TV10 Kannada Exclusive

ಸರ್ಕಾರಿ ಬಸ್ ಗಳ ಮೇಲೆ ಸ್ಟಿಕ್ಕರ್ ಅಂಟಿಸಲು ಅನುಮತಿ ನೀಡಿದವರ ವಿರುದ್ದ ಕ್ರಮಕ್ಕೆ ಒತ್ತಾಯ…ಬಿಜೆಪಿ ಯುವ ಮೋರ್ಚಾ ಆಗ್ರಹ…

ಮೈಸೂರು,ಆ20,Tv10 ಕನ್ನಡ ಮತಗಳ್ಳತನ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸರ್ಕಾರಿ ಬಸ್ ಗಳ ಮೇಲೆ STOP ಮತ ಕಳ್ಳತನ ಎಂಬ ಒಕ್ಕಣೆ ಇರುವ ಸ್ಟಿಕ್ಕರ್ ಗಳನ್ನ ನಿನ್ನೆ ಅಂಟಿಸಿ ಪ್ರತಿಭಟನೆ ನಡೆಸಲಾಗಿತ್ತು.ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ರವರ ನೇತೃತ್ವದಲ್ಲಿ ಸ್ಟಿಕ್ಕರ್ ಅಂಟಿಸುವ ಕಾರ್ಯ ನಡೆದಿತ್ತು.ಕಾಂಗ್ರೆಸ್ ಕಾರ್ಯವನ್ನ ಖಂಡಿಸಿರುವ ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ಯರು ಇಂದು ಕೆಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು ಸ್ಟಿಕ್ಕರ್ ಅಂಟಿಸಲು
Read More

ಪಬ್ ನಲ್ಲಿ ಕಿರಿಕ್ ಪ್ರಕರಣ…ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಸಸ್ಪೆಂಡ್…ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ…

ಪಬ್ ನಲ್ಲಿ ಕಿರಿಕ್ ಪ್ರಕರಣ…ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಸಸ್ಪೆಂಡ್…ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ… ಮೈಸೂರು,ಆ18,Tv10 ಕನ್ನಡ ಪಬ್ ನಲ್ಲಿ ಎಣ್ಣೆ ಹೊಡೆದು ಗಲಾಟೆ ಮಾಡಿದ ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಸಸ್ಪೆಂಡ್ ಆಗಿದ್ದಾರೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.ಚಾಮುಂಡಿಬೆಟ್ಟದ ತಪ್ಪಲಿನ ಜೆಸಿ ನಗರದ ಪಬ್ ಒಂದಕ್ಕೆ ತೆರಳಿ ಕುಡಿದ ಮತ್ತಿನಲ್ಲಿ ಸಿಬ್ಬಂದಿಗಳ ಜೊತೆ ಜಗಳವಾಡಿದ್ದ ವಿಡಿಯೋ ವೈರಲ್ ಆಗಿತ್ತು.ಅವಾಚ್ಯ ಶಬ್ದಗಳನ್ನ ಬಳಸಿ ಆವಾಜ್ ಹಾಕಿದ್ದರು.ಈ
Read More

ಕುಡಿತಕ್ಕೆ ಹಣ ನೀಡದ ಪತ್ನಿ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…ಆರೋಪಿ ಅಂದರ್…

ಮೈಸೂರು,ಆ17,Tv10 ಕನ್ನಡ ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಹಣ ನೀಡದ ಪತ್ನಿಯನ್ನ ಮೊಚ್ಚಿನಿಂದ ಹಲ್ಲೆ ಮಾಡಿ ಭೀಕರವಾಗಿ ಕೊಂದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ.ಪತ್ನಿ ಗಾಯಿತ್ರಿ ರವರನ್ಮ ಕೊಲೆ ಮಾಡಿದ ಪತಿ ಪಾಪಣ್ಣ ಪೊಲೀಸರ ಅತಿಥಿಯಾಗಿದ್ದಾನೆ. ಈ ಹಿಂದೆ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಪಾಪಣ್ಣ ಸಾಲಗಾರನಾಗಿದ್ದ.ಜೊತೆಗೆ ಕುಡಿತದ ಚಟಕ್ಕೆ ದಾಸನಾಗಿದ್ದ.ಕೆಲಸವಿಲ್ಲದೆ ಅಲೆಯುತ್ತಿದ್ದ ಪಾಪಣ್ಣ ಹಣಕ್ಕಾಗಿ ಪತ್ನಿ ಹಾಗೂ ಮಕ್ಕಳನ್ನ ಪೀಡಿಸುತ್ತಿದ್ದ.ಪಾಪಣ್ಣ ಮಗಳ ಮದುವೆಯನ್ನ
Read More

ಗ್ರಾ.ಪಂ.ಗೆ ಬೀಗ ಜಡಿದು ಆಕ್ರೋಷ…ಕೃಷಿ ಸಚಿವರ ತವರು ಕ್ಷೇತ್ರದಲ್ಲಿ ಘಟನೆ…ಬಿಂಡಿಗನವಿಲೆ ಹೋಬಳಿ ನಿವಾಸಿಗಳ ಸಿಟ್ಟು…

ಮಂಡ್ಯ,ಆ14,Tv10 ಕನ್ನಡ ಕೃಷಿ ಸಚಿವರ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲವೆಂದು ಆರೋಪಿಸಿ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಹೊನ್ನಾವರದ ಜನ ಗ್ರಾಮಪಂಚಾಯ್ತಿಗೆ ಬೀಗ ಜಡಿದು ಆಕ್ರೋಷ ವ್ಯಕ್ತಪಡಿಸಿದ್ದಾರೆ.ಹೊನ್ನಾವರ ಗ್ರಾಮದ ವಾರ್ಡ್ ನಂಬರ್ 2ರ ನಿವಾಸಿಗಳು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.ಗ್ರಾಮ ಸಭೆ ನಡೆಯುವಾಗ ಏಕಾಏಕಿ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಸಿಟ್ಟು ಪ್ರದರ್ಶಿಸಿದ್ದಾರೆ.ಚರಂಡಿ ಇಲ್ಲ, ವಿದ್ಯುತ್ ದೀಪ ಇಲ್ಲ, ರಸ್ತೆ ಇಲ್ಲ, ನಲ್ಲಿಯಲ್ಲಿ ನೀರು ಸರಿಯಾಗಿ ಬರಲ್ಲ.ಯಾರೊಬ್ಬರೂ ನಮ್ಮ ಸಮಸ್ಯೆಗಳಿಗೆ ಪರಿಹಾರ
Read More

ರೌಡಿ ಶೀಟ್ ಕ್ಲೋಸ್ ಮಾಡುವಂತೆ ಪೊಲೀಸರಿಗೆ ಬೆದರಿಕೆ…ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನ…ಮೈಮೇಲೆ ಡೀಸಲ್ ಸುರಿದುಕೊಂಡ ರೌಡಿ ಶೀಟರ್…

ಮೈಸೂರು,ಆ14,Tv10 ಕನ್ನಡ ರೌಡಿ ಶೀಟ್ ಕ್ಲೋಸ್ ಮಾಡುವಂತೆ ಒತ್ತಾಯಿಸಿ ರೌಡಿಶೀಟರ್ ಒಬ್ಬ ವಿಜಯನಗರ ಪೊಲೀಸ್ ಠಾಣೆಯಲ್ಲೇ ಡೀಸೆಲ್ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಬೋಗಾದಿ ನಿವಾಸಿ ಸ್ವಾಮಿ.ಎಸ್.ಪೊಲೀಸರ ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೌಡಿಶೀಟರ್.ಈತನ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೆಲವು ಪ್ರಕರಣಗಳಿದ್ದ ಕಾರಣ ರೌಡಿಶೀಟ್ ಓಪನ್ ಮಾಡಲಾಗಿದೆ.ಮುಂಬರುವ ಗಣೇಶ ಹಬ್ಬ ಹಾಗೂ ದಸರಾ ಹಿನ್ನಲೆ ರೌಡಿಶೀಟರ್ ಗಳಿಂದ ಮುಚ್ಚಳಿಕೆ ಬರೆಸಿಕೊಳ್ಳುವ ನಿಯಮಗಳಿದ್ದು ಇದರಂತೆ ಪೊಲೀಸರು ಈತನ ಮನೆಗೆ ತೆರಳಿದ್ದಾರೆ.ಇದನ್ನೇ
Read More

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಾಮೂಹಿಕ ಸೀಮಂತ…50 ಕ್ಕೂ ಹೆಚ್ಚು ಮಹಿಳೆಯರಿಗೆ ಸೀಮಂತ…

ಮೈಸೂರು,ಆ13,Tv10 ಕನ್ನಡ ಮೈಸೂರಿನ ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶ್ರೀ ದುರ್ಗಾ ಫೌಂಡೇಶನ್ ಮತ್ತು ಕೆ ವಿ ಕೆ ಫೌಂಡೇಶನ್ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 50ಕ್ಕೂ ಹೆಚ್ಚು ಮಹಿಳೆಯರಿಗೆ ಸೀಮಂತ ಮಾಡಲಾಯಿತು.ಹಣ್ಣು,ಹೂವು,ಅರಿಶಿನ,ಕುಂಕುಮ,ಬಳೆಗಳು,ಸೀರೆ,ಬ್ಲೌಸ್ ಪೀಸ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನ ಸಂಪ್ರದಾಯದಂತೆ ಮಹಿಳೆಯರಿಗೆ ನೀಡಿ ಹರಸಲಾಯಿತು.ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷರಾದ ಡಾ. ಪುಷ್ಪ
Read More

ಮಾದಕ ವಸ್ತುಗಳ ಹಾವಳಿಗೆ ಬ್ರೇಕ್ ಹಾಕಲು ನಗರ ಪೊಲೀಸರ ಸಮರ…ನಗರದಾದ್ಯಂತ ಜಾಗೃತಿ…ನಶ ಮುಕ್ತ ಭಾರತ ಅಭಿಯಾನ ಆರಂಭ…

ಮೈಸೂರು,ಆ13,Tv10 ಕನ್ನಡ ಮಾದಕ ವಸ್ತುಗಳ ಹಾವಳಿಗೆ ಬ್ರೇಕ್ ಹಾಕಲು ಮೈಸೂರು ನಗರ ಖಾಕಿ ಪಡೆ ಸಮರ ಸಾರಿದೆ.ಮಾದಕ ವಸ್ತುಗಳ ತಯಾರಿಕಾ ಘಟಕ ಪತ್ತೆಯಾದ ಬೆನ್ನ ಹಿಂದೆಯೇ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ದಾಳಿಗಳು ನಡೆಯುತ್ತಿದೆ.ಈಗಾಗಲೇ ವಿವಿದ ಪೊಲೀಸ್ ಠಾಣೆಗಳಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ.ಸಾಕಷ್ಟು ಪ್ರಮಾಣದಲ್ಲಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಹಲವರನ್ನ ಬಂಧಿಸಲಾಗಿದೆ.ಹಾಸ್ಟೆಲ್ ಗಳು,ಪಿಜಿ ಗಳು,ಸ್ಟೂಡೆಂಟ್ ಗಳು ತಂಗಿರುವ ಕೊಠಡಿಗಳು,ಲಾಡ್ಜ್ ಗಳು ಸೇರಿದಂತೆ ಸಾಕಷ್ಟು ಸ್ಥಳಗಳ ಮೇಲೆ ದಾಳಿ ನಡೆಸಿ ಮಾದಕ
Read More

ಮೇಟಗಳ್ಳಿ ಠಾಣೆ ಪೊಲೀಸರಿಂದ ನಶ ಮುಕ್ತ ಭಾರತ ಅಭಿಯಾನ…ವಿಧ್ಯಾರ್ಥಿಗಳ ಸಹಭಾಗಿತ್ವದಲ್ಲಿ ಜಾಗೃತಿ…

ಮೈಸೂರು,ಆ13,Tv10 ಕನ್ನಡ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾದಕ ವಸ್ತು ತಯಾರಕ ಘಟಕ ಪತ್ತೆಯಾದ ಹಿನ್ನಲೆ ನಗರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.ಮಾದಕ ವಸ್ತುಗಳ ಹಾವಳಿಗೆ ಬ್ರೇಕ್ ಹಾಕಲು ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಖುದ್ದಾಗಿ ರೈಡ್ ಮಾಡುವ ಮೂಲಕ ಘಾತುಕರಿಗೆ ಎಚ್ಚರಿಕೆ ಗಂಟೆ ರವಾನಿಸಿದ್ದಾರೆ.ಇದರೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೂ ಒತ್ತು ನೀಡುತ್ತಿದ್ದಾರೆ.ನಶ ಮುಕ್ತ ಭಾರತ ಎಂಬ ಅಭಿಯಾನ ಆರಂಭಿಸಲಾಗಿದೆ.ಮಾದಕ ವಸ್ತುಗಳಿಂದ ದೂರವಿರುವಂತೆ ಎಚ್ಚರಿಕೆ ನೀಡುವ ಸಂದೇಶ
Read More

ಮೊಬೈಲ್ ನಿಂದ ಪುಸ್ತಕದ ಕಡೆಗೆ ವಿದ್ಯಾರ್ಥಿಗಳು ಬದಲಾಗಬೇಕು- ಸಿ.ಆರ್.ದಿನೇಶ್

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಎಸ್ ಆರ್ ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಓದಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಮೊಬೈಲ್ ನಿಂದ ಪುಸ್ತಕದ ಕಡೆಗೆ ಒಲವು ಹೆಚ್ಚು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ಅವರು ಹೇಳಿದರು.ಗ್ರಂಥಪಾಲಕಿ ಎಂ ಎನ್ ಸುಲಕ್ಷಣ ರವರು ಮಾತನಾಡಿ ಯುವ ಮನಸ್ಸುಗಳನ್ನು ಅಧ್ಯಯನದ ಕಡೆಗೆ
Read More

ವಿಶೇಷ ಮಕ್ಕಳ ಜೊತೆ ಗಜಪಡೆಯೊಂದಿಗೆ ವಿಶ್ವ ಆನೆ ದಿನಾಚರಣೆ…

ಮೈಸೂರು,ಆ12,Tv10 ಕನ್ನಡ ಆಗಸ್ಟ್ 12 ರಂದುವಿಶ್ವ ಆನೆ ದಿನಾಚರಣೆ ಆಚರಿಸಲಾಗುತ್ತದೆ.ವಿಶ್ವ ಆನೆ ದಿನಾಚರಣೆಯನ್ನ ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಯೊಂದಿಗೆ ಆಚರಿಸಲಾಯಿತು. ವಿಶೇಷ ಚೇತನ ಮಕ್ಕಳು ಮತ್ತು ವಿಶೇಷ ಮಕ್ಕಳು ಆನೆಗಳೊಂದಿಗೆ ಬೆರೆತು ಸಂಭ್ರಮದಿಂದ ಆಚರಿಸಿದರು…
Read More