನ್ನಪ್ಪಿದ್ದು ಇಂದು ಬೆಳಿಗ್ಗೆ ಮತ್ತೊಬ್ಬ ಖೈದಿ ಸಾವನ್ನಪ್ಪಿದ್ದರು ಇದೀಗ ಮೂರನೇ ಖೈದಿ ರಮೇಶ್ ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಮೂವರು ಖೈದಿಗಳು ಸಾವನ್ನಪ್ಪಿದ್ದಾರೆ.ಖೈದಿಗಳ ಸಾವಿನ ಹಿನ್ನಲೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ.ಮೂವರು ಖೈದಿಗಳೂ ಸಹ ಸಜಾ ಶಿಕ್ಷೆವಾನುಭವಿಸುತ್ತಿದ್ದವರು ಎಂದು ಹೇಳಲಾಗಿದೆ.ವಿಷಕಾರಿಕ ಅಂಶದ ವಸ್ತುಗಳನ್ನ ಖೈದಿಗಳಿಗೆ ಸುಲಭವಾಗಿ ಸಿಗುವಂತ ವ್ಯವಸ್ಥೆ ಬಗ್ಗೆ ಅನುಮಾನಗಳು
Read More

ಮತ್ತೊಬ್ಬ ಖೈದಿ ಸಾವು…ಮೃತರ ಸಂಖ್ಯೆ ಎರಡಕ್ಕೆ ಏರಿಕೆ…ಮತ್ತೋರ್ವನ ಸ್ಥಿತಿ ಗಂಭೀರ…

ಮೈಸೂರು,ಜ8,Tv10 ಕನ್ನಡ ಬೇಕರಿ ಎಸೆನ್ಸ್ ಸೇವಿಸಿ ಆಸ್ಪತ್ರೆ ಸೇರಿದ್ದ ಮೂವರು ಖೈದಿಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.ನಿನ್ನೆ ಓರ್ವ ಸಾವನ್ನಪ್ಪಿದ್ದು ಇಂದು ಮುಂಜಾನೆ ಮತ್ತೋರ್ವ ಖೈದಿ ಸಾವನ್ನಪ್ಪಿದ್ದಾನೆ.ಇನ್ನೊಬ್ಬ ಖೈದಿಯ ಸ್ಥಿತಿ ಸಹ ಗಂಭೀರ ಎಂದು ಹೇಳಲಾಗಿದೆ.ಚಾಮರಾಜನಗರದ ನಾಗರಾಜು ಮೃತ ಖೈದಿ.ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಕುಡಿದು ಅಸ್ವಸ್ಥರಾಗಿದ್ದ ಮೂವರು ಕೈದಿಗಳನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ನಿನ್ನೆಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತಪಟ್ಟಿದ್ದ.ರಮೇಶ್ ಹಾಗೂ ನಾಗರಾಜ್ ಸ್ಥಿತಿ ಗಂಭೀರವಾಗಿತ್ತು.ಕಿಕ್‌ಗಾಗಿ ಎಸೆನ್ಸ್ ಕುಡಿದಿದ್ದ ಮೂವರು.ಹೊಸವರ್ಷದ ಕೇಕ್
Read More

ಸಂಚಾರಿ ನಿಯಮ ಉಲ್ಲಂಘನೆ…ದಂಡ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ…ನೊಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿದ ಭೂಪ…

ಮೈಸೂರು,ಜ7,Tv10 ಕನ್ನಡ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದಾಗ ದಂಡ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ ಹಾಕಿದ ಯುವಕನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.ಬೈಕ್ ನೊಂದಣಿ ಸಂಖ್ಯೆ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿ ಪೊಲೀಸರನ್ನೇ ಯಾಮಾರಿಸಲು ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾನೆ.ವಾಹನವನ್ನ ವಶಪಡಿಸಿಕೊಂಡ ವಿವಿ ಪುರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಸರೆ ಬಡಾವಣೆ ನಿವಾಸಿ ಮೊಹಮದ್ ಮುಜಾಹಿಲ್ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಐನಾತಿ.ನೊಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿದ ರಾಯಲ್ ಎನ್ಫೀಲ್ಡ್ ಇದೀಗ ವಿವಿಪುರಂ ಠಾಣೆ
Read More

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ…

ಕೆ.ಆರ್.ನಗರ,ಜ7,Tv10 ಕನ್ನಡ ಕೊಟ್ಟ ಸಾಲ ವಾಪಸ್ ಕೇಳಿದ ವ್ಯಕ್ತಿಯನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಂದ ಘಟನೆಕೆ.ಆರ್ ನಗರ ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.ಚಂದ್ರಹಾಸ ಕೊಲೆಯಾದ ವ್ಯಕ್ತಿ.ಪಾಪಣ್ಣ ಮತ್ತು ಇತರರು ಕೊಲೆ ಮಾಡಿದ್ದಾರೆ.ಪಾಪಣ್ಣ ಪಕ್ಕದ ಸಿದ್ದನಕೊಪ್ಪಲು ಗ್ರಾಮದ ವ್ಯಕ್ತಿ.ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read More

ಚಿಕಿತ್ಸೆ ಫಲಕಾರಿಯಾಗದೆ ಸಜಾ ಖೈದಿ ಕೆ.ಆರ್.ಆಸ್ಪತ್ರೆಯಲ್ಲಿ ಸಾವು…

ಮೈಸೂರು,ಜ7,Tv10 ಕನ್ನಡ ಹೊಟ್ಟೆ ನೋವಿನಿಂದ ಕೆ.ಆರ್.ಆಸ್ಪತ್ರೆ ದಾಖಲಾಗಿದ್ದ ಸಜಾ ಖೈದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮಾದೇಶ್(37) ಮೃತ ಖೈದಿ.ಡಿಸೆಂಬರ್ 29 ರಂದು ಆಸ್ಪತ್ರೆಗೆ ದಾಖಲಾಗಿದ್ದರು.ಪತ್ನಿಯನ್ನ ಕೊಲೆ ಮಾಡಿದ ಆರೋಪ ಸಾಬೀತಾಗಿ ಸಜಾ ಖೈದಿಯಾಗಿ ಮೈಸೂರಿನ ಕೇಂದ್ರ ಕಾರಾಗೃಹದ ಶಿಕ್ಷೆ ಅನುಭವಿಸುತ್ತಿದ್ದರು.ಮೂಲತಃ ಗುಂಡ್ಲುಪೇಟೆ ತಾಲೂಕಿನ ಮಾದೇಶ್ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ವಾಸವಿದ್ದ ವೇಳೆ ಕೊಲೆ ಆರೋಪ ಹೊತ್ತಿದ್ದರು.ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ನಡು ರಸ್ತೆಯಲ್ಲಿ ಸುಟ್ಟು ಭಸ್ಮವಾದ ಕಾರು…ಪ್ರಯಾಣಿಕರು ನಾಪತ್ತೆ…ಹುರಳಿ,ರಾಗಿ ಒಕ್ಕಣೆ ಎಫೆಕ್ಟ್…?

ಸರಗೂರು,ಜ7,Tv10 ಕನ್ನಡ ನಡುರಸ್ತೆಯಲ್ಲಿ ಕಾರು ಸುಟ್ಟು ಕರುಕಲಾದ ಘಟನೆ ಸರಗೂರು ತಾಲೂಕಿನ ಯಶವಂತಪುರ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.ಧಾರ್ಮಿಕ ಕ್ಷೇತ್ರ ಶ್ರೀ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.ಕೆ.ಆರ್.ನಗರಕ್ಕೆ ಸೇರಿದ ಕಾರು ಎಂದು ಹೇಳಲಾಗಿದೆ.ರಸ್ತೆ ಮಧ್ಯೆ ರಾಗಿ ಹಾಗೂ ಹುರುಳಿ ಒಕ್ಕಣೆ ಮಾಡುತ್ತಿರುವ ಹಿನ್ನಲೆ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.ಕಾರಿಗೆ ಒಕ್ಕಣೆ ಮಾಡುವ ಸತ್ತೆ ಸಿಲುಕಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.ಮಧ್ಯರಾತ್ರಿ ವೇಳೆ ಘಟನೆ ನಡೆದ ಕಾರಣ ಕಾರಿನಲ್ಲಿದ್ದ
Read More

ಮೂರು ತಲೆಮಾರುಗಳಿಂದ ವಾಸವಿದ್ದ 4 ಕುಟುಂಬ ಬೀದಿಪಾಲು ಪ್ರಕರಣ…ತಾಲೂಕು ಆಡಳಿತ ಸ್ಪಂದನೆ…

ನಂಜನಗೂಡು,ಜ6,Tv10 ಕನ್ನಡ ಮೂರು ತಲೆಮಾರುಗಳಿಂದ ವಾಸವಿದ್ದ ಹಂದಿಜೋಗಿ ಜನಾಂಗದ 4 ಕುಟುಂಬವನ್ನ ರಾತ್ರೋರಾತ್ರಿ ಬೀದಿಪಾಲು ಮಾಡಿದ ಪ್ರಕರಣಕ್ಕೆ ನಂಜನಗೂಡು ತಾಲೂಕು ಆಡಳಿತ ಸ್ಪಂದಿಸಿದೆ.ಜಮೀನಿನ ಮಾಲಿಕ ಶಿವಾನಂದ ಮತ್ತು ಬಿಳಿಗೆರೆ ಪೊಲೀಸ್ ಠಾಣೆ ಪಿಎಸ್ಐ ಅಮಾನತಿಗಾಗಿ ಒತ್ತಡ ಹೇರಲಾಗಿದೆ.ನಂಜನಗೂಡು ತಾಲೂಕು ಹೊರಳವಾಡಿ ಹೊಸೂರು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ವಾಸವಿದ್ದ ಮನೆಗಳನ್ನ ತೆರುವುಗೊಳಿಸಿದ ಪರಿಣಾಮ ದಾರಿ ಕಾಣದೆ 4 ಕುಟುಂಬ ಬೀದಿಯನ್ನೇ ಆಶ್ರಯಿಸಿದೆ ನ್ಯಾಯ ದೊರೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ
Read More

ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ 5 ನೇ ವರ್ಷದ ಪುಣ್ಯಸಂಸ್ಕರಣೆ…ಹೆಣ್ಣುಮಕ್ಕಳಿಗೆ ಹಣ್ಣುಹಂಪಲು ವಿತರಣೆ…

ಮೈಸೂರು,ಜ6,Tv10 ಕನ್ನಡ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ 5ನೇ ವರ್ಷದ ಪುಣ್ಯಸಂಸ್ಕರಣೆಯನ್ನ ಹೆಣ್ಣುಮಕ್ಕಳಿಗೆ ಹಣ್ಣುಹಂಪಲು ಹಾಗೂ ಓದುವ ಸಾಮಗ್ರಿಗಳನ್ನ ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ನಗರದ ಕೃಷ್ಣಮೂರ್ತಿ ಪುರಂ ನಲ್ಲಿರುವ ಶಾರದಾ ನೆಲೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಡಾ. ಕೆ. ರಘುರಾಮ್ ವಾಜಪೇಯಿ ಮಾತನಾಡಿಪೇಜಾವರ ಸ್ವಾಮೀಜಿ ಎಲ್ಲರ ಪ್ರೀತಿ
Read More

ಲಷ್ಕರ್ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಮಹಿಳೆ ಸೇರಿ ಇಬ್ಬರು ಕಳ್ಳರ ಸೆರೆ…12 ಲಕ್ಷ ಮೌಲ್ಯದ 184 ಗ್ರಾಂ ಚಿನ್ನಾಭರಣ ವಶ…

ಮೈಸೂರು,ಜ6,Tv10 ಕನ್ನಡ ಲಷ್ಕರ್ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಕಳ್ಳರನ್ನ ಬಂಧಿಸಲಾಗಿದೆ.ಬಂಧಿತರಿಂದ 12 ಲಕ್ಷ ಮೌಲ್ಯದ 184 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಭದ್ರಾವತಿ ಮೂಲದ ಸಾವಿತ್ರಿ(42) ಹಾಗೂ ಗುರುರಾಜ್(45) ಬಂಧಿತರು. ಡಿಸೆಂಬರ್ 16 ರಂದು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ವ್ಯಾನಿಟಿ ಬ್ಯಾಗ್ ಕಳುವು ಮಾಡಿ 184 ಗ್ರಾಂ ಚಿನ್ನಾಭರಣ ಲಪಟಾಯಿಸಿದ್ದರು.ಈ ಸಂಭಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಖದೀಮರ ಬಂಧನಕ್ಕೆ ತಂಡ ರಚಿಸಲಾಗಿತ್ತು.ಆರೋಪಿಗಳನ್ನ
Read More