TV10 Kannada Exclusive

ಉಪರಾಷ್ಟ್ರಪತಿ ಅಪಮಾನಿಸಿದ ಹಿನ್ನಲೆ… ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ…

ಮೈಸೂರು,ಡಿ21,Tv10 ಕನ್ನಡ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ರವರನ್ನ ಅಪಮಾನಿಸಿದ ಹಿನ್ನಲೆ ಕಾಂಗ್ರೆಸ್ ವಿರುದ್ದ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಗಾಂಧಿ ವೃತ್ತದಲ್ಲಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.ರಾಹುಲ್ ಗಾಂಧಿಯವರ ನಡೆಯನ್ನ ಖಂಡಿಸಿ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದ್ದಾರೆ…
Read More

ನಿಂತಿದ್ದ ಕಾರಿನಲ್ಲಿ ಬೆಂಕಿ…ಕುವೆಂಪುನಗರ ಜಡ್ಜಸ್ ಕ್ವಾರ್ಟರ್ಸ್ ಬಳಿ ಘಟನೆ…

ಮೈಸೂರು,ಡಿ21,Tv10 ಕನ್ನಡ ನಿಂತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರಿನ ಕುವೆಂಪುನಗರದ ಜಡ್ಜಸ್ ಕ್ವಾರ್ಟರ್ಸ್ ಬಳಿ ನಡೆದಿದೆ.ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಟ್ಟೆ ಅಂಗಡಿ ಮಾಲೀಕರಾದ ಶಫಿಉಲ್ಲಾ ಖಾನ್ ಎಂಬುವರಿಗೆ ಸೇರಿದ ಇನೋವಾ KA07 N 0831 ನೊಂದಣಿ ಸಂಖ್ಯೆಯ ಕಾರಿನಲ್ಲಿ ಧಿಢೀರ್ ಬೆಂಕಿ ಕಾಣಿಸಿಕೊಂಡಿದೆ.ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರೆ.ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿ ಮುಂದಾಗಲಿದ್ದ ಅನಾಹುತ ತಪ್ಪಿಸಿದ್ದಾರೆ.ಕುವೆಂಪುನಗರ
Read More

ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದ ಜಮೀನಿಗೆ ಕನ್ನ…ಕ್ರಮ ಕೈಗೊಳ್ಳುವಂತೆ ಮೈಸೂರು ಡಿಸಿಗೆ ಮಂಡ್ಯ ಜಿಲ್ಲಾಧಿಕಾರಿ ಪತ್ರ…

ಮೈಸೂರು,ಡಿ20,Tv10 ಕನ್ನಡ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯಕ್ಕೇ ಸೇರಿದ ಜಮೀನುಗಳನ್ನ ಲಪಟಾಯಿಸಿದ ಖದೀಮರ ವಿರುದ್ದ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಮೈಸೂರುತಾಲೂಕು ಕಸಬ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ 396 ರ 3 ಎಕ್ರೆ 07 ಗುಂಟೆ,ಸರ್ವೆ ನಂ 397 ರ 0.05 ಗುಂಟೆ,ಸರ್ವೆ ನಂ.398 ರ 1 ಎಕ್ರೆ 18 ಗುಂಟೆ ಹಾಗೂ ಸರ್ವೆ ನಂ.399 ರ 4 ಎಕ್ರೆ 18
Read More

ಕರೋನಾ ಭೀತಿ…ದತ್ತಪೀಠದ ಶುಕವನ ಭಂದ್…

ಮೈಸೂರು,ಡಿ20,Tv10 ಕನ್ನಡ ಕರೋನಾ ಹೆಚ್ಚುತ್ತಿರುವ ಹಿನ್ನಲೆ ಡಿಸೆಂಬರ್ 22 ರಿಂದ ದತ್ತಪೀಠದಲ್ಲಿರುವ ಶುಕವನ,ಬೋನ್ಸಾಯಿ ವನ ಹಾಗೂ ವಿಶ್ವಂ ವಸ್ತು ಸಂಗ್ರಹಾಲಯವನ್ನ ಅನಿರ್ಧಿಷ್ಠಾವಧಿ ಕಾಲ ಬಂದ್ ಮಾಡಲಾಗುವುದಾಗಿ ದತ್ತಪೀಠದ ಆಡಳಿತಾಧಿಕಾರಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ…
Read More

ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿಗೆ ತಲುಪುತ್ತಾನೆ-ಪೊಲೀಸ್ ಇನಸ್ಪೆಕ್ಟರ್ ಪ್ರಕಾಶ್

ಮಾದಕ ವಸ್ತುಗಳು ಯುವ ಪೀಳಿಗೆಯನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಅನೇಕರು ಅಪಾಯಕ್ಕೆ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ನಂಜನಗೂಡಿನ ಪೊಲೀಸ್ ಇನಸ್ಪೇಕ್ಟರ್ ಶ್ರೀ ಪ್ರಕಾಶ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಮಾದಕ ವಸ್ತುಗಳ ಸೇವನೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಪಿಡುಗುವಿನಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿಗೆ ತಲುಪುತ್ತಾನೆ.ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್. ದಿನೇಶ್ ರವರು ಮಾತನಾಡಿ ಮಾದಕ ವಸ್ತುಗಳ
Read More

ರಾಮಕೃಷ್ಣ ಆಶ್ರಮದಲ್ಲಿ ಚಿರತೆ ಸೆರೆ…

ಮೈಸೂರು,ಡಿ19,Tv10 ಕನ್ನಡ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಚಿರತೆ ಸೆರೆಯಾಗಿದೆ. ನಗರ ಪ್ರದೇಶಕ್ಕೆ ಚಿರತೆ ಬಂದಿರುವುದು ಆತಂಕ ಸೃಷ್ಟಿಸಿದೆ. ಮೈಸೂರು ಹೊರವಲಯದ ಕಾಡಂಚಿನ ಪ್ರದೇಶದ ಗ್ರಾಮಗಳಲ್ಲಿ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದುದು ಸಹಜ. ಇದೀಗ ಮೈಸೂರು ನಗರದೊಳಗೇ ಚಿರತೆ ಸೆರೆಸಿಕ್ಕಿರುವುದರಿಂದ ಜನ ಗಾಬರಿಯಾಗಿದ್ದಾರೆ. ಅರಣ್ಯ ಇಲಾಖೆಯವರು ರಾಮಕೃಷ್ಣ‌ ಆಶ್ರಮದಲ್ಲಿ ಇರಿಸಿದ್ದ ಬೋನಿಗೆ ಬಿದ್ದಿದೆ.ನಾಲ್ಕು ದಿನದ ಹಿಂದೆ ಬೋನು ಇರಿಸಲಾಗಿತ್ತು.ಚಿರತೆಯನ್ನು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್‌ಎಫ್ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿ ಅರಣ್ಯಕ್ಕೆ ರವಾನಿಸಿದ್ದಾರೆ…
Read More

ಪ್ರತಾಪ್ ಸಿಂಹ ಪರ ಬಿಜೆಪಿ ಕಾರ್ಯಕರ್ತರ ಬ್ಯಾಟಿಂಗ್…

ಮೈಸೂರು,ಡಿ16,Tv10 ಕನ್ನಡ ಸಂಸದ ಪ್ರತಾಪ್ ಸಿಂಹ ಪರ ಬಿಜೆಪಿ ಕಾರ್ಯಕರ್ತರು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.ಮೈಸೂರಿನ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರುಪ್ರತಾಪ್ ಸಿಂಹ ಅವರೊಂದಿಗೆ ನಾವು ಎಂದು ಘೋಷಣೆ ಕೂಗಿದ್ದಾರೆ.ರಾಷ್ಟ್ರೀಯ ವಾದಿ ಪ್ರತಾಪ್ ಸಿಂಹ ಜೊತೆಗೆ ನಾವಿದ್ದೇವೆ.ಹಿಂದೂ ಹುಲಿ ಪ್ರತಾಪ್ ಸಿಂಹ ಎಂದು ಅವರ ಭಾವಚಿತ್ರದ ಮುಖವಾಡ ಹಾಕಿಕೊಂಡು ಘೋಷಣೆ ಕೂಗಿ ಬೆಂಬಲ ಸೂಚಿಸಿದ್ದಾರೆ…
Read More

ಪ್ರತಾಪ್ ಸಿಂಹ ಕುರಿತ ಅವಹೇಳನಾಕಾರಿ ಪೋಸ್ಟರ್ ಪ್ರಕರಣ…ಕೆ.ಶಿವರಾಮು ವಿರುದ್ದ ಬಿಜೆಪಿ ಮುಖಂಡ ದೂರು…

ಮೈಸೂರು,ಡಿ15,Tv10 ಕನ್ನಡ ಸಂಸತ್ ನಲ್ಲಿ ನಡೆದ ಬೆಳವಣಿಗೆ ಕುರಿತಂತೆ ಸಂಸದ ಪ್ರತಾಪ್ ಸಿಂಹ ರವರಿಗೆ ಅವಹೇಳನಾಕಾರಿಯಾಗಿ ಪೋಸ್ಟರ್ ಅಳವಡಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವೇದಿಕೆ ಅಧ್ಯಕ್ಷ ಕೆ.ಶಿವರಾಮು ವಿರುದ್ದ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಆನಂದ್ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಯಾವುದೇ ಅನುಮತಿ ಪಡೆಯದೆ ಪ್ರತಾಪ್ ಸಿಂಹ ರನ್ನ ದೃಶದ್ರೋಹಿ ಎಂದು ಬಿಂಬಿಸುವಂತೆ ಪೋಸ್ಟರ್ ಅಳವಡಿಸಿ ತೇಜೋವಧೆ ಮಾಡಿರುವ ಕೆ.ಶಿವರಾಮು ವಿರುದ್ದ ಕ್ರಮ ಕೈಗೊಳ್ಳುವಂತೆ
Read More

ಸುಭ್ರಹ್ಮಣ್ಯ ಷಷ್ಠಿ: ಸಿದ್ದಲಿಂಗಪುರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಇಲ್ಲ…

ಸುಭ್ರಹ್ಮಣ್ಯ ಷಷ್ಠಿ: ಸಿದ್ದಲಿಂಗಪುರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಇಲ್ಲ… ಮೈಸೂರು,ಡಿ15,Tv10 ಕನ್ನಡ ಡಿಸೆಂಬರ್ 18 ರಂದು ಸುಬ್ರಹ್ಮಣ್ಯ ಷಷ್ಠಿ ಆಚರಣೆ ಇದೆ.ಸಿದ್ದಲಿಂಗಪುರದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಅಂಗವಾಗಿ ಪ್ರತಿ ವರ್ಷ ವಿಜೃಂಬಣೆಯಿಂದ ಜಾತ್ರಾ ಮಹೋತ್ಸವ ನಡೆಯುತ್ತಿತ್ತು.ದೇವಾಲಯದ ಅಭಿವೃದ್ದಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಈ ಬಾರಿ ಜಾತ್ರಾಮಹೋತ್ಸವ ರದ್ದುಪಡಿಸಲಾಗಿದೆ.ಅದ್ದೂರಿ ಪೂಜಾ ಕೈಂಕರ್ಯಗಳು ನಡೆಯುವುದಿಲ್ಲ.ಹೀಗಾಗಿ ಸಾರ್ವಜನಿಕರಿಗೆ,ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಾಹಿತಿ ನೀಡುವಂತೆ ಮೇಟಗಳ್ಳಿ ಠಾಣೆ ನಿರೀಕ್ಷಕರು ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗೆ ಪತ್ರ
Read More

ಕಾವೇರಿಗಾಗಿ ಹೋರಾಟ…ಮಂಗಳಮುಖಿಯರ ಬೆಂಬಲ…

ಮೈಸೂರು,ಡಿ14,Tv10 ಕನ್ನಡ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮೈಸೂರಿನ ದೊಡ್ಡಗಡಿಯಾರ ವೃತ್ತದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಗೆ ಇಂದು ಮಂಗಳಮುಖಿಯರು ಸಾಥ್ ನೀಡಿದ್ದಾರೆ.ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವ ಕಾವೇರಿ ನೀರನ್ನ ಸ್ಥಗಿತಗೊಳಿಸುವಂತೆ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದೆ.ಪ್ರತಿದಿನ ಒಂದು ಸಂಘಟನೆ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.ಇಂದು ಮಂಗಳಮುಖಿಯರು ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ…
Read More